ತನ್ನ ಗ್ರಾಹಕರಿಗೆ ಬಿಗ್ ಶಾಕ್ ನೀಡಿದ ಎಸ್ಬಿಐ! ಯಾವುದೇ ವ್ಯವಹಾರ ನಡೆಸದಿದ್ದರೂ ಆಟೋ ಡೆಬಿಟ್ ಆಗುತ್ತಿದೆ ಹಣ!

SBI Latest Update: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಲ್ಲಿ ಖಾತೆ ಹೊಂದಿರುವ ಗ್ರಾಹಕರ ಪಾಲಿಗೆ ಒಂದು ಶಾಕಿಂಗ್ ಸುದ್ದಿ ಪ್ರಕಟವಾಗಿದೆ. ಈ ಸರ್ಕಾರಿ ಬ್ಯಾಂಕಿನಲ್ಲಿ ನೀವೂ ಖಾತೆ ಹೊಂದಿದ್ದರೆ, ನೀವು ಯಾವುದೇ ರೀತಿಯ  ವಹಿವಾಟು ನಡೆಸಡಿದರೂ ಕೂಡ ನಿಮ್ಮ ಖಾತೆಯಿಂದ ಸ್ವಯಂಚಾಲಿತವಾಗಿ ಹಣ ಕಡಿತವಾಗುತ್ತಿದ್ದರೆ. ಗ್ರಾಹಕರ ಖಾತೆಯಿಂದ ಹಣ ಏಕೆ ಕಡಿತವಾಗುತ್ತಿದೆ ಎಂಬುದರ ಕುರಿತು ಇದೀಗ ಬ್ಯಾಂಕ್ ಮಾಹಿತಿ ನೀಡಿದೆ.  

Written by - Nitin Tabib | Last Updated : Jan 19, 2023, 07:48 PM IST
  • ಈ ಕುರಿತು ಇದೀಗ ಬ್ಯಾಂಕ್ ವತಿಯಿಂದ ಮಾಹಿತಿ ನೀಡಲಾಗಿದ್ದು,
  • ಈ ಹಣವನ್ನು ಎಸ್‌ಬಿಐ ತನ್ನ ಗ್ರಾಹಕರ ಖಾತೆಯಿಂದ ಡೆಬಿಟ್ ಮಾಡುತ್ತಿದೆ ಎಂದು ತಿಳಿಸಲಾಗಿದೆ.
  • ಬ್ಯಾಂಕ್ ಈ ಹಣವನ್ನು ನಿರ್ವಹಣಾ ಶುಲ್ಕದ ರೂಪದಲ್ಲಿ ವಜಾಗೊಳಿಸುತ್ತಿದೆ.
ತನ್ನ ಗ್ರಾಹಕರಿಗೆ ಬಿಗ್ ಶಾಕ್ ನೀಡಿದ ಎಸ್ಬಿಐ! ಯಾವುದೇ ವ್ಯವಹಾರ ನಡೆಸದಿದ್ದರೂ ಆಟೋ ಡೆಬಿಟ್ ಆಗುತ್ತಿದೆ ಹಣ! title=
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

SBI Latest News: ದೇಶದ ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾನಲ್ಲಿ ಖಾತೆ ಹೊಂದಿರುವ ಗ್ರಾಹಕರ ಪಾಲಿಗೆ ಒಂದು ಮಹತ್ವದ ಸುದ್ದಿ ಪ್ರಕಟವಾಗಿದೆ. ನೀವೂ ಕೂಡ ಈ ಸರ್ಕಾರಿ ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದು ಮತ್ತು ಯಾವುದೇ ರೀತಿಯ ವ್ಯವಹಾರ ನಡೆಸದೆ ಇದ್ದರೂ ಕೂಡ ನಿಮ್ಮ ಖಾತೆಯಿಂದ ಸ್ವಯಂಚಾಲಿತವಾಗಿ ಹಣ ಕಡಿತಗೊಳ್ಳುತ್ತಿದ್ದರೆ, ಬ್ಯಾಂಕ್ ನಿಮ್ಮ ಖಾತೆಯಿಂದ ಈ ಹಣವನ್ನು ಏಕೆ ಕಡಿತಗೊಳಿಸುತ್ತಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,

ಖಾತೆಯಿಂದ 147.50 ರೂ.ಗಳು ವಜಾಗೊಳ್ಳುತ್ತಿವೆ
ಇತ್ತೀಚಿಗೆ ಕಳೆದ ಹಲವು ದಿನಗಳಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರ ಖಾತೆಯಿಂದ ಸ್ವಯಂಚಾಲಿತವಾಗಿ ಹಣ ವಜಾಗೊಲ್ಲುತ್ತಿದೆ. ಖಾತೆಯಿಂದ ರೂ.147.50 ವಜಾಗೊಂಡಿರುವ ಸಂದೇಶಗಳು ಗ್ರಾಹಕರಿಗೆ ಬರುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ, ಈ ಸಂದೇಶವನ್ನು ನೋಡಿದ ನಂತರ ಅನೇಕ ಗ್ರಾಹಕರು ವಿಚಾರಣೆಗಾಗಿ ಬ್ಯಾಂಕ್ ತಲುಪುತ್ತಿದ್ದಾರೆ.

ಬ್ಯಾಂಕ್ ಪ್ರತಿ ವರ್ಷ ಈ ಹಣವನ್ನು ಕಡಿತಗೊಳಿಸುತ್ತದೆ
ಈ ಕುರಿತು ಇದೀಗ ಬ್ಯಾಂಕ್ ವತಿಯಿಂದ ಮಾಹಿತಿ ನೀಡಲಾಗಿದ್ದು,  ಈ ಹಣವನ್ನು ಎಸ್‌ಬಿಐ ತನ್ನ ಗ್ರಾಹಕರ ಖಾತೆಯಿಂದ ಡೆಬಿಟ್ ಮಾಡುತ್ತಿದೆ ಎಂದು ತಿಳಿಸಲಾಗಿದೆ. ಬ್ಯಾಂಕ್ ಈ ಹಣವನ್ನು ನಿರ್ವಹಣಾ ಶುಲ್ಕದ ರೂಪದಲ್ಲಿ ವಜಾಗೊಳಿಸುತ್ತಿದೆ. ಈ ಹಣವನ್ನು ವರ್ಷಕ್ಕೊಮ್ಮೆ ಮಾತ್ರ ಬ್ಯಾಂಕಿನಿಂದ ತೆಗೆದುಕೊಳ್ಳಲಾಗುತ್ತದೆ. ಈ ಕುರಿತು ಟ್ವೀಟ್ ಮಾಡುವ ಮೂಲಕ ಬ್ಯಾಂಕ್ ಮಾಹಿತಿ ನೀಡಿದೆ.

ಇದನ್ನೂ ಓದಿ-ನೌಕರ ವರ್ಗದವರಿಗೊಂದು ಕಹಿ ಸುದ್ದಿ, 2023 ರಲ್ಲಿ ಭಾರಿ ಪ್ರಮಾಣದಲ್ಲಿ ನೌಕರಿ ಕಡಿತಕ್ಕೆ ಮುಂದಾಗಲಿವೆ ಟೆಕ್ ಕಂಪನಿಗಳು

18% GST ಇರುವ ಸಾಧ್ಯತೆ ಇದೆ
ಈ ಹಣವನ್ನು ಬ್ಯಾಂಕಿನಿಂದ ಶುಲ್ಕದ ರೂಪದಲ್ಲಿ ಪಡೆದುಕೊಳ್ಳಲಾಗುತ್ತಿದೆ.ಇದೇ ವೇಳೆ ಬ್ಯಾಂಕ್ ನೀಡಿದ ಡೆಬಿಟ್ ಕಾರ್ಡ್‌ಗೆ, ಗ್ರಾಹಕರಿಂದ ವಾರ್ಷಿಕ 125 ರೂ. ಶುಲ್ಕವನ್ನು ಪಡೆಯಲಾಗುತ್ತದೆ. ಇದಕ್ಕೆ ಶೇಕಡಾ 18 ರ ದರದಲ್ಲಿ ಜಿಎಸ್‌ಟಿ ಸೇರಿಸಲಾಗುತ್ತದೆ, ನಂತರ ಈ ಮೊತ್ತವು 147.50 ರೂ ಆಗುತ್ತದೆ.

ಇದನ್ನೂ ಓದಿ-ಇನ್ಮುಂದೆ ವಿದೇಶಗಳಲ್ಲಿಯೂ ಕೂಡ ಧೂಳೆಬ್ಬಿಸಲಿದೆ ಈ ಮೇಡ್ ಇನ್ ಇಂಡಿಯಾ ಕಾರು

ಕಾರ್ಡ್ ಬದಲಾಯಿಸಿದರೂ ಹಣ ಪಾವತಿಸಬೇಕು
ಇದಲ್ಲದೆ, ಯಾವುದೇ ಗ್ರಾಹಕರು ತಮ್ಮ ಡೆಬಿಟ್ ಕಾರ್ಡ್ ಅನ್ನು ಬದಲಾಯಿಸಲು ಬಯಸಿದರೆ, ಅದಕ್ಕಾಗಿ ಅವರು ಜಿಎಸ್ಟಿ ಶುಲ್ಕದೊಂದಿಗೆ ಬ್ಯಾಂಕ್ಗೆ 300 ರೂ. ಪಾವತಿಸಬೇಕು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News