Gold Price Today : ಕಳೆದ ಕೆಲವು ದಿನಗಳಿಂದ ಬಂಗಾರದ ಬೆಲೆಯಲ್ಲಿ ಇಳಿಕೆ ಕಂಡು ಬಂದಿತ್ತು. ನಿರಂತರ ಇಳಿಕೆಯ ನಂತರ ಬುಧವಾರ ಚಿನ್ನದ ಬೆಲೆಯಲ್ಲಿ ಏರಿಕೆ ಕಾಣುತ್ತಿದೆ. ಬಹು ಸರಕು ವಿನಿಮಯ ಕೇಂದ್ರದಲ್ಲಿ ಚಿನ್ನದ ಬೆಲೆ 58,500 ರೂಪಾಯಿ ದಾಟಿದೆ. ಇದಲ್ಲದೇ ಬೆಳ್ಳಿ ಬೆಲೆಯಲ್ಲಿ ಇಂದು ಕೂಡಾ ಏರಿಕೆ ಕಾಣುತ್ತಿದೆ.  ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆಯಲ್ಲಿ  ಆಭರಣಗಳನ್ನು ಖರೀದಿಸುವ ಯೋಚನೆ ಇದ್ದರೆ, ಇಂದಿನ ಚಿನ್ನದ ಬೆಲೆ ಎಷ್ಟಿದೆ ಎನ್ನುವುದನ್ನು ತಿಳಿದುಕೊಳ್ಳಿ. 


COMMERCIAL BREAK
SCROLL TO CONTINUE READING

MCX ನಲ್ಲಿ ಎಷ್ಟಿದೆ ದರ : 
ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ ಚಿನ್ನದ ಬೆಲೆಯು ಪ್ರತಿ 10 ಗ್ರಾಂಗೆ ಶೇ.0.10 ರಷ್ಟು ಏರಿಕೆಯೊಂದಿಗೆ 58,621 ರೂ.ನಲ್ಲಿ ವಹಿವಾಟು ನಡೆಸುತ್ತಿದೆ. ಇದಲ್ಲದೇ ಬೆಳ್ಳಿಯ ದರವು ಶೇ.0.49ರಷ್ಟು ಏರಿಕೆಯೊಂದಿಗೆ ಪ್ರತಿ ಕೆಜಿಗೆ 72,338 ರೂ. ಆಗಿದೆ. 


ಇದನ್ನೂ ಓದಿ : ತ್ವರಿತವಾಗಿ ಐಟಿಆರ್ ಮರುಪಾವತಿ ಪಡೆಯಲು ಈಗಲೇ ಈ ಕೆಲಸ ಮಾಡಿ


ಜಾಗತಿಕ ಮಾರುಕಟ್ಟೆಯ ಪರಿಣಾಮ :
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಏರಿಕೆಯಾಗಿದೆ. ಇಲ್ಲಿ ಚಿನ್ನದ ಬೆಲೆ ಪ್ರತಿ ಔನ್ಸ್‌ಗೆ 1,930 ಡಾಲರ್ ಮಟ್ಟದಲ್ಲಿದೆ. 
ಇದಲ್ಲದೆ, ಬೆಳ್ಳಿಯು ಪ್ರತಿ ಔನ್ಸ್‌ಗೆ  23.60 ಡಾಲರ್  ಮಟ್ಟದಲ್ಲಿದೆ.   ಜಾಗತಿಕ ಮಾರುಕಟ್ಟೆಯ ಪ್ರಭಾವ ದೇಶೀಯ ಮಾರುಕಟ್ಟೆಯಲ್ಲೂ ಕಂಡುಬರುತ್ತಿದೆ. 


ಇಂದು 22 ಕ್ಯಾರೆಟ್ ಚಿನ್ನದ ದರ ಎಷ್ಟು? :
ಮುಂಬೈನಲ್ಲಿ 10 ಗ್ರಾಂ ಚಿನ್ನದ ಬೆಲೆ ರೂ 54,200, ಗುರುಗ್ರಾಮ್ ನಲ್ಲಿ ರೂ 54,300, ಕೋಲ್ಕತ್ತಾದಲ್ಲಿ  ರೂ .54,200, ಲಕ್ನೋನಲ್ಲಿ  ರೂ 54,300, ಬೆಂಗಳೂರಿನಲ್ಲಿ ರೂ 54,200, ಜೈಪುರದಲ್ಲಿ  ರೂ. 54,300 ಮತ್ತು ಪಾಟ್ನಾದಲ್ಲಿ   54,100. ರೂಪಾಯಿ ಆಗಿದೆ. 


ಮೆಟ್ರೋ ನಗರದಲ್ಲಿ 24 ಕ್ಯಾರೆಟ್ ಚಿನ್ನದ ದರ ಎಷ್ಟು? :
ದೆಹಲಿ, ಬೆಂಗಳೂರು ಮತ್ತು ಚೆನ್ನೈನಲ್ಲಿ 24K ಚಿನ್ನದ ಬೆಲೆ ಕ್ರಮವಾಗಿ 59,220 ರೂ,  59,130 ರೂ ​​ಮತ್ತು 59,560 ರೂ. ಆಗಿದೆ. 


ಇದನ್ನೂ ಓದಿ : ಪಿಎಫ್ ಖಾತೆಯಲ್ಲಿ ಬಡ್ಡಿ ಜಮಾ ಆಗುತ್ತಿಲ್ಲವೇ? ಕಾರಣ ತಿಳಿಯಿರಿ!


ನಿಮ್ಮ ನಗರದ ದರಗಳನ್ನು ಈ ರೀತಿ ಪರಿಶೀಲಿಸಿ :
ನಿಮ್ಮ ನಗರದಲ್ಲಿ ಚಿನ್ನದ ದರಗಳನ್ನು ಪರಿಶೀಲಿಸಬೇಕಾದರೆ  ಕೇವಲ ಒಂದು ಸಂಖ್ಯೆಗೆ ಕರೆ ಮಾಡಿದರೆ ಸಾಕು. ಇಂಡಿಯನ್ ಬುಲಿಯನ್ ಮತ್ತು ಜ್ಯುವೆಲರ್ಸ್ ಅಸೋಸಿಯೇಷನ್ ​​ಪ್ರಕಾರ, 8955664433 ಗೆ ಮಿಸ್ಡ್ ಕಾಲ್ ನೀಡುವ ಮೂಲಕ ಬೆಲೆಯನ್ನು ಪರಿಶೀಲಿಸಬಹುದು. ನೀವು ಯಾವ ಸಂಖ್ಯೆಯಿಂದ ಮಿಸ್ ಕಾಲ್ ಕೊಡುತ್ತಿರೋ ಅದೆ ನಂಬರ್ ಗೆ ಮೆಸೇಜ್ ಬರುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI