ಬೆಂಗಳೂರು: ಭಾರತದಲ್ಲಿ ಮೂರ್ನಾಲ್ಕು ದಿನಗಳಿಂದ ಹೆಚ್ಚಾಗಿದ್ದ ಚಿನ್ನದ ಬೆಲೆ ಮತ್ತೆ ಕಡಿಮೆಯಾಗಿದೆ. ದಾಖಲೆಯ ಮಟ್ಟಕ್ಕೇರಿದ್ದ ಚಿನ್ನದ ಬೆಲೆ ಶೇ. 20ರಷ್ಟು ಕಡಿಮೆಯಾಗಿದೆ. ಇನ್ನೇನು ಮದುವೆಯ ಸೀಸನ್ ಶುರುವಾಗುವ ಸಮಯ.


COMMERCIAL BREAK
SCROLL TO CONTINUE READING

ಇಂದು ಯಾವ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ(Gold Price) ಎಷ್ಟಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ಇಂದು 45,880 ರೂ. ಆಗಿದೆ. 22 ಕ್ಯಾರೆಟ್​ನ 10 ಗ್ರಾಂ ಚಿನ್ನಕ್ಕೆ ಬೆಂಗಳೂರಿನಲ್ಲಿ ಇಂದು 42,050 ರೂ. ಆಗಿದೆ. ಬೆಳ್ಳಿ ಬೆಲೆಯಲ್ಲಿ ಮತ್ತೆ ಇಳಿಕೆಯಾಗಿದ್ದು, ನಿನ್ನೆ 67,000 ರೂ. ಇದ್ದ ಬೆಳ್ಳಿ ಬೆಲೆ ಇಂದು 66,600ಕ್ಕೆ ಇಳಿಕೆಯಾಗಿದೆ.


Pension : ನಿಯಮಗಳಲ್ಲಿ ಸಡಿಲಿಕೆ, ಈಗ ಪಿಂಚಣಿ ಪಡೆಯುವಲ್ಲಿ ಎದುರಾಗುವುದಿಲ್ಲ ಯಾವುದೇ ತೊಡುಕು


ಇಂದು 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ( Rate Gold Price) ನಿನ್ನೆ 44,290 ರೂ. ಇದ್ದುದು 43,910 ರೂ.ಗೆ ಇಳಿಕೆಯಾಗಿದೆ. 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ 44,970 ರೂ. ಇದ್ದುದು ಇಂದು 44,910 ರೂ. ಆಗಿದೆ. ಚಿನ್ನದ ಬೆಲೆ ಒಂದು ನಗರದಿಂದ ಮತ್ತೊಂದು ನಗರಕ್ಕೆ ವ್ಯತ್ಯಾಸವಾಗಲಿದೆ. ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 45,880 ರೂ. ಆಗಿದೆ.


mAadhaar: ಮನೆಯಲ್ಲಿಯೇ ಕುಳಿತು ಈ 35 ಸೇವೆಗಳ ಲಾಭ ಪಡೆಯಿರಿ


ಹಾಗೇ, 22 ಕ್ಯಾರೆಟ್​ನ 10 ಗ್ರಾಂ ಚಿನ್ನಕ್ಕೆ ಇಂದು 42,050 ರೂ. ಆಗಿದೆ. ಮೈಸೂರು(Mysure), ವಿಶಾಖಪಟ್ಟಣಂ, ಮಂಗಳೂರು, ವಿಜಯವಾಡ, ಮುಂಬೈ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಹೆಚ್ಚೂ ಕಡಿಮೆ ಇದೇ ಬೆಲೆಯಿದೆ. ಬೇರೆಲ್ಲ ನಗರಗಳಿಗೆ ಹೋಲಿಸಿದರೆ ಚೆನ್ನೈ, ದೆಹಲಿ, ಕೊಲ್ಕತ್ತಾ, ಲಕ್ನೋ, ಕೊಯಮತ್ತೂರು, ಮಧುರೈ, ಜೈಪುರ, ಅಹಮದಾಬಾದ್, ಚಂಡೀಗಢದಲ್ಲಿ ಚಿನ್ನದ ಬೆಲೆ ಭಾರೀ ಏರಿಕೆಯಾಗಿದೆ. ಈ ನಗರಗಳಲ್ಲಿ ಚಿನ್ನದ ಬೆಲೆ 47,000 ರೂ. ದಾಟಿದೆ.


Subsidy On Business Loan: ನೀವೂ ಈ ಉದ್ಯಮವನ್ನು ಆರಂಭಿಸಿದರೆ ಮೋದಿ ಸರ್ಕಾರ ನಿಮಗೆ ಶೇ.80ರಷ್ಟು ಸಬ್ಸಿಡಿ ನೀಡುತ್ತದೆ


ಭಾರತದಲ್ಲಿ ಬೆಳ್ಳಿ ಬೆಲೆ(Silver Rate) ಮತ್ತೆ ಭಾರೀ ಇಳಿಕೆಯಾಗಿದ್ದು, ನಿನ್ನೆ 67,000 ರೂ. ಇದ್ದ ಬೆಳ್ಳಿ ಬೆಲೆ ಇಂದು 1 ಕೆಜಿಗೆ 66,600 ರೂ. ಆಗಿದೆ. ಬೆಂಗಳೂರು, ಮೈಸೂರು, ಮಂಗಳೂರಿನಲ್ಲಿ 1 ಕೆಜಿ ಬೆಳ್ಳಿಯ ಬೆಲೆಯಲ್ಲಿ ಏರಿಕೆಯಾಗಿದ್ದು, ಇಂದು 67,500 ರೂ. ಆಗಿದೆ. ಉಳಿದಂತೆ ಚೆನ್ನೈ, ಹೈದರಾಬಾದ್, ಕೊಯಮತ್ತೂರು, ಭುವನೇಶ್ವರ, ಮಧುರೈ, ವಿಜಯವಾಡ, ವಿಶಾಖಪಟ್ಟಣಂನಲ್ಲಿ ಬೆಳ್ಳಿಯ ಬೆಲೆ 70,000 ರೂ. ದಾಟಿದೆ.


ಈ ಸುಲಭ ವಿಧಾನಗಳಲ್ಲಿ EPFO Balance Check ಮಾಡಿಕೊಳ್ಳಬಹುದು


ಕಷ್ಟಕಾಲದಲ್ಲಿ ನೆರವಾಗುವ ಚಿನ್ನದ ಮೇಲೆ ಹೂಡಿಕೆ ಮಾಡುವುದು ಈಗಿನ ಪದ್ಧತಿಯಲ್ಲ. ಬಂಗಾರವನ್ನು ಖರೀದಿಸಿಟ್ಟರೆ ನಮ್ಮ ಆಪತ್ಕಾಲದಲ್ಲಿ ಉಪಯೋಗಕ್ಕೆ ಬರುತ್ತದೆ ಎಂಬುದು ಬಹುತೇಕ ಎಲ್ಲ ಭಾರತೀಯರ ಲೆಕ್ಕಾಚಾರ. ಹೀಗಾಗಿ, ಕೈಯಲ್ಲಿ ಹಣವಿದ್ದಾಗ ಚಿನ್ನದ ಮೇಲೆ ಹೂಡಿಕೆ ಮಾಡುವವರ ಸಂಖ್ಯೆ ಇಂದಿಗೂ ಕಡಿಮೆಯಾಗಿಲ್ಲ. ಆದರೆ, ಕೊರೋನಾದಿಂದಾಗಿ ಚಿನ್ನವನ್ನು ಕೊಳ್ಳುವವರ ಸಂಖ್ಯೆ ಹೇಗೆ ಕಡಿಮೆಯಾಯಿತೋ ಅದೇರೀತಿ ಚಿನ್ನದ ಪೂರೈಕೆಯಲ್ಲಿಯೂ ವ್ಯತ್ಯಯವಾಯಿತು. ಇದರಿಂದ ಬಂಗಾರದ ಬೆಲೆ ಗಗನಕ್ಕೇರಿತ್ತು.


ಅಂಚೆ ಕಚೇರಿ ಹೂಡಿಕೆಯಲ್ಲಿ ಉತ್ತಮ ರಿಟರ್ನ್ ಜೊತೆ ಸಿಗಲಿದೆ ತೆರಿಗೆ ವಿನಾಯಿತಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.