ಅಂಚೆ ಕಚೇರಿ ಹೂಡಿಕೆಯಲ್ಲಿ ಉತ್ತಮ ರಿಟರ್ನ್ ಜೊತೆ ಸಿಗಲಿದೆ ತೆರಿಗೆ ವಿನಾಯಿತಿ

ಅಂಚೆ ಕಚೇರಿಯ ಅನೇಕ ಯೋಜನೆಗಳಲ್ಲಿ ಹೂಡಿಕೆ ಮಾಡುವುದರಿಂದ ಉತ್ತಮ ಆದಾಯವನ್ನು ಪಡೆಯಬಹುದು ಅಲ್ಲದೆ ಈ ಹೂಡಿಕೆ ಮೇಲೆ ತೆರಿಗೆಯನ್ನು ಕೂಡಾ  ವಿಧಿಸಲಾಗುವುದಿಲ್ಲ.

Written by - Ranjitha R K | Last Updated : Mar 21, 2021, 09:26 AM IST
  • ಅಂಚೆ ಕಚೇರಿಯಲ್ಲಿ ಹೂಡಿಕೆ ಮಾಡುವುದರಿಂದ ಅನೇಕ ಪ್ರಯೋಜನಗಳಿವೆ
  • ತೆರಿಗೆ ಉಳಿತಾಯವಾಗುತ್ತದೆ ಮತ್ತು ಉತ್ತಮ ಬಡ್ಡಿಯೂ ಸಿಗುತ್ತದೆ
  • ಸಣ್ಣ ಉಳಿತಾಯದೊಂದಿಗೆ ದೊಡ್ಡ ಮಟ್ಟದ ರಿಟರ್ನ್ ಸಿಗುತ್ತದೆ.
ಅಂಚೆ ಕಚೇರಿ ಹೂಡಿಕೆಯಲ್ಲಿ ಉತ್ತಮ ರಿಟರ್ನ್ ಜೊತೆ ಸಿಗಲಿದೆ ತೆರಿಗೆ ವಿನಾಯಿತಿ  title=
ಅಂಚೆ ಕಚೇರಿಯಲ್ಲಿ ಹೂಡಿಕೆ ಮಾಡುವುದರಿಂದ ಅನೇಕ ಪ್ರಯೋಜನಗಳಿವೆ (file photo)

ದೆಹಲಿ : ಈಗ ಅಂಚೆ ಕಚೇರಿಗಳು (Post Office) ಸಹ ಬ್ಯಾಂಕಿನಂತೆ ಹೈಟೆಕ್ ಆಗಿ ಮಾರ್ಪಟ್ಟಿವೆ. ಈಗ ಪೋಸ್ಟ್ ಆಫೀಸ್ ಅಕೌಂಟ್ ಓಪನ್ ಮಾಡಲು ಅಂಚೆ ಕಚೇರಿಗೆ ಹೋಗಬೇಕಿಲ್ಲ. ಕುಳಿತ ಜಾಗದಲ್ಲೇ ಅಕೌಂಟ್ ಓಪನ್ (Account Open) ಮಾಡಬಹುದು.  ಇದರಲ್ಲಿ  ಮೂರೂ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಮೊದಲನೆಯದ್ದು, ಖಾತೆ ತೆರೆಯಲು ಅಂಚೆ ಕಚೇರಿಗೆ ಹೋಗಬೇಕಾಗಿಲ್ಲ, ಆನ್‌ಲೈನ್ ನಲ್ಲಿಯೇ ಈ ಕೆಲಸ ಮಾಡಬಹುದು. ಎರಡನೆಯದ್ದು ಇದರಲ್ಲಿ ತೆರಿಗೆ ವಿನಾಯಿತಿ ಸಿಗುತ್ತದೆ. ಮೂರನೆಯದ್ದು ಉತ್ತಮ ಬಡ್ಡಿ ಸಹಾ ಪಡೆಯಬಹುದು. 

ಹೂಡಿಕೆ ಮಾಡಿ ತೆರಿಗೆ ಉಳಿಸಬಹುದು : 
 ಅಂಚೆ ಕಚೇರಿಯ (Post office)ಅನೇಕ ಯೋಜನೆಗಳಲ್ಲಿ ಹೂಡಿಕೆ ಮಾಡುವುದರಿಂದ ಉತ್ತಮ ಆದಾಯವನ್ನು ಪಡೆಯಬಹುದು ಅಲ್ಲದೆ ಈ ಹೂಡಿಕೆ ಮೇಲೆ ತೆರಿಗೆಯನ್ನು (tax)  ಕೂಡಾ  ವಿಧಿಸಲಾಗುವುದಿಲ್ಲ. ಈ ಯೋಜನೆಗಳ ಬಗ್ಗೆ ನಿಮಗೆ ಗೊತ್ತಿಲ್ಲದಿದ್ದರೆ, ಈ ಯೋಜನೆಗಳ ಪ್ರಯೋಜನಗಳನ್ನು  ಹೇಗೆ ಪಡೆಯಬಹುದು ಎಂದು ನಾವು ಹೇಳುತ್ತೇವೆ. ಅಂಚೆ ಕಚೇರಿಯ ಪಿಪಿಎಫ್ ಮತ್ತು ಎಫ್‌ಡಿ ಯೋಜನೆಗಳು ಇವುಗಳಲ್ಲಿ ಮುಖ್ಯವಾಗಿವೆ.  

ಇದನ್ನೂ ಓದಿ Earn Money: ಈ 1 ರೂಪಾಯಿ ನಾಣ್ಯ ನಿಮ್ಮ ಬಳಿ ಇದ್ರೆ ನೀವಾಗಬಹುದು ಲಕ್ಷಾಧಿಪತಿ!

ಪಬ್ಲಿಕ್ ಪ್ರಾವಿಡೆಂಟ್ ಫಂಡ್ : (PPF)
ಪೋಸ್ಟ್ ಆಫೀಸ್ ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF) ನಲ್ಲಿನ ಹೂಡಿಕೆಯ ಮೇಲೆ ಆದಾಯ ತೆರಿಗೆಯಿಂದ ವಿನಾಯಿತಿ ಪಡೆಯಬಹುದು. ಇದಲ್ಲದೆ, ಠೇವಣಿ ಮಾಡಿದ ಮೊತ್ತದ ಬಡ್ಡಿಯನ್ನು (Interest) ವಾರ್ಷಿಕ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ. ಇದಲ್ಲದೆ, ವರ್ಷದ ಬಡ್ಡಿಯನ್ನು ಮೂಲ ಧನ ರಾಶಿಗೆ ಸೇರಿಸಲಾಗುತ್ತದೆ.  ಇದರಿಂದ ಪ್ರತಿವರ್ಷ ಹೆಚ್ಚಿನ ಬಡ್ಡಿ ಸಿಗುವಂತಾಗುತ್ತದೆ.  ಪಿಪಿಎಫ್ ನಲ್ಲಿ ಹೂಡಿಕೆ ಮಾಡುವುದರಿಂದ ಉತ್ತಮ ರಿಟರ್ನ್ ಸಿಗುವುದಲ್ಲದೆ,  ಮೆಚ್ಯುರಿಟಿ ಮೊತ್ತ (Maturity Amount) ಮತ್ತು ಬಡ್ಡಿ ಮೇಲೆ ಆದಾಯ ತೆರಿಗೆ (Income Tax) ವಿಧಿಸಲಾಗುವುದಿಲ್ಲ. 

ಫಿಕ್ಸೆಡ್ ಡಿಪೋಸಿಟ್  :
 ಪೋಸ್ಟ್ ಆಫೀಸ್ ಫಿಕ್ಸೆಡ್ ಡಿಪೋಸಿಟ್ ನಲ್ಲಿ (Fixed Deposit) ಹೂಡಿಕೆ ಮಾಡಿದರೆ ಉತ್ತಮ ಬಡ್ಡಿಯನ್ನು ಪಡೆಯಬಹುದು. ಈ ಯೋಜನೆಯಲ್ಲಿ, ಒಂದು ವರ್ಷ, ಎರಡು ವರ್ಷ, ಮೂರು ವರ್ಷ ಮತ್ತು ಐದು ವರ್ಷಗಳ ಅವಧಿಗೆ ಹೂಡಿಕೆ ಮಾಡಲು ಅವಕಾಶವಿದೆ. ಭಾರತೀಯ ಅಂಚೆ ಇಲಾಖೆಯ ಪ್ರಕಾರ, 5 ವರ್ಷಗಳ ಅವಧಿಗೆ  ಹೂಡಿಕೆ ಮಾಡುವುದರಿಂದ ಆದಾಯ ತೆರಿಗೆ ಕಾಯ್ದೆ 1961 ರ ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ವಿನಾಯಿತಿಯ ಲಾಭ ಸಿಗುತ್ತದೆ.

ಇದನ್ನೂ ಓದಿEarn Money: ಈ 1 ರೂಪಾಯಿ ನಾಣ್ಯ ನಿಮ್ಮ ಬಳಿ ಇದ್ರೆ ನೀವಾಗಬಹುದು ಲಕ್ಷಾಧಿಪತಿ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News