Gold Price Today : ಕಳೆದ ಕೆಲವು ದಿನಗಳಿಂದ, ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ನಿರಂತರವಾಗಿ ಇಳಿಕೆ ಕಂಡುಬಂದಿದೆ . ಈ ಕುಸಿತದ ಅವಧಿಯಲ್ಲಿ, ಚಿನ್ನವು ಸುಮಾರು 2 ಪ್ರತಿಶತದಷ್ಟು ಅಗ್ಗವಾಗಿದೆ. ಅಂದರೆ ಈ ತಿಂಗಳು ಚಿನ್ನದ ಬೆಲೆಯಲ್ಲಿ 1100 ರೂ. ಇಳಿಕೆ ಕಂಡು ಬಂದಿದೆ. ಬೆಳ್ಳಿಯ ಬೆಲೆ ಕೂಡ ಒಂದು ಕೆಜಿಗೆ ಸುಮಾರು 5000 ರೂ.ಯಷ್ಟು ಕುಸಿದಿದೆ.  


COMMERCIAL BREAK
SCROLL TO CONTINUE READING

ಚಿನ್ನ ಬೆಳ್ಳಿ ಬೆಲೆ ಎಷ್ಟಿತ್ತು? :
ಜಾಗತಿಕ ಮಾರುಕಟ್ಟೆಯಲ್ಲಿ ನಿರಂತರ ಏರಿಳಿತದ ಪರಿಣಾಮ ದೇಶಿಯ ಮಾರುಕಟ್ಟೆಯಲ್ಲೂ ಕಾಣುತ್ತಿದೆ. ಇಂದು, ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ, ಚಿನ್ನದ ಬೆಲೆ ಪ್ರತಿ 10 ಗ್ರಾಂ. ಗೆ 0.19 ಶೇಕಡಾ ಇಳಿಕೆ ಕಂಡು 58400 ರೂಪಾಯಿಗಳಲ್ಲಿ  ವಹಿವಾಟು ನಡೆಸುತ್ತಿದೆ. ಇದಲ್ಲದೇ ಬೆಳ್ಳಿಯ ದರವು ಶೇ.0.27ರಷ್ಟು ಏರಿಕೆಯೊಂದಿಗೆ ಪ್ರತಿ ಕೆಜಿಗೆ 70200 ರೂ. ಆಗಿದೆ. 


ಇದನ್ನೂ ಓದಿ : Arecanut today price: ರಾಜ್ಯದಲ್ಲಿ ಮತ್ತೆ ಭಾರೀ ಕುಸಿತ ಕಂಡ ಅಡಿಕೆ ಧಾರಣೆ!


1160 ರಷ್ಟು ಅಗ್ಗವಾದ ಚಿನ್ನ : 
ಜಾಗತಿಕ ಮಾರುಕಟ್ಟೆಯ ಬಗ್ಗೆ ಮಾತನಾಡುವುದಾದರೆ ಬಡ್ಡಿದರಗಳಿಗೆ ಸಂಬಂಧಿಸಿದಂತೆ ಅಮೇರಿಕನ್ ಸೆಂಟ್ರಲ್ ಬ್ಯಾಂಕ್‌ನ ನಿರ್ಧಾರದ ಪರಿಣಾಮವು ಬುಲಿಯನ್ ಮಾರುಕಟ್ಟೆಯ ಮೇಲೆ ಕಂಡುಬರುತ್ತಿದೆ. ವರದಿಗಳ ಪ್ರಕಾರ  ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳಲ್ಲಿ ಕುಸಿತ ಕಂಡು ಬಂದಿದೆ. ಇದರಿಂದಾಗಿ ಆಗಸ್ಟ್ ತಿಂಗಳಿನಲ್ಲಿ ಚಿನ್ನದ ಬೆಲೆ 1160 ರೂ.ಗಳಷ್ಟು ಕಡಿಮೆಯಾಗಿದೆ. ಇದಲ್ಲದೇ ಬೆಳ್ಳಿ ಕೂಡಾ 5000ಕ್ಕೆ ಕುಸಿದಿದೆ. 


ಜಾಗತಿಕ ಮಾರುಕಟ್ಟೆಯಲ್ಲಿ ಬೆಲೆ ಎಷ್ಟು? : 
ಜಾಗತಿಕ ಮಾರುಕಟ್ಟೆಯಲ್ಲಿ  ಚಿನ್ನ ಪ್ರತಿ ಔನ್ಸ್‌ಗೆ 1920 ಡಾಲರ್ ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ. ಈ ಸಮಯದಲ್ಲಿ ಚಿನ್ನವು 5 ತಿಂಗಳ ಅತ್ಯಂತ ಕಡಿಮೆ ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ.  ಇದಲ್ಲದೆ, ಬೆಳ್ಳಿ ಪ್ರತಿ ಔನ್ಸ್‌ಗೆ 
 22.86 ಡಾಲರ್ ಮಟ್ಟದಲ್ಲಿದೆ. 


ಇದನ್ನೂ ಓದಿ : ಸ್ಟೇಟ್ ಬ್ಯಾಂಕ್ ಈ ವಿಶೇಷ ಯೋಜನೆಯಲ್ಲಿ ಗ್ರಾಹಕರಿಗೆ ನೀಡುತ್ತಿದೆ ಜಬರ್ದಸ್ತ್ ಲಾಭ, ನೀವು ಹೂಡಿಕೆ ಮಾಡಿದ್ರಾ?


ನಿಮ್ಮ ನಗರದ ದರಗಳನ್ನು ಪರಿಶೀಲಿಸಿ : 
ಮನೆಯಲ್ಲಿಯೇ ಕುಳಿತು ಚಿನ್ನದ ಬೆಲೆಯನ್ನು ಪರಿಶೀಲಿಸಬಹುದು. ಇಂಡಿಯನ್ ಬುಲಿಯನ್ ಮತ್ತು ಜ್ಯುವೆಲರ್ಸ್ ಅಸೋಸಿಯೇಷನ್ ​​ಪ್ರಕಾರ, 8955664433 ಗೆ ಮಿಸ್ಡ್ ಕಾಲ್ ನೀಡುವ ಮೂಲಕ ಬೆಲೆಯನ್ನು ಪರಿಶೀಲಿಸಬಹುದು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.