ನವದೆಹಲಿ: Gold Rate Today - ನೀವು ಕೂಡ ಆಭರಣಗಳನ್ನು ಖರೀದಿಸಲು ಅಥವಾ ಸಿದ್ಧಪಡಿಸಿಕೊಳ್ಳಲು ಯೋಜಿಸುತ್ತಿದ್ದರೆ ಮತ್ತು ಇದಕ್ಕಾಗಿ ಸರಿಯಾದ ಸಮಯಕ್ಕಾಗಿ ಕಾಯುತ್ತಿದ್ದರೆ, ಆಭರಣ ಖರೀದಿಸಲು ಇದು ಅತ್ಯುತ್ತಮ ಅವಕಾಶವಾಗಿದೆ. ವಾಸ್ತವವಾಗಿ, ಕಳೆದ ವರ್ಷ ಆರಂಭಗೊಂಡ ಚಿನ್ನ ಮತ್ತು ಬೆಳ್ಳಿಯ ಬೆಲೆ ಇಳಿಕೆಹೊಸ ವರ್ಷದಲ್ಲಿಯೂ ಮುಂದುವರೆಯುತ್ತಿದೆ . ಕಳೆದ ಕೆಲವು ತಿಂಗಳುಗಳಲ್ಲಿ, ಚಿನ್ನದ ಬೆಲೆ ಹತ್ತು ಗ್ರಾಂಗೆ 10,000 ರೂ.ಗಳಷ್ಟು ಇಳಿದಿದೆ. ಅದೇ ಪರಿಸ್ಥಿತಿ ಬೆಳ್ಳಿಯ ವಿಷಯದಲ್ಲಿಯೂ ಮುಂದುವರೆದಿದೆ. ಇಂತಹ ಪರಿಸ್ಥಿತಿಯಲ್ಲಿ, ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸಲು ಇದೊಂದು ಉತ್ತಮ ಅವಕಾಶ ಎಂದೇ ಹೇಳಲಾಗುತ್ತಿದೆ.


COMMERCIAL BREAK
SCROLL TO CONTINUE READING

ಕರೋನಾ ಕಾಲದಲ್ಲಿ ಹೂಡಿಕೆದಾರರು ಚಿನ್ನ ಮತ್ತು ಬೆಳ್ಳಿಯಲ್ಲಿ ಹೆಚ್ಚು ಹೂಡಿಕೆ ಮಾಡಿದ್ದಾರೆ. ಇದರಿಂದಾಗಿ ಬೆಲೆಗಳಲ್ಲಿ ಭಾರಿ ಏರಿಕೆಯಾಗಿದ್ದವು. ಕಳೆದ ವರ್ಷ ಆಗಸ್ಟ್‌ನಲ್ಲಿ ಚಿನ್ನ ಹತ್ತು ಗ್ರಾಂಗೆ 56191 ರೂ.ಗೆ ತಲುಪಿತ್ತು ಇದೆ ಅವಧಿಯಲ್ಲಿ ಬೆಳ್ಳಿ ಕೂಡ ಪ್ರತಿ ಕೆ.ಜಿ.ಗೆ 78000 ರೂ.ಗಳಷ್ಟಿತ್ತು.


10000 ರೂ.ಗಳಷ್ಟು ಇಳಿಕೆ
ಆದರೆ ಅದಾದ ಬಳಿಕ ಚಿನ್ನ ಹಾಗೂ ಬೆಳ್ಳಿಯ ಬೆಲೆಯಲ್ಲಿ ಕರೆಕ್ಷನ್ ಕಂಡುಬಂತು ಹಾಗೂ ಕಳೆದ ಕೆಲ ತಿಂಗಳಿನಿಂದ ಭಾರಿ ಕರೆಕ್ಷನ್ ಕಂಡುಬಂದಿದೆ. MCX ನಲ್ಲಿ ಫೆಬ್ರುವರಿ 4 ರಂದು ಚಿನ್ನದ ಬೆಲೆ (Gold Rate) ಪ್ರತಿ 10ಗ್ರಾಂ.ಗೆ 46611 ರೂ.ಗಳ 7 ತಿಂಗಳಗಳ ಕನಿಷ್ಠ ಮಟ್ಟಕ್ಕೆ ಕುಸಿದಿತ್ತು (Gold Rate Down). ಹೀಗಾಗಿ ಚಿನ್ನದ ಆಭರಣ (Gold Jewellery) ಖರೀದಿಸಲು (Buy Gold) ಯೋಜನೆ ರೂಪಿಸುತ್ತಿರುವವರಿಗೆ ಇದೊಂದು ಸುವರ್ಣಾವಕಾಶ ಎಂದೇ ಹೇಳಲಾಗುತ್ತಿದೆ.


ಇದನ್ನು ಓದಿ-Gold Price : ಕುಸಿದಿದೆ ಅಷ್ಟೇ ಅಲ್ಲ ಇನ್ನಷ್ಟು ಕುಸಿಯಲಿದೆ ಚಿನ್ನದ ಬೆಲೆ


ಚಿನ್ನದ ಬೆಲೆಯಲ್ಲಿ ಸಣ್ಣ ಪ್ರಮಾಣದ ಕರೆಕ್ಷನ್
ಮಂಗಳವಾರ ಫೆಬ್ರುವರಿ 9ರಂದು ಚಿನ್ನದ ಬೆಲೆಯಲ್ಲಿ ಸಣ್ಣ ಪ್ರಮಾಣದ ಮತ್ತೊಂದು ಕರೆಕ್ಷನ್ ಗಮನಿಸಲಾಗಿದೆ ಹಾಗೂ 24 ಕ್ಯಾರೆಟ್ ನ ಗಟ್ಟಿ ಚಿನ್ನದ ಬೆಲೆ 10 ಗ್ರಾಂ.ಗೆ 47,559 ರೂ.ಗೆ ತಲುಪಿ ಅಂದಿನ ತನ್ನ ವಹಿವಾಟು ಅಂತ್ಯಗೊಳಿಸಿತ್ತು. ಕಳೆದ ಒಂದು ತಿಂಗಳಲ್ಲಿ ಚಿನ್ನದ ಬೆಲೆ 10 ಗ್ರಾಂ.ಗೆ 2000 ರೂ.ಗಳಿಂದ 2500 ರೂ.ಗಳಿಗೆ ಇಳಿಕೆಯಾಗಿದೆ.


ಇದನ್ನು ಓದಿ-Gold Price: ಆಭರಣ ಪ್ರಿಯರಿಗೊಂದು ಶುಭ ಸುದ್ದಿ: ಚಿನ್ನದ ಬೆಲೆಯಲ್ಲಿ ₹ 2,086 ಇಳಿಕೆ..!


ಚಿನ್ನದ ಬೆಲೆ ಇಳಿಕೆಗೆ ಕಾರಣವಾದರೂ ಏನು?
ಫೆಬ್ರುವರಿ 1 ರಂದು ಮಂಡನೆಯಾದ ಈ ಬಜೆಟ್ ನಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಚಿನ್ನ ಹಾಗೂ ಬೆಳ್ಳಿಯ ಮೇಲಿನ ಕಸ್ಟಮ್ ಸುಂಕವನ್ನು ಶೇ.12.5 ರಿಂದ ಶೇ.7.5 ಕ್ಕೆ ಇಳಿಕೆ ಮಾಡಿರುವುದಾಗಿ ಘೋಷಿಸಿದ್ದಾರೆ. ಚಿನ್ನದ ಸ್ಮಗ್ಲಿಂಗ್ ಅನ್ನು ತಡೆಗಟ್ಟಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದರು. ಈ ಕಾರಣದಿಂದ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭಾರಿ ಕುಸಿತ ಗಮನಿಸಲಾಗುತ್ತಿದೆ.


ಇದನ್ನು ಓದಿ- 7th pay commission : ಸರ್ಕಾರಿ ನೌಕರರಿಗೆ ಧನಾಗಮನ..! ಎಷ್ಟಾಗಲಿದೆ ವೇತನ ?