Gold Price : ಕುಸಿದಿದೆ ಅಷ್ಟೇ ಅಲ್ಲ ಇನ್ನಷ್ಟು ಕುಸಿಯಲಿದೆ ಚಿನ್ನದ ಬೆಲೆ

ಚಿನ್ನದ ಬೆಲೆ ಸತತ ಕುಸಿಯುತ್ತಿದೆ. ಕಳೆದ ಮುಂಗಡಪತ್ರದಲ್ಲಿ ಚಿನ್ನದ ಮೇಲಿನ ಕಸ್ಟಮ್ ಸುಂಕ  ಕಡಿಮೆ  ಮಾಡಿದ ಮೇಲಂತೂ ಬಂಗಾರ ದಿನವೂ ಕುಸಿಯುತ್ತಲೇ ಇದೆ.

Written by - Ranjitha R K | Last Updated : Feb 7, 2021, 08:54 AM IST
  • ಇಲ್ಲಿಯ ತನಕ ಸುಮಾರು 8ಸಾವಿರ ರೂಪಾಯಿ ಕಡಿಮೆಯಾಗಿದೆ
  • ಕಸ್ಟಮ್ ಸುಂಕ ಕಡಿಮೆಯಾದ ಮೇಲೆ ಚಿನ್ನ ಕುಸಿಯುತ್ತಲೇ ಇದೆ
  • ಚಿನ್ನದ ಬೆಲೆ ಇನ್ನಷ್ಟೂ ಕುಸಿಯುತ್ತಾ..?
Gold Price : ಕುಸಿದಿದೆ ಅಷ್ಟೇ ಅಲ್ಲ ಇನ್ನಷ್ಟು ಕುಸಿಯಲಿದೆ ಚಿನ್ನದ ಬೆಲೆ title=
ಚಿನ್ನದ ಬೆಲೆ ಇನ್ನಷ್ಟೂ ಕುಸಿಯುತ್ತಾ..? (file photo)

ನವದೆಹಲಿ : ಚಿನ್ನದ ಬೆಲೆ ಸತತ ಕುಸಿಯುತ್ತಿದೆ. ಕಳೆದ ಮುಂಗಡಪತ್ರದಲ್ಲಿ (Budget)ಚಿನ್ನದ ಮೇಲಿನ ಕಸ್ಟಮ್ ಸುಂಕ (custom duty) ಕಡಿಮೆ  ಮಾಡಿದ ಮೇಲಂತೂ ಬಂಗಾರ (Gold rate) ದಿನವೂ ಕುಸಿಯುತ್ತಲೇ ಇದೆ,  ಸುವರ್ಣದ ಬೆಲೆ ಇಲ್ಲಿಯ ತನಕ ಏನಿಲ್ಲ ಅಂದ್ರೂ ಸುಮಾರು 8 ಸಾವಿರ ರೂಪಾಯಿ ಅಗ್ಗವಾಗಿದೆ.

ಮಾರುಕಟ್ಟೆಯಲ್ಲಿ (Bullion Market) ಕಳೆದ ಆರು ದಿನಗಳ ಚಿನ್ನದ ಧಾರಣೆ ಹೀಗಿದೆ ನೋಡಿ
29 ಜನವರಿ                             49,830
1 ಫೆಬ್ರವರಿ                              48,745
2 ಫೆಬ್ರವರಿ                               48,537
3 ಫೆಬ್ರವರಿ                              47,976
4 ಫೆಬ್ರವರಿ                              47,544
5 ಫೆಬ್ರವರಿ                              47,380

ಇದನ್ನೂ ಓದಿ : Petrol-Diesel Price: ಸೆಂಚುರಿಗೆ ಸನಿಹದಲ್ಲಿ ಪೆಟ್ರೋಲ್, ಡೀಸೆಲ್ ರೇಟ್..! ಇನ್ನೂ ಹೆಚ್ಚಾಗುತ್ತಾ ಬೆಲೆ..?

ಚಿನ್ನದ ದರ ಕುಸಿಯಲು ಕಾರಣಗಳೇನು..?
ನಿರ್ಮಲಾ ಸೀತಾರಾಮನ್ (Nirmala Sitaraman) ತಮ್ಮ ಬಜೆಟ್ ನಲ್ಲಿ ಚಿನ್ನದ ಮೇಲಿನ ಕಸ್ಟಮ್ ಸುಂಕವನ್ನು ಶೇ. 7.5ಕ್ಕೆ ಇಳಿಸಿದ್ದಾರೆ.   ಚಿನ್ನದ ಕಳ್ಳಸಾಗಣೆ (Gold Smuggling) ತಡೆಯಲು ಅವರು ಈ ಕ್ರಮ ಕೈಗೊಂಡಿದ್ದಾರೆ. ಹಾಗಾಗಿ ಚಿನ್ನ ಈಗ ಕಳ್ಳ ಮಾರ್ಗದ ಬದಲು ರಾಜಮಾರ್ಗದಲ್ಲೇ ಭಾರತ ಪ್ರವೇಶಿಸುತ್ತಿದೆ. ಹಾಗಾಗಿ ಬೆಲೆಯೂ ಕಡಿಮೆ ಆಗುತ್ತದೆ.

ಚಿನ್ನ ಇನ್ನಷ್ಟು ಕುಸಿಯುತ್ತಾ..?
ಚಿನಿವಾರ ಪೇಟೆ ತಜ್ಞರ (Bullion Market Expert) ಪ್ರಕಾರ ಹೂಡಿಕೆದಾರರಿಗೆ ಅತ್ಯಂತ ಹೆಚ್ಚು ಲಾಭ ತರುವ ವಸ್ತು ಚಿನ್ನ. ರಿಯಲ್ ಎಸ್ಟೇಟ್  ವಲಯ ಕುಸಿತದ ಕಾರಣ ಚಿನ್ನದ ಮೇಲಿನ ಹೂಡಿಕೆ ಇನ್ನಷ್ಟು ಹೆಚ್ಚಾಗಿತ್ತು. ರಿಯಲ್ ಎಸ್ಟೇಟ್ (Real Estate) ಮೇಲೆ ಹೂಡಿಕೆದಾರರಿಗೆ ಭರವಸೆ ಉಳಿದಿಲ್ಲ.  ಚಿನ್ನದ (Gold) ಮೇಲೆ ಭರವಸೆ ಕುಸಿದಿಲ್ಲ. ಹಾಗಾಗಿ ಚಿನ್ನದ ಮೇಲಿನ ಹೂಡಿಕೆ ಇನ್ನಷ್ಟು ಹೆಚ್ಚಾಗಬಹುದು. ಅದೇ ರೀತಿ ಚಿನ್ನದ ಆಮದು ಕೂಡಾ ಅಗ್ಗವಾಗಿದೆ. ಹಾಗಾಗಿ  ಕಳ್ಳ ಮಾರ್ಗದಲ್ಲಿ ಚಿನ್ನ ಬರಲ್ಲ. ಇವೆಲ್ಲಾ ಕಾರಣಗಳಿಂದ ಚಿನ್ನದ ಧಾರಣೆ ಇನ್ನಷ್ಟು ಕುಸಿಯುವ ಸಾಧ್ಯತೆ ಇದೆ ಎನ್ನುತ್ತಾರೆ ಮಾರುಕಟ್ಟೆ (Market) ಪಂಡಿತರು.

ಇದನ್ನೂ ಓದಿ : ಶೀಘ್ರದಲ್ಲಿಯೇ ದೇಶಾದ್ಯಂತ One Nation, One Ombudsman ಯೋಜನೆ ಜಾರಿ: RBI

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News