Gold Hallmarking Rules : ನೀವು ಸಹ ಆಗಾಗ್ಗೆ ಚಿನ್ನಾಭರಣಗಳನ್ನು ಖರೀದಿಸುತ್ತಿದ್ದರೆ, ಈ ಸುದ್ದಿ ನಿಮಗೆ ಉಪಯುಕ್ತವಾಗಿದೆ. ಹೌದು, ಚಿನ್ನ ಖರೀದಿಯ ನಿಯಮಗಳನ್ನು ಸರ್ಕಾರ ಬದಲಾಯಿಸಿದೆ. ಮಾರ್ಚ್ 31, 2023 ರ ನಂತರ ಹಾಲ್‌ಮಾರ್ಕ್ ಇಲ್ಲದ ಚಿನ್ನಾಭರಣಗಳನ್ನು ಮಾರಾಟ ನಿಷೇಧಿಸಿ ಗ್ರಾಹಕ ವ್ಯವಹಾರಗಳ ಸಚಿವಾಲಯ ಆದೇಶ ಹೊರಡಿಸಿದೆ. ಗ್ರಾಹಕರ ವ್ಯವಹಾರಗಳ ಇಲಾಖೆ ವತಿಯಿಂದ 4 ಅಂಕಿ ಮತ್ತು 6 ಅಂಕಿಗಳ ಹಾಲ್‌ಮಾರ್ಕಿಂಗ್ ಕುರಿತು ಗ್ರಾಹಕರಲ್ಲಿರುವ ಗೊಂದಲ ನಿವಾರಣೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.


COMMERCIAL BREAK
SCROLL TO CONTINUE READING

ಇಂದಿನಿಂದಲೇ ನಿಯಮ ಜಾರಿಗೆ


ಸರ್ಕಾರವು ಹೊರಡಿಸಿದ ನಿರ್ಧಾರದ ನಂತರ, ಏಪ್ರಿಲ್ 1, 2023 ರಿಂದ, ಕೇವಲ 6 ಅಂಕೆಗಳ ಆಲ್ಫಾನ್ಯೂಮರಿಕ್ ಹಾಲ್‌ಮಾರ್ಕಿಂಗ್ ಮಾನ್ಯವಾಗಿರುತ್ತದೆ. ಇಲ್ಲದೇ ಹೋದರೆ ಚಿನ್ನ ಮತ್ತು ಅದರಿಂದ ಮಾಡಿದ ಆಭರಣಗಳು ಮಾರಾಟವಾಗುವುದಿಲ್ಲ. ಗ್ರಾಹಕರ ಹಿತದೃಷ್ಟಿಯಿಂದ ಗ್ರಾಹಕ ವ್ಯವಹಾರಗಳ ಇಲಾಖೆ ಕೈಗೊಂಡಿರುವ ನಿರ್ಧಾರ ಇದಾಗಿದೆ. 4 ಅಂಕಿಗಳ ಹಾಲ್‌ಮಾರ್ಕ್ ಅನ್ನು ಏಪ್ರಿಲ್ 1 ರಿಂದ ಸಂಪೂರ್ಣವಾಗಿ ನಿಲ್ಲಿಸಲಾಗುತ್ತದೆ. ಒಂದೂವರೆ ವರ್ಷದ ಹಿಂದೆಯೇ ಸರ್ಕಾರದಿಂದ ಚಿನ್ನದ ಹಾಲ್‌ಮಾರ್ಕಿಂಗ್‌ ಕಡ್ಡಾಯಗೊಳಿಸಲು ಕಸರತ್ತು ಆರಂಭಿಸಲಾಗಿತ್ತು.


ಇದನ್ನೂ ಓದಿ : Jio Recharge: ಒಂದೇ ಒಂದು ರೀಚಾರ್ಜ್‍ಗೆ 388 ದಿನಗಳ ವ್ಯಾಲಿಡಿಟಿ, ಪ್ರತಿದಿನ Unlimited ಕರೆ ಆನಂದಿಸಿ


ದೇಶದಲ್ಲಿ 1338 ಹಾಲ್‌ಮಾರ್ಕಿಂಗ್ ಕೇಂದ್ರಗಳು


ದೇಶದ 339 ಕೇಂದ್ರಗಳು ಚಿನ್ನ ಮತ್ತು ಕಲಾಕೃತಿಗಳ ತಯಾರಿಕೆ / ಉತ್ಪಾದನೆಯನ್ನು ಮಾಡುತ್ತವೆ. BIS ಕೇಂದ್ರಗಳು ಎಲ್ಲಾ ಪ್ರದೇಶಗಳಲ್ಲಿ ಲಭ್ಯವಿದೆ. ಪ್ರಸ್ತುತ ದೇಶದಲ್ಲಿ 1338 ಹಾಲ್‌ಮಾರ್ಕಿಂಗ್ ಕೇಂದ್ರಗಳಿವೆ. ಈ ಕೇಂದ್ರಗಳ ಮೂಲಕ 85% ಕ್ಕಿಂತ ಹೆಚ್ಚು ಪ್ರದೇಶವನ್ನು ಒಳಗೊಂಡಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದೆ.


ಇದನ್ನೂ ಓದಿ : ಹೋಳಿಗೂ ಮುನ್ನ ಶುಭ ಸುದ್ದಿ; ಆಮದು ಸುಂಕ ರದ್ದು, ಅಗ್ಗವಾಗಲಿದೆ ತೊಗರಿ ಬೇಳೆ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.