ಹೋಳಿಗೂ ಮುನ್ನ ಶುಭ ಸುದ್ದಿ; ಆಮದು ಸುಂಕ ರದ್ದು, ಅಗ್ಗವಾಗಲಿದೆ ತೊಗರಿ ಬೇಳೆ!

Good News: ಹೋಳಿ ಹಬ್ಬಕ್ಕೂ ಮುನ್ನ ಕೇಂದ್ರ ಸರ್ಕಾರ ದೇಶದ ಜನರಿಗೆ ಶುಭ ಸುದ್ದಿ ನೀಡಿದೆ. ತೊಗರಿ ಬೇಳೆ ಮೇಲಿನ ಆಮದು ಸುಂಕವನ್ನು ಸರ್ಕಾರ ರದ್ದುಗೊಳಿಸಿದೆ. ಇದರಿಂದ ತೊಗರಿ ಬೇಳೆಯಲ್ಲಿ ಇಳಿಕೆಯಾಗಲಿದೆ.

Written by - Puttaraj K Alur | Last Updated : Mar 4, 2023, 06:53 AM IST
  • ಹೋಳಿ ಹಬ್ಬಕ್ಕೂ ಮುನ್ನವೇ ಕೇಂದ್ರ ಸರ್ಕಾರ ದೇಶದ ಜನರಿಗೆ ಶುಭ ಸುದ್ದಿ ನೀಡಿದೆ
  • ತೊಗರಿ ಬೇಳೆ ಮೇಲಿನ ಆಮದು ಸುಂಕವನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ
  • ಶೇ.11ರಷ್ಟಿದ್ದ ತೊಗರಿ ಬೇಳೆಯ ಮೇಲಿನ ಆಮದು ಸುಂಕ ಶೂನ್ಯಕ್ಕೆ ಇಳಿಸಲಾಗಿದೆ
ಹೋಳಿಗೂ ಮುನ್ನ ಶುಭ ಸುದ್ದಿ; ಆಮದು ಸುಂಕ ರದ್ದು, ಅಗ್ಗವಾಗಲಿದೆ ತೊಗರಿ ಬೇಳೆ! title=
ತೊಗರಿ ಬೇಳೆ ಆಮದು ಸುಂಕ ಇಳಿಕೆ

ನವದೆಹಲಿ: ಹೋಳಿ ಹಬ್ಬಕ್ಕೂ ಮುನ್ನವೇ ಕೇಂದ್ರ ಸರ್ಕಾರ ದೇಶದ ಜನರಿಗೆ ಶುಭ ಸುದ್ದಿಯೊಂದನ್ನು ನೀಡಿದೆ. ತೊಗರಿ ಬೇಳೆ ಮತ್ತಷ್ಟು ಅಗ್ಗವಾಗಲಿದೆ. ಹೌದು, ತೊಗರಿ ಬೇಳೆ ಮೇಲಿನ ಆಮದು ಸುಂಕವನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ.

ಪ್ರಸ್ತುತ ತೊಗರಿ ಬೇಳೆಯ ಮೇಲಿನ ಆಮದು ಸುಂಕ ಶೇ.11ರಷ್ಟಿತ್ತು. ಇದನ್ನು ಮಾರ್ಚ್ 4 ಅಂದರೆ ಇಂದಿನಿಂದ ಶೂನ್ಯಕ್ಕೆ ಇಳಿಸಲಾಗಿದೆ. ಈ ಬಗ್ಗೆ ಕೇಂದ್ರ ಹಣಕಾಸು ಸಚಿವಾಲಯ ಅಧಿಸೂಚನೆ ಹೊರಡಿಸಿದೆ. ಬೇಳೆಕಾಳುಗಳು ಅಗ್ಗವಾಗುವುದರಿಂದ ಜನರಿಗೆ ದೊಡ್ಡ ಪರಿಹಾರ ಸಿಗಲಿದೆ.

ಇದನ್ನೂ ಓದಿ: 7th Pay Commission : ಕೇಂದ್ರ ನೌಕರರ ಬಾಕಿ ಡಿಎ ಬಗ್ಗೆ ಮೋದಿ ಸರ್ಕಾರದಿಂದ ಗುಡ್ ನ್ಯೂಸ್..!

ಶೇ.11ರಷ್ಟು ಆಮದು ಸುಂಕ ತೆಗೆದು ಹಾಕಿದರೆ ಬೇಳೆಕಾಳುಗಳ ಬೆಲೆ ಗಮನಾರ್ಹವಾಗಿ ಇಳಿಕೆಯಾಗಲಿದೆ. ಕಸ್ಟಮ್ಸ್ ಆಕ್ಟ್ 1962ರ ಅಡಿಯಲ್ಲಿ ತೊಗರಿ ಬೇಳೆಯ ಮೇಲಿನ ಆಮದು ಸುಂಕವನ್ನು ತೆಗೆದುಹಾಕಲು ಕೇಂದ್ರ ಸರ್ಕಾರವು ನಿರ್ಧರಿಸಿದೆ.

ತೊಗರಿಗೆ 4,500 ರೂ. ಬೆಂಬಲ ಬೆಲೆ

ತೊಗರಿ ಬೇಳೆಯ 3,850 ರೂ. ಬೆಂಬಲ ಬೆಲೆಗೆ ರಾಜ್ಯ ಸರ್ಕಾರ 650 ರೂ. ಪ್ರೋತ್ಸಾಹಧನ ನೀಡಿ ಪ್ರತಿ ಕ್ವಿಂಟಲ್ ತೊಗರಿಯನ್ನು 4,500 ರೂ.ಗೆ ಖರೀದಿಸಲು ಮುಂದಾಗಿದೆ. ಈ ನಿರ್ಧಾರವನ್ನು ವಿವಿಧ ರೈತಪರ ಸಂಘಟನೆಗಳು ಈಗಾಗಲೇ ಸ್ವಾಗತಿಸಿವೆ.

ಇದನ್ನೂ ಓದಿ: ಆಧಾರ್ ಕಾರ್ಡ್ ದುರ್ಬಳಕೆ? SMS ಮೂಲಕ ನಿಮ್ಮ ಕಾರ್ಡ್ ಲಾಕ್ ಮಾಡಿ, ಹೇಗೆಂದು ತಿಳಿಯಿರಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News