Gold Price 16th March : ಕಳೆದ ಕೆಲವು ತಿಂಗಳುಗಳಿಂದ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಏರಿಳಿತ ಕಂಡು ಬರುತ್ತಲೇ ಇದೆ. ಫೆಬ್ರವರಿ ಆರಂಭದಲ್ಲಿ ದಾಖಲೆ ಸೃಷ್ಟಿಸಿದ್ದ ಚಿನ್ನ ಮತ್ತು ಬೆಳ್ಳಿ ಈ ತಿಂಗಳ ಅಂತ್ಯದಲ್ಲಿ  ಭಾರೀ ಕುಸಿತ ಕಂಡಿತ್ತು. ಆದರೆ ಇದೀಗ ಮತ್ತೆ ಎರಡೂ ಲೋಹಗಳ ಬೆಲೆಯಲ್ಲಿ ಏರಿಕೆ ದಾಖಲಾಗುತ್ತಿದೆ. ಫೆಬ್ರವರಿ ಮೊದಲ ವಾರದಲ್ಲಿ ಚಿನ್ನದ ಬೆಲೆ ದಾಖಲೆ ಮಟ್ಟ ಅಂದರೆ 58,500 ಹಾಗೂ ಬೆಳ್ಳಿ 71,000 ರೂ.ವರೆಗೆ ತಲುಪಿತ್ತು. ಆದರೆ, ನಂತರ ಚಿನ್ನದ ಬೆಲೆಯಲ್ಲಿ 3000 ರೂ.ಗಿಂತ ಹೆಚ್ಚು ಮತ್ತು ಬೆಳ್ಳಿ ಬೆಲೆಯಲ್ಲಿ 8000 ರೂ.ಯಷ್ಟು ಇಳಿಕೆಯಾಗಿದೆ.  


COMMERCIAL BREAK
SCROLL TO CONTINUE READING

65,000ವರೆಗೆ ಏರಲಿದೆ ಬಂಗಾರದ ಬೆಲೆ : 
ತಜ್ಞರ ಪ್ರಕಾರ ದೀಪಾವಳಿ ವೇಳೆಗೆ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಭಾರೀ ಏರಿಕೆ ಕಂಡು ಬರಲಿದೆ. ಚಿನ್ನದ ಬೆಲೆ 65,000 ರೂ.ವರೆಗೆ ಏರಿಕೆ ಕನ್ನುವ ಸಾಧ್ಯತೆಗಳು ದಟ್ಟವಾಗಿದೆ. ಬೆಳ್ಳಿಯ ಬೆಲೆ ಕೆಜಿಗೆ 80,000 ರೂ.ವರೆಗೆ ಏರಲಿದೆ.   ಚಿನ್ನದ ಬೆಲೆಯಲ್ಲಿ ಏರಿಕೆಯಾದ ಬಳಿಕ ಇದೀಗ ಬಂಗಾರದ ಬೆಲೆ 58,000 ರೂ.ಗಳ ಆಸುಪಾಸಿನಲ್ಲಿದೆ. ಬೆಳ್ಳಿ ಕೂಡಾ 67,000  ರೂಪಾಯಿವರೆಗೆ ವಹಿವಾಟು ನಡೆಸಿದೆ.  


ಇದನ್ನೂ ಓದಿ : ಕೊನೆಗೂ ಪಿಎಫ್ ಹೊಂದಿರುವವರಿಗೆ ಸಿಹಿ ಸುದ್ದಿ ನೀಡಿದ ಸರ್ಕಾರ ! ಲೋಕಸಭೆಯಲ್ಲಿ ಹೊರಬಿತ್ತು ಅಧಿಕೃತ ಮಾಹಿತಿ


MCXನಲ್ಲಿ ಚಿನ್ನದ ಬೆಲೆಯಲ್ಲಿ ಕುಸಿತ :  
ಗುರುವಾರ ಚಿನ್ನದ ಬೆಲೆಯಲ್ಲಿ ಕುಸಿತ ಕಂಡು ಬಂದಿದೆ. ಎಂಸಿಎಕ್ಸ್ ಚಿನ್ನ ಮತ್ತು ಬೆಳ್ಳಿಯೆರಡರ ಬೆಲೆಯಲ್ಲಿ ಕುಸಿತ ಕಂಡು ಬಂದಿದೆ.  58,000 ರೂಪಾಯಿ ದಾಟಿದ್ದ ಚಿನ್ನದ ಬೆಲೆಯಲ್ಲಿ ಗುರುವಾರ 361 ರೂಪಾಯಿ ಕುಸಿತ ಕಂಡಿದೆ.  ಬೆಳ್ಳಿ ಬೆಲೆಯಲ್ಲಿ 598 ರೂಪಾಯಿ ಕುಸಿತ ಕಂಡು 66,701 ರೂ. ಆಗಿದೆ. 


ಚಿನ್ನ ಮತ್ತು ಬೆಳ್ಳಿಯ ದರವನ್ನು ಪರಿಶೀಲಿಸುವುದು  ಹೇಗೆ ?
ನೀವು ಚಿನ್ನ ಮತ್ತು ಬೆಳ್ಳಿಯ ದರವನ್ನು ಪರಿಶೀಲಿಸಬೇಕಾದರೆ 8955664433 ಮೊಬೈಲ್ ಸಂಖ್ಯೆಗೆ ಮಿಸ್ಡ್ ಕಾಲ್ ನೀಡಿ. ಮಿಸ್ಡ್ ಕಾಲ್ ನೀಡಿದ ಕೂಡಲೇ ಇತ್ತೀಚಿನ ದರಗಳನ್ನು  ಸಂದೇಶ ರೂಪದಲ್ಲಿ ಸ್ವೀಕರಿಸುವುದು ಸಾಧ್ಯವಾಗುತ್ತದೆ ಆದರೆ ನೆನಪಿರಲಿ, ಇಲ್ಲಿ ನೀಡಲಾದ ದರವನ್ನು ಹೊರತುಪಡಿಸಿ, ಗ್ರಾಹಕರು GSTಯನ್ನು ಸಹ ಪಾವತಿಸಬೇಕಾಗುತ್ತದೆ.


ಇದನ್ನೂ ಓದಿ ಆಧಾರ್‌ಗೆ ಸಂಬಂಧಿಸಿದಂತೆ ಸರ್ಕಾರದ ಮಹತ್ವದ ನಿರ್ಧಾರ, ಲಕ್ಷಾಂತರ ಜನರಿಗೆ ಲಾಭ


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.