Gold and silver rate in india: ಚಿನಿವಾರ ಪೇಟೆಯಲ್ಲಿಂದು ಚಿನ್ನದ ಬೆಲೆ ಮತ್ತೆ ಗಗನಕ್ಕೇರಿದೆ. ಬಂಗಾರದ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ.  ನೀವೇನಾದರೂ ಚಿನ್ನ ಖರೀದಿಸುವ ಪ್ಲಾನ್ ಮಾಡಿದ್ದರೆ ಒಮ್ಮೆ ದರ ಪರಿಶೀಲಿಸುವುದು ಅಗತ್ಯ. ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿನ ಚಿನ್ನ, ಬೆಳ್ಳಿ ದರದಲ್ಲಿ ಹೆಚ್ಚಳವಾಗಿದೆ. ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭಾರಿ ಏರಿಕೆಯಾಗಿರುವುದು ಮತ್ತೊಮ್ಮೆ ಜನಸಾಮಾನ್ಯರಿಗೆ ಶಾಕ್‌ ನೀಡಿದೆ. ನಿನ್ನೆಯವರೆಗೂ ಯಥಾಸ್ಥಿಯಲ್ಲಿದ್ದ ಚಿನ್ನಾಭರಣಗಳ ಬೆಲೆಯಲ್ಲಿನ ದಿಢೀರ್‌ ಬದಲಾವಣೆ ಆಭರಣ ಪ್ರಿಯರಿಗೆ ಶಾಕ್ ನೀಡಿದಂತಾಗಿದೆ.  


COMMERCIAL BREAK
SCROLL TO CONTINUE READING

ಬೆಂಗಳೂರಿನಲ್ಲಿ ಇಂದು 24 ಕ್ಯಾರೆಟ್ 100 ಗ್ರಾಂ ಚಿನ್ನದ ಬೆಲೆ 3300 ರೂಪಾಯಿ ಏರಿಕೆಯಾಗಿದ್ದು, 10 ಗ್ರಾಂಗೆ 330 ಹೆಚ್ಚಾಗಿದೆ. ಬೆಳ್ಳಿ 1ಕೆಜಿಗೆ 700 ರೂಪಾಯಿ ಏರಿಕೆಯಾಗಿದೆ. ಈ ಹೆಚ್ಚಳದಿಂದ ಪ್ರತಿ 10 ಗ್ರಾಂ 24 ಕ್ಯಾರೆಟ್‌ ಚಿನ್ನದ ಬೆಲೆ 60,000 ರೂಪಾಯಿ ಆಗಿದ್ದು, ಬೆಳ್ಳಿ 1 ಕೆಜಿಗೆ 74,000 ರೂಪಾಯಿ ಆಗಿದೆ. 


ಇದನ್ನೂ ಓದಿ : LPG Cylinder Price: ಸಿಲಿಂಡರ್ ಬೆಲೆಯಲ್ಲಿ ಭಾರೀ ಇಳಿಕೆ, ಹೊಸ ದರ ಎಷ್ಟು?


ಅದೇ ರೀತಿ 22 ಕ್ಯಾರೆಟ್‌ 10 ಗ್ರಾಂ ಚಿನ್ನದ ಬೆಲೆಯಲ್ಲಿ 300 ರೂಪಾಯಿ ಏರಿಕೆಯಾಗಿದ್ದು, 55,050 ರೂಪಾಯಿಯಲ್ಲಿ ವಹಿವಾಟು ನಡೆಸುತ್ತಿದೆ. ನಿನ್ನೆ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 59,670 ರೂಪಾಯಿ ಮತ್ತು 22 ಕ್ಯಾರೆಟ್‌ 10 ಗ್ರಾಂ ಬಂಗಾರದ ಬೆಲೆ 54,700 ರೂಪಾಯಿ ಆಗಿತ್ತು. ಬೆಳ್ಳಿ 1ಕೆಜಿಗೆ 73,300 ರೂಪಾಯಿ ಆಗಿತ್ತು. 


ದೇಶದ ಇತರ ಪ್ರಮುಖ ನಗರಳಲ್ಲಿ ಚಿನ್ನದ ದರ (10gm) ಹೀಗಿದೆ:


ಚೆನ್ನೈ 
22K - ₹55,900 
24K - ₹60,980


ಮುಂಬೈ 
22K - ₹55,000 
24K - ₹60,000


ದೆಹಲಿ 
22K - ₹55,150 
24K - ₹60,150


ಕೋಲ್ಕತ್ತಾ 
22K - ₹55,000 
24K - ₹60,000


ಬೆಂಗಳೂರು 
22K - ₹55,050 
24K - ₹60,050


ಹೈದರಾಬಾದ್ 
22K - ₹55,000 
24K - ₹60,000


ದೇಶದ ಇತರ ಪ್ರಮುಖ ನಗರಳಲ್ಲಿ ಬೆಳ್ಳಿ ದರ (1Kg) ಹೀಗಿದೆ:


ಚೆನ್ನೈ - ₹77,500 
ಮುಂಬೈ - ₹74,000 
ದೆಹಲಿ - ₹74,000 
ಕೋಲ್ಕತ್ತಾ - ₹74,000 
ಬೆಂಗಳೂರು - ₹77,500 
ಹೈದರಾಬಾದ್ - ₹77,500 


ಇದನ್ನೂ ಓದಿ : New Rules from 1st April: ಇಂದಿನಿಂದ ಬದಲಾಗುತ್ತಿವೆ ಈ ನಿಯಮಗಳು, ಸರ್ಕಾರದ ಬಹುಮುಖ್ಯ ನಿರ್ಧಾರ!


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.