Sovereign Gold Bond Update Sovereign Gold Bond Update: ಚಿನ್ನ ಖರೀದಿ ಅಥವಾ ಚಿನ್ನ ಮೇಲೆ ಹೂಡಿಕೆ ಮಾಡಲು ಯೋಜಿಸುತ್ತಿದ್ದರೆ (SGB ಸ್ಕೀಮ್) ಈ ವರದಿ ನಿಮಗೆ ಉಪಯುಕ್ತವಾಗಬಹುದು. ಕೇಂದ್ರ ಸರ್ಕಾರದ ಯೋಜನೆ ಮೂಲಕ ನಿಮಗೆ ಅಗ್ಗದ ಬೆಲೆಯಲ್ಲಿ ಬಂಗಾರ ಸಿಗಲಿದೆ. ಈ ಯೋಜನೆಯಿಂದ ಗ್ರಾಹಕರಿಗೆ ಮಾರುಕಟ್ಟೆಗಿಂತ ಕಡಿಮೆ ದರದಲ್ಲಿ ಚಿನ್ನ ಸಿಗುತ್ತದೆ. ಈ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ ಮಾಹಿತಿ ನೀಡಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಸೆ.16ರ ಬಳಿಕ ಈ ಅದೃಷ್ಟವಂತ ರಾಶಿಯ ಹಣೆಬರಹವೇ ಚೇಂಜ್: ಹಣವೋ ಹಣ, ಇನ್ನೇನಿದ್ದರೂ ಸಿರಿವಂತಿಕೆ ಯೋಗ!


ಸಾವರಿನ್ ಗೋಲ್ಡ್ ಬಾಂಡ್ (Sovereign Gold Bond) ಎಂಬುದು ಕೇಂದ್ರ ಸರ್ಕಾರದ ಯೋಜನೆಯಾಗಿದೆ. ಈ ಯೋಜನೆ ಮೂಲಕ ಎಷ್ಟು ದರಕ್ಕೆ ಚಿನ್ನವನ್ನು ಪಡೆಯುತ್ತೀರಿ ಎಂಬ ವಿವರಗಳನ್ನು ಪರಿಶೀಲಿಸೋಣ.


ಸಾವರಿನ್ ಗೋಲ್ಡ್ ಬಾಂಡ್’ನ ಮುಂದಿನ ಕಂತಿಗೆ ಪ್ರತಿ ಗ್ರಾಂಗೆ 5,923 ರೂಪಾಯಿಗಳ ವಿತರಣೆ ಬೆಲೆಯನ್ನು ನಿಗದಿಪಡಿಸಲಾಗಿದೆ ಮತ್ತು ಈ ಚಿನ್ನದ ಬಾಂಡ್‌’ನ ಮಾರಾಟ ಸೆಪ್ಟೆಂಬರ್ 11 ರಿಂದ ಪ್ರಾರಂಭವಾಗಲಿದೆ ಎಂದು ಆರ್‌ಬಿಐ ತಿಳಿಸಿದೆ.


ಇದು ಪ್ರಸಕ್ತ ಹಣಕಾಸು ವರ್ಷದಲ್ಲಿ SGB ಯ ಎರಡನೇ ಕಂತು ಆಗಿರುತ್ತದೆ. 999 ಶುದ್ಧತೆಯ ಚಿನ್ನದ ಅಂತಿಮ ಬೆಲೆಯ ಸರಳ ಸರಾಸರಿ ಆಧಾರದ ಮೇಲೆ SGB ಮೌಲ್ಯವು ಪ್ರತಿ ಗ್ರಾಂಗೆ 5,923 ರೂ.ಗೆ ಇರುತ್ತದೆ ಎಂದು ಆರ್‌ಬಿಐ ಹೇಳಿಕೆಯಲ್ಲಿ ತಿಳಿಸಿದೆ.


ಆರ್‌ಬಿಐ ಜೊತೆ ಸಮಾಲೋಚನೆ ನಡೆಸಿದ ಸರ್ಕಾರ, ಆನ್‌ಲೈನ್‌’ನಲ್ಲಿ ಅರ್ಜಿ ಸಲ್ಲಿಸುವ ಮತ್ತು ಡಿಜಿಟಲ್ ಮೂಲಕ ಪಾವತಿ ಮಾಡುವ ಹೂಡಿಕೆದಾರರಿಗೆ ಮುಖಬೆಲೆಯಿಂದ ಪ್ರತಿ ಗ್ರಾಂಗೆ 50 ರೂಪಾಯಿ ರಿಯಾಯಿತಿ ನೀಡಲು ನಿರ್ಧರಿಸಿದೆ. ಅಂದರೆ ಗ್ರಾಹಕರಿಗೆ 10 ಗ್ರಾಂ ಚಿನ್ನದ ಬೆಲೆಯಲ್ಲಿ 500 ರೂ. ಇಳಿಕೆಯಾದಂತಾಗುತ್ತದೆ.


ಚಿನ್ನವನ್ನು ಎಲ್ಲಿ ಖರೀದಿಸಬಹುದು?


ಬಾಂಡ್‌’ಗಳನ್ನು ಬ್ಯಾಂಕ್‌, ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್, ಗೊತ್ತುಪಡಿಸಿದ ಅಂಚೆ ಕಚೇರಿಗಳು ಮತ್ತು ಮಾನ್ಯತೆ ಪಡೆದ ಸ್ಟಾಕ್ ಎಕ್ಸ್‌ಚೇಂಜ್‌’ಗಳಾದ ಬಿಎಸ್‌ಇ ಮತ್ತು ಎನ್‌ಎಸ್‌ಇ ಮೂಲಕ ಮಾರಾಟ ಮಾಡಲಾಗುತ್ತದೆ.


ಇದನ್ನೂ ಓದಿ: 6.8 ತೀವ್ರತೆಯ ಭೀಕರ ಭೂಕಂಪನ: ಸಾವಿನ ಸಂಖ್ಯೆ 296ಕ್ಕೆ ಏರಿಕೆ, ಮುಂದುವರೆದ ರಕ್ಷಣಾ ಕಾರ್ಯ


ಗೋಲ್ಡ್ ಬಾಂಡ್‌’ನ ಮುಕ್ತಾಯ ಅವಧಿಯು ಎಂಟು ವರ್ಷಗಳಿರುತ್ತದೆ. ಆದರೆ ಐದು ವರ್ಷಗಳು ಪೂರ್ಣಗೊಂಡ ನಂತರ ಕೂಡ ನಿರ್ಗಮಿಸುವ ಆಯ್ಕೆ ಇರುತ್ತದೆ. ಈ ಯೋಜನೆಯಡಿಯಲ್ಲಿ, ಒಂದು ಗ್ರಾಂ ಚಿನ್ನದಲ್ಲಿ ಕನಿಷ್ಠ ಹೂಡಿಕೆಯನ್ನು ಸಹ ಮಾಡಬಹುದು ಮತ್ತು ಗರಿಷ್ಠ ಮಿತಿ ನಾಲ್ಕು ಕಿಲೋಗ್ರಾಂಗಳವರೆಗೆ ಇರುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.