ನವದೆಹಲಿ: ದೀಪಾವಳಿಯ ನಂತರ ಪ್ರಾರಂಭವಾಗುವ ವಿವಾಹದ ಅವಧಿಯಲ್ಲಿ ಚಿನ್ನದ ಬೆಲೆಗಳು (Gold Rate) ಮತ್ತೊಮ್ಮೆ ಏರಿಕೆಯಾಗುವ ನಿರೀಕ್ಷೆಯಿದೆ. ಈ ವರ್ಷದ ಅಂತ್ಯದ ವೇಳೆಗೆ ಚಿನ್ನದ ಬೆಲೆ 67 ಸಾವಿರವನ್ನು ತಲುಪಬಹುದು. ಸಂಶೋಧನಾ ಸಂಸ್ಥೆ ಮೋತಿಲಾಲ್ ಓಸ್ವಾಲ್  (Motilal Oswal) ಫೈನಾನ್ಷಿಯಲ್ ಸರ್ವೀಸಸ್ ತನ್ನ ವರದಿಯೊಂದರಲ್ಲಿ ಈ ಕುರಿತು ತರ್ಕಗಳನ್ನು ಮಂಡಿಸಿದೆ.


COMMERCIAL BREAK
SCROLL TO CONTINUE READING

ಇದನ್ನು ಓದಿ-Gold ಹಾಲ್‌ಮಾರ್ಕಿಂಗ್ ನಿಯಮ ಕಡ್ಡಾಯಕ್ಕೆ ಗಡುವು ವಿಸ್ತರಣೆ, ಇಲ್ಲಿದೆ ಕಾರಣ


ಇದುವರೆಗೆ ಉತ್ತಮ ಆದಾಯ ನೀಡಿದೆ ಚಿನ್ನ
ವರದಿಯ ಪ್ರಕಾರ, ಬಡ್ಡಿಯನ್ನು ಅಗ್ಗವಾಗಿರಿಸಿಕೊಳ್ಳುವ ಕೇಂದ್ರ ಬ್ಯಾಂಕುಗಳ ನೀತಿ ಮತ್ತು ಭಾರತದಲ್ಲಿ ಸಾಂಪ್ರದಾಯಿಕ ಖರೀದಿ ಋತುವನ್ನು ಗಮನದಲ್ಲಿಟ್ಟುಕೊಂಡು, ವರ್ಷದ ಅಂತ್ಯದ ವೇಳೆಗೆ, ಚಿನ್ನದ ಬೆಲೆಗಳು ಮತ್ತೊಮ್ಮೆ ಏರಿಕೆ ಕಾಣುತ್ತವೆ. ಜನರು ಚಿನ್ನದಲ್ಲಿ ಹೂಡಿಕೆ ಮಾಡುವ ಮೂಲಕ ಷೇರು ಮಾರುಕಟ್ಟೆಯಿಂದ ಉತ್ತಮ ಲಾಭವನ್ನು ಪಡೆದಿದ್ದಾರೆ. ಸಂಸ್ಥೆಯ ಪ್ರಕಾರ, ಕಳೆದ ದಶಕದಲ್ಲಿ ಭಾರತದಲ್ಲಿ ಚಿನ್ನವು 159 ಪ್ರತಿಶತದಷ್ಟು ಆದಾಯವನ್ನು ನೀಡಿದೆ, ಆದರೆ ದೇಶೀಯ ಷೇರು ಸೂಚ್ಯಂಕ ನಿಫ್ಟಿ ಈ ಅವಧಿಯಲ್ಲಿ ಶೇಕಡಾ 93 ರಷ್ಟು ಆದಾಯವನ್ನು ನೀಡಿದೆ.


ಯುಎಸ್ ಚುನಾವಣೆಯ ನಂತರದ ತಿಂಗಳುಗಳು ಚಿನ್ನದ ಬೆಲೆಯನ್ನು ನಿರ್ಧರಿಸಲು ಪ್ರಮುಖವಾಗಿವೆ ಎಂದು ವರದಿ ಹೇಳಿದೆ. ಈ ಮಧ್ಯೆ ಕೇಂದ್ರ ಬ್ಯಾಂಕುಗಳ ನಿಲುವು, ಕಡಿಮೆ ಬಡ್ಡಿದರಗಳು, ಕೋವಿಡ್ -19 ಸಾಂಕ್ರಾಮಿಕದ ಪ್ರಭಾವ ಮತ್ತು ಬೆಲೆಗಳ ಮೇಲಿನ ಇತರ ಆತಂಕಗಳ ಬೆಳ್ಳಿಯ ನಿರೀಕ್ಷೆಗಳು ಉತ್ತಮವಾಗಿದ್ದರೂ ಕೂಡ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ವರದಿ ಹೇಳಿದೆ.


ಇದನ್ನು ಓದಿ- ಚಿನ್ನಾಭರಣಗಳ ಬೆಲೆ ಹೇಗೆ ನಿಗದಿಯಾಗುತ್ತದೆ, ಜ್ಯೂವೆಲರ್ ಬಳಿ ಹೋಗುವ ಮೊದಲು ಇದನ್ನು ತಿಳಿದುಕೊಳ್ಳಿ


ಒಂದೇ ವರ್ಷದಲ್ಲಿ ಕುಗ್ಗಿದ ಬೇಡಿಕೆ
ಒಂದು ವರ್ಷದ ಹಿಂದಿನ ಅವಧಿಗೆ ಹೋಲಿಸಿದರೆ ಭಾರತದಲ್ಲಿ ಚಿನ್ನದ ಬೇಡಿಕೆ ಮೊದಲ ಮೂರು ತ್ರೈಮಾಸಿಕಗಳಲ್ಲಿ 49% ಕುಸಿದು 252.4 ಟನ್‌ಗೆ ತಲುಪಿದೆ, ಏಕೆಂದರೆ ಕರೋನವೈರಸ್‌ನಿಂದ ಘೋಷಿಸಲಾಗಿದ್ದ ಲಾಕ್‌ಡೌನ್ ಆಭರಣಗಳ ಬೇಡಿಕೆಯ ಮೇಲೆ ಪರಿಣಾಮ ಬೀರಿದೆ. ಹೂಡಿಕೆಯ ಬೇಡಿಕೆ ಎಂದು ಕರೆಯಲ್ಪಡುವ ಮಾರುಕಟ್ಟೆಯಲ್ಲಿನ ನಾಣ್ಯಗಳು ಮತ್ತು ಬಾರ್‌ಗಳ ಬೇಡಿಕೆ ಮೂರನೇ ತ್ರೈಮಾಸಿಕದಲ್ಲಿ 51% ನಷ್ಟು ಏರಿಕೆಯಾಗಿದ್ದು, ಹೆಚ್ಚುತ್ತಿರುವ ಬೆಲೆಗಳು ಹೂಡಿಕೆದಾರರನ್ನು ಆಕರಿಶಿಸುತ್ತಿವೆ. ಇದು ಹೆಚ್ಚಿನ ಬೆಲೆಗಳನ್ನು ಕಾಯ್ದುಕೊಂಡಿದೆ. ಚಿನ್ನ ಈ ವರ್ಷ ಅತ್ಯುನ್ನತ ಮಟ್ಟಕ್ಕೆ ಸಾಗಿದೆ.


ಇದನ್ನು ಓದಿ- ಕೇವಲ 1 ರೂಪಾಯಿಗೆ ಖರೀದಿಸಿ 24 ಕ್ಯಾರೆಟ್ ಶುದ್ಧ ಚಿನ್ನ, ನೂತನ ಸ್ಕೀಂ ಬಗ್ಗೆ ಇಲ್ಲಿದೆ ಮಾಹಿತಿ


ಜಾಗತಿಕ ಮಟ್ಟದಲ್ಲಿ ಬೆಲೆ ಇಳಿಕೆ
ಈ ಹಳದಿ ಲೋಹವು ವಿದೇಶದಲ್ಲಿ ಪ್ರತಿ ಔನ್ಸ್ ಗೆ  2085 ಡಾಲರ್  ಮತ್ತು ಭಾರತದಲ್ಲಿ ಸರಕು ವಿನಿಮಯ ಕೇಂದ್ರದಲ್ಲಿ ಹತ್ತು ಗ್ರಾಂಗೆ 56,400 ರೂ. ತಲುಪಿದೆ, ಆದರೆ ಜಾಗತಿಕ ಅನಿಶ್ಚಿತತೆಗಳ ನಡುವೆ ಬೆಲೆಗಳು ಇಳಿದಿವೆ ಎಂದೇ ತಜ್ಞರು ತಮ್ಮ ಅಭಿಮತ ವ್ಯಕ್ತಪಡಿಸಿದ್ದಾರೆ.