ಚಿನ್ನಾಭರಣಗಳ ಬೆಲೆ ಹೇಗೆ ನಿಗದಿಯಾಗುತ್ತದೆ, ಜ್ಯೂವೆಲರ್ ಬಳಿ ಹೋಗುವ ಮೊದಲು ಇದನ್ನು ತಿಳಿದುಕೊಳ್ಳಿ

ಪ್ರತಿ ಪ್ರದೇಶದಲ್ಲಿಯೂ ಸಮಾನ ತೂಕದ ಆಭರಣಗಳ ಬೆಲೆ ಒಂದೇ ರೀತಿ ಇರಬೇಕು ಎಂಬುದು ಅನಿವಾರ್ಯವಲ್ಲ.

Last Updated : Nov 9, 2020, 10:30 AM IST
  • ಇನ್ನೇನು ಧನತ್ರಯೋದಶಿ ಬಂದೆ ಬಿಟ್ಟಿದೆ. ಈ ಶುಭ ಅವಸರದಂದು ಜನರು ಚಿನ್ನಾಭರಣಗಳ (Gold) ಖರೀದಿ ಮಾಡುತ್ತಾರೆ.
  • ಚಿನ್ನಾಭರಣಗಳ ಬೆಲೆ ಹೇಗೆ ನಿರ್ಧರಿಸಲಾಗುತ್ತದೆ ಎಂಬುದು ತಿಳಿಯುವುದು ನಿಮ್ಮ ಪಾಲಿಗೆ ಆವಶ್ಯಕವಾಗಿದೆ.
  • ಒಂದು ವೇಳೆ ನೀವು ನಗ ಹೊಂದಿರುವ ಚಿನ್ನಾಭರಣ ಖರೀದಿಸುತ್ತಿದ್ದಾರೆ. ಖರೀದಿಸುವಾಗ ಎಚ್ಚರಿಕೆ ವಹಿಸಿ.
ಚಿನ್ನಾಭರಣಗಳ ಬೆಲೆ ಹೇಗೆ ನಿಗದಿಯಾಗುತ್ತದೆ, ಜ್ಯೂವೆಲರ್ ಬಳಿ ಹೋಗುವ ಮೊದಲು ಇದನ್ನು ತಿಳಿದುಕೊಳ್ಳಿ title=

ನವದೆಹಲಿ: ಇನ್ನೇನು ಧನತ್ರಯೋದಶಿ ಬಂದೆ ಬಿಟ್ಟಿದೆ. ಈ ಶುಭ ಅವಸರದಂದು ಜನರು ಚಿನ್ನಾಭರಣಗಳ (Gold) ಖರೀದಿ ಮಾಡುತ್ತಾರೆ. ಭಾರತದಲ್ಲಿ ಇದೊಂದು ಪರಂಪರೆಯಾಗಿದೆ. ಆದರೆ, ಚಿನ್ನದ ಬೆಲೆ ತೂಕಕ್ಕೆ ಅನುಗುಣವಾಗಿ ಎಲ್ಲ ಪ್ರದೇಶಗಳಲ್ಲಿ ಒಂದೇ ಸಮನಾಗಿ ಏಕೆ ಇರುವುದಿಲ್ಲ ಎಂಬುದು ಬಹುತೇಕ ಆಭರಣ ಖರೀದಿ ಮಾಡುವವರ ಮನಸ್ಸಿನಲ್ಲಿ ಪ್ರಶ್ನೆ ಮೂಡುವುದು ಸಹಜ. ಬೇರೆ ಬೇರೆ ಪ್ರದೇಶಗಳಲ್ಲಿ ಇದು ಬೇರೆ ಬೇರೆ ಯಾಕೆ ಇರುತ್ತದೆ. ಉದಾಹರಣೆಗೆ ಒಂದು ವೇಳೆ ನೀವು 10 ಗ್ರಾಂ ಚಿನ್ನದ ಆಭರಣ ಇಷ್ಟಪಟ್ಟು ಅದನ್ನು ಖರೀದಿಸಲು ಬಯಸಿದರೆ. ವಿವಿಧ ಮಾರುಕಟ್ಟೆಗಳಲ್ಲಿ ಅದರ ಬೆಲೆ ಭಿನ್ನವಾಗಿರುತ್ತದೆ. ಇಂತಹುದರಲ್ಲಿ ಚಿನ್ನಾಭರಣಗಳ ಬೆಲೆ ಹೇಗೆ ನಿರ್ಧರಿಸಲಾಗುತ್ತದೆ ಎಂಬುದು ತಿಳಿಯುವುದು ನಿಮ್ಮ ಪಾಲಿಗೆ ಆವಶ್ಯಕವಾಗಿದೆ. ಏಕೆಂದರೆ ವಿಪರೀತ ಸಂದರ್ಭಗಳಲ್ಲಿ ಒಂದು ವೇಳೆ ನೀವು ನಿಮ್ಮ ಚಿನ್ನವನ್ನು ಮಾರಾಟ ಮಾಡಲು ಹೋದರೆ, ಅದರ ಬೆಲೆ ಎಷ್ಟು ಸಿಗುತ್ತದೆ ಎಂಬುದನ್ನು ನೀವು ಅಂದಾಜಿಸಬಹುದು ಮತ್ತು ಅದನ್ನು ಆಧಾರವಾಗಿಟ್ಟುಕೊಂಡು ನೀವು ಸರಿಯಾದ ನಿರ್ಣಯ ಕೈಗೊಳ್ಳಬಹುದು.

ಇದನ್ನು ಓದಿ- ಇಲ್ಲಿ ವಧುವಿಗೆ ಉಚಿತವಾಗಿ ನೀಡಲಾಗುತ್ತಿದೆ 10 ಗ್ರಾಂ. ಚಿನ್ನ, ಹೀಗೆ ಅರ್ಜಿ ಸಲ್ಲಿಸಿ

ಕೇವಲ ಚಿನ್ನದ ಬೆಲೆಯ ಮೇಲೆ ಚಿನ್ನಾಭರಣ ಬೆಲೆ ನಿಗದಿಯಾಗಿರುವುದಿಲ್ಲ
ಮಾರುಕಟ್ಟೆಯಲ್ಲಿ ಚಿನ್ನಾಭರಣ ಮಾರುವ ಆಭರಣ ವ್ಯಾಪಾರಿ ಕೇವಲ ಚಿನ್ನದ ಬೆಲೆಯ ಮೇಲೆಯೇ ಆಭರಣದ ಬೆಲೆ ನಿರ್ಧರಿಸಿರುವುದಿಲ್ಲ. ಏಕೆಂದರೆ ಇದರಲ್ಲಿ ಇನ್ನೂ ಹಲವು ಸಂಗತಿಗಳು ಸೇರುತ್ತವೆ. 

- ನಿಮಗೆ ಒಂದು ಚಿನ್ನದ ಸರ ಇಷ್ಟವಾಗಿದೆ ಮತ್ತು ಅದರ ತೂಕ 12 ಗ್ರಾಂ. ಇದೆ ಅಂದುಕೊಳ್ಳಿ.
- ಈ ಚಿನ್ನದ ಸಾರದಲ್ಲಿ ಎಷ್ಟು ಶುದ್ಧ ಚಿನ್ನ ಸೇರಿಸಲಾಗಿದೆ ಎಂಬುದರ ಆಧಾರದ ಮೇಲೆ ಆ ಸರದ ಬೆಲೆ ನಿರ್ಧರಿಸಲಾಗುತ್ತದೆ. 24 ಕ್ಯಾರೆಟ್ ಚಿನ್ನ ಎಲ್ಲಕ್ಕಿಂತ ಶುದ್ಧ ಚಿನ್ನ ಎಂದು ಹೇಳಲಾಗುತ್ತದೆ ಆದರೆ, ಇದರಿಂದ ಆಭರಣ ತಯಾರಿಸಲಾಗುವುದಿಲ್ಲ. ಹೀಗಾಗಿ ನೀವು ಖರೀದಿಸಿರುವ ಚಿನ್ನ 22 ಕ್ಯಾರೆಟ್ ನದ್ದಾಗಿದೆ ಎಂದುಕೊಳ್ಳಿ.
- 22 ಕ್ಯಾರೆಟ್ ಚಿನ್ನದ ಸದ್ಯದ ಮಾರುಕಟ್ಟೆ ಬೆಲೆ ಪ್ರತಿ 10 ಗ್ರಾಂ.ಗೆ ರೂ.51,500 ರಷ್ಟಿರಬಹುದು
- ನೀವು ಇಷ್ಟ ಪಟ್ಟಿರುವ ಚಿನ್ನದ ಬೆಲೆ ತೆಗೆಯಲಾಗುತ್ತದೆ. ಅದು ರೂ.61,800 ಗಳಷ್ಟಾಗುತ್ತದೆ.
- ಇದಾದ ಬಳಿಕ ಈ ಚೈನ್ ತಯಾರಿಸಲು ಬೇಕಾದ ಮಜೂರಿಯನ್ನು ಅದರ ಬೆಲೆಯಲ್ಲಿ ಸೇರಿಸಲಾಗುತದೆ. ಇದು ಸರದ ಡಿಸೈನ್ ಮೇಲೆ ಅವಲಂಭಿಸಿರುತ್ತದೆ. ಇದು ಶೇ.2 ರಿಂದ ಶೇ.20ರಷ್ಟಿರುತ್ತದೆ. ನೀವು ಖರೀದಿಸಿರುವ ಚಿನ್ನದ ಸರದ ಮೇಲೆ ಶೇ.10ರಷ್ಟು ಮೇಕಿಂಗ್ ಚಾರ್ಜ್ ಇದೆ ಎಂದುಕೊಳ್ಳಿ. ಈಗ ನೀವು ಆಯ್ಕೆ ಮಾಡಿರುವ ಚಿನ್ನದ ಸರದ ಒಟ್ಟು ಮೌಲ್ಯ 67, 980  ರೂ. ಅಂದರೆ, (61,800 + 61,800 * 10%) ಗಳಷ್ಟು ಆಗಲಿದೆ. ಮೇಕಿಂಗ್ ಚಾರ್ಜ್ ಕುರಿತು ಸರ್ಕಾರ ಯಾವುದೇ ರೀತಿಯ ಮಾರ್ಗಸೂಚಿಗಳನ್ನು ಹೊರಡಿಸಿದೆಯೇ ಎಂಬುದನ್ನೊಮ್ಮೆ ತಿಳಿದುಕೊಳ್ಳಿ.
- ಬಳಿಕ ಇದಕ್ಕೆ ಶೇ.3 ರಷ್ಟು GST ಸೇರಿಸಲಾಗುತ್ತದೆ. ಹೀಗಾಗಿ 12 ಗ್ರಾಂ. ತೂಕದ ನೀವು ಇಷ್ಟಪಟ್ಟ ಚಿನ್ನದ ಬೆಲೆ ರೂ.70,109(ಅಂದರೆ, 67, 980*3% ) ಪಾವತಿಸಬೇಕು.
(ಇದು ಕೇವಲ ಒಂದು ಉದಾಹರಣೆಯಾಗಿದೆ ಎಂಬುದು ನೆನಪಿರಲಿ)

ಇದನ್ನು ಓದಿ- ಧನತ್ರಯೋದಶಿಯ ದಿನ ಅಗ್ಗದ ಬೆಲೆಯಲ್ಲಿ Gold ಖರೀದಿಸಬೇಕೆ? ಇಲ್ಲಿದೆ ಉಪಾಯ

ನಗ ಹೊಂದಿರುವ ಆಭರಣ ಖರೀದಿಸುವಾಗ ಎಚ್ಚರಿಕೆ ವಹಿಸಿ
ಒಂದು ವೇಳೆ ನೀವು ನಗ ಹೊಂದಿರುವ ಚಿನ್ನಾಭರಣ ಖರೀದಿಸುತ್ತಿದ್ದಾರೆ. ಖರೀದಿಸುವಾಗ ಎಚ್ಚರಿಕೆ ವಹಿಸಿ. ಇದರ ಪ್ರಮುಖ ಕಾರಣ ಎಂದರೆ, ಚಿನ್ನದ ಬೆಲೆಗೆ ಸಮನಾಗಿ ನೀವು ನಗಕ್ಕೂ ಕೂಡ ಹಣ ಪಾವತಿಸಬೇಕಾಗುತ್ತದೆ. ಆದರೆ, ಇನ್ನೊಂದೆಡೆ ನೀವು ಇದೆ ಆಭರಣವನ್ನು ವಾಪಸ್ ಮಾರಲು ಮಾರುಕಟ್ಟೆಗೆ ಹೋದಾಗ, ನಗದ ಬೆಲೆಯನ್ನು ಚಿನ್ನದ ಬೆಲೆಯಿಂದ ವಜಾಗೊಳಿಸಲಾಗುತ್ತದೆ.

ಇದನ್ನು ಓದಿ - ದೀಪಾವಳಿಯಲ್ಲಿ ಚಿನ್ನ ಅಗ್ಗವಾಗಲಿದೆಯೇ? ಎಷ್ಟು ಕಡಿಮೆಯಾಗಬಹುದು? ಇಲ್ಲಿದೆ ಮಾಹಿತಿ...

ವಾಪಸ್ ಮಾರಿದಾಗ ಎಷ್ಟು ಹಣ ಸಿಗುತ್ತದೆ
ಆರ್ಥಿಕ ಸಂಕಷ್ಟದ ಪರಿಸ್ಥಿತಿಯಲ್ಲಿ ಒಂದು ವೇಳೆ ನೀವು ನಿಮ್ಮ ಚಿನ್ನವನ್ನು ವಾಪಸ್ ಮಾರುಕಟ್ಟೆಗೆ ಮಾರಾಟ ಮಾಡಲು ಹೋದಾಗ. ನೀವು ಖರೀದಿಸುವಾಗ ನೀಡಿದ ಹಣ ನಿಮಗೆ ಸಿಗುವುದಿಲ್ಲ. ಕಾರಣ ಅದರಲ್ಲಿ ಆಭರಣ ವ್ಯಾಪಾರಿ ನಿಮ್ಮ ಚಿನ್ನದಿಂದ ಬೇರೆ ಚಿನ್ನದ ಆಭರಣ ತಯಾರಿಸಲು ಬೇಕಾಗುವ ಮೇಕಿಂಗ್ ಚಾರ್ಜ್ ಸೇರಿಸುತ್ತಾರೆ. ಹೀಗಾಗಿ ನಿಮಗೆ ನಿಮ್ಮ ಚಿನ್ನದ ಮೇಲೆ ಶೇ.30ರಿಂದ ಶೇ.40 ಕಮ್ಮಿ ಹಣ ಕೈಸೇರುತ್ತದೆ.

Trending News