ನವದೆಹಲಿ: Gold Silver Price Today - ಮದುವೆ ಸೀಸನ್‌ಗೂ ಮುನ್ನವೇ ಚಿನ್ನ, ಬೆಳ್ಳಿಯ ಬೆಲೆ (Silver Price Today) ಗಗನಕ್ಕೇರಿದೆ. ಇಂದು ಮಂಗಳವಾರ ಒಂದೆಡೆ ಚಿನ್ನದ ಬೆಲೆ ಏರಿಳಿತ ಕಾಣುತ್ತಿದ್ದರೆ, ಬೆಳ್ಳಿ ಬೆಲೆಯಲ್ಲಿಯೂ ಭರ್ಜರಿ ಜಿಗಿತ ಕಂಡು ಬಂದಿದೆ. ಬಹು ಸರಕು ವಿನಿಮಯ ಕೇಂದ್ರದಲ್ಲಿ (MCX) ಇಂದು ಚಿನ್ನದ ಬೆಲೆ 409 ರೂ. ಏರಿಕೆಯಾಗಿದ್ದು, MCX ನಲ್ಲಿ ಇಂದು ಬೆಳಗ್ಗೆ ಮಾರುಕಟ್ಟೆ ತೆರೆದುಕೊಂಡಾಗ ಚಿನ್ನ ರೂ.52588.00 ರೂ.ಪ್ರತಿ 10ಗ್ರಾಂ ಗೆ  (Gold Price Today) ವಹಿವಾಟು ನಡೆಸುತ್ತಿತ್ತು. ಇನ್ನೊಂದೆಡೆ ಬೆಳ್ಳಿ 68305.00 ರೂ.ಮಟ್ಟದಲ್ಲಿ  ಅಂದರೆ, ರೂ.1011.0 ರಂತೆ ವಹಿವಾಟು ನಡೆಸುತ್ತಿದೆ. ಕಳೆದ ವಾರದಿಂದ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ನಿರಂತರ ಏರಿಕೆಯಾಗುತ್ತಿದೆ.

COMMERCIAL BREAK
SCROLL TO CONTINUE READING

ಬುಲಿಯನ್ ಮಾರುಕಟ್ಟೆ ಸ್ಥಿತಿ ಹೇಗಿದೆ? (Business News In Kannada)
ಇಂದು ಕೂಡ ಬುಲಿಯನ್ ಮಾರುಕಟ್ಟೆಯಲ್ಲಿ (Godl Price Today Delhi) ಚಿನ್ನ, ಬೆಳ್ಳಿಯ ಬೆಲೆ ಏರಿಕೆಯಾಗಿದೆ. ಇಂದು 22 ಕ್ಯಾರೆಟ್ ಚಿನ್ನದ ಬೆಲೆ 48868 ರೂ.ಗಳಲ್ಲಿ ಏರಿಕೆಯಾಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ 53310 ರೂ.ನಲ್ಲಿದೆ. ಇಲ್ಲಿ 20 ಕ್ಯಾರೆಟ್ ಚಿನ್ನದ ಸರಾಸರಿ ಬೆಲೆ 44425 ರೂ.ಗಳಾಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ 39983 ರೂ. ಆಗಿದೆ ಇದೇ ವೇಳೆ 16 ಕ್ಯಾರೆಟ್ ಚಿನ್ನದ ದರ 35540 ರೂ.ಗೆ ತಲುಪಿದೆ.


ಇದನ್ನೂ ಓದಿ-Cheapest Postpaid Plan: ಒಂದೇ ರೀಚಾರ್ಜ್ ನಲ್ಲಿ 3 SIM ಚಲಾಯಿಸಿ, 150GB ವರೆಗೆ ಡೇಟಾ

ಚಿನ್ನದ ಆಮದು ಹೆಚ್ಚಾಗಿದೆ
ಹಣದುಬ್ಬರ ಏರಿಕೆಯ ನಡುವೆಯೂ ದೇಶದಲ್ಲಿ ಚಿನ್ನದ ಮೇಲಿನ ಜನರ ಮೋಹ ಕಡಿಮೆಯಾಗಿಲ್ಲ. 2021-22ರ ಮೊದಲ 11 ತಿಂಗಳುಗಳಲ್ಲಿ (ಏಪ್ರಿಲ್-ಫೆಬ್ರವರಿ) ದೇಶದ ಚಿನ್ನದ ಆಮದು ಶೇಕಡಾ 73 ರಷ್ಟು ಏರಿಕೆಯಾಗಿ, 45.1 ಬಿಲಿಯನ್ ಡಾಲರ್‌ಗೆ ತಲುಪಿದೆ. ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ಚಿನ್ನದ ಆಮದು ಹೆಚ್ಚಾಗಿದೆ. ಕಳೆದ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಚಿನ್ನದ ಆಮದು ಪ್ರಮಾಣ 26.11 ಶತಕೋಟಿ ಡಾಲರ್ ಆಗಿತ್ತು.


ಇದನ್ನೂ ಓದಿ-7th Pay Commission: ಹೊಸ ಫಾರ್ಮುಲಾ ಅಡಿ DA ಘೋಷಣೆ, ಜುಲೈನಿಂದ ಬದಲಾಗಲಿದೆ ಲೆಕ್ಕಾಚಾರ

ನೀವು ಈ ರೀತಿಯ ಚಿನ್ನದ ದರಗಳನ್ನು ಪರಿಶೀಲಿಸಬಹುದು
ಅಬಕಾರಿ ಸುಂಕ, ರಾಜ್ಯ ತೆರಿಗೆ ಮತ್ತು ಮೇಕಿಂಗ್ ಚಾರ್ಜ್‌ನ ಪಾಲನ್ನು ಹೊಂದಿರುವುದರಿಂದ ದೇಶದ ವಿವಿಧ ಭಾಗಗಳಲ್ಲಿ  ಚಿನ್ನಾಭರಣಗಳ ಬೆಲೆ ಭಿನ್ನವಾಗಿರುತ್ತದೆ. ನಿಮ್ಮ ನಗರದಲ್ಲಿ ಚಿನ್ನದ ಬೆಲೆಯನ್ನು ಪರಿಶೀಲಿಸಲು ನೀವು ಇಂಡಿಯನ್ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಷನ್ ​​(IBJA) ಸಹಾಯವನ್ನು ಪಡೆದುಕೊಳ್ಳಬಹುದು. ಇದಕ್ಕಾಗಿ 8955664433 ಸಂಖ್ಯೆಗೆ ಮಿಸ್ಡ್ ಕಾಲ್ ನೀಡಬೇಕಷ್ಟೆ. ನಿಮ್ಮ ಮೊಬೈಲ್ ಸಂಖ್ಯೆಗೆ ಇತ್ತೀಚಿನ ಚಿನ್ನದ ದರದ ಸಂದೇಶ ಬರುತ್ತದೆ.


ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.