Cheapest Postpaid Plan: ಒಂದೇ ರೀಚಾರ್ಜ್ ನಲ್ಲಿ 3 SIM ಚಲಾಯಿಸಿ, 150GB ವರೆಗೆ ಡೇಟಾ

Three SIMs With Single Recharge - ಟೆಲಿಕಾಂ ಕಂಪನಿಗಳು ಹಲವು ಪೋಸ್ಟ್‌ಪೇಯ್ಡ್ ಯೋಜನೆಗಳನ್ನು (Postpaid Plans) ಹೊಂದಿದ್ದು, ಇವು ನಿಮಗೆ ಸರಾಸರಿ ವೆಚ್ಚದಲ್ಲಿ ಉತ್ತಮ ಪ್ರಯೋಜನಗಳನ್ನು ನೀಡುತ್ತವೆ. ರಿಲಯನ್ಸ್ ಜಿಯೋ (Reliance Jio Postpaid Plan) ಮತ್ತು ಏರ್‌ಟೆಲ್‌ನ (Airtel Postpaid Plan) ಕೈಗೆಟುಕುವ ಫ್ಯಾಮಿಲಿ ಪೋಸ್ಟ್‌ಪೇಯ್ಡ್ ಯೋಜನೆಗಳ ಬಗ್ಗೆ ನಾವು ಇಲ್ಲಿ ಮಾಹಿತಿಯನ್ನು ನೀಡುತ್ತಿದ್ದೇವೆ.  

Written by - Nitin Tabib | Last Updated : Apr 12, 2022, 11:50 AM IST
  • ಸರಾಸರಿ ವೆಚ್ಚದಲ್ಲಿ ಉತ್ತಮ ಪ್ರಯೋಜನಗಳನ್ನು ನೀಡುತ್ತವೆ ಈ ಯೋಜನೆಗಳು
  • ಟೆಲಿಕಾಂ ಕಂಪನಿಗಳ ಬಳಿ ಇಂತಹ ಹಲವು ಯೋಜನೆಗಳಿವೆ
  • ಇವುಗಳಲಿ ನೀವು ಒಂದೇ ರೀಚಾರ್ಜ್ ಮಾಡಿ ಮೂರು ಸಿಮ್ ಕಾರ್ಡ್ ಗಳನ್ನು ಚಲಾಯಿಸಬಹುದು
Cheapest Postpaid Plan: ಒಂದೇ ರೀಚಾರ್ಜ್ ನಲ್ಲಿ 3 SIM ಚಲಾಯಿಸಿ, 150GB ವರೆಗೆ ಡೇಟಾ title=
Best Postpaid Recharge Plans

ನವದೆಹಲಿ: ಮೊಬೈಲ್ ರಿಚಾರ್ಜ್ (Mobile Recharge) ದರ ಏರಿಕೆಯಿಂದ, ಪ್ರಿಪೇಯ್ಡ್ ಮತ್ತು ಪೋಸ್ಟ್ಪೇಯ್ಡ್ ಯೋಜನೆಗಳ ನಡುವೆ ಹೆಚ್ಚಿನ ವ್ಯತ್ಯಾಸ ಕಂಡುಬರುತ್ತಿಲ್ಲ. ಆದರೆ, ಕೆಲವು ಪೋಸ್ಟ್ ಪೇಯ್ಡ್ ಯೋಜನೆಗಳ ವಿಶೇಷತೆ ಎಂದರೆ, ಇವುಗಳಲ್ಲಿ ನಿಮಗೆ ಫ್ಯಾಮಿಲಿ ಕನೆಕ್ಟ್ ಸೌಲಭ್ಯವನ್ನೂ ನೀಡಲಾಗುತ್ತಿದೆ. ಟೆಲಿಕಾಂ ಕಂಪನಿಗಳು ಇಂತಹ ಹಲವು ಪೋಸ್ಟ್‌ಪೇಯ್ಡ್ ಯೋಜನೆಗಳನ್ನು ಹೊಂದಿವೆ, ಈ ಯೋಜನೆಗಳು ನಿಮಗೆ ಸರಾಸರಿ ವೆಚ್ಚದಲ್ಲಿ ಉತ್ತಮ ಪ್ರಯೋಜನಗಳನ್ನು ನೀಡುತ್ತವೆ. ರಿಲಯನ್ಸ್ ಜಿಯೋ ಮತ್ತು ಏರ್‌ಟೆಲ್‌ನ ಕೈಗೆಟುಕುವ ಫ್ಯಾಮಿಲಿ ಪೋಸ್ಟ್‌ಪೇಯ್ಡ್ ಯೋಜನೆಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ 

Jio ಕಂಪನಿಯ ರೂ.799ರ ಯೋಜನೆ
ಜಿಯೋ ಕಂಪನಿಯ ₹ 799 ರ ತಿಂಗಳ ಪೋಸ್ಟ್‌ಪೇಯ್ಡ್ ಯೋಜನೆಯಲ್ಲಿ, ನಿಮಗೆ ಒಂದು ಪ್ರಾಥಮಿಕ ಸಿಮ್ ಜೊತೆಗೆ ಎರಡು ಹೆಚ್ಚುವರಿ ಸಿಮ್ ಕಾರ್ಡ್‌ಗಳನ್ನು ಕುಟುಂಬ ಸದಸ್ಯರಿಗಾಗಿಯೇ ನೀಡಲಾಗುತ್ತದೆ. ಇದರಲ್ಲಿ ನೀವು ಒಟ್ಟು 150 GB ಡೇಟಾಸೌಲಭ್ಯ ಪಡೆಯುವಿರಿ. ಆದರೆ ಇದರಲ್ಲಿ ನೀವು 200 GB ವರೆಗೆ ಡೇಟಾವನ್ನು ರೋಲ್‌ಓವರ್ ಮಾಡಬಹುದು. ಯೋಜನೆಯು ಅನಿಯಮಿತ ಕರೆ ಮತ್ತು ದಿನಕ್ಕೆ 100 SMS ಅನ್ನು ಸಹ ಒಳಗೊಂಡಿದೆ.

ಇದನ್ನೂ ಓದಿ-LICಯ ಈ ಸೂಪರ್ ಹಿಟ್ ಯೋಜನೆಯಲ್ಲಿ ತಿಂಗಳಿಗೆ ರೂ.233 ಹೂಡಿಕೆ ಮಾಡಿ 17 ಲಕ್ಷ ರೂ. ಸಂಪಾದಿಸಿ

ಪೋಸ್ಟ್‌ಪೇಯ್ಡ್ ಯೋಜನೆಗಳ ವಿಶೇಷತೆಯೆಂದರೆ ಅವುಗಳು ಅನೇಕ OTT ಪ್ಲಾಟ್‌ಫಾರ್ಮ್‌ಗಳ ಸದಸ್ಯತ್ವವನ್ನು ನೀಡುತ್ತವೆ. ಜಿಯೋದ ಯೋಜನೆಯಲ್ಲಿ, ನಿಮಗೆ ನೆಟ್‌ಫ್ಲಿಕ್ಸ್ (Netflix), ಅಮೆಜಾನ್ ಪ್ರೈಮ್ (Amazon Prime), ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ (Disney+Hotstar) ಜೊತೆಗೆ ಜಿಯೋ ಅಪ್ಲಿಕೇಶನ್‌ಗಳ ಉಚಿತ ಚಂದಾದಾರಿಕೆಯನ್ನು ಸಿಗುತ್ತದೆ.

ಇದನ್ನೂ ಓದಿ-7th Pay Commission: ಹೊಸ ಫಾರ್ಮುಲಾ ಅಡಿ DA ಘೋಷಣೆ, ಜುಲೈನಿಂದ ಬದಲಾಗಲಿದೆ ಲೆಕ್ಕಾಚಾರ

ಏರ್‌ಟೆಲ್ ರೂ 999 ಪೋಸ್ಟ್‌ಪೇಯ್ಡ್ ಯೋಜನೆ
ಜಿಯೋದಂತೆ, ಏರ್‌ಟೆಲ್‌ನ ಈ ಯೋಜನೆಯು ಒಂದು ಸಾಮಾನ್ಯ ಸಿಮ್ ಜೊತೆಗೆ ಎರಡು ಕುಟುಂಬ ಸಿಮ್‌ನ ಸೌಲಭ್ಯವನ್ನು ನೀಡುತ್ತವೆ. ಇದರಲ್ಲಿ, ನೀವು ಒಟ್ಟು 100 GB ಡೇಟಾ, ಅನಿಯಮಿತ ಕರೆ ಮತ್ತು ದೈನಂದಿನ 100 SMS ಪ್ರಯೋಜನವನ್ನು ಪಡೆಯಬಹುದು. ಇದರಲ್ಲಿ, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಸದಸ್ಯತ್ವ ನಿಮಗೆ ಸಿಗುತ್ತದೆ, ಇದಲ್ಲದೆ, ಏರ್‌ಟೆಲ್ ಎಕ್ಸ್‌ಟ್ರೀಮ್ ಮತ್ತು ವಿಂಕ್ ಮ್ಯೂಸಿಕ್‌ನಂತಹ ಸದಸ್ಯತ್ವಗಳು ಅಮೆಜಾನ್ ಪ್ರೈಮ್‌ನೊಂದಿಗೆ ಉಚಿತವಾಗಿ ಸಿಗುತ್ತವೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News