ನವದೆಹಲಿ: ಚಿನ್ನ-ಬೆಳ್ಳಿ ಬೆಲೆಯಲ್ಲಿ ಇಂದು ಮತ್ತೆ ಭಾರಿ ಏರಿಕೆ ಕಂಡುಬಂದಿದೆ. ಈ ಏರಿಕೆಯ ಬಳಿಕ ಪ್ರತಿ ಹತ್ತು ಗ್ರಾಂ ಚಿನ್ನದ ಬೆಲೆ 51 ಸಾವಿರ ಗಡಿ ದಾಟಿದೆ. ರಾಷ್ಟ್ರರಾಜಧಾನಿ ದೆಹಲಿಯ ಸರಾಫ್ ಮಾರುಕಟ್ಟೆಯಲ್ಲಿ ಇಂದು ಪ್ರತಿ 10 ಗ್ರಾಂ ಚಿನ್ನದ ಬೆಲೆಯಲ್ಲಿ (Gold Price Today) ರೂ.663 ಹೆಚ್ಚಳವಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಂಡುಬಂದ ವೇಗ ಹಾಗೂ ಪ್ರತಿ ಡಾಲರ್ ಎದುರು ರೂಪಾಯಿ ಮೌಲ್ಯದ ಕುಸಿತದ ಹಿನ್ನೆಲೆ ಪ್ರತಿ 10 ಗ್ರಾಂ ಚಿನ್ನದ ಬೆಲೆ 51367ಕ್ಕೆ ತಲುಪಿದೆ. HDFC ಸೆಕ್ಯೂರಿಟಿ ಪ್ರಕಾರ ಕಳೆದ ಸೆಶನ್ ನಲ್ಲಿ ಚಿನ್ನದ ಬೆಲೆ ಪ್ರತಿ 10 ಗ್ರಾಂ.ಗೆ ರೂ.50704 ರಷ್ಟಿತ್ತು.


COMMERCIAL BREAK
SCROLL TO CONTINUE READING

ಇದನ್ನು ಓದಿ- ಗೃಹಸಾಲ, ವಾಹನ ಸಾಲ ಹಾಗೂ ಚಿನ್ನ ಸಾಲದ ಮೇಲಿನ Processing Fee ಕಡಿತಗೊಳಿಸಿದ SBI


ಬೆಳ್ಳಿಯ ನೂತನ ಬೆಲೆ


ಇನ್ನೊಂದೆಡೆ ಇಂದು ಬೆಲ್ಲಿಯೂ ಕೂಡ ಮತ್ತೆ ತನ್ನ ಹೊಳಪನ್ನು ಮರುಪಡೆದುಕೊಂಡಿದ್ದು, ದೆಹಲಿಯ ಸರಾಫ್ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ ಬೆಳ್ಳಿಯ ಬೆಲೆ 1321ಕ್ಕೆ ಏರಿಕೆಯಾಗಿ 611919 ರೂ.ಗೆ ತಲುಪಿದೆ. ಕಳೆದ ವಾರ ಬೆಳ್ಳಿಯ ಬೆಲೆ ಪ್ರತಿ ಕೆ.ಜಿಗೆ ರೂ.60598 ರಷ್ಟಿತ್ತು. ಮಂಗಳವಾರ ವಿದೇಶಿ ಮಾರುಕಟ್ಟೆಗಳಲ್ಲಿ ಬೆಳ್ಳಿಯ ವಹಿವಾಟು ವೇಗ ಪಡೆದುಕೊಂಡ ಕಾರಣ ಭಾರತದಲ್ಲಿಯೂ ಕೂಡ ಚಿನ್ನ-ಬೆಳ್ಳಿ ಬೆಲೆಯಲ್ಲಿ ವೇಗ ಕಂಡುಬಂದಿದೆ.


ಇದನ್ನು ಓದಿ- Tata Motors ತನ್ನ ಈ ಕಾರುಗಳ ಮೇಲೆ ಗ್ರಾಹಕರಿಗೆ ನೀಡುತ್ತಿದೆ 80 ಸಾವಿರ ರೂ.ಗಳ ಲಾಭ


ಅಮೆರಿಕಾದ ಅಧ್ಯಕ್ಷೀಯ ಚುನಾವಣೆಗಳ ಮೇಲೆ ಹೂಡಿಕೆದಾರರ ಕಣ್ಣು


ಈ ಕುರಿತು ವಿಶ್ಲೇಷಿಸಿರುವ ತಜ್ಞರು, ಸ್ಥಳೀಯ ವಾಯದಾ ಮಾರುಕಟ್ಟೆಯಲ್ಲಿ ಮಂಗಳವಾರ ಚಿನ್ನದ ಬೆಲೆ ವೇಗ ಕಂಡುಬಂದಿದೆ. ಪ್ರಸ್ತುತ ಹೂಡಿಕೆದಾರರು ಅಮೆರಿಕಾದ ಅಧ್ಯಕ್ಷೀಯ ಚುನಾವಣೆಗಳ ಕುರಿತು ನಡೆಯುವ ಡಿಬೇಟ್ ಮೇಲೆ ತಮ್ಮ ಗಮನ ಕೇಂದ್ರೀಕರಿಸಿದ್ದಾರೆ. ಇದಲ್ಲದೆ ಪರಿಹಾರ ನೀಡುವ ಹೊಸ ಕಾಯ್ದೆಯ ಮೇಲೂ ಕೂಡ ಹೂಡಿಕೆದಾರರು ಗಮನ ಕೇಂದ್ರೀಕರಿಸಿದ್ದಾರೆ.


ಇದನ್ನು ಓದಿ- PM Modi ಸರ್ಕಾರದ ಈ ಸ್ಕೀಮ್ ಮೂಲಕ ಅಗ್ಗದ ಚಿನ್ನ ಖರೀದಿಸಿ, ಉತ್ತಮ ಆದಾಯ ನಿಮ್ಮದಾಗಿಸಿಕೊಳ್ಳಿ


HDFC ಸೆಕ್ಯೂರಿಟಿ ವರಿಷ್ಟ ತಪನ್ ಪಟೇಲ್ ಹೇಳುವ ಪ್ರಕಾರ, ದೆಹಲಿ ಬುಲಿಯನ್ ಮಾರುಕಟ್ಟೆಯಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 663 ರೂ.ಪ್ರತಿ 10 ಗ್ರಾಂ.ಗೆ ಏರಿಕೆಯಾಗಿದೆ. ಇದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉಂಟಾಗಿರುವ ವೇಗವನ್ನು ಎತ್ತಿ ತೋರಿಸುತ್ತದೆ ಮತ್ತು ಡಾಲರ್ ಎದುರು ರೂಪಾಯಿಯ ಅಪಮೌಲ್ಯವನ್ನು ತೋರಿಸುತ್ತದೆ ಎಂದಿದ್ದಾರೆ.