Tata Motors ತನ್ನ ಈ ಕಾರುಗಳ ಮೇಲೆ ಗ್ರಾಹಕರಿಗೆ ನೀಡುತ್ತಿದೆ 80 ಸಾವಿರ ರೂ.ಗಳ ಲಾಭ

ಹಬ್ಬದ ಸೀಸನ್ ಆರಂಭಕ್ಕೂ ಮುನ್ನವೇ ಟಾಟಾ ಮೋಟರ್ಸ್ ತನ್ನNexon, Tigor, Altroz, Tiago ಹಾಗೂ Harrier ಕಾರುಗಳ ಮೇಲೆ ಭಾರಿ ಡಿಸ್ಕೌಂಟ್ ನೀಡುತ್ತಿದೆ. ಈ ಲಾಭ ಪಡೆಯಲು ನಿಮ್ಮ ಬಳಿ ಕೇವಲ ಮೂರು ದಿನಗಳ ಅವಕಾಶ ಮಾತ್ರ ಇದೆ.

  • Sep 28, 2020, 15:11 PM IST

ನವದೆಹಲಿ: ಹಬ್ಬದ ಋತು ಆರಂಭವಾಗುವುದಕ್ಕು ಮೊದಲೇ ಕಾರ್ ಕಂಪನಿಗಳು ಗ್ರಾಹಕರನ್ನು ತನ್ನತ್ತ ಸೆಳೆಯಲು ಹಲವು ಆಫರ್ ಗಳನ್ನು ನೀಡುತ್ತಿವೆ. ಟಾಟಾ ಮೋಟರ್ಸ್ (Tata Motors) ತನ್ನ Nexon, Tigor, Altroz, Tiago ಹಾಗೂ Harrier ಕಾರುಗಳ ಮೇಲೆ ಭಾರಿ ಡಿಸ್ಕೌಂಟ್ ನೀಡುತ್ತಿದೆ. ಈ ಲಾಭ ಪಡೆಯಲು ನಿಮ್ಮ ಬಳಿ ಕೇವಲ ಮೂರು ದಿನಗಳ ಅವಕಾಶ ಮಾತ್ರ ಇದೆ. ಜೊತೆಗೆ ಈ ಕಾರುಗಳಲ್ಲಿ ಇಎಂಐ ಕೊಡುಗೆಗಳನ್ನು ಸಹ ನೀಡಲಾಗುತ್ತಿದೆ. ಯಾವ ಕೊಡುಗೆಯ ಲಾಭ ಬಳಸಿ  ಈ ಕಾರುಗಳ ಬೆಲೆ ಮೇಲೆ ಎಷ್ಟು ರೂಪಾಯಿ ರಿಯಾಯಿತಿ ಪಡೆಯಬಹುದು ಎಂಬುದನ್ನು ತಿಳಿಯೋಣ ಬನ್ನಿ.

ಇದನ್ನು ಓದಿ -ಬಂಪರ್ ಅವಕಾಶ- Maruti ಸೇರಿದಂತೆ 10 ಕಾರ್ ಗಳ ಮೇಲೆ ಸಿಗುತ್ತಿದೆ 2.4 ಲಕ್ಷ ರೂ.ಗಳ ಡಿಸ್ಕೌಂಟ್

1 /5

ಟಾಟಾ ಮೋಟಾರ್ಸ್‌ ನ ಪವರ್ ಫುಲ್ ಎಸ್ಯುವಿ ಹ್ಯಾರಿಯರ್  ಖರೀದಿಸಲು ಈ ತಿಂಗಳು ಉತ್ತಮ ಅವಕಾಶವಿದೆ. ಈ ಕಾರಿನಲ್ಲಿ ಕಂಪನಿಯು ತನ್ನ ಗ್ರಾಹಕರಿಗೆ 80,000 ರೂಪಾಯಿಗಳ ಲಾಭವನ್ನು ನೀಡುತ್ತಿದೆ. ಒಂದು ವೇಳೆ ನೀವೂ ಕೂಡ ಟಾಟಾ ಹ್ಯಾರಿಯರ್ ಅನ್ನು ಮನೆಗೆ ತರಲು ಬಯಸಿದರೆ, ನೀವು ಕೇವಲ 12,339 ರೂ.ಗಳ ಇಎಂಐ ಅನ್ನು ಪಾವತಿಸಿ ಕಾರ್ ಮನೆಗೆ ತರಬಹುದು. ಈ ಟಾಟಾ ಕಾರು ಸ್ವಯಂಚಾಲಿತ ಪ್ರಸರಣದೊಂದಿಗೆ ಹೊಸ ಬಿಎಸ್ 6 ನಾರ್ಮ್ಸ್ ಎಂಜಿನ್ ಹೊಂದಿದೆ.

2 /5

ಟಾಟಾ ತನ್ನ ಬೆಸ್ಟ್ ಸೇಲ್ಲಿಂಗ್ ಕಾರ್ ನೆಕ್ಸಾನ್ ಮೇಲೆಯೂ ಕೂಡ ಗ್ರಾಹಕರಿಗೆ ರೂ.20 ,000 ಲಾಭ ನೀಡುತ್ತಿದೆ. ಈ ಕಾರ್ ಮೇಲೆ 5, 999 ರೂ.ಗಳ EIM ಕೊಡುಗೆಯನ್ನು ಕೂಡ ನೀಡಲಾಗುತ್ತಿದೆ. ಅತ್ಯಾಧುನಿಕ ಸೌಕರ್ಯಗಳ ಜೊತೆಗೆ ಟಾಟಾ ನೆಕ್ಸಾನ್ ನಲ್ಲಿ ಎಲೆಕ್ಟ್ರಿಕ್ ಸನರೂಫ್ ಕೂಡ ಸಿಗುತ್ತಿದೆ.

3 /5

ಸೆಪ್ಟೆಂಬರ್ ತಿಂಗಳಿನಲ್ಲಿ ಈ ಕಾರ್ ಖರೀಸಿದರೆ ನಿಮಗೆ ರೂ.28000 ವರೆಗೆ ಬೆನಿಫಿಟ್ಸ್ ಸಿಗುತ್ತಿವೆ. ಈ ಕಾರ್ ಮೇಲೆ ಕಂಪನಿ ಕೇವಲ 4,111 ರೂ.ಗಳ ಇಎಂಐ ಸೌಲಭ್ಯ ಕೂಡ ಕಂಪನಿ ನೀಡುತ್ತಿದೆ. ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಜೊತೆಗೆ ಬಿಎಸ್ 6 ನಾರ್ಮ್ಸ್ ನ ಇಂಜಿನ್ ಇದರ ವೈಶಿಷ್ಟ್ಯವಾಗಿದೆ.

4 /5

ಈ ತಿಂಗಳಾಂತ್ಯದೊಳಗೆ ಒಂದು ವೇಳೆ ನೀವು ಟಾಟಾ ಟಿಗೊರ್ ಕಾರನ್ನು ಖರೀದಿಸಿದರೆ ನಿಮಗೆ ರೂ. 33,000 ಕೊಡುಗೆಯ ಲಾಭ ಸಿಗಲಿದೆ. ಅಲ್ಲದೆ, ಈ ಕಾರ್ ಮೇಲೆ ರೂ.4,444 ಗಳ ಇಎಂಐ ಸೌಲಭ್ಯ ಕೂಡ ಇದೆ. ಇದರಲ್ಲೂ ಕೂಡ  ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಜೊತೆಗೆ ಬಿಎಸ್ 6 ನಾರ್ಮ್ಸ್ ನ ಇಂಜಿನ್ ನೀಡಲಾಗಿದೆ.

5 /5

ದೇಶದ ಅತಿದೊಡ್ಡ ಕಾರು ಉತ್ಪಾದಕ ಕಂಪನಿ ಮಾರುತಿ ಸುಜುಕಿ ತನ್ನ ಅಗ್ಗದ ಸೆಡಾನ್ ಡಿಜೈರ್ ಮೇಲೆ ಉತ್ತಮ ಕೊಡುಗೆ ನೀಡುತ್ತಿದೆ. ಕಂಪನಿಯು ಈ ಕಾರ್ ಮೇಲೆ ಒಟ್ಟು 55 ಸಾವಿರ ರಿಯಾಯಿತಿ ನೀಡುತ್ತಿದೆ. ಕಾರಿನ ಪ್ರಿ-ಫೇಸ್‌ಲಿಫ್ಟ್ ಮಾದರಿಯಲ್ಲಿ 25 ಸಾವಿರ ರೂಪಾಯಿಗಳವರೆಗೆ ನಗದು ರಿಯಾಯಿತಿ, 25 ಸಾವಿರ ವಿನಿಮಯ ಬೋನಸ್ ಮತ್ತು 5 ಸಾವಿರ ರೂಪಾಯಿಗಳ ಕಾರ್ಪೊರೇಟ್ ರಿಯಾಯಿತಿಯನ್ನು ಫೇಸ್‌ಲಿಫ್ಟ್ ಮತ್ತು ಪ್ರಿ-ಫೇಸ್‌ಲಿಫ್ಟ್ ಮಾದರಿಗಳಲ್ಲಿ ನೀಡಲಾಗುತ್ತಿದೆ. ಡಿಜೈರ್‌ನ ಆರಂಭಿಕ ಬೆಲೆ 5,89,000 ಲಕ್ಷ ರೂ. ಗಳಷ್ಟಾಗಿದೆ.