ಇಂದಿನ ಚಿನ್ನ-ಬೆಳ್ಳಿಯ ದರ: ಚಿನ್ನ ಕೊಳ್ಳುವವರಿಗೆ ಭರ್ಜರಿ ಸಿಹಿ ಸುದ್ದಿಯೊಂದಿದೆ. ನಿಮಗೂ ಚಿನ್ನಾಭರಣ ಖರೀದಿಸುವ ಪ್ಲಾನ್ ಇದ್ದರೆ ಖುಷಿ ಸುದ್ದಿ ಇಲ್ಲಿದೆ. ಮಾರುಕಟ್ಟೆಯಲ್ಲಿ ನಿರಂತರವಾಗಿ ದಾಖಲೆಯ ಏರಿಕೆ ಕಂಡ ನಂತರ ಇಂದು ಚಿನ್ನದ ಬೆಲೆಯಲ್ಲಿ ಹಠಾತ್‌ ಕುಸಿತ ಕಂಡುಬಂದಿದೆ. ಬಹು ಸರಕು ವಿನಿಮಯ ಕೇಂದ್ರದಲ್ಲಿ ಚಿನ್ನದ ಬೆಲೆ ಕುಸಿದಿದೆ. ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡು ಬರುತ್ತಿದೆ. ಕಳೆದ 15 ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ 3,422 ರೂ. ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ. ಆದರೆ ಇಂದು ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ ಚಿನ್ನದ ಬೆಲೆ ಶೇ.0.06ರಷ್ಟು ಕಡಿಮೆಯಾಗಿದ್ದು, ಪ್ರತಿ 10 ಗ್ರಾಂಗೆ 69,666 ರೂ.ನಂತೆ ಮಾರಾಟವಾಗುತ್ತಿದೆ. ಇದಲ್ಲದೇ ಬೆಳ್ಳಿಯ ದರದಲ್ಲಿ ಶೇ.0.70ರಷ್ಟು ಇಳಿಕೆಯಾಗಿ ಪ್ರತಿ ಕೆಜಿಗೆ 79,421 ರೂ.ನಂತೆ ಮಾರಾಟವಾಗುತ್ತಿದೆ.  


COMMERCIAL BREAK
SCROLL TO CONTINUE READING

IBJAನಲ್ಲಿ ಬೆಲೆ ಏನು?


IBJAನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಒಂದು ಗ್ರಾಂಗೆ 6,967 ರೂ. ಇದೆ. ಇದಲ್ಲದೇ 22 ಕ್ಯಾರೆಟ್ ಚಿನ್ನದ ಬೆಲೆ ಒಂದು ಗ್ರಾಂಗೆ 6,800 ರೂ. ಇದೆ. ಅದೇ ರೀತಿ 20 ಕ್ಯಾರೆಟ್‌ನ ಚಿನ್ನದ ಬೆಲೆ ಪ್ರತಿ ಗ್ರಾಂಗೆ 6,200 ರೂ. ಮತ್ತು 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 5,643 ರೂ. ಇದೆ. 


ಇದನ್ನೂ ಓದಿ: ಬ್ಯಾಂಕ್ ಲೋನ್ ಪಡೆದವರು ನಿರಾಳ !EMI ಮೇಲೆ ಹೆಚ್ಚಿನ ಹೊರೆ ಇಲ್ಲ ! ಹೊರ ಬಿತ್ತು RBI ನಿರ್ಧಾರ


ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ


ಪ್ರಪಂಚದಾದ್ಯಂತ ಚಿನ್ನದ ಬೆಲೆಗಳನ್ನು ಲಂಡನ್ ಬುಲಿಯನ್ ಮಾರುಕಟ್ಟೆಯ ಮೂಲಕ ನಿರ್ಧರಿಸಲಾಗುತ್ತದೆ. ಲಂಡನ್‌ನ ಬುಲಿಯನ್ ಮಾರುಕಟ್ಟೆ ವಿಶ್ವದಲ್ಲೇ ಅತಿ ದೊಡ್ಡದಾಗಿದೆ. ಪ್ರಪಂಚದ ದೊಡ್ಡ ಉದ್ಯಮಿಗಳು ಇದರೊಂದಿಗೆ ಸಂಬಂಧ ಹೊಂದಿದ್ದಾರೆ. ಅಮೆರಿಕದ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯು ಶೇ.0.05ರಷ್ಟು ಇಳಿಕೆಯಾಗಿದ್ದು, ಪ್ರತಿ ಔನ್ಸ್‌ಗೆ $2,287 ಆಗಿದೆ. ಅದೇ ರೀತಿ ಬೆಳ್ಳಿಯ ಬೆಲೆಯು ಶೇ.0.21ರಷ್ಟು ಕಡಿಮೆಯಾಗಿ 26.77 ಔನ್ಸ್ ತಲುಪಿದೆ. 


ಮೇಕಿಂಗ್ ಚಾರ್ಜ್‌ಗಳನ್ನು ವಿಧಿಸಿದ ನಂತರವೇ ನೀವು ಮಾರುಕಟ್ಟೆಯಲ್ಲಿ ಚಿನ್ನದ ಆಭರಣಗಳನ್ನು ಪಡೆಯುತ್ತೀರಿ. 


ಇದನ್ನೂ ಓದಿ: ದಾಖಲೆಯ ಏರಿಕೆಯ ನಂತರ ಇಳಿಕೆಯಾದ ಚಿನ್ನದ ಬೆಲೆ !


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ