Gold Silver Price Today - ಅಕ್ಷಯ ತೃತಿಯಾಗೂ ಮುನ್ನ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭಾರಿ ಇಳಿಕೆ ಗಮನಿಸಲಾಗಿದೆ. ಜಾಗತಿಕ ಮಾರುಕಟ್ಟೆಯಿಂದ ದೊರೆತ ಸಂಕೇತಗಳ ಹಿನ್ನೆಲೆ ಎಂಸಿಎಕ್ಸ್ ಹಾಗೂ ಭಾರತೀಯ ಸರಾಫ್ ಮಾರುಕಟ್ಟೆಯಲ್ಲಿ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ. ವಾರದ ಮೊದಲ ವಹಿವಾಟಿನ ದಿನವಾಗಿರುವ ಇಂದು ಮಲ್ಟಿ ಕಮಾಡಿಟಿ ಎಕ್ಸ್ಚೇಂಜ್ ನಲ್ಲಿ ಜೂನ್ ವಾಯಿದಾ ಚಿನ್ನ ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಶೇ.1.19 ರಷ್ಟು ಕುಸಿತ ದಾಖಲಿಸಿ, ಪ್ರತಿ ಹತ್ತು ಗ್ರಾಂ.ಗೆ ರೂ.51,136 ಕ್ಕೆ ತಲುಪಿದೆ. 

COMMERCIAL BREAK
SCROLL TO CONTINUE READING

ಮೇ 3ರಂದು ಅಕ್ಷಯ ತೃತಿಯಾ ಮಹಾಪರ್ವ ಆಚರಿಸಲಾಗುತ್ತಿದೆ
ಇದೇ ರೀತಿ ಜುಲೈ ವಾಯಿದಾ ಬೆಳ್ಳಿಯ ಬೆಲೆ ಶೇ.1.52ರಷ್ಟು ಕುಸಿತ ದಾಖಲಿಸಿ, ಪ್ರತಿ ಕಿ.ಗ್ರಾಂ.ಗೆ ರೂ.63,370 ಕ್ಕೆ ತಲುಪಿದೆ. ಮೇ 3 ರಂದು ದೇಶಾದ್ಯಂತ ಅಕ್ಷಯ ತೃತಿಯಾ ಮಹಾಪರ್ವವನ್ನು ಆಚರಿಸಲಾಗುತ್ತಿದೆ. ಹಿಂದೂ ಧರ್ಮಶಸ್ತ್ರಗಳ ಪ್ರಕಾರ ಈ ಶುಭದಿನ ಚಿನ್ನ-ಬೆಳ್ಳಿಯ ಖರೀದಿಗೆ ಭಾರಿ ಮಹತ್ವವಿದೆ. ಹೀಗಿರುವಾಗ ಈ ಚಿನ್ನ-ಬೆಳ್ಳಿ ಇಳಿಕೆಯ ಲಾಭವನ್ನು ನೀವೂ ಕೂಡ ಪಡೆದುಕೊಳ್ಳಬಹುದು.

ಸುಮಾರು 2000 ರೂ.ಗಳಿಂದ ಕುಸಿದ ಬೆಳ್ಳಿ ಬೆಲೆ
ಐಬಿಜೆಎ ವತಿಯಿಂದ ಸೋಮವಾರ ಬಿಡುಗಡೆ ಮಾಡಲಾಗಿರುವ ಚಿನ್ನ ಹಾಗೂ ಬೆಳ್ಳಿ ಬೆಲೆಗಳಲ್ಲಿ ಇಳಿಕೆಯನ್ನು ಗಮನಿಸಲಾಗಿದೆ. ಶುಕ್ರವಾರ ದಿನದಾಂತ್ಯಕ್ಕೆ ತನ್ನ ವಹಿವಾಟನ್ನು ರೂ.52055 ಕ್ಕೆ ನಿಲ್ಲಿಸಿದ್ದ 24 ಕ್ಯಾರೆಟ್ ಚಿನ್ನ, ಇಂದು ಪ್ರತಿ 10ಗ್ರಾಂ,ಗೆ ರೂ. 51406 ಕ್ಕೆ ತಲುಪಿದೆ. ಇನ್ನೊಂದೆಡೆ 22 ಕ್ಯಾರೆಟ್ ಚಿನ್ನ ರೂ. 51406 ಕ್ಕೆ ಮಾರಾಟವಾಗುತ್ತಿದ್ದರೆ, 20 ಕ್ಯಾರೆಟ್ ಚಿನ್ನ ರೂ.47088ಕ್ಕೆ ಮಾರಾಟವಾಗುತ್ತಿದೆ. 999 ಪ್ಯೂರಿಟಿ ಹೊಂದಿರುವ ಬೆಳ್ಳಿ ಪ್ರತಿ ಕಿಲೋಗೆ ರೂ.64774 ರ ಹೋಲಿಕೆಯಲ್ಲಿ ಇಂದು ರೂ.62820ಕ್ಕೆ ಮಾರಾಟವಾಗುತ್ತಿದೆ.


ಇದನ್ನೂ ಓದಿ-​Ration Card Rules: ಈ ನಾಲ್ಕು ಸಂದರ್ಭಗಳಲ್ಲಿ ರದ್ದಾಗುತ್ತದೆ ನಿಮ್ಮ ಪಡಿತರ ಚೀಟಿ

ಚಿನ್ನ-ಬೆಳ್ಳಿ ಬೆಲೆ ಏಕೆ ಕುಸಿಯುತ್ತಿದೆ?
ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಣದುಬ್ಬರಕ್ಕೆ ಕಡಿವಾಣ ಹಾಕಲು ಫೆಡರಲ್ ರಿಸರ್ವ್ ತನ್ನ ಬಡ್ಡಿಯನ್ನು ಹೆಚ್ಚಿಸಲಿದೆ ಎಂಬ ಭೀತಿ ಮಾರುಕಟ್ಟೆಯಲ್ಲಿ ಒತ್ತಡವನ್ನು ಹೆಚ್ಚಿಸಿದೆ. ಬಡ್ಡಿ ದರದಲ್ಲಿ 50 ಬೇಸಿಸ್ ಪಾಯಿಂಟ್ ಹೆಚ್ಚಳವಾಗುವ ಸಾಧ್ಯತೆ ಇದೆ. ಇನ್ನೊಂದೆಡೆ ಯುಎಸ್ ಗೋಲ್ಡ್ ಫ್ಯೂಚರ್ ಕೂಡ ಕುಸಿತ ಕಂಡು ಶೇ.22.60ಕ್ಕೆ ತಲುಪಿದೆ.


ಇದನ್ನೂ ಓದಿ-ದುಬಾರಿ ಪೆಟ್ರೋಲ್ ನಿಂದ ಶೀಘ್ರವೇ ಪರಿಹಾರ ಸಿಗಲಿದೆ, ಅಗ್ಗದ ಇಂಧನ ಬಿಡುಗಡೆ ಮಾಡಿದ ಇಂಡಿಯನ್ ಆಯಿಲ್

ಚಿನ್ನ-ಬೆಳ್ಳಿ ಬೆಲೆಯನ್ನು ಹೇಗೆ ತಿಳಿದುಕೊಳ್ಳಬೇಕು?
ಚಿನ್ನ ಮತ್ತು ಬೆಳ್ಳಿಯ ಇತ್ತೀಚಿನ ಬೆಲೆಗಳನ್ನು ತಿಳಿದುಕೊಳ್ಳಲು ನೀವು ನಿಮ್ಮ ಮೊಬೈಲ್ ಫೋನ್ ಮೂಲಕ 8955664433ಗೆ ಮಿಸ್ಡ್ ಕಾಲ್ ಮಾಡಬಹುದು. ಇದಾದ ಬಳಿಕ ನಿಮ್ಮ ಮೊಬೈಲ್ ಫೋನ್ ಗೆ ಸಂದೇಶವೊಂದು ಬರಲಿದ್ದು, ತನ್ಮೂಲಕ ನೀವು ಇಂದಿನ ಮಾರುಕಟ್ಟೆಯಲ್ಲಿನ ಚಿನ್ನ ಮತ್ತು ಬೆಳ್ಳಿ ಬೆಲೆಗಳನ್ನು ಪರಿಶೀಲಿಸಬಹುದು. 

ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.