ಚಿನ್ನದ ಬೆಲೆಯಲ್ಲಿ ಭಾರೀ ಏರಿಳಿತ, ಈ ಸಮಯದಲ್ಲಿ ಬಂಗಾರ ಖರೀದಿ ಮಾಡುವುದು ಸರಿಯೇ ?
ಯುದ್ಧದ ಪರಿಣಾಮ, ಚಿನ್ನದ ಮಾರುಕಟ್ಟೆಯಲ್ಲಿ ಸಾಕಷ್ಟು ಏರಿಳಿತಗಳಾಗುತ್ತಿವೆ. ಹೆಚ್ಚಿನ ಸಂಖ್ಯೆಯ ಜನರು ಈ ಸಮಯದಲ್ಲಿ ಚೀನಾ ಖರೀದಿಸಬೇಕೇ ? ಬೇಡವೇ ಎನ್ನುವುದರ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದು ಸಾಧ್ಯವಾಗದೆ ಗೊಂದಲದಲ್ಲಿದ್ದಾರೆ.
ನವದೆಹಲಿ : ರಷ್ಯಾ (Russia) ಮತ್ತು ಉಕ್ರೇನ್ (Ukraine) ನಡುವೆ ಸಮರ ನಡೆಯುತ್ತಿದ್ದು, ಅದರ ಪರಿಣಾಮ ವಿಶ್ವಾದ್ಯಂತ ಮಾರುಕಟ್ಟೆಯಲ್ಲಿ ಗೋಚರಿಸುತ್ತಿದೆ. ಯುದ್ಧದ ಪರಿಣಾಮ, ಚಿನ್ನದ ಮಾರುಕಟ್ಟೆಯಲ್ಲಿ (Gold market) ಸಾಕಷ್ಟು ಏರಿಳಿತಗಳಾಗುತ್ತಿವೆ. ಹೆಚ್ಚಿನ ಸಂಖ್ಯೆಯ ಜನರು ಈ ಸಮಯದಲ್ಲಿ ಚೀನಾ ಖರೀದಿಸಬೇಕೇ ? ಬೇಡವೇ ಎನ್ನುವುದರ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದು ಸಾಧ್ಯವಾಗದೆ ಗೊಂದಲದಲ್ಲಿದ್ದಾರೆ. ಹೀಗಿರುವಾಗ ಈ ಹೊತ್ತಿನಲ್ಲಿ ತಜ್ಞರ ಅಭಿಪ್ರಾಯವನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗುತ್ತದೆ.
ಚಿನ್ನ ಖರೀದಿಸಲು ತಜ್ಞರು ಸಲಹೆ :
ನಮ್ಮ ಅಂಗಸಂಸ್ಥೆ ವೆಬ್‌ಸೈಟ್ Zee ಬ್ಯುಸಿನೆಸ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ನೀವು ಚಿನ್ನವನ್ನು ಖರೀದಿಸಲು ಬಯಸುವುದಾದರೆ, ಈ ಸಮಯದಲ್ಲಿ ಖಂಡಿತವಾಗಿಯೂ ಚಿನ್ನ ಖರೀದಿಸಬಹುದು ಎನ್ನುತ್ತಾರೆ ಜ್ಯುವೆಲರ್ಸ್ ಅಸೋಸಿಯೇಶನ್‌ನ ಅಧ್ಯಕ್ಷ ಯೋಗೇಶ್ ಸಿಂಘಾಲ್ . ಈಗ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ (Gold price). ಒಂದು ತೊಲ ಚಿನ್ನ 48ರಿಂದ 50 ಸಾವಿರ ರೂ.ವರೆಗೆ ಲಭ್ಯವಿದ್ದರೆ ಖಂಡಿತಾ ಖರೀದಿಸಬಹುದು. 50 ಸಾವಿರ ರೂಪಾಯಿ ಅಥವಾ ಅದಕ್ಕಿಂತ ಕಡಿಮೆ ದರದಲ್ಲಿ ಒಂದು ತೊಲ ಬಂಗಾರ ಖರೀದಿಸಿದರೆ ಅದಕ್ಕೆ ಚಿಂತೆ ಪಡಬೇಕಾಗಿಲ್ಲ ಎನ್ನುತ್ತಾರೆ ತಜ್ಞರು .
ಇದನ್ನೂ ಓದಿ : SBI Customers Alert : SBI ಗ್ರಾಹಕರೆ ಗಮನಿಸಿ : ಇಂದು ರಾತ್ರಿಯಿಂದ ಬಂದ್ ಆಗಲಿದೆ ಈ ಸೇವೆ
ಯುದ್ಧವು ಭಾರತೀಯ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುತ್ತದೆಯೇ?
ಮುಂದಿನ ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಏರಿಳಿತಗಳಾಗಬಹುದು ಎಂದು ಯೋಗೇಶ್ ಸಿಂಘಾಲ್ ಹೇಳಿದ್ದಾರೆ (Gold rate fluctuation) . ಆದರೆ, ಒಂದು ಅಥವಾ ಎರಡು ತಿಂಗಳುಗಳ ಕಾಲ ಚಿನ್ನದ ಬೆಲೆ 48 ಸಾವಿರದಿಂದ 52 ಸಾವಿರ ರೂ. ಒಳಗಿರಲಿದೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವು (Russia Ukraine war)ಭಾರತದ ಮಾರುಕಟ್ಟೆಯ ಮೇಲೆ ಯಾವುದೇ ನೇರ ಪರಿಣಾಮ ಬೀರಲಿಕ್ಕಿಲ್ಲ ಎಂದು ಅವರು ಅಂದಾಜು ವ್ಯಕ್ತಪಡಿಸಿದ್ದಾರೆ. ಏಕೆಂದರೆ ಭಾರತ ಅಲ್ಲಿಂದ ಚಿನ್ನವನ್ನು ಆಮದು ಮಾಡಿಕೊಳ್ಳುವುದಿಲ್ಲ. ಆದರೆ ಈ ಯುದ್ಧವು ಭಾರತೀಯ ಕರೆನ್ಸಿಯ ಮೇಲೆ ಪರಿಣಾಮ ಬೀರುತ್ತದೆ.
ಚಿನ್ನದಲ್ಲಿ ಭಾರಿ ಜಿಗಿತ ಯಾವಾಗ?
ಫೆಬ್ರವರಿ 24 ರಂದು ದೆಹಲಿಯಲ್ಲಿ ಚಿನ್ನದ ಬೆಲೆ 1,656 ರೂ. ಹೆಚ್ಚಳದೊಂದಿಗೆ 51 ಸಾವಿರದ 627 ರೂ.ಗೆ ಏರಿಕೆಯಾಗಿದೆ. ಇದೇ ವೇಳೆಗೆ ಫೆ.23ರಂದು ಚಿನ್ನ 49 ಸಾವಿರದ 971 ರೂ. ಯಾಗಿತ್ತು. IBJA ಪ್ರಕಾರ, ಗುರುವಾರ ಚಿನ್ನದ ದರ 50,667 ರೂ.ಯಾಗಿತ್ತು.
ಇದನ್ನೂ ಓದಿ : Arecanut Price Today: ರಾಜ್ಯದ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆ ಎಷ್ಟಿದೆ?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.