ರಷ್ಯಾದಿಂದ ರಾಜಧಾನಿ ಕೀವ್ ಉಳಿಸಲು ಹೆಣಗಾಡುತ್ತಿರುವ ಉಕ್ರೇನ್ ರಸ್ತೆಗಳ ಸ್ಥಿತಿ ಹೇಗಿದೆ..?

ರಷ್ಯಾದ ಆಕ್ರಮಣದ ನಂತರ ಉಕ್ರೇನ್ ರಾಜಧಾನಿ ಕೀವ್‌ನಲ್ಲಿ ಹೋರಾಟ ತೀವ್ರಗೊಂಡಿದೆ. ರಷ್ಯಾದ ಆಕ್ರಮಣದಿಂದ ರಾಜಧಾನಿಯನ್ನು ಉಳಿಸಲು ಉಕ್ರೇನಿಯನ್ ಸೈನ್ಯವು ಅತ್ಯುತ್ತಮವಾಗಿ ಪ್ರಯತ್ನಿಸುತ್ತಿದೆ. ಅದೇ ರೀತಿ ರಷ್ಯಾದ ಸೈನ್ಯವು ನಿರಂತರವಾಗಿ ಕ್ಷಿಪಣಿಗಳು ಮತ್ತು ಬಾಂಬ್ ಗಳೊಂದಿಗೆ ದಾಳಿ ಮಾಡುತ್ತಿದೆ.

Written by - Puttaraj K Alur | Last Updated : Feb 26, 2022, 07:21 AM IST
  • ಉಕ್ರೇನ್ ಅಧ್ಯಕ್ಷರ ನಿವಾಸದಿಂದ 800 ಮೀಟರ್ ದೂರದಲ್ಲಿ ಸ್ಫೋಟ
  • ಚೆರ್ನೋಬಿಲ್ ಪರಮಾಣು ಸ್ಥಾವರವನ್ನು ರಷ್ಯಾದ ಮಿಲಿಟರಿ ವಶಪಡಿಸಿಕೊಂಡಿದೆ
  • ಇದುವರೆಗೆ 127ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವುದು ದೃಢಪಟ್ಟಿದೆ
ರಷ್ಯಾದಿಂದ ರಾಜಧಾನಿ ಕೀವ್ ಉಳಿಸಲು ಹೆಣಗಾಡುತ್ತಿರುವ ಉಕ್ರೇನ್ ರಸ್ತೆಗಳ ಸ್ಥಿತಿ ಹೇಗಿದೆ..? title=
ಉಕ್ರೇನ್ ಮೇಲೆ ರಷ್ಯಾ ಯುದ್ಧ

ನವದೆಹಲಿ: ರಷ್ಯಾದ ಆಕ್ರಮಣ(Russia-Ukraine War)ದ ನಂತರ ವಿಶ್ವದಾದ್ಯಂತ ಪತ್ರಕರ್ತರು ಉಕ್ರೇನ್ ಮತ್ತು ಸುತ್ತಮುತ್ತಲಿನ ನೆಲದ ಪರಿಸ್ಥಿತಿಯ ಮೇಲೆ ಕಣ್ಣಿಟ್ಟಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಯುದ್ಧದ ಪರಿಸ್ಥಿತಿಗಳ ಬಗ್ಗೆ ಪ್ರಚಾರ ಮತ್ತು ಮಿಲಿಟರಿ ಹಕ್ಕು-ಪ್ರತಿವಾದಗಳ ನಡುವೆ ನಿಜವಾಗಿಯೂ ಏನಾಗುತ್ತಿದೆ ಎಂಬುದನ್ನು ನಿರ್ಧರಿಸುವುದು ಕಷ್ಟಕರವಾಗಿದೆ.

ಉಕ್ರೇನ್ ಅಧ್ಯಕ್ಷರ ನಿವಾಸದಿಂದ 800 ಮೀಟರ್ ದೂರದಲ್ಲಿ ಸ್ಫೋಟ

ಏತನ್ಮಧ್ಯೆ ಶುಕ್ರವಾರ ಉಕ್ರೇನ್‌ನ ರಾಜಧಾನಿ ಕೀವ್‌(Ukraine Capital Kyiv)ನಲ್ಲಿ ಅಧ್ಯಕ್ಷರ ಪ್ರಧಾನ ಕಚೇರಿಯಿಂದ ಸುಮಾರು 800 ಮೀಟರ್ ದೂರದಲ್ಲಿ ಸ್ಫೋಟದ ಸದ್ದು ಕೇಳಿಸಿದೆ. ಕೀವ್‌ನ ಡ್ನಿಪ್ರೊ ನದಿಯ ಪೂರ್ವ ಭಾಗದಲ್ಲಿ ಬಹುಮಹಡಿ ಕಟ್ಟಡದ ಮೇಲೆ ಶೆಲ್ ದಾಳಿಯಿಂದ ಭಾರೀ ಹಾನಿ ಸಂಭವಿಸಿದೆ. ಕೇಂದ್ರ ಕೀವ್ ಕಡೆಗೆ ಹೋಗುವ ಮುಖ್ಯ ರಸ್ತೆಯ ಬಳಿಯೂ ಗುಂಡಿನ ದಾಳಿ ನಡೆದಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Russia-Ukraine conflict: ಸಪ್ತ ಪ್ರಶ್ನೆಗಳ ಮೂಲಕ ರಷ್ಯಾ-ಉಕ್ರೇನ್ ಸಂಘರ್ಷದ ಇತಿಹಾಸವನ್ನು ತಿಳಿಯಿರಿ....

ಕೀವ್‌ನ ಓಬೋಲೋನ್ ಜಿಲ್ಲೆಯಲ್ಲಿ ಗುಂಡಿನ ದಾಳಿಯಿಂದ ಹಾನಿ(Russia Ukraine Crisis)ಗೊಳಗಾದ ಸೇನಾ ವಾಹನವನ್ನು ರಕ್ಷಿಸಲು ಉಕ್ರೇನಿಯನ್ ಸೈನಿಕರು ಪ್ರಯತ್ನಿಸುತ್ತಿದ್ದಾರೆ. ಉಕ್ರೇನಿಯನ್ ಸೈನಿಕರು ಕೀವ್ ಸುತ್ತಲಿನ ಸೇತುವೆಗಳ ಮೇಲೆ ಪಾರುಗಾಣಿಕಾ ಪೋಸ್ಟ್‌ಗಳನ್ನು ಸ್ಥಾಪಿಸುವಲ್ಲಿ ನಿರತರಾಗಿದ್ದಾರೆ. ಸೈನಿಕರ ಶಸ್ತ್ರಸಜ್ಜಿತ ವಾಹನಗಳು ಕೀವ್ ಬೀದಿಗಳಲ್ಲಿ ಸಂಚರಿಸುತ್ತಿವೆ. ಕೀವ್‌ನಿಂದ ಸುಮಾರು 60 ಕಿಮೀ ದೂರದಲ್ಲಿರುವ ಇವಾನ್‌ಕಿವ್‌ನಲ್ಲಿ ಸೇತುವೆಗೆ ಹಾನಿಯಾಗಿದೆ.

ಚೆರ್ನೋಬಿಲ್ ಪರಮಾಣು ಸ್ಥಾವರ ವಶಕ್ಕೆ

ಏತನ್ಮಧ್ಯೆ ವಿಶ್ವದ ಅತ್ಯಂತ ಭೀಕರ ಪರಮಾಣು ದುರಂತಕ್ಕೆ ಹೆಸರುವಾಸಿಯಾದ ಚೆರ್ನೋಬಿಲ್(Chernobyl) ಪರಮಾಣು ಸ್ಥಾವರವನ್ನು ರಷ್ಯಾದ ಮಿಲಿಟರಿ ವಶಪಡಿಸಿಕೊಂಡಿದೆ ಎಂದು ಉಕ್ರೇನ್ ಪರಮಾಣು ಶಕ್ತಿ ನಿಯಂತ್ರಕ ಹೇಳಿದೆ. ಇದರೊಂದಿಗೆ ಚೆರ್ನೋಬಿಲ್ ಪರಮಾಣು ಸ್ಥಾವರ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿಕಿರಣದ ಮಟ್ಟವು ಸಾಮಾನ್ಯಕ್ಕಿಂತ ಹೆಚ್ಚಾಗಿದೆ. ಆದಾಗ್ಯೂ ಈ ಪ್ರದೇಶದಲ್ಲಿ ವಿಕಿರಣ ಮಟ್ಟವು ಸಾಮಾನ್ಯವಾಗಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಹೇಳಿದೆ.

ಇದುವರೆಗೆ 10 ಸೇನಾ ಅಧಿಕಾರಿಗಳು ಸೇರಿದಂತೆ 137ಕ್ಕೂ ಹೆಚ್ಚು ಜನರು ಯುದ್ಧದಲ್ಲಿ ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ. ಅವರ ಸಲಹೆಗಾರರೊಬ್ಬರು ಇಲ್ಲಿಯವರೆಗೆ ಸುಮಾರು 400 ರಷ್ಯಾದ ಸೈನಿಕರು ಯುದ್ಧದಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ. ಆದಾಗ್ಯೂ ರಷ್ಯಾ ಈ ಸಾವುನೋವುಗಳ ನಿಖರ ಸಂಖ್ಯೆಯನ್ನು ನೀಡಿಲ್ಲ. ಎರಡೂ ಕಡೆಯಿಂದ ಹೇಳಲಾಗಿರುವ ಸಾವಿನ ವರದಿ ಬಗ್ಗೆ ಇನ್ನೂ ಮಾಹಿತಿ ಸ್ಪಷ್ಟವಾಗಿಲ್ಲ.   

ಇದನ್ನೂ ಓದಿ: Russia-Ukraine War: ಉಕ್ರೇನ್ ಮೇಲೆ ರಷ್ಯಾ ದಾಳಿಯ ನಡುವೆ 'ಉಕ್ರೇನ್ ಅನ್ನು ಆಕ್ರಮಿಸುವುದಿಲ್ಲ' ಎಂದ Vladimir Putin

ಇದುವರೆಗೆ 127ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವುದು ದೃಢಪಟ್ಟಿದೆ

ಸಂಘಟನೆಯ ಸಿಬ್ಬಂದಿ ಇದುವರೆಗೆ ಕನಿಷ್ಠ 127ಕ್ಕೂ ಹೆಚ್ಚು ಸಾವುನೋವುಗಳನ್ನು ದೃಢಪಡಿಸಿದ್ದಾರೆ ಎಂದು ಯುಎನ್ ಮಾನವ ಹಕ್ಕುಗಳ ಹೈ ಕಮಿಷನರ್ ಹೇಳಿದ್ದಾರೆ. ಹೆಚ್ಚಿನ ಸಾವುಗಳು ಶೆಲ್ ದಾಳಿ ಮತ್ತು ವೈಮಾನಿಕ ದಾಳಿಯಿಂದ ಸಂಭವಿಸಿವೆ ಎಂದು ತಿಳಿದುಬಂದಿದೆ.

ಉಕ್ರೇನ್ ರಾಜಧಾನಿಯ ಹೊರಗಿನ ವಿಮಾನ ನಿಲ್ದಾಣ(Russia Ukraine Crisis)ವನ್ನು ನಿಯಂತ್ರಣಕ್ಕೆ ತೆಗೆದುಕೊಂಡಿರುವುದಾಗಿ ರಷ್ಯಾದ ಮಿಲಿಟರಿ ಹೇಳಿದೆ. ಈ ವಿಮಾನ ನಿಲ್ದಾಣವು ಕೀವ್‌ನಿಂದ 7 ಕಿಮೀ ದೂರದಲ್ಲಿರುವ ಹೊಸ್ಟೊಮೆಲ್ ಪಟ್ಟಣದಲ್ಲಿದೆ ಮತ್ತು ಇದು ದೊಡ್ಡ ಸರಕು ವಿಮಾನಗಳು ಸೇರಿದಂತೆ ಎಲ್ಲಾ ರೀತಿಯ ವಿಮಾನಗಳಿಗೆ ನೆಲೆಯಾಗಿದೆ. ಈ ವಿಮಾನನಿಲ್ದಾಣವನ್ನು ವಶಪಡಿಸಿಕೊಳ್ಳುವುದರಿಂದ ಕೀವ್‌ನ ಹೊರವಲಯಕ್ಕೆ ನೇರ ವಾಯು ಮಾರ್ಗದ ಮೂಲಕ ರಷ್ಯಾದ ಸೈನ್ಯವನ್ನು ಇಳಿಸಲು ರಷ್ಯಾಕ್ಕೆ ದಾರಿ ಕಲ್ಪಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News