Gold Rate Today: ದೇಶದಾದ್ಯಂತ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಕುಸಿದಿದ್ದು, ಬೆಳ್ಳಿ ಬೆಲೆಯಲ್ಲಿ ಏರಿಕೆಯಾಗಿದೆ. MCX ನಲ್ಲಿ ಚಿನ್ನದ ದರ ಇಂದು 10 ಗ್ರಾಂಗೆ 70,912 ರೂ.ಗೆ ಇಳಿದಿದೆ. ಈ ಮೊದಲು 10 ಗ್ರಾಂ ಚಿನ್ನದ ಬೆಲೆ 71,150 ರೂಪಾಯಿ ಆಗಿತ್ತು. ಇಂದು ಬಂಗಾರದ ಬೆಲೆಯಲ್ಲಿ 426 ರೂಪಾಯಿ ಕುಸಿತ ಕಂಡಿದೆ. ಇದೇ ವೇಳೆ ಬೆಳ್ಳಿ ಬೆಲೆಯಲ್ಲಿ 326 ರೂಪಾಯಿ ಏರಿಕೆ ಕಂಡು ಬಂದಿದೆ.  


COMMERCIAL BREAK
SCROLL TO CONTINUE READING

ದೇಶದ ಮೆಟ್ರೋಪಾಲಿಟನ್ ನಗರಗಳಲ್ಲೂ ಚಿನ್ನದ ಬೆಲೆ ಇಳಿಕೆಯಾಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ 24 ಕ್ಯಾರೆಟ್ ಶುದ್ಧ 10 ಗ್ರಾಂ ಚಿನ್ನದ ಬೆಲೆ 71,820 ರೂಪಾಯಿ, ಮುಂಬೈನಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ 71,760 ರೂಪಾಯಿ, ಚೆನ್ನೈನಲ್ಲಿ 24 ಕ್ಯಾರೆಟ್ ಶುದ್ಧ 10 ಗ್ರಾಂ ಚಿನ್ನದ ಬೆಲೆ 72,330 ರೂಪಾಯಿ, ಬೆಂಗಳೂರಿನಲ್ಲಿ 24 ಕ್ಯಾರೆಟ್‌  10 ಗ್ರಾಂ ಚಿನ್ನದ ಬೆಲೆ 71,670 ರೂಪಾಯಿ ಆಗಿದೆ. 


ಇದನ್ನೂ ಓದಿ: PM Kisan: ಮೂರನೇ ಬಾರಿಗೆ ಅಧಿಕಾರ ಸ್ವೀಕರಿಸಿ, ಪ್ರಧಾನಿ ಮೋದಿ ಮಾಡಿದ ಮೊದಲ ಕೆಲಸ ಇದು!


ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ, Comex ನಲ್ಲಿ ಚಿನ್ನದ ಬೆಲೆ $11.80 ರಷ್ಟು ಕುಸಿದಿದೆ. ದರವು ಪ್ರತಿ ಔನ್ಸ್ ಗೆ $ 2313.20 ಆಗಿದೆ. ಬೆಳ್ಳಿಯ ಬೆಲೆ $ 0.225 ಹೆಚ್ಚಾಗಿದೆ.


ಕಳೆದ ತಿಂಗಳು ಭಾರತ ಸುಮಾರು 46 ಟನ್ ಚಿನ್ನ ಖರೀದಿಸಿತ್ತು. ವರ್ಲ್ಡ್ ಗೋಲ್ಡ್ ಕೌನ್ಸಿಲ್ ಅಂಕಿಅಂಶಗಳ ಪ್ರಕಾರ, ಮೇ ತಿಂಗಳಲ್ಲಿ ಭಾರತವು ವಿಶ್ವದ ಮೂರನೇ ಅತಿದೊಡ್ಡ ಚಿನ್ನ ಖರೀದಿದಾರನಾಗಿತ್ತು. ಈ ಅವಧಿಯಲ್ಲಿ ಭಾರತ 722 ಕೋಟಿ ರೂಪಾಯಿ ಮೌಲ್ಯದ ಚಿನ್ನವನ್ನು ಖರೀದಿಸಿದೆ.  


ಇದನ್ನೂ ಓದಿ: Ather Rizta: ಅತ್ಯಂತ ಕಡಿಮೆ ಬೆಲೆಗೆ ಈ ಫ್ಯಾಮಿಲಿ ಎಲೆಕ್ಟ್ರಿಕ್‌ ಸ್ಕೂಟರ್‌ ಖರೀದಿಸಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.