PM Kisan: ಮೂರನೇ ಬಾರಿಗೆ ಅಧಿಕಾರ ಸ್ವೀಕರಿಸಿ, ಪ್ರಧಾನಿ ಮೋದಿ ಮಾಡಿದ ಮೊದಲ ಕೆಲಸ ಇದು!

PM Kisan: ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ₹ 20,000 ಕೋಟಿ ಮೌಲ್ಯದ ಪಿಎಂ ಕಿಸಾನ್ ನಿಧಿ ಕಂತು ಬಿಡುಗಡೆ ಮಾಡಿದರು.

Written by - Yashaswini V | Last Updated : Jun 10, 2024, 02:35 PM IST
  • ಮೂರನೇ ಬಾರಿಗೆ ಅಧಿಕಾರ ವಹಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ
  • ಸೋಮವಾರ ತಮ್ಮ ಮೊದಲ ಕಡತಕ್ಕೆ ಸಹಿ ಹಾಕಿದ ಪಿಎಂ ಮೋದಿ
  • ಸುಮಾರು 20,000 ಕೋಟಿ ರೂಪಾಯಿಗಳ 'ಪಿಎಂ ಕಿಸಾನ್ ನಿಧಿ' ನಿಧಿಯ 17 ನೇ ಕಂತು ಬಿಡುಗಡೆಗೆ ಅನುಮೋದನೆ ನೀಡಿದ ಪ್ರಧಾನಿ ಮೋದಿ
PM Kisan: ಮೂರನೇ ಬಾರಿಗೆ ಅಧಿಕಾರ ಸ್ವೀಕರಿಸಿ, ಪ್ರಧಾನಿ ಮೋದಿ ಮಾಡಿದ ಮೊದಲ ಕೆಲಸ ಇದು! title=

PM Kisan Nidhi Instalment: ಭಾರತದಲ್ಲಿ ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಪದಗ್ರಹಣ ಮಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ (Prime Minister Narendra Modi) ಅಧಿಕಾರ ವಹಿಸಿಕೊಂಡ ನಂತರ ಮೊದಲಿಗೆ ಪಿಎಂ ಕಿಸಾನ್ ನಿಧಿಯ 17 ನೇ ಕಂತಿನ ಫೈಲ್‌ಗೆ ಸಹಿ ಹಾಕಿದರು. 

ಸೋಮವಾರ (ಜೂನ್ 06, 2024) ಪಿಎಂ ಕಿಸಾನ್ ಯೋಜನೆಯ 17ನೇ ಕಂತಿನ (PM Kisan scheme 17th Installment) ಬಿಡುಗಡೆಗೆ ಪ್ರಧಾನಿ ನರೇಂದ್ರ ಮೋದಿ ಅನುಮೋದನೆ ನೀಡಿದ್ದಾರೆ. ಈ ಕಂತಿನಲ್ಲಿ ದೇಶಾದ್ಯಂತ 9.3 ಕೋಟಿ ರೈತರ ಖಾತೆಗಳಿಗೆ ಸುಮಾರು  ₹ 20,000 ಕೋಟಿಯಷ್ಟು ಹಣ ವರ್ಗಾವಣೆಯಾಗಲಿದೆ. 

ಇದನ್ನೂ ಓದಿ- ಸರ್ಕಾರಿ ನೌಕರರಿಗೆ ಭಾರೀ ಪ್ರಮಾಣದಲ್ಲಿ ವೇತನ ಹೆಚ್ಚಳ, ಮೋದಿ ಸರ್ಕಾರದ ಗುಡ್ ನ್ಯೂಸ್!

ಪಿಎಂ ಕಿಸಾನ್ ನಿಧಿಯ ಕಡತಕ್ಕೆ ಸಹಿ ಹಾಕಿದ ಬಳಿಕ, "ನಮ್ಮದು ಕಿಸಾನ್ ಕಲ್ಯಾಣಕ್ಕೆ (Kisan welfare) ಸಂಪೂರ್ಣ ಬದ್ಧವಾಗಿರುವ ಸರ್ಕಾರ. ಆದ್ದರಿಂದ, ಅಧಿಕಾರ ವಹಿಸಿಕೊಂಡ ಮೇಲೆ ರೈತ ಕಲ್ಯಾಣಕ್ಕೆ ಸಂಬಂಧಿಸಿದ ಕಡತಕ್ಕೆ ಮೊದಲು ಸಹಿ ಮಾಡುವುದು ಸೂಕ್ತ ಎಂದು ಭಾವಿಸಿದ್ದೇನೆ. ಮುಂದಿನ ದಿನಗಳಲ್ಲಿ ನಾವು ರೈತರು ಹಾಗೂ ಕೃಷಿ ಕ್ಷೇತ್ರದ ಅಭಿವೃದ್ಧಿಗಾಗಿ (Development of agriculture sector) ಇನ್ನಷ್ಟು ಕೆಲಸ ಮಾಡಲು ಬಯಸುತ್ತೇವೆ" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿರುವುದಾಗಿ ತಿಳಿದುಬಂದಿದೆ. 

ಇದನ್ನೂ ಓದಿ- Yeshasvini scheme: ಯಶಸ್ವಿನಿ ಕಾರ್ಡ್ ಫಲಾನುಭವಿಗಳಿಗೆ ಭರ್ಜರಿ ಗುಡ್‌ ನ್ಯೂಸ್

ಏನಿದು ಪಿಎಂ ಕಿಸಾನ್ ಯೋಜನೆ? 
ಪಿಎಂ ಕಿಸಾನ್ ಯೋಜನೆಯು ಕೇಂದ್ರ ಸರ್ಕಾರ ರೈತರಿಗಾಗಿ ಜಾರಿಗೆ ತಂದಿರುವ ಮಹಾತ್ವಾಕಾಂಕ್ಷೆಯ ಯೋಜನೆಯಾಗಿದ್ದು ಈ ಯೋಜನೆಯಡಿ ಅರ್ಹ ರೈತರಿಗೆ ಕೇಂದ್ರ ಸರ್ಕಾರವು ವಾರ್ಷಿಕ ₹ 6,000 ಆರ್ಥಿಕ ನೆರವು ನೀಡುತ್ತದೆ. ಈ ಹಣವನ್ನು ವಾರ್ಷಿಕ ಮೂರು ಕಂತುಗಳಲ್ಲಿ ರೈತರ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News