ನವದೆಹಲಿ: 7th Pay Commission - ಕೇಂದ್ರ ಸರ್ಕಾರಿ ನೌಕರರ ಪಾಲಿಗೊಂದು ಸಂತಸದ ಸುದ್ದಿ ಪ್ರಕಟವಾಗಿದೆ. ಬರುವ ಜುಲಿ 1 ರಿಂದ ಅವರ ತುಟ್ಟಿಭತ್ಯೆ ಏರಿಕೆಯಾಗುತ್ತಿದೆ. ಸದ್ಯ ನಿಂತುಹೋಗಿರುವ ಮೂರು ಕಂತುಗಳನ್ನು ಮಾತ್ರ ಜಾರಿಗೊಳಿಸಲಾಗುತ್ತಿದೆ. ಇದಾದ ಬಳಿಕ ಸರ್ಕಾರಿ ನೌಕರರ ತುಟ್ಟಿಭತ್ಯೆ ಶೇ.28ರಷ್ಟಾಗಲಿದೆ. ಪ್ರಸ್ತುತ ಅದು ಶೇ.17 ರಷ್ಟಿದೆ. ಇದರಿಂದ ಕೇಂದ್ರ ಸರ್ಕಾರಿ ನೌಕರರಿಗೆ ಏಕಕಾಲಕ್ಕೆ ಎರಡು ವರ್ಷಗಳ DA ಲಾಭ ಸಿಗಲಿದೆ. ಜನವರಿ 2020 ರಲ್ಲಿ ಕೇಂದ್ರ ಸರ್ಕಾರಿ ನೌಕರರ DA ಶೇ.4 ರಷ್ಟು ಹೆಚ್ಚಿಸಲಾಗಿದೆ. ಇದಾದ ಬಳಿಕ ಎರಡನೇ ಅರ್ಧವಾರ್ಷಿಕದಲ್ಲಿ ಅಂದರೆ ಜೂನ್ ನಲ್ಲಿ ಶೇ.3 ರಷ್ಟು DA ಹೆಚ್ಚಿಸಲಾಗಿದೆ. ಇದೀಗ ಜನವರಿ 2021 ರಲ್ಲಿ ಮತ್ತೆ ಶೇ.4 ರಷ್ಟು DA ಹೆಚ್ಚಳವಾಗಿದೆ. ಹೀಗಾಗಿ ಕೇಂದ್ರ ಸರ್ಕಾರಿ ನೌಕರರ DA ಶೇ.17 ರಿಂದ ಶೇ.28ಕ್ಕೆ ಏರಿಕೆಯಾದಂತಾಗಿದೆ. ಆದರೆ, ಇದುವರೆಗೆ ಈ ಮೂರು ಕಂತುಗಳ DA ತಡೆಹಿಡಿಯಲಾಗಿದೆ.


COMMERCIAL BREAK
SCROLL TO CONTINUE READING

ವೇತನದಲ್ಲಿ ಎಷ್ಟು ಹೆಚ್ಚಳ?
ಸದ್ಯ ಇರುವ ಕೇಂದ್ರ ಸರ್ಕಾರಿ ನೌಕರರ ಪೇ ಮ್ಯಾಟ್ರಿಕ್ಸ್  ಲೆಕ್ಕದಲ್ಲಿ ಕನಿಷ್ಠ ವೇತನ ಶೇ.18,000 ರೂ.ಗಳಷ್ಟಿದೆ. ಇದರಲ್ಲಿ ಶೇ.15 ರಷ್ಟು ತುಟ್ಟಿಭತ್ಯೆ ಸೇರುವ ನಿರೀಕ್ಷೆ ಇದೆ.  ಇದರಿಂದ ತಿಂಗಳ ವೇತನದಲ್ಲಿ ರೂ.2700 ಏರಿಕೆಯಾಗುವ ನಿರೀಕ್ಷೆ ಇದೆ. ಇದನ್ನು ವಾರ್ಷಿಕ ಆಧಾರದ ಮೇಲೆ ನೋಡುವುದಾದರೆ, ಒಟ್ಟು DA 32400 ರಷ್ಟಾಗಲಿದೆ. ಇನ್ನೊಂದೆಡೆ ಜೂನ್ 2021ರ ತುಟ್ಟಿಭತ್ಯೆ ಕೂಡ ಘೋಷಣೆಯಾಗುವುದು ಇನ್ನೂ ಬಾಕಿ ಇದೆ. ಇದನ್ನೂ ಓಂದು ವೇಳೆ ಪರಿಗಣಿಸಿದರೆ ಹಿಂದಿನ ಮೂರು ಕಂತುಗಳ ಜೊತೆಗೆ ಮತ್ತೆ ಶೇ.4 ರ ನಾಲ್ಕನೇ ಕಂತಿನ ಹೆಚ್ಚಳ ಕೂಡ ಬಾಕಿ ಉಳಿಯಲಿದೆ ಎಂದೇ ಹೇಳಬಹುದು. ಜೂನ್ ತುಟ್ಟಿಭತ್ಯೆ ಏರಿಕೆಯಿಂದ ಕೇಂದ್ರ ಸರ್ಕಾರಿ ನೌಕರರ ತುಟಿಭತ್ಯೆ ಹಿಂದಿನ ಮೂರು ಕಂತುಗಳನ್ನು ಒಳಗೊಂಡಂತೆ ಶೇ.32 ಕ್ಕೆ ತಲುಪಲಿದೆ.


ಇದನ್ನೂ ಓದಿ-Taxpayer : ಆದಾಯ ತೆರಿಗೆದಾರರಿಗೊಂದು ಮಹತ್ವದ ಮಾಹಿತಿ!


ಸದ್ಯ ಶೇ.17 ರಷ್ಟು ತುಟ್ಟಿಭತ್ಯೆ ಸಿಗುತ್ತದೆ
ಈ ಕುರಿತು ನಮ್ಮ ಅಂಗ ಸಂಸ್ಥೆ ಝೀ ಬಿಸಿನೆಸ್ ಡಿಜಿಟಲ್  ಜೊತೆಗೆ ಮಾತನಾಡಿರುವ AG ಬ್ರದರ್ ಹುಡ್ ಅಧ್ಯಕ್ಷ ಹರಿವಂಶ ತಿವಾರಿ, ಜೂನ್ 2021 ರಲ್ಲಿಯೂ ಕೂಡ DA ಶೇ.3-4 ರಷ್ಟು ಏರಿಕೆಕಾಣುವ ನಿರೀಕ್ಷೆ ಇದೆ. ಇದರಿಂದ ಜೂನ್ 2021ರ ಬಳಿಕ DA ಶೇ.17 ರಿಂದ ಶೇ.32ಕ್ಕೆ ಏರಿಕೆಯಾಗದೆ. ಕೇಂದ್ರ ಸರ್ಕಾರ ಪ್ರತಿ 6 ತಿಂಗಳಿಗೊಮ್ಮೆ ಸರ್ಕಾರಿ ನೌಕರರ DA ಪರಿಷ್ಕರಿಸುತ್ತದೆ. ಸರಿಕಾರಿ ನೌಕರರ ಬೇಸಿಕ್ ಪೆ ಆಧಾರವಾಗಿಟ್ಟುಕೊಂಡು ಸರ್ಕಾರ ಇದರ ಲೆಕ್ಕಾಚಾರ ನಡೆಸುತ್ತದೆ. ಪ್ರಸ್ತುತ ನೌಕರರು ಹಾಗೂ ಪೆನ್ಷನ್ ಧಾರಕರಿಗೆ ವಿಭಿನ್ನ DA ಸಿಗುತ್ತಿದೆ.


ಇದನ್ನೂ ಓದಿ-Amazon : ಭಾರತದಲ್ಲಿ ಸ್ಥಗಿತಗೊಂಡಿದೆ 'Prime Now' ಸೇವೆ; ಗ್ರಾಹಕರ ಮುಂದಿರುವ ಆಯ್ಕೆ ತಿಳಿಯಿರಿ


ಕಳೆದ ವರ್ಷ DA ಪಾವತಿಗೆ ತಡೆ ನೀಡಲಾಗಿತ್ತು
ಕೊವಿಡ್-19 ಮಹಾಮಾರಿಯ ಹಿನ್ನೆಲೆ ಸರ್ಕಾರ ಜನವರಿ  1, 2020 ರಿಂದ ಜುಲೈ 2021 ರವರೆಗೆ DA (Dearness Allowance) ಪಾವತಿಯನ್ನು ಫ್ರೀಜ್ ಮಾಡಿತ್ತು. ಪಿಂಚಣಿದಾರರ DR (Dearness Relief) ಅನ್ನು ಕೂಡ ಸರ್ಕಾರ ಜುಲೈ 1, 2021ರವರೆಗೆ ತಡೆಹಿಡಿಯಲಾಗಿದೆ. ಈ ನಿರ್ಧಾರದಿಂದ FY2021-22ರ ಆರ್ಥಿಕ ವರ್ಷದಲ್ಲಿ ಸರ್ಕಾರದ ಬೊಕ್ಕಸಕ್ಕೆ 37 ಸಾವಿರ ಕೋಟಿ ರೂ.ಗಳ ಉಳಿತಾಯವಾಗಿದೆ. ಆದರೆ, ಜನವರಿ 1 ರಿಂದ ಅರಿಯರ್ ಪಾವತಿ ಕೂಡ ಆಗಬೇಕು ಎಂಬುದು ಸರ್ಕಾರಿ ನೌಕರರ ಬೇಡಿಕೆಯಾಗಿದೆ. ಆದರೆ, ಈ ಕುರಿತು ಈಗಾಗಲೇ ಸ್ಪಷ್ಟನೆ  ನೀಡಿರುವ ಸರ್ಕಾರರ ಅರಿಯರ್ ಪಾವತಿ ಮಾಡಲಾಗುವುದಿಲ್ಲ ಎಂದಿದೆ. ಜುಲೈ 2021ರ ಬಳಿಕ DA ಹಾಗೂ DR ಗೆ ಸಂಬಂಧಿಸಿದಂತೆ ಯಾವ ಯಾವ ನಿರ್ಣಯಗಳನ್ನು ಕೈಗೊಳ್ಳಲಾಗುವುದೋ ಅವುಗಳನ್ನು ಒಂದೊಂದಾಗಿ ಜಾರಿಗೆ ತರಲಾಗುವುದು ಎಂದೂ ಕೂಡ ಸರ್ಕಾರ ಸ್ಪಷ್ಟಪಡಿಸಿದೆ.


ಇದನ್ನೂ ಓದಿ- ನಿವೃತ್ತಿ ನಂತ್ರ ಪ್ರತಿ ತಿಂಗಳು ದೊಡ್ಡ ಮೊತ್ತದ ಪಿಂಚಣಿಗಾಗಿ ಈ ಯೋಜನೆಗಳಲ್ಲಿ ಹೂಡಿಕೆ ಮಾಡಿ!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.