ನವದೆಹಲಿ : ಇ-ಕಾಮರ್ಸ್ ಕಂಪನಿ ಅಮೆಜಾನ್ (Amazon) ಭಾರತದಲ್ಲಿ ತನ್ನ ಪ್ರೈಮ್ ನೌ (Prime Now ) ಸೇವೆಯನ್ನು ಸ್ಥಗಿತಗೊಳಿಸಿದೆ. ಇದರಲ್ಲಿ ದಿನಸಿ ಡೆಲಿವೆರಿ ಮಾಡಲಾಗುತ್ತಿತ್ತು. ದಿನಸಿ ಸೇರಿದಂತೆ ಎಲೆಕ್ಟ್ರಾನಿಕ್ ವಸ್ತುಗಳು, ಅಡುಗೆಮನೆಯ ಪ್ರಮುಖ ವಸ್ತುಗಳನ್ನು ಸಹಾ ಮಾರಾಟ ಮಾಡಲಾಗುತ್ತಿತ್ತು. ಆರ್ಡರ್ ಮಾಡಿದ 2 ಗಂಟೆಗಳಲ್ಲಿ ಸರಕುಗಳನ್ನು ಡೆಲಿವೆರಿ ಮಾಡುವುದಾಗಿ ಪ್ರೈಮ್ ನೌ (Prime Now) ಹೇಳಿಕೊಂಡಿತ್ತು. ಈ ಸೇವೆ ಅಮೆಜಾನ್ ಪ್ರೈಮ್ ನೌ ಸದಸ್ಯರಿಗೆ ಮಾತ್ರ ಮೀಸಲಾಗಿತ್ತು. ಆದರೆ, ಕಂಪನಿಯು ಈಗ ಈ ಸೇವೆಯನ್ನು ಸ್ಥಗಿತಗೊಳಿಸಿದೆ.
ಮೈನ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಸೇವೆ ಲಭ್ಯ :
ಕಂಪನಿಯ ಎರಡು ಗಂಟೆಗಳ ವಿತರಣಾ ಆಯ್ಕೆ ಈಗ ಅಮೆಜಾನ್‌ನ (Amazon) ಮುಖ್ಯ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತದೆ. ಪ್ರೈಮ್ ನೌ ಅನ್ನು ಈಗಾಗಲೇ ಭಾರತ (India) , ಜಪಾನ್ ಮತ್ತು ಸಿಂಗಾಪುರದಲ್ಲಿ ಅಮೆಜಾನ್‌ಗೆ ಶಿಫ್ಟ್ ಮಾಡಲಾಗಿದೆ. ಈ ಕಾರಣದಿಂದಾಗಿ ಪ್ರೈಮ್ ನೌನ ಅಪ್ಲಿಕೇಶನ್ ಮತ್ತು ವೆಬ್‌ಸೈಟ್ ಅನ್ನು ಮುಚ್ಚಲಾಗಿದೆ. ಪ್ರೈಮ್ ನೌ ಅನ್ನು ಮೊದಲ ಬಾರಿಗೆ 2014 ರಲ್ಲಿ ನ್ಯೂಯಾರ್ಕ್ ನಲ್ಲಿ ಪ್ರಾರಂಭಿಸಲಾಯಿತು. 2016 ರಲ್ಲಿ, ಇದನ್ನು Amazon Now ಹೆಸರಿನಲ್ಲಿ ಇತರ ಮಾರುಕಟ್ಟೆಗಳಲ್ಲಿ ಪ್ರಾರಂಭಿಸಲಾಯಿತು. ನಂತರ ಇದನ್ನು Prime Now ಎಂದು ಬದಲಾಯಿಸಲಾಯಿತು.
ಇದನ್ನೂ ಓದಿ : ನಿವೃತ್ತಿ ನಂತ್ರ ಪ್ರತಿ ತಿಂಗಳು ದೊಡ್ಡ ಮೊತ್ತದ ಪಿಂಚಣಿಗಾಗಿ ಈ ಯೋಜನೆಗಳಲ್ಲಿ ಹೂಡಿಕೆ ಮಾಡಿ!
2019 ರಿಂದ ಅಮೆಜಾನ್‌ನಲ್ಲಿಯೇ ಅಮೆಜಾನ್ ಫ್ರೆಶ್ ಮತ್ತು ಹೋಲ್ ಫುಡ್ಸ್ ಅನ್ನು ಮಾರುಕಟ್ಟೆಯಿಂದ (Market) ಎರಡು ಗಂಟೆಗಳ ಒಳಗೆ ವಿತರಣೆ ಮಾಡುವ ಸೇವೆಯನ್ನು ಯುಎಸ್‌ನಲ್ಲಿ (US) ಆರಂಭಿಸಲಾಗಿದೆ ಎಂದು ಅಮೆಜಾನ್‌ನ ಗ್ರೋಸರಿ ವಿಭಾಗದ ಉಪಾಧ್ಯಕ್ಷೆ ಸ್ಟೆಫನಿ ಲ್ಯಾಂಡ್ರಿ, ಹೇಳಿದ್ದಾರೆ. ಈ ವರ್ಷ ಪ್ರೈಮ್ ನೌ ಅಪ್ಲಿಕೇಶನ್ ಮತ್ತು ವೆಬ್‌ಸೈಟ್ ಅನ್ನು ಮುಚ್ಚಿದ ನಂತರ, ಥರ್ಡ್ ಪಾರ್ಟಿ ಪಾಲುದಾರರು ಮತ್ತು ಸ್ಥಳೀಯ ಅಂಗಡಿಗಳನ್ನು ಸಂಪರ್ಕಿಸಿ, ಅಮೆಜಾನ್ ಜೊತೆ ಸೇರಿಸಿಕೊಳ್ಳಲಾಗುವುದು ಎಂದು, ತಿಳಿಸಿದ್ದಾರೆ.
ಒಂದೇ ಅಪ್ಲಿಕೇಶನ್‌ನಲ್ಲಿ ಎಲ್ಲಾ ಸೇವೆಗಳು ಲಭ್ಯ :
ಶಾಪಿಂಗ್, ಟ್ರ್ಯಾಕಿಂಗ್, ಆರ್ಡರ್ ಮತ್ತು ಕಸ್ಟಮ್ ಕೇರ್ ನಂಥಹ (Customer care) ಎಲ್ಲಾ ಸೇವೆಗಳಿಗೆ ಒಂದೇ ಅನುಕೂಲಕರ ಅಪ್ಲಿಕೇಶನ್ ಅನ್ನು ರಚಿಸಲಾಗಿದೆ. ದೈನಂದಿನ ಬಳಕೆಯ ವಸ್ತುಗಳು, ಉಡುಗೊರೆಗಳು, ಆಟಿಕೆಗಳು, ಸೇರಿದಂತೆ ಪ್ರೈಮ್ ನೌನಲ್ಲಿ ಲಭ್ಯವಿದ್ದ ಉತ್ತಮ-ಗುಣಮಟ್ಟದ ದಿನಸಿ ವಸ್ತುಗಳು ಇನ್ನು ಅಮೆಜಾನ್‌ನಲ್ಲಿಯೇ ಸಿಗಲಿದೆ.
ಇದನ್ನೂ ಓದಿ : ಮಾರುಕಟ್ಟೆಯಲ್ಲಿ ಚಿನ್ನಕ್ಕೆ ಬೇಡಿಕೆ ಕುಸಿತ, ಬೆಲೆ ಸ್ಥಿರ
ಅಮೆಜಾನ್ ಫ್ರೆಶ್ :
ಅಮೆಜಾನ್ ಫ್ರೆಶ್ (Amazin fresh), ಕಂಪನಿಯ ಮುಖ್ಯ ಅಪ್ಲಿಕೇಶನ್‌ನಲ್ಲಿರುವ ಗ್ರೋಸರಿ ಸ್ಟೋರ್ ಆಗಿದೆ. ಕಳೆದ ವರ್ಷ ಆಗಸ್ಟ್‌ನಲ್ಲಿ ಅಮೆಜಾನ್ ಫ್ರೆಶ್ ಅನ್ನು ಪ್ರಾರಂಭಿಸಲಾಯಿತು. ಇದುವರೆಗೂ ಈ ಸೇವೆಯನ್ನು ಬೆಂಗಳೂರಿಗೆ (Bengaluru) ಸೀಮಿತಗೊಳಿಸಲಾಗಿತ್ತು. ಆದರೆ ಈಗ ದೆಹಲಿ-ಎನ್‌ಸಿಆರ್, ಮುಂಬೈ ಮತ್ತು ಹೈದರಾಬಾದ್ ಸೇರಿದಂತೆ 6 ನಗರಗಳಿಗೆ ಈ ಸೇವಯನ್ನು ವಿಸ್ತರಿಸಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.