ನವದೆಹಲಿ : 7th Pay Commission : ಕೇಂದ್ರ ಉದ್ಯೋಗಿಗಳಿಗೆ ಮತ್ತೊಮ್ಮೆ ಒಳ್ಳೆಯ ಸುದ್ದಿ ಸಿಗಲಿದೆ. ಡಿಎ ನಂತರ, ಸರ್ಕಾರವು ಈಗ ಮತ್ತೊಂದು ಭತ್ಯೆಯನ್ನು ಹೆಚ್ಚಿಸುವ ಚಿಂತನೆ ನಡೆಸುತ್ತಿದೆ. ಈ ಮೂಲಕ ನೌಕರರ ವೇತನ ಮತ್ತೊಮ್ಮೆ ಹೆಚ್ಚಾಗಲಿದೆ (Salary Hike). ಮಾಹಿತಿಯ ಪ್ರಕಾರ, ಡಿಎ ಹೆಚ್ಚಳದ (DA Hike) ನಂತರ, ಈಗ ಎಚ್‌ಆರ್‌ಎ (HRA) ಹೆಚ್ಚಳವನ್ನೂ ಘೋಷಿಸುವ ಸಾಧ್ಯತೆ ಇದೆ. 


COMMERCIAL BREAK
SCROLL TO CONTINUE READING

ಉದ್ಯೋಗಿಗಳ ಡಿಎ ಶೇ.34ಕ್ಕೆ ಏರಿಕೆ  :
ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ಸುದೀರ್ಘ ನಿರೀಕ್ಷೆಯ ನಂತರ ಇತ್ತೀಚೆಗಷ್ಟೇ  ತುಟ್ಟಿಭತ್ಯೆಯಲ್ಲಿ 3% ಹೆಚ್ಚಳವನ್ನು ಘೋಷಿಸಲಾಗಿದೆ (DA Hike). ಮಾರ್ಚ್ ತಿಂಗಳ ಸಂಬಳದ ಜೊತೆಗೆ ಹೆಚ್ಚಿದ ಡಿಎ ಲಾಭವೂ ನೌಕರರಿಗೆ ಸಿಕ್ಕಿದೆ. ಇದರೊಂದಿಗೆ, ಈಗ HRA ಕೂಡ ಶೀಘ್ರದಲ್ಲೇ ಹೆಚ್ಚಳವಾಗಲಿದೆ ಎನ್ನಲಾಗಿದೆ. 


ಇದನ್ನೂ ಓದಿ : Amul Milk: ಹಣದುಬ್ಬರದ ಮತ್ತೊಂದು ಹೊಡೆತ! ಹೆಚ್ಚಾಗಲಿದೆ ಅಮೂಲ್ ಹಾಲಿನ ದರ


HRA ಹೆಚ್ಚಾಗುವ ನಿರೀಕ್ಷೆಯಿದೆ : 
DA ಹೆಚ್ಚಿಸಿದ ಬಳಿಕ HRA ಹೆಚ್ಚಳದ ನಿರೀಕ್ಷೆಯೂ ಹೆಚ್ಚಿದೆ. ಕಳೆದ ವರ್ಷ ಜುಲೈನಲ್ಲಿ ಎಚ್‌ಆರ್‌ಎ ಹೆಚ್ಚಿಸಲಾಗಿತ್ತು. ನಂತರ ಡಿಎಯನ್ನೂ ಶೇ.28ಕ್ಕೆ ಹೆಚ್ಚಿಸಲಾಗಿತ್ತು. ಈಗ ಡಿಎ ಶೇ.34ಕ್ಕೆ ಹೆಚ್ಚಿಸಿರುವುದರಿಂದ ಎಚ್ ಆರ್ ಎಯಲ್ಲಿ ಕೂಡಾ ತಿದ್ದುಪಡಿ ಮಾಡಬಹುದು.


HRA ಅನ್ನು ಹೇಗೆ ನಿರ್ಧರಿಸಲಾಗುತ್ತದೆ ? :
ಸರ್ಕಾರಿ ನೌಕರರಿಗೆ HRA ಅನ್ನು ಹೇಗೆ ನಿರ್ಧರಿಸಲಾಗುತ್ತದೆ ಎಂದು ನೋಡೋಣ. 
50 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳು 'X' ವರ್ಗದ ಅಡಿಯಲ್ಲಿ ಬರುತ್ತವೆ.  5 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ನಗರ  'ವೈ' ವರ್ಗಕ್ಕೆ ಸೇರುತ್ತದೆ. 5 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ನಗರಗಳು 'Z' ವರ್ಗದ ಅಡಿಯಲ್ಲಿ ಬರುತ್ತವೆ. ಎಲ್ಲಾ ಮೂರು ವರ್ಗಗಳಿಗೆ ಕನಿಷ್ಠ HRA 5400, 3600 ಮತ್ತು 1800 ರೂ ಆಗಿರುತ್ತದೆ. 


ಇದನ್ನೂ ಓದಿ : Petrol Diesel Price Hike: ಪೆಟ್ರೋಲ್-ಡೀಸೆಲ್ ಮತ್ತೆ ದುಬಾರಿ


HRA ಅನ್ನು ಎಷ್ಟು ಹೆಚ್ಚಿಸಬಹುದು ?:
ಅಂತೆಯೇ, ಉದ್ಯೋಗಿಯ HRA ಅವರು ಕೆಲಸ ಮಾಡುವ ನಗರದ ವರ್ಗದಿಂದ ನಿರ್ಧರಿಸಲಾಗುತ್ತದೆ. ಮಾಧ್ಯಮ ವರದಿಗಳ ಪ್ರಕಾರ, ಎಕ್ಸ್ ವರ್ಗದ ನಗರಗಳಲ್ಲಿ ವಾಸಿಸುವ ಅಥವಾ ಕೆಲಸ ಮಾಡುವ ಸರ್ಕಾರಿ ನೌಕರರ ಎಚ್‌ಆರ್‌ಎ ಡಿಎಯಂತೆಯೇ ಶೇಕಡಾ 3 ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಪ್ರಸ್ತುತ, ಈ ನಗರಗಳ ಉದ್ಯೋಗಿಗಳು ಮೂಲ ವೇತನದ ಶೇಕಡಾ 27 ರಷ್ಟು HRA ಅನ್ನು ಪಡೆಯುತ್ತಾರೆ. Y ವರ್ಗದ ನಗರಗಳಿಗೆ HRA ನಲ್ಲಿ 2 ಶೇಕಡಾ ಹೆಚ್ಚಳ ಸಾಧ್ಯ. ಪ್ರಸ್ತುತ, ಈ ಉದ್ಯೋಗಿಗಳು ಶೇಕಡಾ 18-20 HRA ಪಡೆಯುತ್ತಾರೆ. ಅದೇ ಸಮಯದಲ್ಲಿ, Z ವರ್ಗದ ನಗರಗಳಿಗೆ 1 ಪ್ರತಿಶತ HRA ಅನ್ನು ಹೆಚ್ಚಿಸಬಹುದು. ಅವರಿಗೆ ಪ್ರಸ್ತುತ ಶೇ.9-10 ದರದಲ್ಲಿ ಎಚ್‌ಆರ್‌ಎ ನೀಡಲಾಗುತ್ತದೆ. 


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.