ನವದೆಹಲಿ: ಸರ್ಕಾರಿ ನೌಕರರಿಗೆ ಶೀಘ್ರದಲ್ಲೇ ಒಳ್ಳೆಯ ಸುದ್ದಿ ಹೊರಬೀಳಲಿದೆ. ಇದರಿಂದ ಕೇಂದ್ರ ಸರ್ಕಾರಿ ನೌಕರರಿಗೆ 2024 ಶುಭ ಸುದ್ದಿಯೊಂದಿಗೆ ಆರಂಭವಾಗಲಿದೆ. ಶೀಘ್ರದಲ್ಲೇ ಅವರ ತುಟ್ಟಿಭತ್ಯೆ ಹೆಚ್ಚಾಗಲಿದೆ ಮತ್ತು ಶೇಕಡಾ 50 ದಾಟಲಿದೆ. ಪ್ರಸ್ತುತ ತುಟ್ಟಿಭತ್ಯೆ ಶೇ.46ರ ದರದಲ್ಲಿ ನೀಡಲಾಗುತ್ತಿದೆ. ಆದರೆ, ತುಟ್ಟಿಭತ್ಯೆ ಹೆಚ್ಚಳದೊಂದಿಗೆ, ನೌಕರರ ಇತರ ಭತ್ಯೆಗಳು ಸಹ ಶೇಕಡಾ 3 ರಷ್ಟು ಹೆಚ್ಚಾಗಳಿವೆ. ಇದರಿಂದ ಅವರ ಸಂಭಾವನೆಯಲ್ಲಿ ಭಾರಿ ಏರಿಕೆಯಾಗುವ ಎಲ್ಲ ಸಾಧ್ಯತೆಗಳೂ ಇವೆ.


COMMERCIAL BREAK
SCROLL TO CONTINUE READING

3ರಷ್ಟು ಭತ್ಯೆ ಹೆಚ್ಚಳವಾಗಲಿದೆ
ತುಟ್ಟಿಭತ್ಯೆಯ ಹೊರತಾಗಿ, ಕೇಂದ್ರ ನೌಕರರು ಅನೇಕ ರೀತಿಯ ಭತ್ಯೆಗಳನ್ನು ಪಡೆಯುತ್ತಾರೆ. ಇವುಗಳಲ್ಲಿ ಒಂದು ಮನೆ ಬಾಡಿಗೆ ಭತ್ಯೆ ಕೂಡ ಒಂದು. ಈ ಹೆಚ್ಚಳಕ್ಕೆ ಸಂಬಂಧಿಸಿದ ನಿಯಮಗಳನ್ನು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಈ ನಿಯಮವು ತುಟ್ಟಿಭತ್ಯೆಗೆ ಮಾತ್ರ ಸಂಬಂಧಿಸಿದೆ. 2021 ರಲ್ಲಿ, ತುಟ್ಟಿಭತ್ಯೆ 25% ದಾಟಿದಾಗ HRA ನಲ್ಲಿ ಪರಿಷ್ಕರಣೆಯಾಗಿತ್ತು ಜುಲೈ 2021 ರಲ್ಲಿ, DA 25% ದಾಟಿದ ತಕ್ಷಣ, HRA ನಲ್ಲಿ 3% ಏರಿಕೆ ಕಂಡುಬಂದಿತ್ತು. ಪ್ರಸ್ತುತ HRA ದರಗಳು 27%, 18% ಮತ್ತು 9% ಗಲ್ಲಾಗಿವೆ. ಈಗ ತುಟ್ಟಿಭತ್ಯೆ ಹೆಚ್ಚಳಕ್ಕಾಗಿ ನಾವು ಕಾಯಬೇಕಾಗಿದೆ. ಹೊಸ ವರ್ಷದಲ್ಲಿ ತುಟ್ಟಿಭತ್ಯೆ ಶೇಕಡಾ 50 ತಲುಪುವ ನಿರೀಕ್ಷೆಯಿದೆ. ಇದು ಸಂಭವಿಸಿದಲ್ಲಿ, ಮತ್ತೊಮ್ಮೆ HRA ನಲ್ಲಿ 3 ಪ್ರತಿಶತದಷ್ಟು ಪರಿಷ್ಕರಣೆ ಇರಲಿದೆ.


ಕೇಂದ್ರ ನೌಕರರಿಗೆ ಎಚ್‌ಆರ್‌ಎ ಪ್ರಯೋಜನ 
ಡಿಓಪಿಟಿ ಪ್ರಕಾರ, ಕೇಂದ್ರ ಉದ್ಯೋಗಿಗಳಿಗೆ ಮನೆ ಬಾಡಿಗೆ ಭತ್ಯೆಯಲ್ಲಿನ  ಪರಿಷ್ಕರಣೆಯನ್ನು ತುಟ್ಟಿ ಭತ್ಯೆಯ ಆಧಾರದ ಮೇಲೆ ಮಾಡಲಾಗುತ್ತದೆ. ಎಲ್ಲಾ ಉದ್ಯೋಗಿಗಳು ಹೆಚ್ಚುವರಿಯಾಗುವ  HRA ಲಾಭವನ್ನು ಪಡೆಯಲಿದ್ದಾರೆ. ನಗರದ ವರ್ಗದ ಪ್ರಕಾರ, HRA ಶೇ.27, ಶೇ.18 ಮತ್ತು ಶೇ.9 ರ ದರದಲ್ಲಿ ನೀಡಲಾಗುತ್ತಿದೆ. ಇದಕ್ಕಾಗಿ ಸರ್ಕಾರ 2015ರಲ್ಲಿ ಜ್ಞಾಪಕ ಪತ್ರ ಕೂಡ ಸಲ್ಲಿಸಿತ್ತು. ಇದರಲ್ಲಿ ಎಚ್‌ಆರ್‌ಎಯನ್ನು ಡಿಎಗೆ ಲಿಂಕ್ ಮಾಡಲಾಗಿದೆ ಎಂದು ಹೇಳಲಾಗಿತ್ತು. ಅದರ ಮೂರು ದರಗಳನ್ನು ನಿಗದಿಪಡಿಸಲಾಗಿತ್ತು. ಶೇ.0, ಶೇ.25 ಮತ್ತು ಶೇ.50 


ಎಚ್‌ಆರ್‌ಎ ಶೇಕಡಾ 30 ದಾಟಲಿದೆ
ಮನೆ ಬಾಡಿಗೆ ಭತ್ಯೆಯಲ್ಲಿ ಮುಂದಿನ ಪರಿಷ್ಕರಣೆಯು 3% ಇರಲಿದೆ. ಗರಿಷ್ಠ ಪ್ರಸ್ತುತ ದರವು ಶೇ.27 ರಷ್ಟಾಗಿದೆ. ಪರಿಷ್ಕರಣೆ ನಂತರ ಮನೆಬಾಡಿಗೆ ಭತ್ಯೆ 30% ಆಗುತ್ತದೆ. ಆದರೆ, ತುಟ್ಟಿಭತ್ಯೆ 50% ತಲುಪಿದಾಗ ಇದು ಸಂಭವಿಸುತ್ತದೆ. ಮೆಮೊರಾಂಡಮ್ ಪ್ರಕಾರ, ಡಿಎ ಶೇಕಡಾ 50 ತಲುಪಿದ ತಕ್ಷಣ, ಎಚ್‌ಆರ್‌ಎ 30%, 20% ಮತ್ತು 10% ಆಗುತ್ತದೆ. X, Y ಮತ್ತು Z ವರ್ಗದ ನಗರಗಳ ಪ್ರಕಾರ ಮನೆ ಬಾಡಿಗೆ ಭತ್ಯೆ ವಿಭಾಗಗಳು. ಎಕ್ಸ್ ವರ್ಗಕ್ಕೆ ಸೇರುವ ಕೇಂದ್ರೀಯ ಉದ್ಯೋಗಿಗಳು ಶೇಕಡಾ 27 ರಷ್ಟು ಎಚ್‌ಆರ್‌ಎ ಪಡೆಯುತ್ತಿದ್ದಾರೆ, ಡಿಎ 50% ಇದ್ದರೆ ಅದು 30% ಆಗುತ್ತದೆ. ಇದೆ ವೇಳೆ, ವೈ ಕ್ಲಾಸ್ ಜನರಿಗೆ ಇದು ಶೇ. 18 ರಿಂದ ಶೇ. 20ಕ್ಕೆ ಹೆಚ್ಚಾಗಲಿದೆ. ಝಡ್ ವರ್ಗದವರಿಗೆ ಶೇ.9ರಿಂದ ಶೇ.10ಕ್ಕೆ ಏರಿಕೆಯಾಗಲಿದೆ.


ಎಚ್‌ಆರ್‌ಎ ನಲ್ಲಿ X,Y ಮತ್ತು Z ವಿಭಾಗಗಳು ಯಾವುವು?
50 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳು ಎಕ್ಸ್ ವರ್ಗದಲ್ಲಿ ಬರುತ್ತವೆ. ಈ ನಗರಗಳಲ್ಲಿ ನೇಮಕಗೊಂಡ ಕೇಂದ್ರೀಯ ಉದ್ಯೋಗಿಗಳು ಶೇಕಡಾ 27ರಷ್ಟು ಎಚ್‌ಆರ್‌ಎ ಪಡೆಯುತ್ತಾರೆ. ಆದರೆ ವೈ ವರ್ಗದ ನಗರಗಳಲ್ಲಿ ಇದು 18 ಪ್ರತಿಶತ ಮತ್ತು Z ವರ್ಗದಲ್ಲಿ ಇದು 9 ಪ್ರತಿಶತ ಇರುತ್ತದೆ.


ಇದನ್ನೂ ಓದಿ-ದೇಶದ ಮಹಿಳೆಯರಿಗೆ ಭಾರಿ ಸಂತಸದ ಸುದ್ದಿ ಪ್ರಕಟಿಸಿದ ನಿರ್ಮಲಾ ಸೀತಾರಾಮನ್!


ಎಚ್‌ಆರ್‌ಎ ಅನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ?
7 ನೇ ಪೇ ಮ್ಯಾಟ್ರಿಕ್ಸ್ ಪ್ರಕಾರ, ಹಂತ-1 ರಲ್ಲಿ ಗ್ರೇಡ್ ಪೇ ಮೇಲೆ ಕೇಂದ್ರ ನೌಕರರ ಗರಿಷ್ಠ ಮೂಲ ವೇತನವು ತಿಂಗಳಿಗೆ ರೂ 56,900 ಆಗಿರುತ್ತದೆ, ನಂತರ ಅವರ HRA ಅನ್ನು ಶೇಕಡಾ 27 ರ ದರದಲ್ಲಿ ಲೆಕ್ಕಹಾಕಲಾಗುತ್ತದೆ. ಸರಳ ಲೆಕ್ಕಾಚಾರದಲ್ಲಿ ಅರ್ಥಮಾಡಿಕೊಳ್ಳುವುದಾದರೆ, 


ಇದನ್ನೂ ಓದಿ-ಇತಿಹಾಸ ಬರೆದ ಭಾರತ, ಮೊಟ್ಟಮೊದಲ ಬಾರಿಗೆ 4 ಟ್ರಿಲಿಯನ್ ಡಾಲರ್ ದಾಟಿದ ಅರ್ಥ ವ್ಯವಸ್ಥೆ


HRA = Rs 56,900 x 27/100 = Rs 15,363 ಪ್ರತಿ ತಿಂಗಳು
30% HRA ಜೊತೆಗೆ = ರೂ 56,900 x 30/100 = ತಿಂಗಳಿಗೆ ರೂ 17,070
HRA ನಲ್ಲಿ ಒಟ್ಟು ವ್ಯತ್ಯಾಸ: ತಿಂಗಳಿಗೆ 1,707 ರೂ
ವಾರ್ಷಿಕ HRA ಹೆಚ್ಚಳ - 20,484 ರೂ


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ