Good News:Diwali Bonus ಜೊತೆಗೆ ಸಿಗಲಿದೆ 18 ತಿಂಗಳ DA Arrears! ಶೀಘ್ರದಲ್ಲಿಯೇ ಮೋದಿ ಸರ್ಕಾರದ ಘೋಷಣೆ ಸಾಧ್ಯತೆ
7th Pay Commission: ಮಾಧ್ಯಮ ವರದಿಗಳ ಪ್ರಕಾರ, PM Modi ಆದಷ್ಟು ಬೇಗ ಇದಕ್ಕೆ ಪರಿಹಾರವನ್ನು ಸೂಚಿಸುವ ಸಾಧ್ಯತೆ ಇದೆ ಎನ್ನಲಾಗಿದ್ದು, ದೀಪಾವಳಿಯವರೆಗೆ ಕೇಂದ್ರ ಸರ್ಕಾರಿ ನೌಕರರಿಗೆ 18 ತಿಂಗಳ ತಡೆಹಿಡಿಯಲಾದ ಭತ್ಯೆ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ.
7th Pay Commission: ದೀಪಾವಳಿ (Diwali 2021) ಹಬ್ಬಕ್ಕೂ ಮುನ್ನವೇ ಕೇಂದ್ರ ಸರ್ಕಾರಿ ನೌಕರರಿಗೆ ಸಂತಸದ ಸುದ್ದಿಯೊಂದು ಪ್ರಕಟವಾಗಿದೆ. ಹೌದು, ಕೇಂದ್ರ ಸರ್ಕಾರ (Central Government Employees) ಕಳೆದ ಒಂದೂವರೆ ವರ್ಷದ ಬಾಕಿ ಉಳಿದಿರುವ ತುಟ್ಟಿಭತ್ಯೆಯನ್ನು ಪಾವತಿಸಿಲ್ಲ. ಆದರೆ, ಈ ಸಂಗತಿ ಇದೀಗ ಪ್ರಧಾನಿ ಮೋದಿ (PM Narendra Modi) ಅವರ ಬಳಿ ತಲುಪಿದ್ದು, ಶೀಘ್ರದಲ್ಲಿಯೇ ಪ್ರಧಾನಿಗಳು ಇದಕ್ಕೆ ಪರಿಹಾರ ಸೂಚಿಸುವ ಸಾಧ್ಯತೆ ಇದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಹೀಗಾಗಿ ದೀಪಾವಳಿಯವರೆಗೆ ಕೇಂದ್ರ ಸರ್ಕಾರಿ ನೌಕರರಿಗೆ ಬಾಕಿ ಉಳಿದಿರುವ 18 ತಿಂಗಳ ತುಟ್ಟಿಭತ್ಯೆ (Dearness Allowance) ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಇನ್ನೊಂದೆಡೆ, ಕೇಂದ್ರ ಸರ್ಕಾರಿ ನೌಕರರಿಗೆ ಮತ್ತು ಪಿಂಚಣಿದಾರರಿಗೆ ಬಾಕಿ ಉಳಿದಿರುವ ತುಟ್ಟಿ ಭತ್ತೆ (DA) ಮತ್ತು ತುಟ್ಟಿ ಪರಿಹಾರವನ್ನು (DR) ನೀಡುವಂತೆ ಭಾರತೀಯ ಪಿಂಚಣಿದಾರರ ವೇದಿಕೆಯು (Central Government Pensioners Association) ಪ್ರಧಾನಿ ಮೋದಿಗೆ ಮನವಿ ಮಾಡಿದೆ. ಈ ವಿಷಯದಲ್ಲಿ ಹಸ್ತಕ್ಷೇಪ ಮಾಡುವಂತೆ ಪಿಎಂ ಮೋದಿಗೆ ವೇದಿಕೆ ಪತ್ರ ಬರೆದಿದೆ.
18 ತಿಂಗಳಿನಿಂದ ಸಿಲುಕಿಕೊಂಡಿದೆ ಬಾಕಿ ಹಣ (Arrears)
ಈ ಕುರಿತು ಆಫಿಸ್ ಮೆಮೊರೆಂಡಮ್ ನಲ್ಲಿ ಹೇಳಿಕೊಂಡಿರುವ ಕೇಂದ್ರ ವಿತ್ತ ಸಚಿವಾಲಯದ ಅಡಿ ಬರುವ ಖರ್ಚು ವಿಭಾಗ, ಪ್ರಸ್ತುತ ಕೇಂದ್ರ ಸರ್ಕಾರಿ ನೌಕರರಿಗೆ ನೀಡಲಾಗುವ ತುಟ್ಟಿಭತ್ಯೆಯನ್ನು ಶೇ.17 ರಿಂದ ಶೇ.28ಕ್ಕೆ ಏರಿಕೆ ಮಾಡಲಾಗಿದೆ. ಕಳೆದ ವರ್ಷ ಏಪ್ರಿಲ್ ತಿಂಗಳಿನಲ್ಲಿ ಕೇಂದ್ರ ವಿತ್ತ ಸಚಿವಾಲಯ Covid-19 ಮಹಾಮಾರಿಯ ಹಿನ್ನೆಲೆ ಜೂನ್ 30, 2021ರವರೆಗೆ ತುಟ್ಟಿಭತ್ಯೆ ಹೆಚ್ಚಳವನ್ನು ತಡೆಹಿಡಿದಿತ್ತು. ಹೀಗಾಗಿ ಜನವರಿ 1, 2020 ರಿಂದ ಜೂನ್ 30, 2021ರವರೆಗೆ DA ಕೇವಲ ಶೇ.17 ಮಾತ್ರ ನೀಡಲಾಗಿದೆ ಎಂಬುದು ಇಲ್ಲಿ ಗಮನಾರ್ಹ.
ಇದನ್ನೂ ಓದಿ-PM Jan Dhan Yojana: ಕೇವಲ ಒಂದು ಮಿಸ್ಡ್ ಕಾಲ್ ನೀಡಿ ನಿಮ್ಮ ಜನ್ ಧನ್ ಖಾತೆ ಬ್ಯಾಲೆನ್ಸ್ ತಿಳಿಯಿರಿ
DA Arrearsಗೆ ಸಂಬಂಧಿಸಿದಂತೆ ಈ ಮೊದಲು ಸರ್ಕಾರ ಏನು ಹೇಳಿದೆ?
ಇದಕ್ಕೂ ಮೊದಲು ಬಾಕಿ ಉಳಿದಿರುವ 18 ತಿಂಗಳ ತುಟ್ಟಿಭತ್ಯೆ ಕುರಿತು ಹೇಳಿಕೆ ನೀಡಿದ್ದ ರಾಷ್ಟ್ರೀಯ ಜೆಸಿಎಂ ಕಾರ್ಯದರ್ಶಿ (ಸಿಬ್ಬಂದಿ ಭಾಗ) ಶಿವ ಗೋಪಾಲ್ ಮಿಶ್ರಾ, ಒಂದೂವರೆ ವರ್ಷದ ಬಾಕಿಯನ್ನು ಇನ್ನೂ ನೀಡಲಾಗಿಲ್ಲ, ಈ ಬಗ್ಗೆ ಸರ್ಕಾರದೊಂದಿಗೆ ಮಾತುಕತೆ ನಡೆಯುತ್ತಿದೆ. ನೌಕರರ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಬಾಕಿ ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ ಎಂದು ಹೇಳಿದ್ದರು.ಈ ವಿಷಯದಲ್ಲಿ ಮಧ್ಯಮಾರ್ಗವನ್ನು ಕಂಡುಕೊಳ್ಳುವ ಮೂಲಕ ಸರ್ಕಾರ, ಕೇಂದ್ರ ಉದ್ಯೋಗಿಗಳಿಗೆ ಸಹಾಯ ಮಾಡಬಹುದು ಎಂದು ಅವರು ಹೇಳಿದ್ದರು.
ಜುಲೈ 1, 2021 ರಿಂದ DA ಹೆಚ್ಚಾಗಿದೆ
ಕೇಂದ್ರದ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಜುಲೈ 1 ರಿಂದ ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಶೇ.28ಕ್ಕೆ ಹೆಚ್ಚಿಸಿದೆ. ಜುಲೈ 1 ರಿಂದ ಜಾರಿಗೆ ಬರುವಂತೆ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಶೇ. 11 ರಷ್ಟು ಡಿಯರ್ನೆಸ್ ಅಲೋವೆನ್ಸ್ (ಡಿಎ) ಮತ್ತು ಡಿಯರ್ನೆಸ್ ರಿಲೀಫ್ (ಡಿಆರ್) ಹೆಚ್ಚಳಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದರಿಂದ 48 ಲಕ್ಷಕ್ಕೂ ಅಧಿಕ ಕೇಂದ್ರ ಸರ್ಕಾರಿ ನೌಕರರು ಮತ್ತು 65 ಲಕ್ಷ ಪಿಂಚಣಿದಾರರಿಗೆ ಅನುಕೂಲವಾಗಿದೆ. ಹೊಸ ಡಿಎ ದರವು ಪ್ರಸ್ತುತ ಶೇ. 28 ರಷ್ಟಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.