PM Jan Dhan Yojana: ಕೇವಲ ಒಂದು ಮಿಸ್ಡ್ ಕಾಲ್ ನೀಡಿ ನಿಮ್ಮ ಜನ್ ಧನ್ ಖಾತೆ ಬ್ಯಾಲೆನ್ಸ್ ತಿಳಿಯಿರಿ

PM Jan Dhan Yojana: ನಿಮ್ಮ ಜನ್ ಧನ್ ಖಾತೆ ಬ್ಯಾಲೆನ್ಸ್ ಅನ್ನು ನೀವು ಎರಡು ರೀತಿಯಲ್ಲಿ ಪರಿಶೀಲಿಸಬಹುದು. ಇದರಲ್ಲಿ, ಮೊದಲ ದಾರಿ ಮಿಸ್ಡ್ ಕಾಲ್ ಮೂಲಕ ಮತ್ತು ಎರಡನೇ ದಾರಿ ಪಿಎಫ್ಎಂಎಸ್ ಪೋರ್ಟಲ್ ಮೂಲಕ. ಈ ಎರಡರ ಸಂಪೂರ್ಣ ಪ್ರಕ್ರಿಯೆಯನ್ನು ತಿಳಿಯೋಣ...

Written by - Yashaswini V | Last Updated : Oct 5, 2021, 02:04 PM IST
  • ಜನ್ ಧನ್ ಯೋಜನೆಯ ಫಲಾನುಭವಿಗಳಿಗೆ ಪ್ರಮುಖ ಸುದ್ದಿ
  • ಈ ಯೋಜನೆಯಡಿ, ಗ್ರಾಹಕರಿಗೆ ಹಲವು ಉತ್ತಮ ಸೌಲಭ್ಯಗಳನ್ನು ನೀಡಲಾಗಿದೆ
  • ಮಿಸ್ಡ್ ಕಾಲ್ ಮೂಲಕ ನಿಮ್ಮ ಜನ್ ಧನ್ ಖಾತೆ ಬ್ಯಾಲೆನ್ಸ್ ಅನ್ನು ತಿಳಿಯಿರಿ
PM Jan Dhan Yojana: ಕೇವಲ ಒಂದು ಮಿಸ್ಡ್ ಕಾಲ್ ನೀಡಿ ನಿಮ್ಮ ಜನ್ ಧನ್ ಖಾತೆ ಬ್ಯಾಲೆನ್ಸ್ ತಿಳಿಯಿರಿ title=
PM Jan Dhan

PM Jan Dhan Yojana: ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯ ಫಲಾನುಭವಿಗಳಿಗೆ ಮಹತ್ವದ ಸುದ್ದಿಯಿದೆ. ಪ್ರಧಾನ ಮಂತ್ರಿ ಜನ್ ಧನ್ ಯೋಜನೆ (PMJDY) ಅಡಿಯಲ್ಲಿ, ಜನರು  ಬ್ಯಾಂಕ್‌ಗಳು, ಅಂಚೆ ಕಚೇರಿಗಳು ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಶೂನ್ಯ ಬ್ಯಾಲೆನ್ಸ್‌ನಲ್ಲಿ ಖಾತೆಗಳನ್ನು ತೆರೆಯಲು ಅನುವು ಮಾಡಿಕೊಡಲಾಗಿದೆ. ಈ ಯೋಜನೆಯಡಿ, ಗ್ರಾಹಕರಿಗೆ ಹಲವು ಉತ್ತಮ ಸೌಲಭ್ಯಗಳನ್ನು ಸಹ ನೀಡಲಾಗಿದೆ. ನಿಮ್ಮ ಖಾತೆಯ ಬ್ಯಾಲೆನ್ಸ್ (Jan Dhan Yojana) ಅನ್ನು ನೀವು ಪರಿಶೀಲಿಸಲು ಬಯಸಿದರೆ, ಮನೆಯಲ್ಲಿ ಕುಳಿತು ಸುಲಭವಾಗಿ ಪರಿಶೀಲಿಸಬಹುದು.   

ನಿಮ್ಮ ಬ್ಯಾಲೆನ್ಸ್ ಅನ್ನು ಈ ರೀತಿ ತಿಳಿಯಿರಿ:
ನಿಮ್ಮ ಜನ್ ಧನ್ ಖಾತೆ ಬ್ಯಾಲೆನ್ಸ್ (Jan Dhan Account Balance) ಅನ್ನು ನೀವು ಎರಡು ರೀತಿಯಲ್ಲಿ ಪರಿಶೀಲಿಸಬಹುದು. ಇದರಲ್ಲಿ, ಮೊದಲ ದಾರಿ ಮಿಸ್ಡ್ ಕಾಲ್ ಮೂಲಕ ಮತ್ತು ಎರಡನೇ ದಾರಿ ಪಿಎಫ್ಎಂಎಸ್ ಪೋರ್ಟಲ್ ಮೂಲಕ. ಅಂದರೆ, ನೀವು ಮನೆಯಲ್ಲಿ ಕುಳಿತು ನಿಮಿಷಗಳಲ್ಲಿ ತಿಳಿದುಕೊಳ್ಳಬಹುದು. ಈ ಎರಡರ ಸಂಪೂರ್ಣ ಪ್ರಕ್ರಿಯೆಯನ್ನು ತಿಳಿಯೋಣ...

ಇದನ್ನೂ ಓದಿ- e-Shram Card Registration: ಇ-ಶ್ರಮ ಪೋರ್ಟಲ್‌ನಲ್ಲಿ ನೋಂದಾಯಿಸಲು ಬಯಸಿದರೆ, ಈ ದಾಖಲೆಗಳನ್ನು ಸಿದ್ಧವಾಗಿಡಿ

PFMS ಪೋರ್ಟಲ್ ಮೂಲಕ ಈ ರೀತಿ ಬ್ಯಾಲೆನ್ಸ್ ಪರಿಶೀಲಿಸಿ:
PFMS ಪೋರ್ಟಲ್‌ನಿಂದ ಬ್ಯಾಲೆನ್ಸ್ ಅನ್ನು ತಿಳಿಯಲು, ನೀವು ಮೊದಲು ಈ ಲಿಂಕ್‌ಗೆ ಹೋಗಿ https://pfms.nic.in/NewDefaultHome.aspx# . ಇಲ್ಲಿ ನೀವು ‘Know Your Payment’ ಮೇಲೆ ಕ್ಲಿಕ್ ಮಾಡಿ. ಈಗ ನೀವು ನಿಮ್ಮ ಖಾತೆ ಸಂಖ್ಯೆಯನ್ನು ನಮೂದಿಸಿ. ಇಲ್ಲಿ ನೀವು ಖಾತೆ ಸಂಖ್ಯೆಯನ್ನು ಎರಡು ಬಾರಿ ನಮೂದಿಸಬೇಕು. ಅದರ ನಂತರ ನೀವು ಕೊಟ್ಟಿರುವ ಕ್ಯಾಪ್ಚಾ ಕೋಡ್ ಅನ್ನು ಭರ್ತಿ ಮಾಡಿ. ಈ ಹಂತಗಳನ್ನು ಪೂರ್ಣಗೊಳಿಸಿದ ಬಳಿಕ ನಿಮ್ಮ ಖಾತೆಯ ಬ್ಯಾಲೆನ್ಸ್ ಅನ್ನು ನಿಮ್ಮ ಮುಂದೆ ಇರುವ ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ.

ಇದನ್ನೂ ಓದಿ- LIC Policy: 233 ರೂ. ಹೂಡಿಕೆ ಮಾಡಿ 17 ಲಕ್ಷ ಗಳಿಸಿ, ತೆರಿಗೆಯಲ್ಲೂ ಬಂಪರ್ ವಿನಾಯಿತಿ

ಮಿಸ್ಡ್ ಕಾಲ್ ಮೂಲಕ ಈ ರೀತಿ ಬ್ಯಾಲೆನ್ಸ್ ಪರಿಶೀಲಿಸಿ:
ಮಿಸ್ಡ್ ಕಾಲ್ (Missed Call) ಮೂಲಕ ಕೂಡ ನೀವು ನಿಮ್ಮ ಖಾತೆಯ ಬ್ಯಾಲೆನ್ಸ್ ಅನ್ನು ಪರಿಶೀಲಿಸಬಹುದು. ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಜನ್ ಧನ್ ಖಾತೆಯನ್ನು ಹೊಂದಿದ್ದರೆ, ನೀವು ಮಿಸ್ಡ್ ಕಾಲ್ ಮೂಲಕ ಬ್ಯಾಲೆನ್ಸ್ ಅನ್ನು ಪರಿಶೀಲಿಸಬಹುದು. ಇದಕ್ಕಾಗಿ, ನೀವು 18004253800 ಅಥವಾ 1800112211 ಸಂಖ್ಯೆಗೆ ಮಿಸ್ಡ್ ಕಾಲ್ ಮಾಡಬಹುದು. ಗ್ರಾಹಕರ ಗಮನಕ್ಕೆ:- ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ನೀವು ಮಿಸ್ಡ್ ಕಾಲ್ ನೀಡಿದರೆ ಮಾತ್ರ ಈ ಸೌಲಭ್ಯ ಲಭ್ಯವಿದೆ ಎಂದು ನೆನಪಿಡಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News