Good News: ಸಿಎನ್‌ಜಿ-ಪಿಎನ್‌ಜಿ ಬೆಲೆ ಕಡಿತ
CNG-PNG Price Cut: ಸರ್ಕಾರವು ದೇಶೀಯವಾಗಿ ಉತ್ಪಾದಿಸುವ ನೈಸರ್ಗಿಕ ಅನಿಲದ ಪೂರೈಕೆಯನ್ನು ಹೆಚ್ಚಿಸಿದ ನಂತರ, ಗ್ರಾಹಕರಿಗೆ ಪರಿಹಾರ ನೀಡಲು ಕಂಪನಿ ಈ ಕ್ರಮ ಕೈಗೊಂಡಿದೆ.
ಸಿಎನ್‌ಜಿ ಪಿಎನ್‌ಜಿ ಬೆಲೆ ಕಡಿತ: ಮುಂಬೈನಲ್ಲಿ ಗ್ಯಾಸ್ ಪೂರೈಕೆದಾರರಾದ ಮಹಾನಗರ ಗ್ಯಾಸ್ ಲಿಮಿಟೆಡ್ (ಎಂಜಿಎಲ್) ಪೈಪ್‌ಡ್ ಎಲ್‌ಪಿಜಿ (ಪಿಎನ್‌ಜಿ) ಮತ್ತು ವಾಹನ ಇಂಧನವಾಗಿ ಬಳಸುವ ಸಿಎನ್‌ಜಿ ಬೆಲೆಗಳನ್ನು ಕಡಿತಗೊಳಿಸಿದೆ. ದೇಶೀಯವಾಗಿ ಉತ್ಪಾದಿಸುವ ನೈಸರ್ಗಿಕ ಅನಿಲದ ಪೂರೈಕೆಯನ್ನು ಸರ್ಕಾರ ಹೆಚ್ಚಿಸಿದ ನಂತರ, ಗ್ರಾಹಕರಿಗೆ ಪರಿಹಾರ ನೀಡಲು ಕಂಪನಿ ಈ ಕ್ರಮ ಕೈಗೊಂಡಿದೆ ಎಂದು ಹೇಳಲಾಗಿದೆ.
ಕಂಪನಿಯ ಅಧಿಕೃತ ಹೇಳಿಕೆಯ ಪ್ರಕಾರ, ಪಿಎನ್‌ಜಿ ಬೆಲೆ ಪ್ರತಿ ಕ್ಯೂಬಿಕ್ ಮೀಟರ್‌ಗೆ 4 ರೂ. ಇಳಿಕೆಯಾಗಿದ್ದು 48.50 ರೂ. ಆಗಿದೆ. ಅದೇ ಸಮಯದಲ್ಲಿ, ಸಿಎನ್‌ಜಿ ಬೆಲೆಯು ಕೆಜಿಗೆ 6 ರೂ.ಗೆ ಇಳಿಕೆಯಾಗಿದ್ದು, ಪ್ರತಿ ಕೆಜಿಗೆ 80 ರೂ. ತಲುಪಿದೆ.
ಇದನ್ನೂ ಓದಿ- Best Bikes: 100 ಕಿ.ಮೀಗೂ ಅಧಿಕ ಮೈಲೇಜ್ ನೀಡುವ ಈ ಬೈಕ್ ಖರೀದಿಸಿ ಮಜಾ ಮಾಡಿ!
48% ಅಗ್ಗವಾದ ಕಾರು ಚಾಲನೆ:
ಬೆಲೆಗಳ ಪರಿಷ್ಕರಣೆಯ ನಂತರ, ಮುಂಬೈನಲ್ಲಿ ವಾಹನ ಮಾಲೀಕರು ಇತರ ಇಂಧನಗಳಿಗೆ ಹೋಲಿಸಿದರೆ ಸಿಎನ್‌ಜಿ ವೆಚ್ಚದಲ್ಲಿ ಶೇಕಡಾ 48 ರಷ್ಟು ಉಳಿಸಲು ಸಾಧ್ಯವಾಗುತ್ತದೆ ಎಂದು ಎಂಜಿಎಲ್ ಹೇಳಿಕೆಯಲ್ಲಿ ತಿಳಿಸಿದೆ. ಮತ್ತೊಂದೆಡೆ, ಪಿಎನ್‌ಜಿ ಗ್ರಾಹಕರು ಹೆಚ್ಚು ಬಳಸಿದ ದ್ರವೀಕೃತ ಪೆಟ್ರೋಲಿಯಂ ಅನಿಲಕ್ಕೆ (LPG) ಹೋಲಿಸಿದರೆ 18 ಪ್ರತಿಶತದಷ್ಟು ಉಳಿತಾಯದ ಲಾಭವನ್ನು ಪಡೆಯುತ್ತಾರೆ ಎನ್ನಲಾಗಿದೆ.
ಇದನ್ನೂ ಓದಿ- Good News! ಖಾಸಗಿ ನೌಕರರಿಗೆ ಇಲ್ಲಿದೆ ಒಂದು ಸಂತಸದ ಸುದ್ದಿ, ಮುಂದಿನ ವರ್ಷ ಎಷ್ಟು ಇನ್ಕ್ರಿಮೆಂಟ್ ಸಿಗಲಿದೆ ಗೊತ್ತಾ?
ಪುಣೆಯಲ್ಲೂ ಅಗ್ಗವಾದ ಸಿಎನ್‌ಜಿ:
ಮುಂಬೈ ಹೊರತುಪಡಿಸಿ, ಪುಣೆಯಲ್ಲಿ ಸಿಎನ್‌ಜಿ ಬೆಲೆಯನ್ನು ಕಡಿತಗೊಳಿಸಲಾಗಿದೆ. ಪುಣೆಯಲ್ಲಿ ಸಿಎನ್‌ಜಿ ಬೆಲೆಯನ್ನು 4 ರೂ. ಇಳಿಕೆ ಮಾಡಲಾಗಿದೆ. ಈ ಕಡಿತದ ನಂತರ, ಈಗ ಪುಣೆಯಲ್ಲಿ 1 ಕೆಜಿ ಸಿಎನ್‌ಜಿ ಬೆಲೆ 87 ರೂ.ಗೆ ತಲುಪಿದೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.