ಫ್ರೀ ರೇಷನ್ ಪಡೆಯುವವರಿಗೆ ಪ್ರಮುಖ ಸುದ್ದಿ, ಮೂರು ತಿಂಗಳು ಈ ಕೆಲಸ ಮಾಡದಿದ್ದರೆ ರದ್ದಾಗುತ್ತೆ ಕಾರ್ಡ್

ಪಡಿತರ ಚೀಟಿ ನಿಯಮಗಳು: ನೀವು ಪಡಿತರ ಚೀಟಿ ಹೊಂದಿದ್ದರೆ ಮತ್ತು ಸರ್ಕಾರದಿಂದ ಲಭ್ಯವಾಗುತ್ತಿರುವ ಉಚಿತ ಪಡಿತರ ಸೌಲಭ್ಯವನ್ನು ಪಡೆಯುತ್ತಿದ್ದರೆ ಈ ಸುದ್ದಿಯನ್ನು ತಪ್ಪದೇ ಓದಿ.

Written by - Yashaswini V | Last Updated : Aug 16, 2022, 01:12 PM IST
  • ನಿಯಮಗಳ ಪ್ರಕಾರ, ಪಡಿತರ ಚೀಟಿದಾರರು ಮೂರು ತಿಂಗಳ ಕಾಲ ಸರ್ಕಾರದ ಆಹಾರ ಧಾನ್ಯಗಳನ್ನು ತೆಗೆದುಕೊಳ್ಳದಿದ್ದರೆ, ಅವರ ಪಡಿತರ ಚೀಟಿಯನ್ನು ರದ್ದುಗೊಳಿಸಲಾಗುತ್ತದೆ.
  • ಪಡಿತರ ಚೀಟಿಯನ್ನು ಒಮ್ಮೆ ರದ್ದುಪಡಿಸಿದರೆ, ಅದನ್ನು ತಯಾರಿಸುವುದು ನಿಮಗೆ ಸುಲಭವಲ್ಲ.
  • ಆದ್ದರಿಂದ, ನೀವು ಪಡಿತರ ಚೀಟಿ ಹೊಂದಿದ್ದರೆ, ನೀವು ಪ್ರತಿ ತಿಂಗಳು ಅದರ ಮೇಲೆ ಸರ್ಕಾರಿ ಪಡಿತರವನ್ನು ತೆಗೆದುಕೊಳ್ಳಬೇಕು.
ಫ್ರೀ ರೇಷನ್ ಪಡೆಯುವವರಿಗೆ ಪ್ರಮುಖ ಸುದ್ದಿ, ಮೂರು ತಿಂಗಳು ಈ ಕೆಲಸ ಮಾಡದಿದ್ದರೆ ರದ್ದಾಗುತ್ತೆ ಕಾರ್ಡ್  title=
Ration Card Latest Update

ಪಡಿತರ ಚೀಟಿ ನಿಯಮಗಳು: ನಿಮ್ಮ  ಬಳಿ ಪಡಿತರ ಚೀಟಿ ಇದ್ದು ಸರ್ಕಾರದ ಉಚಿತ ಪಡಿತರ ಯೋಜನೆಯ ಲಾಭ ಪಡೆಯುತ್ತಿದ್ದರೆ ಈ ಸುದ್ದಿಯನ್ನು ತಪ್ಪದೇ ಓದಿ. ಪಡಿತರ ಚೀಟಿ ಇದ್ದರೂ ಪಡಿತರ ತೆಗೆದುಕೊಳ್ಳುತ್ತಿಲ್ಲ ಎಂದಾದಲ್ಲಿ ಭವಿಷ್ಯದಲ್ಲಿ ನಿಮಗೆ ತೊಂದರೆ ಆಗಬಹುದು.  ಪಡಿತರ ಚೀಟಿದಾರರು ಮೂರು ತಿಂಗಳ ಕಾಲ ಸರ್ಕಾರದ ಆಹಾರ ಧಾನ್ಯಗಳನ್ನು ತೆಗೆದುಕೊಳ್ಳದಿದ್ದರೆ, ಅವರ ಪಡಿತರ ಚೀಟಿಯನ್ನು ರದ್ದುಗೊಳಿಸಲಾಗುತ್ತದೆ. 

ವಾಸ್ತವವಾಗಿ, ಉತ್ತರ ಪ್ರದೇಶ ಸರ್ಕಾರವು, ಪಡಿತರ ಚೀಟಿಗಳ ರದ್ದತಿ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಸರಕಾರ ಹೊರಡಿಸಿರುವ ಆದೇಶದ ಪ್ರಕಾರ ಪಡಿತರ ಚೀಟಿ ಪಟ್ಟಿಯಿಂದ ಅನರ್ಹರ ಹೆಸರನ್ನು ಕಡಿತಗೊಳಿಸಿ, ನಿರ್ಗತಿಕರಿಗೆ ಮಾತ್ರ ಉಚಿತ ಪಡಿತರ ಸೌಲಭ್ಯವನ್ನು ಒದಗಿಸುವುದು ಇದರ ಉದ್ದೇಶ. ಆದರೆ ಪಡಿತರ ಚೀಟಿಗೆ ಸಂಬಂಧಿಸಿದ ಮತ್ತೊಂದು ಪ್ರಮುಖ ನಿಯಮವನ್ನು ಪಡಿತರ ಚೀಟಿದಾರರು ತಿಳಿದಿರುವುದು ಅವಶ್ಯಕವಾಗಿದೆ. 

ಇದನ್ನೂ ಓದಿ- ನಿಮ್ಮ ವಾಹನಗಳ ನಂಬರ್ ಮತ್ತು ನಂಬರ್ ಪ್ಲೇಟ್ ಹೀಗಿದ್ದರೆ ಬೀಳಲಿದೆ ಭಾರೀ ದಂಡ..!

ನಿಯಮಗಳ ಪ್ರಕಾರ, ಪಡಿತರ ಚೀಟಿದಾರರು ಮೂರು ತಿಂಗಳ ಕಾಲ ಸರ್ಕಾರದ ಆಹಾರ ಧಾನ್ಯಗಳನ್ನು ತೆಗೆದುಕೊಳ್ಳದಿದ್ದರೆ, ಅವರ ಪಡಿತರ ಚೀಟಿಯನ್ನು ರದ್ದುಗೊಳಿಸಲಾಗುತ್ತದೆ. ಪಡಿತರ ಚೀಟಿಯನ್ನು ಒಮ್ಮೆ ರದ್ದುಪಡಿಸಿದರೆ, ಅದನ್ನು ತಯಾರಿಸುವುದು ನಿಮಗೆ ಸುಲಭವಲ್ಲ. ಆದ್ದರಿಂದ, ನೀವು ಪಡಿತರ ಚೀಟಿ ಹೊಂದಿದ್ದರೆ, ನೀವು ಪ್ರತಿ ತಿಂಗಳು ಅದರ ಮೇಲೆ ಸರ್ಕಾರಿ ಪಡಿತರವನ್ನು ತೆಗೆದುಕೊಳ್ಳಬೇಕು. ಸತತ ಮೂರು ತಿಂಗಳು ನೀವು ಪಡಿತರವನ್ನು ಕೊಳ್ಳದಿದ್ದರೆ ನಿಮ್ಮ ಪಡಿತರ ರದ್ದಾಗುವ ಸಾಧ್ಯತೆ ಇದೆ.

ಇದನ್ನೂ ಓದಿ- 7% ಕ್ಕಿಂತ ಕಡಿಮೆಯಾಯಿತು ಹಣದುಬ್ಬರ ! ಎಷ್ಟು ಹೆಚ್ಚಾಗಲಿದೆ ಸರ್ಕಾರಿ ನೌಕರರ ಡಿಎ ? ಇಲ್ಲಿದೆ ಹೊಸ ಅಪ್ಡೇಟ್

ಹೊಸ ಪಡಿತರ ಚೀಟಿ ಮಾಡಲು ಹಾಗೂ ಹಳೆ ಪಡಿತರ ಚೀಟಿ ರದ್ದುಗೊಳಿಸಲು ಈ ನಿಯಮ ಜಾರಿಗೆ ತರಲಾಗುತ್ತಿದೆ.  ಮೂರು ತಿಂಗಳಿಂದ ಪಡಿತರ ತೆಗೆದುಕೊಳ್ಳದ ಕಾರ್ಡ್ ದಾರರನ್ನು ಪರಿಶೀಲಿಸಿದ ಬಳಿಕ ಪೂರೈಕೆ ಇಲಾಖೆ ಕಾರ್ಡ್ ರದ್ದುಪಡಿಸಲಿದೆ. ಇದರೊಂದಿಗೆ ಅವರ ಜಾಗದಲ್ಲಿ ಅರ್ಹರಿಗೆ ಪಡಿತರ ಕಾರ್ಡ್‌ಗಳನ್ನು ಮಾಡಲಾಗುವುದು ಎಂದು ಹೇಳಲಾಗುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News