Good News: EPFO ಚಂದಾದಾರರಿಗೊಂದು ಗುಡ್ ನ್ಯೂಸ್! ಪಿಂಚಣಿದಾರರಿಗೆ ಬಹುದೊಡ್ಡ ಉಡುಗೊರೆ ನೀಡಿದ ಸರ್ಕಾರ
EPFO Passbook: EPFO ಚಂದಾದಾರರಿಗಾಗಿ ಸರ್ಕಾರ ಕೆಲ ಮಹತ್ವದ ನಿರ್ಣಯಗಳನ್ನು ಕೈಗೊಂಡಿದೆ. ಇದಲ್ಲದೆ ಜನರಿಗೆ ಕೆಲ ಸೌಕರ್ಯಗಳನ್ನು ಕೂಡ ಒದಗಿಸಲಾಗಿದೆ. ಇನ್ನೊಂದೆಡೆ ESIC ಯನ್ನು ಆಯುಷ್ಮಾನ್ ಯೋಜನೆಗೆ ಜೋಡಿಸುವ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ
EPFO Login: ನೌಕರರು ಮತ್ತು ಉದ್ಯೋಗದಾತರ ನಡುವೆ ಉತ್ತಮ ಸಹಕಾರ ಮತ್ತು ಸೌಹಾರ್ದತೆಗಾಗಿ ಶೀಘ್ರದಲ್ಲೇ ಹೊಸ ವ್ಯಾಜ್ಯ ನೀತಿಯನ್ನು ತರಲಾಗುವುದು ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಭೂಪೇಂದ್ರ ಯಾದವ್ ತಿಳಿಸಿದ್ದಾರೆ. ಇಬ್ಬರ ನಡುವಿನ ವಿವಾದದಂತಹ ಪರಿಸ್ಥಿತಿ ಕಡಿಮೆಯಾಗಿ ಹಕ್ಕುಗಳ ರಕ್ಷನೆಯಾಗಬೇಕು ಎಂದು ಅವರು ಹೇಳಿದ್ದಾರೆ. ಇದೇ ವೇಳೆ ಪಿಂಚಣಿದಾರರ ವಿಷಯಕ್ಕೆ ಸಂಬಂಧಿಸಿದಂತೆಯೂ ಕೂಡ ಸರ್ಕಾರ ಕೆಲ ಕ್ರಮಗಳನ್ನೂ ಕೈಗೊಂಡಿದೆ. ಇಪಿಎಫ್‌ಒ ಮಂಡಳಿಯು ಡಿಜಿಟಲ್ ಲೈಫ್ ಸರ್ಟಿಫಿಕೇಟ್‌ಗಾಗಿ ಫೇಸ್ ಅಥೆಂಟಿಕೇಶನ್ ಟೆಕ್ನಾಲಜಿಯ ಬಳಕೆಯನ್ನು ಅನುಮೋದಿಸಿದೆ. EPFO ಶನಿವಾರ ತನ್ನ 73 ಲಕ್ಷಕ್ಕೂ ಹೆಚ್ಚು ಪಿಂಚಣಿದಾರರಿಗೆ ಎಲ್ಲಿ ಬೇಕಾದರೂ ಮುಖ ದೃಢೀಕರಣ ತಂತ್ರಜ್ಞಾನವನ್ನು ಬಳಸಿಕೊಂಡು ಡಿಜಿಟಲ್ ಜೀವನ ಪ್ರಮಾಣಪತ್ರಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸುವ ಸೌಲಭ್ಯವನ್ನು ಆರಂಭಿಸಿದೆ.
ಮುಖದ ದೃಢೀಕರಣ ತಂತ್ರಜ್ಞಾನ
ವಯಸ್ಸಾದ ಕಾರಣ ತಮ್ಮ ಬಯೋ-ಮೆಟ್ರಿಕ್ಸ್ (ಬೆರಳಚ್ಚು ಮತ್ತು ಐರಿಸ್) ಪಡೆಯುವಲ್ಲಿ ತೊಂದರೆಗಳನ್ನು ಎದುರಿಸುತ್ತಿರುವ ಹಳೆಯ ಪಿಂಚಣಿದಾರರಿಗೆ ಈ ಮುಖ ಗುರುತಿಸುವಿಕೆ ದೃಢೀಕರಣವು ಜೀವಿತ ಪ್ರಮಾಣಪತ್ರಗಳನ್ನು ಸಲ್ಲಿಸಲು ಸಹಾಯ ಮಾಡಲಿದೆ. ಕೇಂದ್ರೀಯ ಟ್ರಸ್ಟಿಗಳ ಮಂಡಳಿಯ ಅಧ್ಯಕ್ಷರೂ ಆಗಿರುವ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವ ಭೂಪೇಂದ್ರ ಯಾದವ್ ಅವರು ಹಾಗೂ ಇಪಿಎಫ್‌ಒದ ಉನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆ, ಪಿಂಚಣಿದಾರರಿಗೆ ಮುಖ ದೃಢೀಕರಣ ತಂತ್ರಜ್ಞಾನವನ್ನು ಪರಿಚಯಿಸಿದ್ದಾರೆ ಎಂದು ಕಾರ್ಮಿಕ ಸಚಿವಾಲಯದ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಈ ಅನುಮೋದನೆಯನ್ನು ಸಹ ಪಡೆಯಲಾಗಿದೆ
ಇದಕ್ಕೂ ಮುನ್ನಾ ದಿನ, CBT ತನ್ನ 231 ನೇ ಸಭೆಯಲ್ಲಿ ಪಿಂಚಣಿದಾರರಿಗೆ EPFO ಸೇವೆಗಳನ್ನು ಇನ್ನಷ್ಟು ಸುಧಾರಿಸಲು ಪಿಂಚಣಿ ಕೇಂದ್ರೀಕೃತ ವಿತರಣೆಗೆ ತಾತ್ವಿಕ ಅನುಮೋದನೆಯನ್ನು ನೀಡಿತ್ತು. ಇದೀಗ ಪಿಂಚಣಿದಾರರಿಗೆ ಕೇಂದ್ರ ಪಿಂಚಣಿ ಪಾವತಿ ವ್ಯವಸ್ಥೆಗೆ ತಾತ್ವಿಕ ಅನುಮೋದನೆ ನೀಡಲಾಗಿದೆ. ಇದೇ ವೇಳೆ ಪಿಂಚಣಿ ಮಾಹಿತಿಗಾಗಿ ಡಿಜಿಟಲ್ ಕ್ಯಾಲ್ಕುಲೇಟರ್ ಅನ್ನು ಸಹ ಅನುಮೋದಿಸಲಾಗಿದೆ.
ಇದನ್ನೂ ಓದಿ-Pulsar NS160 ಬೈಕ್ ಗೆ ಭಾರಿ ಪೈಪೋಟಿ ನೀಡಲು ಬಿಡುಗಡೆಯಾಗಿದೆ ಹೀರೋ ಕಂಪನಿಯ ಈ ಹೊಸ ಬೈಕ್
ಇವುಗಳಿಂದಲೂ ಕೂಡ ಲಾಭ ಸಿಗಲಿದೆ. ಲಾಭವಾಗಲಿದೆ
ಇದಲ್ಲದೆ ಯಾದವ್ ಅವರು ಪಿಂಚಣಿ ಮತ್ತು ಉದ್ಯೋಗಿ ಠೇವಣಿ ಲಿಂಕ್ಡ್ ಇನ್ಶುರೆನ್ಸ್ ಸ್ಕೀಮ್ ಕ್ಯಾಲ್ಕುಲೇಟರ್ ಗೂ ಕೂಡ ಚಾಲನೆ ನೀಡಿದ್ದಾರೆ, ಇದು ಪಿಂಚಣಿದಾರರಿಗೆ ಮತ್ತು ಕುಟುಂಬದ ಸದಸ್ಯರಿಗೆ ಅವರು ಅರ್ಹರಾಗಿರುವ ಪಿಂಚಣಿ ಮತ್ತು ಮರಣ ಸಂಬಂಧಿತ ವಿಮಾ ಪ್ರಯೋಜನಗಳ ಲೆಕ್ಕಾಚಾರ ಮಾಡಲು ಆನ್‌ಲೈನ್ ಸೌಲಭ್ಯವನ್ನು ಒದಗಿಸಲಿದೆ. ಜೊತೆಗೆ, ಪಿಂಚಣಿ ಮೊತ್ತವನ್ನು ನೇರ ಖಾತೆಗೆ ವರ್ಗಾವಣೆಯಾಗಲಿದೆ, ಇದು ಪ್ರಕ್ರಿಯೆಯನ್ನು ಮತ್ತಷ್ಟು ಸುಲಭಗೊಳಿಸಲಿದೆ. ಅಲ್ಲದೆ, ಆಯುಷ್ಮಾನ್ ಭಾರತ್ ಯೋಜನೆಯೊಂದಿಗೆ ESIC ಅನ್ನು ಲಿಂಕ್ ಮಾಡಲು ಕೂಡ ನಿರ್ಧಾರ ಕೈಗೊಳ್ಳಲಾಗಿದೆ.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.