Best Mileage Car At Low Price: ಮೈಲೇಜ್ ನಲ್ಲಿ ಎಲ್ಲಾ ಕಾರ್ ಗಳನ್ನು ಮೀರಿಸುತ್ತದೆ ಈ ಕಾರ್, ಸಿಎನ್ಜಿ ಕಿಟ್ ನೊಂದಿಗೆ ಅತ್ಯಂತ ಅಗ್ಗದ ದರದಲ್ಲಿ ಖರೀದಿಸಲು ಇಲ್ಲಿದೆ ಸುವರ್ಣಾವಕಾಶ

Used CNG Cars: ಸಿಎನ್ಜಿ ಕಾರುಗಳು ಪೆಟ್ರೋಲ್ ಕಾರಿನ ಹೋಲಿಕೆಯಲ್ಲಿ ಹೆಚ್ಚು ಮೈಲೇಜ್ ನೀಡುತ್ತವೆ ಎಂಬುದರ ಮೇಲೆ ಬಹುತೇಕರು ವಿಶ್ವಾಸ ವ್ಯಕ್ತಪಡಿಸುತ್ತಾರೆ.  

Written by - Nitin Tabib | Last Updated : Jul 29, 2022, 06:54 PM IST
  • ಪೆಟ್ರೋಲ್ ಕಾರುಗಳಿಗಿಂತ ಸಿಎನ್‌ಜಿ ಕಾರುಗಳು ಹೆಚ್ಚು ಮೈಲೇಜ್ ನೀಡುತ್ತವೆ
  • ಹೀಗಾಗಿ ಕಾರನ್ನು ಚಲಾಯಿಸುವ ನಿಮ್ಮ ವೆಚ್ಚವು ಕಡಿಮೆ ಇರಲಿದೆ.
  • ಅಗ್ಗದ ದರದಲ್ಲಿ ಇಂತಹ ವಾಹನವನ್ನು ಎಲ್ಲೆಲ್ಲಿ ಮಾರಾಟವಾಗುತ್ತಿವೆ ತಿಳಿದುಕೊಳ್ಳೋಣ ಬನ್ನಿ
Best Mileage Car At Low Price: ಮೈಲೇಜ್ ನಲ್ಲಿ ಎಲ್ಲಾ ಕಾರ್ ಗಳನ್ನು ಮೀರಿಸುತ್ತದೆ ಈ ಕಾರ್, ಸಿಎನ್ಜಿ ಕಿಟ್ ನೊಂದಿಗೆ ಅತ್ಯಂತ ಅಗ್ಗದ ದರದಲ್ಲಿ ಖರೀದಿಸಲು ಇಲ್ಲಿದೆ ಸುವರ್ಣಾವಕಾಶ  title=
Best Mileage Cars (Representational Image)

Used CNG Cars At Low Price: ಪೆಟ್ರೋಲ್ ಕಾರುಗಳಿಗಿಂತ ಸಿಎನ್‌ಜಿ ಕಾರುಗಳು ಹೆಚ್ಚು ಮೈಲೇಜ್ ನೀಡುತ್ತವೆ ಎಂದು ಯಾರಾದರೂ ನೀವು ಹೇಳಿದರೆ, ಅವರು ನಿಮ್ಮನ್ನು ಅನುಮಾನಿಸುವುದೇ ಇಲ್ಲ. ಹೌದು, ಇದು ಸಂಪೂರ್ಣ ಸತ್ಯ. ಪೆಟ್ರೋಲ್ ಕಾರುಗಳಿಗಿಂತ ಸಿಎನ್‌ಜಿ ಕಾರುಗಳು ಹೆಚ್ಚು ಮೈಲೇಜ್ ನೀಡುತ್ತವೆ. ಇಂತಹ ಪರಿಸ್ಥಿತಿಯಲ್ಲಿ, ಒಂದು ವೇಳೆ ನೀವೂ ಕೂಡ ಸಿಎನ್‌ಜಿ ಕಿಟ್ ಹೊಂದಿರುವ ಕಾರನ್ನು ಖರೀದಿಸಿದರೆ, ಕಾರನ್ನು ಚಲಾಯಿಸುವ ನಿಮ್ಮ ವೆಚ್ಚವು ಕಡಿಮೆ ಇರಲಿದೆ. ಅದಕ್ಕಾಗಿಯೇ, ಇಂದು ನಾವು ಮಾರಾಟಕ್ಕೆ ಲಭ್ಯವಿರುವ ಮತ್ತು ಸಿಎನ್‌ಜಿ ಕಿಟ್‌ಗಳೊಂದಿಗೆ ಅಳವಡಿಸಲಾಗಿರುವ ಕೆಲವು ಬಳಸಿದ ಕಾರುಗಳ ಪಟ್ಟಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ. ನಾವು ಈ ಕಾರುಗಳನ್ನು ಮಾರುತಿ ಸುಜುಕಿ ಟ್ರೂ ವ್ಯಾಲ್ಯೂ ವೆಬ್‌ಸೈಟ್‌ನಲ್ಲಿ 29 ಜುಲೈ 2022 ರಂದು ಗಮನಿಸಿದ್ದೇವೆ.

ಹರಿಯಾಣದ ಸೋನಿಪತ್‌ನಲ್ಲಿ ಮಾರುತಿ ವ್ಯಾಗನ್ ಆರ್ ಎಲ್‌ಎಕ್ಸ್‌ಐ (ಒ) ಕಾರು ಮಾರಾಟಕ್ಕೆ ಲಭ್ಯವಿದ್ದು, ಇದಕ್ಕಾಗಿ 2 ಲಕ್ಷ ರೂ. ಬೆಲೆ ನಿಗದಿಪಡಿಸಲಾಗಿದೆ, ಇದು ಫಸ್ಟ್ ಓನರ್ ಕಾರಾಗಿದ್ದು ಇದುವರೆಗೆ ಒಟ್ಟು 125372 ಕಿ.ಮೀ ಕ್ರಮಿಸಿದೆ. ಇದು ಪೆಟ್ರೋಲ್ ಎಂಜಿನ್ ಜೊತೆಗೆ CNG ಕಿಟ್ ಅನ್ನು ಸಹ ಹೊಂದಿದೆ. ಇದು 2014 ರ ಮಾಡೆಲ್ ಕಾರಾಗಿದೆ. ಆದರೆ, ಇದು ಸೋನಿಪತ್ ಪಾಸಿಂಗ್ ಕಾರ್ ಆಗಿದೆ.

ಮತ್ತೊಂದು ಮಾರುತಿ ಆಲ್ಟೊ 800 ಎಲ್‌ಎಕ್ಸ್‌ಐ ಹರ್ಯಾಣದ ಮನೇಸರ್‌ನಲ್ಲಿ ಮಾರಾಟಕ್ಕೆ ಲಭ್ಯವಿದ್ದು, ಅದರ ಬೆಲೆಯನ್ನು 1.95 ಲಕ್ಷ ರೂ. ನಿಗದಿಪಡಿಸಲಾಗಿದೆ. ಇದೂ ಕೂಡ ಫಸ್ಟ್ ಓನರ್  ಕಾರಾಗಿದ್ದು, ಇದುವರೆಗೆ ಒಟ್ಟು 125574 ಕಿ.ಮೀ ಕ್ರಮಿಸಿದೆ. ಇದು ಪೆಟ್ರೋಲ್ ಎಂಜಿನ್ ಜೊತೆಗೆ CNG ಕಿಟ್ ಅನ್ನು ಸಹ ಒಳಗೊಂಡಿದ್ದು, 2013 ರ ಮಾದರಿಯ ಕಾರ್ ಆಗಿದೆ. ಇದು ಮನೆಸರ್ ನಂಬರ್ ಪ್ಲೇಟ್ ಹೊಂದಿದೆ.

ಉತ್ತರ ಪ್ರದೇಶದ ಆಗ್ರಾದಲ್ಲೂ ಆಲ್ಟೊ 800 ಎಲ್ ಎಕ್ಸ್ ಐ ಕಾರು ಇದ್ದು, ಅದೂ ಕೂಡ 2 ಲಕ್ಷ ರೂ.ಗಳಿಗೆ ಮಾರಾಟಕ್ಕೆ ಲಭ್ಯವಿದೆ. ಈ 2013 ಮಾಡೆಲ್ ಕಾರು ಪ್ರಸ್ತುತ ಫಸ್ಟ್ ಓನರ್ ಕಾರಾಗಿದ್ದು, ಯಾರು ಖರೀದಿಸುತ್ತಾರೋ ಅವರು ಎರಡನೇ ಮಾಲೀಕರಾಗುತ್ತಾರೆ. ಇದುವರೆಗೆ 62832 ಕಿ.ಮೀ ಕ್ರಮಿಸಿದೆ. ಇದರಲ್ಲಿ ಸಿಎನ್ ಜಿ ಕಿಟ್ ಕೂಡ ಇದೆ. ಕಾರು ಮಾತ್ರ ಆಗ್ರಾ ನಂಬರ್ ಪ್ಲೇಟ್ ಹೊಂದಿದೆ.

ಇದನ್ನೂ ಓದಿ-Pulsar NS160 ಬೈಕ್ ಗೆ ಭಾರಿ ಪೈಪೋಟಿ ನೀಡಲು ಬಿಡುಗಡೆಯಾಗಿದೆ ಹೀರೋ ಕಂಪನಿಯ ಈ ಹೊಸ ಬೈಕ್

ಆಗ್ರಾದಲ್ಲಿ ಮತ್ತೊಂದು Alto 800 LXI ಮಾರಾಟಕ್ಕಿದೆ, ಇದು ಮೇಲಿನದಕ್ಕಿಂತ ಅಗ್ಗವಾಗಿದೆ. ಇದಕ್ಕಾಗಿ 1.75 ಲಕ್ಷ ರೂ.ಗೆ ಬೇಡಿಕೆ ಇಡಲಾಗಿದೆ. ಆದರೆ, ಇದು ಕೂಡ 2013 ರ ಮಾದರಿಗೆ ಸೇರಿದೆ ಮತ್ತು ಫಸ್ಟ್ ಓನರ್ ಕಾರ್ ಆಗಿದೆ. ಸಿಎನ್ ಜಿ ಕಿಟ್ ಹೊಂದಿರುವ ಈ ಕಾರು ಇದುವರೆಗೆ 57649 ಕಿ.ಮೀ ಓಡಿದೆ. ಇದೂ ಕೂಡ ಆಗ್ರಾ ನಂಬರ್ ಪ್ಲೇಟ್ ಹೊಂದಿದೆ.

ಇದನ್ನೂ ಓದಿ-Stock Market Update: ಭಾರಿ ಚೇತರಿಕೆಯೊಂದಿಗೆ ದಿನದ ವಹಿವಾಟು ಅಂತ್ಯಗೊಳಿಸಿದ ಷೇರು ಮಾರುಕಟ್ಟೆ

(ಹಕ್ಕುತ್ಯಾಗ- ಜೀ ಕನ್ನಡ ನ್ಯೂಸ್ ಯಾರಿಗೂ ಕೂಡ ಹಳೆ ಕಾರು ಖರೀದಿಸಲು ಸಲಹೆ ನೀಡುವುದಿಲ್ಲ. ಕೇವಲ ಮಾಹಿತಿಯನ್ನು ನೀಡುವುದು ಮಾತ್ರ ಈ ಲೇಖನ ಬರೆಯುವ ಹಿಂದಿನ ಉದ್ದೇಶವಾಗಿದೆ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News