ಬೆಂಗಳೂರು: ಮುಂಗಾರು ಆರಂಭವಾದಾಗಿನಿಂದ ಹಣದುಬ್ಬರ ಶ್ರೀಸಾಮಾನ್ಯರ ಜೇಬಿಗೆ ದುಬಾರಿ ಪರಿಣಮಿಸಿದೆ. ಸೊಂಟ ಮುರಿಯುತ್ತಿರುವ ಹಣದುಬ್ಬರದ ನಡುವೆ ಟೊಮೆಟೊ ಬೆಲೆ ದಿಢೀರ್ ಏರಿಕೆಯಾಗಿದ್ದು, ಜನರ ಕಣ್ಣು ಕೆಂಪಾಗಿಸಿದೆ. ದೇಶದ ಬಹುತೇಕ ಪ್ರದೇಶಗಳಲ್ಲಿ ಟೊಮೆಟೊ ಬೆಲೆ ಮೂರಂಕಿ ತಲುಪಿದೆ. 

COMMERCIAL BREAK
SCROLL TO CONTINUE READING

ಕೆಲವೆಡೆ ಟೊಮೇಟೊ ಕೆಜಿಗೆ 200 ದರದಲ್ಲಿಯೂ ಮಾರಾಟವಾಗುತ್ತಿದೆ. ಇದೀಗ ಟೊಮೇಟೊ ಬೆಲೆ ಇಳಿಕೆಗೆ ಸರ್ಕಾರ ಮಾಸ್ಟರ್ ಪ್ಲಾನ್ ಸಿದ್ಧಪಡಿಸಿದೆ. ಏರುತ್ತಿರುವ ಟೊಮೆಟೊ ಬೆಲೆಯಿಂದ ಜನರಿಗೆ ಪರಿಹಾರ ನೀಡಲು ಮೋದಿ ಸರ್ಕಾರ ಮಾಸ್ಟರ್ ಪ್ಲಾನ್ ರಚಿಸಿದೆ ಎನ್ನಲಾಗಿದೆ. ಬನ್ನಿ ತಿಳಿದುಕೊಳ್ಳೋಣ,


ಹೆಚ್ಚುತ್ತಿರುವ ಟೊಮೆಟೊ ಬೆಲೆಗಳನ್ನು ತಡೆಯಲು ಗ್ರಾಹಕ ವ್ಯವಹಾರಗಳ ಇಲಾಖೆಯು ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟ (NAFED) ಮತ್ತು ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟಕ್ಕೆ (NCCF) ಪ್ರಮುಖ ಜವಾಬ್ದಾರಿಯನ್ನು ವಹಿಸಿದೆ. ಈ ಎರಡೂ ಇಲಾಖೆಗಳು ಈಗ ಟೊಮೆಟೊ ಪೂರೈಕೆಗಾಗಿ ಪ್ರಮುಖ ಕೇಂದ್ರಗಳಲ್ಲಿ ಒಟ್ಟಾಗಿ ದೊಡ್ಡ ಪ್ರಮಾಣದಲ್ಲಿ ವಿತರಣೆಯನ್ನು ನಡೆಸಲಿವೆ.


ಇದಕ್ಕಾಗಿ ಆಂಧ್ರಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರದ ಮಂಡಿಗಳಿಂದ ತಕ್ಷಣ ಟೊಮ್ಯಾಟೊ ಖರೀದಿಸಲು ನಾಫೆಡ್ ಮತ್ತು ಎನ್‌ಸಿಸಿಎಫ್‌ಗೆ ಸೂಚನೆ ನೀಡಲಾಗಿದೆ. ಈ ಸ್ಥಳಗಳಿಂದ ಟೊಮ್ಯಾಟೊ ಖರೀದಿಸಿ, ಕಳೆದ ಒಂದು ತಿಂಗಳಲ್ಲಿ ಟೊಮೆಟೊ ಗರಿಷ್ಠ ಚಿಲ್ಲರೆ ಬೆಲೆ ದಾಖಲಾಗಿರುವ ಪ್ರಮುಖ ಕೇಂದ್ರಗಳಿಗೆ ಕಳುಹಿಸಲಾಗುವುದು. ಇದು ಜನರಿಗೆ ಹೆಚ್ಚಿನ ಪರಿಹಾರವನ್ನು ನೀಡಲಿದೆ ಎಂದು ನಿರೀಕ್ಷಿಸಲಾಗಿದೆ ಮತ್ತು ಶುಕ್ರವಾರದವರೆಗೆ, ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಸಬ್ಸಿಡಿ ದರದಲ್ಲಿ ಟೊಮೆಟೊಗಳನ್ನು ಮಾರಾಟ ನಡೆಸಲಾಗುವುದು ಎನ್ನಲಾಗಿದೆ.


ಇದನ್ನೂ ಓದಿ-ಫೇಸ್ ಬುಕ್-ಇನ್ಸ್ಟಾಗ್ರಾಮ್ ಬಳಕೆದಾರರಿಗೆ ಮೇಟಾದಿಂದ ಭಾರಿ ಉಡುಗೊರೆ!


ಈ ವಾರ ಶುಕ್ರವಾರದ ವೇಳೆಗೆ, ದೆಹಲಿ-ಎನ್‌ಸಿಆರ್ ಪ್ರದೇಶದ ಗ್ರಾಹಕರಿಗೆ ಸಬ್ಸಿಡಿ ದರದಲ್ಲಿ ಚಿಲ್ಲರೆ ಮಳಿಗೆಗಳ ಮೂಲಕ ಟೊಮೆಟೊ ಸ್ಟಾಕ್ ಅನ್ನು ವಿತರಿಸಲಾಗುವುದು ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ. ಹಿಂದಿನ ತಿಂಗಳಲ್ಲಿ ಚಿಲ್ಲರೆ ಬೆಲೆಯಲ್ಲಿನ ಸಂಪೂರ್ಣ ಹೆಚ್ಚಳದ ಆಧಾರದ ಮೇಲೆ ವಿತರಣೆಗಾಗಿ ಗುರಿ ಕೇಂದ್ರಗಳನ್ನು ಗುರುತಿಸಲಾಗಿದೆ, ಅಲ್ಲಿ ಪ್ರಸ್ತುತ ಬೆಲೆಗಳು ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿವೆ.


ಇದನ್ನೂ ಓದಿ-ಜುಲೈ 31 ರಂದು ಸರ್ಕಾರಿ ನೌಕರರಿಗೆ ಸಿಗಲಿದೆ ಈ ಸಂತಸದ ಸುದ್ದಿ!


ಇತ್ತೀಚಿನ ದಿನಗಳಲ್ಲಿ ದೇಶಾದ್ಯಂತ ಟೊಮೇಟೊ ಬೆಲೆ ಏರಿಕೆಯಾಗಿದ್ದು, ಇದರಿಂದ ಜನಸಾಮಾನ್ಯರ ಮನೆಯ ಬಜೆಟ್ ಮೇಲೆ ಭಾರಿ ಪರಿಣಾಮ ಉಂಟಾಗಿದೆ. ಬರೀ ಟೊಮೇಟೊ ಮಾತ್ರವಲ್ಲ, ಇತರೆ ತರಕಾರಿಗಳ ಬೆಲೆಯೂ ಗಗನಮುಖಿಯಾಗುತ್ತಿದ್ದು, ಪೂರೈಕೆ ಸಮಸ್ಯೆ ಹಾಗೂ ಹವಾಮಾನದ ಕಾರಣದಿಂದ. ಗುಜರಾತ್ ಮತ್ತು ಮಧ್ಯಪ್ರದೇಶದ ಮಾರುಕಟ್ಟೆಗಳಲ್ಲಿ ಹೆಚ್ಚಾಗಿ ಮಹಾರಾಷ್ಟ್ರದಿಂದ ಮತ್ತು ವಿಶೇಷವಾಗಿ ಸಾತರಾ , ನಾರಾಯಣಗಾಂವ್ ಮತ್ತು ನಾಸಿಕ್‌ನಿಂದ ಟೊಮೆಟೊಗಳನ್ನು ಹೆಚ್ಚಾಗಿ ಸರಬರಾಜು. ಮಾಡಲಾಗುತ್ತಿದೆ. ದೆಹಲಿ-ಎನ್‌ಸಿಆರ್‌ನಲ್ಲಿ ಹೆಚ್ಚಿನ ಟೊಮೆಟೊ ಪೂರೈಕೆಯು ಹಿಮಾಚಲ ಪ್ರದೇಶದಿಂದ ಬರುತ್ತದೆ ಮತ್ತು ಅದರಲ್ಲಿ ಕೆಲ ಭಾಗದಲ್ಲಿ ಕರ್ನಾಟಕದ ಕೋಲಾರದಿಂದ ಬರುತ್ತದೆ.


ಇದನ್ನೂ ಓದಿ-BSNL ಗ್ರಾಹಕರಿಗೊಂದು ಬ್ಯಾಡ್ ನ್ಯೂಸ್ !


ಮೂಲಗಳ ಪ್ರಕಾರ, ನಾಸಿಕ್ ಜಿಲ್ಲೆಯಿಂದ ಹೊಸ ಟೊಮೇಟೊ ಬೆಳೆ ಶೀಘ್ರದಲ್ಲೇ ಪೂರೈಕೆಯಾಗುವ ನಿರೀಕ್ಷೆಯಿದೆ. ಇದರೊಂದಿಗೆ ಆಗಸ್ಟ್‌ನಲ್ಲಿ ನಾರಾಯಣಗಾಂವ್ ಮತ್ತು ಔರಂಗಾಬಾದ್ ಪ್ರದೇಶಗಳಿಂದ ಹೆಚ್ಚುವರಿ ಪೂರೈಕೆಯಾಗುವ ಸಾಧ್ಯತೆಯಿದೆ. ಮಧ್ಯಪ್ರದೇಶದಿಂದಲೂ ಆಗಮನ ಪ್ರಾರಂಭವಾಗುವ ನಿರೀಕ್ಷೆಯಿದೆ. ಇವುಗಳ ಪೂರೈಕೆ ಪೂರ್ಣಗೊಂಡರೆ ಮುಂದಿನ ದಿನಗಳಲ್ಲಿ ಟೊಮೇಟೊ ಬೆಲೆ ಇಳಿಕೆಯಾಗುವ ನಿರೀಕ್ಷೆ ಇದೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.