Post Office Gram Suraksha Yojana: ಅಂಚೆ ಕಚೇರಿ ತನ್ನ ಗ್ರಾಹಕರಿಗೆ ಅನೇಕ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಲೆ ಇರುತ್ತದೆ ಮತ್ತು ಅದರ ಹೆಚ್ಚಿನ ಯೋಜನೆಗಳು ಜನರಲ್ಲಿ ಸಾಕಷ್ಟು ಜನಪ್ರೆಯತೆಯನ್ನು ಹೊಂದಿವೆ. ಏಕೆಂದರೆ ಅವು ಜನರಿಗೆ ಉತ್ತಮ ಲಾಭವನ್ನು ನೀಡುತ್ತದೆ. ಅಂತಹುದೇ ಒಂದು  ಅಂಚೆ ಕಚೇರಿಯ ವಿಶೇಷ ಯೋಜನೆಯ ಬಗ್ಗೆ ಇಂದು ನಾವು ನಿಮಗೆ ಮಾಹಿತಿಯನ್ನು ನೀಡುತ್ತಿದ್ದೇವೆ. ವಿಶೇಷವಾಗಿ ಹಳ್ಳಿಯಲ್ಲಿ ವಾಸವಾಗಿರುವ ರೈತರಿಗೆ ಈ ಯೋಜನೆ ಜಾರಿಗೆ ತರಲಾಗಿದೆ. ಅದರ ಹೆಸರು ಪೋಸ್ಟ್ ಆಫೀಸ್ ಗ್ರಾಮ್ ಸುರಕ್ಷಾ ಯೋಜನಾ. ಈ ಯೋಜನೆಯು ಸಾಕಷ್ಟು ಜನಪ್ರಿಯತೆ ಹೊಂದಿದೆ. ಗ್ರಾಮೀಣ ಜನರಿಗೆ ಆರ್ಥಿಕ ಮತ್ತು ಸಾಮಾಜಿಕವಾಗಿ ಸಬಲೀಕರಣ ಮಾಡುವ ಉದ್ದೇಶ ಈ ಯೋಜನೆ ಹೊಂದಿದೆ. ಇದರ ಪ್ರಮುಖ ವಿಷಯವೆಂದರೆ ಇದರಲ್ಲಿ ನೀವು ಪ್ರತಿದಿನ ಕೇವಲ 50 ರೂಪಾಯಿಗಳನ್ನು ಹೂಡಿಕೆ ಮಾಡಬೇಕು ಮತ್ತು ನಂತರ ನೀವು ಅತ್ಯುತ್ತಮವಾದ ಆದಾಯವನ್ನು ಪಡೆಯುವಿರಿ.


COMMERCIAL BREAK
SCROLL TO CONTINUE READING

ಗ್ರಾಮ ಸುರಕ್ಷಾ ಯೋಜನೆಯ ಲಾಭ ಹೇಗೆ ಪಡೆಯಬೇಕು
ಈ ಯೋಜನೆಯಲ್ಲಿ ನೀವು ನಿತ್ಯ 50 ರೂಪಾಯಿ ಅಂದರೆ ತಿಂಗಳಿಗೆ 1500 ರೂಪಾಯಿ ಹೂಡಿಕೆ ಮಾಡಬೇಕು. ಇದರ ನಂತರ ಈ ಯೋಜನೆಯಲ್ಲಿ ನಿಮಗೆ 31 ಲಕ್ಷದಿಂದ 35 ಲಕ್ಷ ರೂಪಾಯಿಗಳ ರಿಟರ್ನ್ ಸಿಗುತ್ತದೆ. ಹೂಡಿಕೆದಾರರು ಒಂದು ವೇಳೆ ತನ್ನ 80 ವರ್ಷ ವಯಸ್ಸಿನಲ್ಲಿ ಮರಣಹೊಂದಿದರೆ, ಅವರ ನಾಮಿನಿಗೆ ಬೋನಸ್‌ ಸೇರಿದಂತೆ ಹೂಡಿಕೆಯ ಸಂಪೂರ್ಣ ಮೊತ್ತ ಸಿಗುತ್ತದೆ.


ಇದನ್ನೂ ಓದಿ-DA Arrears Update: ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಶೀಘ್ರವೇ ಸಿಗಲಿದೆ ಈ ಸಂತಸದ ಸುದ್ದಿ!


ಯಾರು ಹೂಡಿಕೆ ಮಾಡಬಹುದು?
19 ವರ್ಷದಿಂದ 55 ವರ್ಷಗಳವರೆಗೆ ಭಾರತದ ಯಾವುದೇ ನಾಗರಿಕರು ಗ್ರಾಮ ಸುರಕ್ಷಾ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಇದರಲ್ಲಿ ಕನಿಷ್ಠ 1,000 ರಿಂದ 10 ಲಕ್ಷ ರೂ.ವರೆಗೆ ಹೂಡಿಕೆ ಮಾಡಬಹುದು. ಪ್ರೀಮಿಯಂ ಪಾವತಿಸಲು ಹಲವು ಆಯ್ಕೆಗಳನ್ನೂ ನೀಡಲಾಗಿದೆ. ಹೂಡಿಕೆದಾರರು ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ ಅಥವಾ ವಾರ್ಷಿಕ ಆಧಾರದ ಮೇಲೆ ಕಂತನ್ನು ಪಾವತಿಸಬಹುದು.


ಇದನ್ನೂ ಓದಿ-PF ಚಂದಾದಾರರಿಗೊಂದು ಸಂತಸದ ಸುದ್ದಿ, ಸಿಗಲಿದೆ ಈ ಲಾಭ, ಇಲ್ಲಿದೆ ಡೀಟೇಲ್ಸ್!


ನಾವು ಯಾವಾಗ ಹಣವನ್ನು ಮರಳಿ ಪಡೆಯಬಹುದು? 
ಇದರಲ್ಲಿ ಹೂಡಿಕೆದಾರರಿಗೆ 55 ವರ್ಷಗಳಲ್ಲಿ 31,60,000 ರೂ. 58 ನೇ ವಯಸ್ಸಿನಲ್ಲಿ 33,40,000 ಮತ್ತು 60ನೇ ವಯಸಿನಲ್ಲಿ 34.60 ಲಕ್ಷ ಸಿಗುತ್ತವೆ. 80 ವರ್ಷಗಳು ಪೂರ್ಣಗೊಂಡ ನಂತರ ಸಂಪೂರ್ಣ ಮೊತ್ತವನ್ನು ಹಸ್ತಾಂತರಿಸಲಾಗುತ್ತದೆ.


ಇದನ್ನೂ ಓದಿ -Modi Government: ದೇಶಾದ್ಯಂತದ ಮಹಿಳೆಯರಿಗೆ ಮೋದಿ ಸರ್ಕಾರದ ಬಿಗ್ ಗಿಫ್ಟ್, ಸಿಗಲಿದೆ 15,000 ರೂ.ಗಳು!


ನಾಲ್ಕು ವರ್ಷಗಳ ನಂತರ ಸಾಲ ದೊರೆಯುತ್ತದೆ
ಗ್ರಾಮ ಸುರಕ್ಷಾ ಯೋಜನೆಯನ್ನು  ಖರೀದಿಸಿದ ನಂತರ ನೀವು ಸಾಲವನ್ನು ಸಹ ಪಡೆಯಬಹುದು. ಪಾಲಿಸಿಯನ್ನು ಖರೀದಿಸಿದ ದಿನಾಂಕದಿಂದ 4 ವರ್ಷಗಳ ನಂತರ ಸಾಲವನ್ನು ಪಡೆಯಬಹುದು. ಇದರ ಹೊರತಾಗಿ, ಪಾಲಿಸಿಯ ಅವಧಿಯಲ್ಲಿ ಪ್ರೀಮಿಯಂ ಪಾವತಿಸಲು ಡೀಫಾಲ್ಟ್ ಆಗಿದ್ದರೆ, ಬಾಕಿ ಇರುವ ಪ್ರೀಮಿಯಂ ಮೊತ್ತವನ್ನು ಪಾವತಿಸುವ ಮೂಲಕ ನೀವು ಅದನ್ನು ಮತ್ತೆ ಪ್ರಾರಂಭಿಸಬಹುದು.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.