Additional Pension Benefit: ದೇಶಾದ್ಯಂತ ಇರುವ ನೌಕರರ ಪಾಲಿಗೆ ಗುಡ್ ನ್ಯೂಸ್ ಪ್ರಕಟವಾಗಿದೆ. ನೀವು ಕೂಡ ನೌಕರ ವರ್ಗಕ್ಕೆ ಸೇರಿದವರಾಗಿದ್ದು ಮತ್ತು ಪಿಂಚಣಿ ಸುದ್ದಿಯ ಲಾಭವನ್ನು ಪಡೆಯಲು ಬಯಸಿದರೆ, ಮಾರ್ಚ್ 3 ನಿಮ್ಮ ಪಾಲಿಗೆ ಒಂದು ಮುಖ್ಯ ದಿನಾಂಕವಾಗಿದೆ. ಪಿಂಚಣಿಗೆ ಸಂಬಂಧಿಸಿದಂತೆ ಸರ್ಕಾರದಿಂದ ಕಾಲಕಾಲಕ್ಕೆ ಅಪ್ಡೇಟ್ ನೀಡಲಾಗುತ್ತದೆ. ಉನ್ನತ ಭವಿಷ್ಯ ನಿಧಿ ಪಿಂಚಣಿ ಕುರಿತು ಸುಪ್ರೀಂ ಕೋರ್ಟ್‌ನ ತೀರ್ಪು ಪ್ರಕಟಗೊಂಡಿದೆ ಎಂದು ಇಪಿಎಫ್‌ಒ ಇದೀಗ ಹೇಳಿದೆ. ಈ ನಿರ್ಧಾರದ ಪ್ರಕಾರ ನಿವೃತ್ತ ನೌಕರರಿಗೆ ಹೆಚ್ಚಿನ ಪಿಂಚಣಿ ನೀಡಲು ಯೋಜನೆ ರೂಪಿಸಲಾಗುತ್ತಿದೆ.
ಸರ್ಕಾರದಿಂದ ಹೊಸ ಪ್ರಾವಧಾನ
ಸುಪ್ರೀಂ ಕೋರ್ಟ್‌ನ ತೀರ್ಪಿನ ಪ್ರಕಾರ, ನಿವೃತ್ತ ನೌಕರರು ಹೆಚ್ಚಿನ ಪಿಂಚಣಿ ಪಡೆಯಲು ಅರ್ಜಿ ಸಲ್ಲಿಸಬೇಕಾಗಲಿದೆ ಎಂಬುದು ಇಲ್ಲಿ ಗಮನಾರ್ಹ. ಇದಕ್ಕಾಗಿ ಸರ್ಕಾರದಿಂದ ಹೊಸ ಪ್ರಾವಧಾನ ಆರಂಭಿಸಲಾಗಿದೆ. ಇದರೊಂದಿಗೆ, ಈ ಹಿಂದೆ ತಿರಸ್ಕೃತಗೊಂಡ ಸರ್ಕಾರಿ ನೌಕರರ ಅರ್ಜಿ ನಮೂನೆಗಳು ಕೂಡ ಪೋರ್ಟಲ್ ಲಿಂಕ್ ಮೂಲಕ ಲಭ್ಯವಿರಲಿವೆ.
ಇದನ್ನೂ ಓದಿ-Valentine's Day 2023 ಪ್ರಯುಕ್ತ ಐಆರ್ಸಿಟಿಸಿ ವಿಶೇಷ ಕೊಡುಗೆ, ಸಂಗಾತಿ ಜೊತೆಗೆ ಗೋವಾದಲ್ಲಿ 5 ದಿನ ಸುತ್ತಾಡುವ ಅವಕಾಶ
ಪಿಂಚಣಿಗೆ ಅರ್ಜಿ ಸಲ್ಲಿಸಬಹುದು
ಅಧಿಕೃತ ಮಾಹಿತಿಯ ಪ್ರಕಾರ, 1 ಸೆಪ್ಟೆಂಬರ್ 20214 ರ ಮೊದಲು ನಿವೃತ್ತರಾದವರು. ಪಿಂಚಣಿಗಾಗಿ ಈ ಅರ್ಜಿ ಸಲ್ಲಿಸಬಹುದು. ಈ ಜನರಿಗೆ ತಮ್ಮ ಅರ್ಜಿಗಳನ್ನು ಸಲ್ಲಿಸಲು ಮಾರ್ಚ್ 3 ರವರೆಗೆ ಸಮಯಾವಕಾಶ.
ಇದನ್ನೂ ಓದಿ-Gold Price Today: ಚಿನ್ನದ ಬೆಲೆಗೆ ಸಂಬಂಧಿಸಿದಂತೆ ಒಂದು ಗುಡ್ ನ್ಯೂಸ್, 2200 ರೂ.ಗಳಷ್ಟು ಅಗ್ಗವಾಯ್ತು ತೊಲೆ ಚಿನ್ನ!
ಇಪಿಎಫ್‌ಒ ಕೈಗೊಂಡ ನಿರ್ಧಾರ ಏನು?
29 ಡಿಸೆಂಬರ್ 2022 ರಂದು, 4 ನವೆಂಬರ್ 2022 ರಂದು ನೀಡಲಾದ ಹೈಕೋರ್ಟ್‌ನ ತೀರ್ಪನ್ನು ಜಾರಿಗೊಳಿಸಲು EPFO ತನ್ನ ಆರಂಭಿಕ ಆದೇಶವನ್ನು ಪ್ರಕಟಿಸಿತ್ತು. ಈ ಹಿಂದೆ ಅರ್ಜಿಯನ್ನು ತಿರಸ್ಕರಿಸಿದ ಎಲ್ಲಾ ಅರ್ಜಿದಾರರು ಹೆಚ್ಚಿನ ಪಿಂಚಣಿ ಪಡೆಯುವ ಆಯ್ಕೆಯನ್ನು ಹೊಂದಿದ್ದರು ಎಂದು ಇಪಿಎಫ್‌ಒ ತಿಳಿಸಿದೆ.
ಅರ್ಜಿ ಸಲ್ಲಿಸಬಹುದು
ನಿರ್ಧಾರದ ಪ್ಯಾರಾ 44 (ix) ನಲ್ಲಿ ಒಳಗೊಂಡಿರುವ ನಿರ್ದೇಶನಕ್ಕೆ ಅನುಗುಣವಾಗಿ (01.09.2014 ರ ಮೊದಲು ನಿವೃತ್ತಿಯ ಸಂದರ್ಭದಲ್ಲಿ), ಆಯ್ಕೆಯ ಪರಿಶೀಲನೆಗಾಗಿ ಅರ್ಜಿಯನ್ನು ಸಲ್ಲಿಸಲು ಆನ್‌ಲೈನ್ ಸೌಲಭ್ಯವನ್ನು ಪೋರ್ಟಲ್‌ನಲ್ಲಿ ಇಂಟಿಗ್ರೇಟೆಡ್ ಪೋರ್ಟಲ್ ಸದಸ್ಯರಲ್ಲಿ ಪರಿಚಯಿಸಲಾಗಿದೆ ಎಂಬುದು ಇಲ್ಲಿ ಉಲ್ಲೇಖನೀಯ. ಇಂಟರ್ಫೇಸ್ ಲಭ್ಯವಿದೆ. ಉದ್ಯೋಗಿ ಆಯ್ಕೆಯನ್ನು ಕ್ಲಿಕ್ ಮಾಡುವ ಮೂಲಕ ಅರ್ಜಿ ಸಲ್ಲಿಸಬಹುದು ಎಂದರ್ಥ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.