Good News For Liquor Lovers: ಬಜೆಟ್‌ನಲ್ಲಿ ಘೋಷಣೆ ಮಾಡಿದಂತೆ ನೈಟ್ ಅವಧಿ ವಿಸ್ತರಣೆಗೆ ನಗರಾಭಿವೃದ್ಧಿ ಇಲಾಖೆ ಅಸ್ತು ಎಂದಿದ್ದು ಮದ್ಯ ಪ್ರಿಯರಿಗೆ ಗುಡ್ ನ್ಯೂಸ್ನೀಡಿಎ. ಬಿಬಿಎಂಪಿ ವ್ಯಾಪ್ತಿಯಲ್ಲಿನ ಬಾರ್, ಹೊಟೇಲ್, ಕ್ಲಬ್, ಸ್ಟಾರ್ ಹೊಟೇಲ್‌ಗಳು, ಬೋರ್ಡಿಂಗ್ ಹೌಸ್‌ಗಳಲ್ಲಿ ಮಧ್ಯರಾತ್ರಿ 01ಗಂಟೆವರೆಗೂ ವಹಿವಾಟು ನಡೆಸಲು ಅವಕಾಶ ಕಲ್ಪಿಸಿದೆ. ಇದರಿಂದಾಗಿ, ಈವರೆಗೆ ಅನಧಿಕೃವಾಗಿ ಚಾಲ್ತಿಯಲ್ಲಿದ್ದ ಬೆಂಗಳೂರಿನ ನೈಟ್‌ಲೈಫ್‌ಗೆ ರಾಜ್ಯ ಸರ್ಕಾರ ಅಧಿಕೃತ ಮುದ್ರೆ ಬಿದ್ದಂತಾಗಿದೆ. 


COMMERCIAL BREAK
SCROLL TO CONTINUE READING

ಮಧ್ಯರಾತ್ರಿ 1 ರವರೆಗೆ ಮದ್ಯ ಪೂರೈಕೆಗೆ ಅವಕಾಶ!
2024-25 ಸಾಲಿನ ಬಜೆಟ್‌ನಲ್ಲಿ ಘೋಷಿಸಿದಂತೆ ಈ ಪ್ರಸ್ತಾವನೆಗೆ ಆರ್ಥಿಕ ಇಲಾಖೆ (Department of Finance) ಒಪ್ಪಿಗೆ ಹಿನ್ನೆಲೆಯಲ್ಲಿ ನಿರ್ಬಂಧವನ್ನು ವಿಸ್ತರಿಸಲಾಗಿದೆ ಎಂದು ನಗರಾಭಿವೃದ್ಧಿ ಇಲಾಖೆ (Department of Urban Development) ಆದೇಶದಲ್ಲಿ ತಿಳಿಸಿದೆ. 


ನಗರಾಭಿವೃದ್ಧಿ ಆದೇಶದ ಪ್ರಕಾರ, ಕ್ಲಬ್‌ಗಳು (ಸಿಎಲ್ 4 ಪರವಾನಗಿ) ಸ್ಟಾರ್ ಹೊಟೇಲ್‌ಗಳು(ಸಿಎಲ್ 6), ಹಾಗೂ ಸಿಎಲ್ 7 ಮತ್ತು ಸಿಎಲ್7ಡಿ ಪರವಾನಗಿಯಿರುವ ಹೋಟೆಲ್ ಮತ್ತು ಲಾಡ್ಜ್‌ಗಳು ಓಪನ್ ಗೆ  ಬೆಳಗ್ಗೆ 9ರಿಂದ ಮಧ್ಯರಾತ್ರಿ 1ರವರೆಗೆ ಅನುಮತಿ ನೀಡಲಾಗಿದೆ. ಇನ್ನೂ ಸಿಎಲ್ 9 ಪರವಾನಗಿ ಹೊಂದಿದ ರಿಫ್ರೆಷ್‌ ಮೆಂಟ್ ರೂಂ (ಬಾರ್)ಗಳು ಬೆಳಗ್ಗೆ 10ರಿಂದ ರಾತ್ರಿ 1ರವರೆಗೆ ವಹಿವಾಟು ನಡೆಸಬಹುದು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. 


ಇದನ್ನೂ ಓದಿ- Gruha Lakshmi: ಮಹಿಳೆಯರಿಗೆ ಗುಡ್‌ ನ್ಯೂಸ್‌ ಕೊಟ್ಟ ಸರ್ಕಾರ: ಈ ದಿನ ಖಾತೆ ಸೇರಲಿದೆ ಗೃಹಲಕ್ಷ್ಮಿ ಹಣ


ಈವರೆಗೆ ಹೋಟೆಲ್, ಮಾರುಕಟ್ಟೆ, ಬಜಾರ್ ಗಳು ಸೇರಿದಂತೆ ಇನ್ನಿತರ ವಾಣಿಜ್ಯ ಚಟುವಟಿಕೆಗಳು ಗ ಮಧ್ಯರಾತ್ರಿವರೆಗೆ 1 ಗಂಟೆಯವರೆಗೆ ತೆರೆದಿರಲು ಈ ಹಿಂದೆಯೇ ಅವಕಾಶ ನೀಡಲಾಗಿತ್ತು. ಆದರ ಜತೆಗೆ ಇದೀಗ ಮದ್ಯ ಮಾರಾಟ ಮಾಡುವ ಬಾರ್ ಹೋಟೆಲ್, ಪಬ್, ಕ್ಲಬ್, ಬಾರ್‌ಗಳೂ ಮಧ್ಯರಾತ್ರಿ 1ಗಂಟೆಯವರೆಗೆ ತೆರೆಯಬಹುದು ಎಂದು ಆದೇಶಿಸಲಾಗಿದೆ. 


ಆಮೂಲಕ ಈವರೆಗೆ ರಾತ್ರಿ 10 ಗಂಟೆಗೆ ಮುಚ್ಚಲಾಗುತ್ತಿದ್ದ ಮದ್ಯ ಮಾರಾಟ ಹೋಟೆಲ್, ಕ್ಲಬ್, ಬಾರ್‌ಗಳು ಇನ್ನು ಮುಂದೆ ಮಧ್ಯರಾತ್ರಿ 1 ಗಂಟೆಯ ವರೆಗೆ ವ್ಯಾಪಾರ ಮಾಡಬಹುದಾಗಿದೆ.


ನಗರದಲ್ಲಿ ರಾತ್ರಿ ವೇಳೆಯಲ್ಲೂ ವ್ಯಾಪಾರ- ವಹಿವಾಟು ಹೆಚ್ಚಿಸುವ ಉದ್ದೇಶದೊಂದಿಗೆ 2016ರಲ್ಲಿ ಹೋಟೆಲ್, ರೆಸ್ಟೋರೆಂಟ್, ಮಾರುಕಟ್ಟೆಗಳನ್ನು ತೆರೆಯಲು ಅವಕಾಶ ನೀಡಲಾಗಿತ್ತು.  ಹಾಗಿದ್ದು ಪೊಲೀಸ್ ಇಲಾಖೆ ಸಾರ್ವಜನಿಕ ವಲಯದ ವಿರೋದದಿಂದ ರಾತ್ರಿ 11ರ ವೇಳೆಗೆ ಎಲ್ಲ ವ್ಯಾಪಾರ ವಹಿವಾಟುಗಳು ಸ್ಥಗಿತಗೊಳ್ಳುತ್ತಿದ್ದವು. 


ಇದನ್ನೂ ಓದಿ- ಉಳಿತಾಯ ಖಾತೆಯಲ್ಲಿ ಎಫ್‌ಡಿ ಬಡ್ಡಿ ಪಡೆಯಲು ನಿಮ್ಮ ಖಾತೆಗೆ ಇಂದೇ ಸೇರಿಸಿ ಈ ವೈಶಿಷ್ಟ್ಯ!


ಬೆಂಗಳೂರಿನ ನೈಟ್‌ಲೈಫ್ ವಿಸ್ತರಣೆ (Bangalore Nightlife Expansion)  ಬಗ್ಗೆ  ಕಳೆದ ಫೆಬ್ರವರಿಯಲ್ಲಿ ಸಿಎಂ ಸಿದ್ದರಾಮಯ್ಯ ಮಂಡಿಸಿದ್ದ ರಾಜ್ಯ ಬಜೆಟ್‌ನಲ್ಲಿಯೇ (State Budget) ಉಲ್ಲೇಖಿಸಿದ್ದು, ಮಧ್ಯರಾತ್ರಿ 1 ಗಂಟೆಯವರೆಗೆ ವ್ಯಾಪಾರ -ವಹಿವಾಟಿಗೆ ಅವಕಾಶ ನೀಡುವುದಾಗಿ ಘೋಷಿಸಿದ್ದರು. ಅದರಂತೆ ಇದೀಗ ಬೆಂಗಳೂರಿನ ನೈಟ್‌ ಲೈಫ್ ಹೊಸ ರೂಪದಲ್ಲಿ ಚಾಲನೆ ನೀಡುವಂತೆ ರಾಜ್ಯ ಸರ್ಕಾರ ಆದೇಶಿಸಿತ್ತು ಎಂಬುದು ಗಮನಾರ್ಹವಾಗಿದೆ.  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.