ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ : ಸರ್ಕಾರದ ಈ ನಿರ್ಧಾರದಿಂದ ಸಿಗಲಿದೆ ಭಾರೀ ಲಾಭ
ಕೊರೊನಾ ಸಾಂಕ್ರಾಮಿಕದ ನಂತರ, ಈಗ ಪರಿಸ್ಥಿತಿ ಕ್ರಮೇಣ ಸಹಜ ಸ್ಥಿತಿಗೆ ಮರಳುತ್ತಿದೆ. ಎಲ್ಲಾ ಪ್ರಮುಖ ರೈಲುಗಳನ್ನು ಶೀಘ್ರವೇ ಆರಂಭಿಸಲು ಪ್ರಯತ್ನಿಸಲಾಗುವುದು ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ನವದೆಹಲಿ : ರೈಲುಗಳಿಂದ ಸ್ಪೆಷಲ್ ಟ್ಯಾಗ್ ಅನ್ನು ತೆಗೆದುಹಾಕುವುದಾಗಿ ಮತ್ತು ಹೆಚ್ಚಿಸಿದ್ದ ಪ್ರಯಾಣ ದರವನ್ನು ಶೀಘ್ರದಲ್ಲೇ ಕಡಿತಗೊಳಿಸುವುದಾಗಿ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಘೋಷಿಸಿದ್ದಾರೆ. ಇನ್ನೆರಡು ಎರಡು ತಿಂಗಳಲ್ಲಿ ದೇಶದಲ್ಲಿ ರೈಲುಗಳ ಸಂಚಾರ (Train travel) ಸಾಮಾನ್ಯವಾಗಲಿದೆ ಎಂದವರು ಹೇಳಿದ್ದಾರೆ. ಇದಕ್ಕಾಗಿ ರಾಜ್ಯ ಸರ್ಕಾರಗಳ ಜೊತೆ ಮಾತುಕತೆ ನಡೆಯುತ್ತಿದ್ದು, ಪ್ರಯಾಣಿಕರು ಕರೋನಾ (Coronavirus) ಅವಧಿಯ ಮೊದಲು ಇದ್ದ ವ್ಯವಸ್ಥೆಯ ಪ್ರಕಾರವೇ ಕಡಿಮೆ ದರವನ್ನು ಪಾವತಿಸಬಹುದು ಎಂದು ಹೇಳಿದ್ದಾರೆ.
ರೈಲುಗಳ ವಿಶೇಷ ಟ್ಯಾಗ್ ತೆಗೆದುಹಾಕಲಾಗುವುದು :
ಒಡಿಶಾದ ಜಾರ್ಸುಗುಡಾ ಪ್ರವಾಸದ ವೇಳೆ ರೈಲ್ವೆ (Indian railway) ಸಚಿವರು ಈ ವಿಷಯ ತಿಳಿಸಿದ್ದಾರೆ. ಇನ್ನೆರಡು-ಎರಡೂವರೆ ತಿಂಗಳಲ್ಲಿ ರೈಲುಗಳಲ್ಲಿ ವಿಶೇಷ ಟ್ಯಾಗ್ ತೆಗೆದುಹಾಕಲಾಗುವುದು ಎಂದು ಹೇಳಿದ್ದಾರೆ. ಕೊರೊನಾ (Coronavirus) ಸಾಂಕ್ರಾಮಿಕದ ನಂತರ, ಈಗ ಪರಿಸ್ಥಿತಿ ಕ್ರಮೇಣ ಸಹಜ ಸ್ಥಿತಿಗೆ ಮರಳುತ್ತಿದೆ. ಎಲ್ಲಾ ಪ್ರಮುಖ ರೈಲುಗಳನ್ನು ಶೀಘ್ರವೇ ಆರಂಭಿಸಲು ಪ್ರಯತ್ನಿಸಲಾಗುವುದು ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ತಿಳಿಸಿದ್ದಾರೆ.
ಇದನ್ನೂ ಓದಿ : PM Kisan: ದ್ವಿಗುಣಗೊಳ್ಳಲಿದೆಯೇ ಪಿಎಂ ಕಿಸಾನ್ ಹಣ? ನಿಮ್ಮ ಕಂತಿನ ಸ್ಥಿತಿಯನ್ನು ಈ ರೀತಿ ಪರಿಶೀಲಿಸಿ
ಮತ್ತೆ ಸಿಗಲಿದೆ ರಿಯಾಯಿತಿ :
ಹಿರಿಯ ನಾಗರಿಕರು (Senior citizen), ವಿಕಲಚೇತನರು ಮತ್ತು ವಿಶೇಷ ವರ್ಗದ ಪ್ರಯಾಣಿಕರಿಗೆ ಮೊದಲಿನಂತೆ ಪ್ರಯಾಣ ದರದಲ್ಲಿ ರಿಯಾಯಿತಿ ಸಿಗಲಿದೆ ಎಂದು ರೈಲ್ವೆ ಸಚಿವರು ತಿಳಿಸಿದ್ದಾರೆ. ರೈಲ್ವೆ ಸಚಿವಾಲಯವು ಪರಿಸ್ಥಿತಿಯ ಮೇಲೆ ನಿಗಾ ಇರಿಸಿದೆ ಎಂದವರು ಹೇಳಿದ್ದಾರೆ. .
ಅಂಚೆ ಕಚೇರಿಗಳಿಂದ ಟಿಕೆಟ್ ಖರೀದಿ :
ದೇಶದ 25 ಸಾವಿರಕ್ಕೂ ಹೆಚ್ಚು ಅಂಚೆ ಕಚೇರಿಗಳಲ್ಲಿಯೂ ರೈಲು ಟಿಕೆಟ್‌ಗಳನ್ನು (Train ticket) ಮಾರಾಟ ಮಾಡಲಾಗುತ್ತಿದೆ ಎಂದು ಸಚಿವರು ಹೇಳಿದ್ದಾರೆ. ಸಾರ್ವಜನಿಕರು ಇದರಲ್ಲಿ ಆಸಕ್ತಿ ತೋರಿಸುತ್ತಿದ್ದು, ಇದರ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಲಾಗುವುದು ಎಂದಿದ್ದಾರೆ. ಅಂಚೆ ಇಲಾಖೆ (Post office) ಭವಿಷ್ಯ ಬಂಗಾರವಾಗಿದೆ ಎಂಡು ಅವರು ಹೇಳಿದ್ದಾರೆ. ಜನರು ಸ್ಪೀಡ್ ಪೋಸ್ಟ್ ಮತ್ತು ಪಾರ್ಸೆಲ್ ವ್ಯವಸ್ಥೆಯನ್ನು ಇಷ್ಟಪಡುತ್ತಾರೆ. ಹಲವು ಹೊಸ ಯೋಜನೆಗಳ ಮೂಲಕ ಅಂಚೆ ಇಲಾಖೆ ಸುಧಾರಣೆಯಾಗುತ್ತಿದೆ ಎಂದಿದ್ದಾರೆ.
ಇದನ್ನೂ ಓದಿ : Petrol Diesel Price: ಯಾವ ರೀತಿ ಕಡಿಮೆಯಾಗಲಿದೆ ಪೆಟ್ರೋಲ್-ಡೀಸೆಲ್ ದರ? ಇಲ್ಲಿದೆ ಸೂತ್ರ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.