PM Kisan: ದ್ವಿಗುಣಗೊಳ್ಳಲಿದೆಯೇ ಪಿಎಂ ಕಿಸಾನ್ ಹಣ? ನಿಮ್ಮ ಕಂತಿನ ಸ್ಥಿತಿಯನ್ನು ಈ ರೀತಿ ಪರಿಶೀಲಿಸಿ

PM Kisan 10th Installment:  ಮುಂದಿನ ವರ್ಷ ಹಲವು ರಾಜ್ಯಗಳಲ್ಲಿ ಚುನಾವಣೆ ನಡೆಯಲಿದೆ. ಇದಕ್ಕೂ ಮೊದಲು ಕೇಂದ್ರ ಸರ್ಕಾರ ರೈತರಿಗೆ ದೊಡ್ಡ ಉಡುಗೊರೆ ನೀಡಬಹುದು ಎಂದು ನಿರೀಕ್ಷಿಸಲಾಗುತ್ತಿದೆ.   

Written by - Yashaswini V | Last Updated : Nov 11, 2021, 01:04 PM IST
  • ಇತ್ತೀಚೆಗೆ ಬಿಹಾರದ ಕೃಷಿ ಸಚಿವರು ತೋಮರ್ ಅವರನ್ನು ಭೇಟಿ ಮಾಡಿದ್ದರು
  • ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಹಣ ದುಪ್ಪಟ್ಟಾಗಬಹುದು
  • ಪಿಎಂ ಕಿಸಾನ್‌ನ 10 ನೇ ಕಂತು ಡಿಸೆಂಬರ್ 15 ರೊಳಗೆ ಬರಲಿದೆ
PM Kisan: ದ್ವಿಗುಣಗೊಳ್ಳಲಿದೆಯೇ ಪಿಎಂ ಕಿಸಾನ್ ಹಣ? ನಿಮ್ಮ ಕಂತಿನ ಸ್ಥಿತಿಯನ್ನು ಈ ರೀತಿ ಪರಿಶೀಲಿಸಿ title=
PM Kisan 10th Installment

PM Kisan 10th Installment: ಮುಂದಿನ ವರ್ಷ 2022ರಲ್ಲಿ ಉತ್ತರ ಪ್ರದೇಶ, ಪಂಜಾಬ್ ಸೇರಿದಂತೆ ಹಲವು ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೂ ಮುನ್ನ ಕೇಂದ್ರ ಸರ್ಕಾರ ರೈತರಿಗೆ ದೊಡ್ಡ ಉಡುಗೊರೆ ನೀಡುವ ನಿರೀಕ್ಷೆಯಿದೆ. ಡಿಸೆಂಬರ್ 15 ರ ವರೆಗೆ ಬರುವ ಪಿಎಂ ಕಿಸಾನ್ ಕಂತಿನಲ್ಲಿ 2000 ರೂ. ಬದಲಿಗೆ 4000 ರೂ. ಸಿಗುವ ನಿರೀಕ್ಷೆಯಿದೆ ಎಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಸರ್ಕಾರ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ.

ಕಂತಿನ ಹಣ ದುಪ್ಪಟ್ಟು ಬರಬಹುದು:
ಮಾಧ್ಯಮ ವರದಿಗಳ ಪ್ರಕಾರ, ಕೇಂದ್ರ ಸರ್ಕಾರವು ರೈತರಿಗೆ ವಾರ್ಷಿಕ 6000 ಬದಲಿಗೆ 12000 ರೂಗಳನ್ನು ಮೂರು ಸಮಾನ ಕಂತುಗಳಲ್ಲಿ ನೀಡಬಹುದು. ಇದರ ಹೊರತಾಗಿ, ಸಾಮಾನ್ಯ ರೈತರು 2024 ರ ಮೊದಲು ಅಥವಾ ಡಿಸೆಂಬರ್ 2021 ನಲ್ಲಿಯೇ, ಸರ್ಕಾರವು ಪಿಎಂ ಕಿಸಾನ್ (PM Kisan Samman Nidhi) ಮೊತ್ತವನ್ನು ಹೆಚ್ಚಿಸಬಹುದು ಎಂದು ಹೇಳಲಾಗುತ್ತಿದೆ. ಕಳೆದ ಮೂರು ತಿಂಗಳಿಂದ ಈ ವಿಷಯ ಭಾರೀ ಚರ್ಚೆಯಾಗುತ್ತಿದೆ. 

 ಬಿಹಾರದ ಕೃಷಿ ಸಚಿವ ಅಮರೇಂದ್ರ ಪ್ರತಾಪ್ ಸಿಂಗ್ ಅವರು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮತ್ತು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ದೆಹಲಿಯಲ್ಲಿ ಭೇಟಿಯಾದಾಗ ಈ ಚರ್ಚೆ ಬಲಗೊಂಡಿತು. ಮಾಧ್ಯಮ ವರದಿಗಳಲ್ಲಿ, ಶೀಘ್ರದಲ್ಲೇ ಪ್ರಧಾನಿ ಕಿಸಾನ್ ಸಮ್ಮಾನ್ ನಿಧಿಯ ಮೊತ್ತವು ದ್ವಿಗುಣಗೊಳ್ಳಲಿದೆ ಮತ್ತು ಸರ್ಕಾರವು ಅದಕ್ಕೆ ಸಂಪೂರ್ಣ ಸಿದ್ಧತೆ ನಡೆಸಿದೆ ಎಂದು ವರದಿಯಾಗಿದೆ. 

ಇದನ್ನೂ ಓದಿ- ಪೆಟ್ರೋಲ್-ಡೀಸೆಲ್, ಅಡುಗೆ ಎಣ್ಣೆ ಬೆಲೆ ನಂತರ ಅಗ್ಗವಾಯಿತು ಬೇಳೆ ಬೆಲೆ!

ಡಿಸೆಂಬರ್ 15ರೊಳಗೆ ಮುಂದಿನ ಕಂತು ಖಾತೆ ಸೇರುವ ನಿರೀಕ್ಷೆ:
ಇಲ್ಲಿಯವರೆಗೆ ಕೇಂದ್ರದ ಮೋದಿ ಸರ್ಕಾರವು ಭಾರತದ 11.37 ಕೋಟಿ ರೈತರ ಖಾತೆಗಳಿಗೆ 1.58 ಲಕ್ಷ ಕೋಟಿ ರೂಪಾಯಿಗಳನ್ನು ವರ್ಗಾಯಿಸಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ  (PM KISAN scheme) ಯ 10 ನೇ ಕಂತನ್ನು 15 ಡಿಸೆಂಬರ್ 2021 ರೊಳಗೆ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ಯೋಜಿಸುತ್ತಿದೆ. ಕಳೆದ ವರ್ಷ 25 ಡಿಸೆಂಬರ್ 2020 ರಂದು ಸರ್ಕಾರವು ರೈತರಿಗೆ ಹಣವನ್ನು ವರ್ಗಾಯಿಸಿದೆ ಎಂಬುದು ಗಮನಿಸಬೇಕಾದ ಸಂಗತಿ.

ಇದನ್ನೂ ಓದಿ- Petrol Diesel Price: ಯಾವ ರೀತಿ ಕಡಿಮೆಯಾಗಲಿದೆ ಪೆಟ್ರೋಲ್-ಡೀಸೆಲ್ ದರ? ಇಲ್ಲಿದೆ ಸೂತ್ರ

ನಿಮ್ಮ ಕಂತು ಸ್ಥಿತಿಯನ್ನು ಈ ರೀತಿ ಪರಿಶೀಲಿಸಿ:
>> ಮೊದಲು pmkisan.gov.in ವೆಬ್‌ಸೈಟ್‌ಗೆ ಹೋಗಿ.
>> ನಂತರ ರೈತ ವೆಬ್‌ಸೈಟ್‌ನಲ್ಲಿ 'ಫಾರ್ಮರ್ಸ್ ಕಾರ್ನರ್' ಆಯ್ಕೆಯನ್ನು ಕ್ಲಿಕ್ ಮಾಡಿ.
>> ಇಲ್ಲಿ ನೀವು ಫಲಾನುಭವಿಯ ಸ್ಥಿತಿಯ ಮೇಲೆ ಕ್ಲಿಕ್ ಮಾಡಿ.
>> ಇದರಲ್ಲಿ ರೈತರು ತಮ್ಮ ಪ್ರದೇಶ, ರಾಜ್ಯ, ಜಿಲ್ಲೆ, ಉಪಜಿಲ್ಲೆ, ಬ್ಲಾಕ್ ಮತ್ತು ಗ್ರಾಮಕ್ಕೆ ಸಂಬಂಧಿಸಿದ ಮಾಹಿತಿಯನ್ನು ಈ ವಿಭಾಗದಲ್ಲಿ ತುಂಬಬೇಕಾಗುತ್ತದೆ.
>> ಇದಾದ ನಂತರ 'Get Report' ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿದ ನಂತರ ಸಂಪೂರ್ಣ ಪಟ್ಟಿ ನಿಮ್ಮ ಮುಂದೆ ಬರುತ್ತದೆ.
>> ಇದರ ನಂತರ, ಈ ಪಟ್ಟಿಯಲ್ಲಿ ನಿಮ್ಮ ಕಂತಿನ ಸ್ಥಿತಿಯನ್ನು ನೀವು ನೋಡಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News