ನವದೆಹಲಿ: ಪಡಿತರ ಚೀಟಿದಾರರಿಗೆ(Ration Card Holders) ಸಿಹಿಸುದ್ದಿಯೊಂದು ಬಂದಿದೆ. ಮೊದಲ ಬಾರಿಗೆ ಪಡಿತರ ಚೀಟಿ ಫಲಾನುಭವಿಗಳಿಗೆ ಸರ್ಕಾರ ಹಲವು ದೊಡ್ಡ ಸೌಲಭ್ಯಗಳನ್ನು ನೀಡುತ್ತಿದೆ. ಇದರ ಅಡಿಯಲ್ಲಿ ಈಗ ನೀವು ಮನೆಯಲ್ಲಿ ಕುಳಿತು ಸುಲಭವಾಗಿ ಪಡಿತರಕ್ಕೆ ಸಂಬಂಧಿಸಿದ ಸೇವೆಗಳನ್ನು ಪಡೆಯುತ್ತೀರಿ. ಈಗ ಪಡಿತರ ಚೀಟಿಗೆ ಸಂಬಂಧಿಸಿದ ಸೇವೆಗಳು ದೇಶಾದ್ಯಂತ 3.7 ಲಕ್ಷಕ್ಕೂ ಹೆಚ್ಚು ಸಾಮಾನ್ಯ ಸೇವಾ ಕೇಂದ್ರಗಳಲ್ಲಿ (ಸಿಎಸ್‌ಸಿ) ಲಭ್ಯವಿರುತ್ತವೆ. ಈ ಸೇವೆಗಳಲ್ಲಿ ನೀವು ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವುದು, ನವೀಕರಿಸುವುದು ಮತ್ತು ಆಧಾರ್‌ನೊಂದಿಗೆ ಲಿಂಕ್ ಮಾಡುವಂತಹ ಸೌಲಭ್ಯ(Ration Card Services)ಗಳನ್ನು ಪಡೆಯುತ್ತೀರಿ. ಸರ್ಕಾರದ ಈ ಕ್ರಮದಿಂದ ದೇಶಾದ್ಯಂತ 23.64 ಕೋಟಿ ಪಡಿತರ ಚೀಟಿದಾರರಿಗೆ ಅನುಕೂಲವಾಗಲಿದೆ. ಇದರ ಸಂಪೂರ್ಣ ವಿವರಗಳನ್ನು ತಿಳಿಯಿರಿ…


COMMERCIAL BREAK
SCROLL TO CONTINUE READING

ಇದನ್ನೂ ಓದಿ: Jio New Tariff: Airtel-Vi ಬಳಿಕ ಇದೀಗ ತನ್ನ ಗ್ರಾಹಕರಿಗೆ ಶಾಕ್ ನೀಡಿದ Jio! ರೂ.480 ರವರೆಗೆ ದುಬಾರಿಯಾದ ಪ್ಲಾನ್ಸ್


ನೀವು ಈ ಪ್ರಮುಖ ಸೇವೆಗಳನ್ನು ಪಡೆಯುತ್ತೀರಿ


1. ನೀವು ಸಾಮಾನ್ಯ ಸೇವಾ ಕೇಂದ್ರದ ಮೂಲಕ ಪಡಿತರ ಚೀಟಿಯನ್ನು ನವೀಕರಿಸಬಹುದು.


2. ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಬಹುದು.


3. ನಿಮ್ಮ ಪಡಿತರ ಚೀಟಿಯ ನಕಲು ಮುದ್ರಣವನ್ನು ಸಹ ನೀವು ಪಡೆಯಬಹುದು.


4. ಪಡಿತರ ಲಭ್ಯತೆಯ ಬಗ್ಗೆಯೂ ನೀವು ತಿಳಿದುಕೊಳ್ಳಬಹುದು.


5. ನೀವು ಸಾಮಾನ್ಯ ಸೇವಾ ಕೇಂದ್ರದ ಮೂಲಕ ಪಡಿತರ ಚೀಟಿಗೆ ಸಂಬಂಧಿಸಿದ ದೂರುಗಳನ್ನು ಸಹ ಮಾಡಬಹುದು.


6. ಪಡಿತರ ಚೀಟಿ ಕಳೆದು ಹೋದರೆ ಹೊಸ ಪಡಿತರ ಚೀಟಿಗಾಗಿಯೂ ಅರ್ಜಿ ಸಲ್ಲಿಸಬಹುದು.


ಇದನ್ನೂ ಓದಿ: EPF Alert! ಶೀಘ್ರದಲ್ಲಿಯೇ ಈ ಅಪ್ಡೇಟ್ ಮಾಡಿಕೊಳ್ಳಿ, ಇಲ್ದಿದ್ರೆ ಮುಂದಿನ ತಿಂಗಳಿಂದ ನಿಂತುಹೋಗಲಿದೆ ನಿಮ್ಮ EPF ಕೊಡುಗೆ


ಡಿಜಿಟಲ್ ಇಂಡಿಯಾ ನೀಡಿರುವ ಮಾಹಿತಿ


ಡಿಜಿಟಲ್ ಇಂಡಿಯಾ(Digital India) ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ಮಾಹಿತಿಯನ್ನು ನೀಡಿದೆ, ‘ಸಾಮಾನ್ಯ ಸೇವಾ ಕೇಂದ್ರ ಸುವಿಧಾ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ(Public Distribution Department)ಯೊಂದಿಗೆ ಎಂಒಯುಗೆ ಸಹಿ ಹಾಕಿದೆ. ಇದರೊಂದಿಗೆ ದೇಶಾದ್ಯಂತ 3.70 ಲಕ್ಷ ಸಿಎಸ್‌ಸಿಗಳ ಮೂಲಕ ಪಡಿತರ ಚೀಟಿ ಸೇವೆಗಳು ಲಭ್ಯವಾಗಲಿವೆ. ಈ ಪಾಲುದಾರಿಕೆಯು ದೇಶಾದ್ಯಂತ 23.64 ಕೋಟಿಗೂ ಹೆಚ್ಚು ಪಡಿತರ ಚೀಟಿದಾರರಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.