Jio New Tariff: Airtel-Vi ಬಳಿಕ ಇದೀಗ ತನ್ನ ಗ್ರಾಹಕರಿಗೆ ಶಾಕ್ ನೀಡಿದ Jio! ರೂ.480 ರವರೆಗೆ ದುಬಾರಿಯಾದ ಪ್ಲಾನ್ಸ್

Reliance Jio Latest News - ಏರ್‌ಟೆಲ್ (Airtel) ಮತ್ತು ವೊಡಾಫೋನ್-ಐಡಿಯಾ (Vi) ಕಂಪನಿಗಳು ತಮ್ಮ ಪ್ಲಾನ್‌ಗಳನ್ನು 500 ರೂ.ವರೆಗೆ ಹೆಚ್ಚಿಸುವ ಮೂಲಕ ತಮ್ಮ ಗ್ರಾಹಕರಿಗೆ ದೊಡ್ಡ ಶಾಕ್ ನೀಡಿವೆ. ಇದೀಗ ಈ ಪಟ್ಟಿಗೆ ರಿಲಯನ್ಸ್ ಜಿಯೋ (Reliance Jio) ಕೂಡ ಸೇರಿಕೊಂಡಿದೆ. ಜಿಯೋ ತನ್ನ ಆಯ್ದ ಕೆಲವು ಪ್ರಿಪೇಯ್ಡ್ ಯೋಜನೆಗಳ (Jio Pre-Paid Plans) ಬೆಲೆಗಳಲ್ಲಿ ಹೆಚ್ಚಳವನ್ನು ಭಾನುವಾರ ಪ್ರಕಟಿಸಿದೆ. 

Written by - Nitin Tabib | Last Updated : Nov 28, 2021, 09:22 PM IST
  • ಏರ್ಟೆಲ್, ವೊಡಾಫೋನ್-ಐಡಿಯಾ ಬಳಿಕ ತನ್ನ ಗ್ರಾಹಕರಿಗೆ ಶಾಕ್ ನೀಡಿದ ರಿಲಯನ್ಸ್ ಜಿಯೋ.
  • ತನ್ನ ರಿಚಾರ್ಜ್ ಯೋಜನೆಗಳ ಬೆಲೆಯಲ್ಲಿ ರೂ.480ರವರೆಗೆ ಹೆಚ್ಚಳ.
  • ಯಾವ ಯಾವ ಯೋಜನೆಗಳ ಬೆಲೆ ಎಷ್ಟಾಗಿದೆ ತಿಳಿಯಲು ಸುದ್ದಿ ಓದಿ.
Jio New Tariff: Airtel-Vi ಬಳಿಕ ಇದೀಗ ತನ್ನ ಗ್ರಾಹಕರಿಗೆ ಶಾಕ್ ನೀಡಿದ Jio! ರೂ.480 ರವರೆಗೆ ದುಬಾರಿಯಾದ ಪ್ಲಾನ್ಸ್  title=
Reliance Jio Latest News (File Photo)

Reliance Jio Latest News - ಏರ್‌ಟೆಲ್ (Airtel) ಮತ್ತು ವೊಡಾಫೋನ್-ಐಡಿಯಾ (Vi) ಕಂಪನಿಗಳು ತಮ್ಮ ಪ್ಲಾನ್‌ಗಳನ್ನು 500 ರೂ.ವರೆಗೆ ಹೆಚ್ಚಿಸುವ ಮೂಲಕ ತಮ್ಮ ಗ್ರಾಹಕರಿಗೆ ದೊಡ್ಡ ಶಾಕ್ ನೀಡಿವೆ. ಇದೀಗ ಈ ಪಟ್ಟಿಗೆ ರಿಲಯನ್ಸ್ ಜಿಯೋ (Reliance Jio) ಕೂಡ ಸೇರಿಕೊಂಡಿದೆ. ಜಿಯೋ ತನ್ನ ಆಯ್ದ ಕೆಲವು ಪ್ರಿಪೇಯ್ಡ್ ಯೋಜನೆಗಳ (Jio Pre-Paid Plans) ಬೆಲೆಗಳಲ್ಲಿ ಹೆಚ್ಚಳವನ್ನು ಭಾನುವಾರ ಪ್ರಕಟಿಸಿದೆ. ಜಿಯೋ (Jio New Tariff) ತನ್ನ ಕೆಲವು ಜನಪ್ರಿಯ ಯೋಜನೆಗಳನ್ನು ರೂ 480 ವರೆಗೆ ಹೆಚ್ಚಿಸುವ ಮೂಲಕ ಗ್ರಾಹಕರಿಗೆ ದೊಡ್ಡ ಶಾಕ್ ನೀಡಿದೆ. ಹೊಸ ಬೆಲೆಗಳು ಡಿಸೆಂಬರ್ 1 ರಿಂದ ಅನ್ವಯಿಸಲಿವೆ. ಹಾಗಾದರೆ ಈಗ ಯಾವ ಪ್ಲಾನ್‌ಗೆ ಗ್ರಾಹಕರು ಎಷ್ಟು ಖರ್ಚು ಮಾಡಬೇಕಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

JioPhone ಪ್ಲಾನ್‌ನ ಬೆಲೆ ಕೂಡ ಹೆಚ್ಚಾಗಿದೆ
ರೂ 75 ಯೋಜನೆ, ರೂ 91ಕ್ಕೆ  ಏರಿಕೆ: 16 ರೂ ಹೆಚ್ಚಳ

JioPhone ನ 75 ರೂಪಾಯಿ ಯೋಜನೆಗಾಗಿ, ಡಿಸೆಂಬರ್ 1 ರಿಂದ, ಗ್ರಾಹಕರು 16 ರೂಪಾಯಿಗಳನ್ನು ಹೆಚ್ಚು ಅಂದರೆ 91  ರೂಪಾಯಿಗಳನ್ನು ಪಾವತಿಸಬೇಕಾಗಲಿದೆ. ಯೋಜನೆಯ ಮಾನ್ಯತೆ 28 ದಿನಗಳು. ಈ ಅವಧಿಯಲ್ಲಿ ಗ್ರಾಹಕರು ಒಂದು ತಿಂಗಳಿಗೆ ಒಟ್ಟು 3 ಜಿಬಿ ಡೇಟಾ, ಅನಿಯಮಿತ ಧ್ವನಿ ಕರೆಗಳು ಮತ್ತು 50 ಎಸ್‌ಎಂಎಸ್‌ಗಳನ್ನು ಪಡೆಯಲಿದ್ದಾರೆ. 

ಈ ಅನಿಯಮಿತ ಯೋಜನೆಗಳು ರೂ 480 ವರೆಗೆ ದುಬಾರಿಯಾಗಿದೆ
ರೂ 129 ಪ್ಯಾಕ್, ರೂ 155ಕ್ಕೆ  ಏರಿಕೆ: 26 ರೂ

28 ದಿನಗಳ ವ್ಯಾಲಿಡಿಟಿ ಹೊಂದಿರುವ 129 ರೂ.ಗಳ ಪ್ಯಾಕ್ ಹೆಚ್ಚಳದ ನಂತರ 155 ರೂ.ಗೆ ಏರಿದೆ. ಈ ಯೋಜನೆಯಲ್ಲಿ ಗ್ರಾಹಕರು ಪ್ರತಿದಿನ 2 GB ಡೇಟಾ, ಅನಿಯಮಿತ ಧ್ವನಿ ಕರೆಗಳು ಮತ್ತು ಒಟ್ಟು 300 SMS ಗಳನ್ನು 28 ದಿನಗಳವರೆಗೆ ಪಡೆಯಲಿದ್ದಾರೆ. 

ರೂ 149 ಪ್ಯಾಕ್, ರೂ 179ಕ್ಕೆ  ಏರಿಕೆ: 30 ರೂ ಹೆಚ್ಚಳ
24 ದಿನಗಳ ವ್ಯಾಲಿಡಿಟಿ ಹೊಂದಿರುವ 149 ರೂ.ಗಳ ಪ್ಯಾಕ್ ಇನ್ಮುಂದೆ 179 ರೂ. ಗೆ ಸಿಗಲಿದೆ. ಯೋಜನೆಯಲ್ಲಿ, ಗ್ರಾಹಕರು ಪ್ರತಿದಿನ 1 GB ಡೇಟಾ, ಅನಿಯಮಿತ ಧ್ವನಿ ಕರೆಗಳು ಮತ್ತು ದೈನಂದಿನ 100 SMS ಗಳನ್ನು 24 ದಿನಗಳವರೆಗೆ ಪಡೆಯುತ್ತಾರೆ.

ರೂ.199 ಪ್ಯಾಕ್, ರೂ.239ಕ್ಕೆ  ಏರಿಕೆ: 40 ರೂ. ಹೆಚ್ಚಳ
28 ದಿನಗಳ ವ್ಯಾಲಿಡಿಟಿ ಹೊಂದಿರುವ 199 ರೂ.ಗಳ ಪ್ಯಾಕ್ ಇನ್ಮುಂದೆ 239 ರೂ. ಗಳಿಗೆ ಸಿಗಲಿದೆ. ಯೋಜನೆಯಲ್ಲಿ, ಗ್ರಾಹಕರು ಪ್ರತಿದಿನ 1.5 GB ಡೇಟಾ, ಅನಿಯಮಿತ ಧ್ವನಿ ಕರೆಗಳು ಮತ್ತು 28 ದಿನಗಳವರೆಗೆ ದೈನಂದಿನ 100 SMS ಅನ್ನು ಪಡೆಯಲಿದ್ದಾರೆ. 

ರೂ 249 ಪ್ಯಾಕ್, ರೂ 299ಕ್ಕೆ  ಏರಿಕೆ: 50 ರೂ. ಹೆಚ್ಚಳ
28 ದಿನಗಳ ವ್ಯಾಲಿಡಿಟಿ ಹೊಂದಿರುವ ರೂ.249 ಪ್ಯಾಕ್ ಹೆಚ್ಚಳದ ನಂತರ ರೂ.299ಕ್ಕೆ ಸಿಗಲಿದೆ. ಈ ಯೋಜನೆಯಲ್ಲಿ ಗ್ರಾಹಕರು ಪ್ರತಿದಿನ 2 GB ಡೇಟಾ, ಅನಿಯಮಿತ ಧ್ವನಿ ಕರೆಗಳು ಮತ್ತು ದೈನಂದಿನ 100 SMS ಗಳನ್ನು ಪಡೆಯಲಿದ್ದಾರೆ. 

ರೂ 399 ಪ್ಯಾಕ್, ರೂ 479ಕ್ಕೆ ಏರಿಕೆ: 80 ರೂ. ಹೆಚ್ಚಳ
56 ದಿನಗಳ ವ್ಯಾಲಿಡಿಟಿ ಹೊಂದಿರುವ ರೂ.399 ಪ್ಯಾಕ್ ಹೆಚ್ಚಳದ ನಂತರ ರೂ.479ಕ್ಕೆ ಲಭಿಸಲಿದೆ. ಈ ಯೋಜನೆಯಲ್ಲಿ ಗ್ರಾಹಕರು ಪ್ರತಿದಿನ 1.5 GB ಡೇಟಾ, ಅನಿಯಮಿತ ಧ್ವನಿ ಕರೆಗಳೊಂದಿಗೆ ದೈನಂದಿನ 100 SMS ಅನ್ನು ಪಡೆಯಲಿದ್ದಾರೆ. 

ರೂ 444 ಪ್ಯಾಕ್, ರೂ 533ಕ್ಕೆ  ಏರಿಕೆ: 89 ರೂ. ಹೆಚ್ಚಳ 
56 ದಿನಗಳ ವ್ಯಾಲಿಡಿಟಿ ಹೊಂದಿರುವ 444 ರೂ.ಗಳ ಪ್ಯಾಕ್ ಹೆಚ್ಚಳದ ನಂತರ 533 ರೂ.ಗೆ ಏರಿಕೆಯಾಗಿದೆ. ಈ ಯೋಜನೆಯಲ್ಲಿ ಗ್ರಾಹಕರು ಪ್ರತಿದಿನ 2 GB ಡೇಟಾ, ಅನಿಯಮಿತ ಧ್ವನಿ ಕರೆಗಳು ಮತ್ತು ದೈನಂದಿನ 100 SMS ಗಳನ್ನು ಪಡೆಯಲಿದ್ದಾರೆ. 

ರೂ 329 ಪ್ಯಾಕ್, ರೂ 395ಕ್ಕೆ ಏರಿಕೆ: 66 ರೂ. ಹೆಚ್ಚಳ 
84 ದಿನಗಳ ವ್ಯಾಲಿಡಿಟಿಯೊಂದಿಗೆ ರೂ.329 ಪ್ಯಾಕ್, ಗ್ರಾಹಕರು ಡಿಸೆಂಬರ್ 1 ರಿಂದ ರೂ.395 ಗೆ ಪಡೆಯಬಹುದು. ಯೋಜನೆಯಲ್ಲಿ ಒಟ್ಟು 6 GB ಡೇಟಾ, ಅನಿಯಮಿತ ಧ್ವನಿ ಕರೆಗಳು ಮತ್ತು ಒಟ್ಟು 1000 SMS ಪಡೆಯಲಿದ್ದಾರೆ. 

555 ರೂ.ಗಳ ಪ್ಯಾಕ್, 666 ರೂ.ಗೆ ಏರಿಕೆ: 111 ರೂ. ಹೆಚ್ಚಳ
84 ದಿನಗಳ ವ್ಯಾಲಿಡಿಟಿ ಹೊಂದಿರುವ 555 ರೂ.ಗಳ ಪ್ಯಾಕ್ ಹೆಚ್ಚಳದ ನಂತರ 719 ರೂ.ಗೆ ಸಿಗಲಿದೆ. ಈ ಯೋಜನೆಯಲ್ಲಿ ಗ್ರಾಹಕರು ಪ್ರತಿದಿನ 1.5 GB ಡೇಟಾ, ಅನಿಯಮಿತ ಧ್ವನಿ ಕರೆಗಳು ಮತ್ತು ದೈನಂದಿನ 100 SMS ಗಳನ್ನು ಪಡೆಯಲಿದ್ದಾರೆ.

ರೂ 599 ಪ್ಯಾಕ್ ಬೆಲೆ ರೂ 719ಕ್ಕೆ  ಏರಿಕೆ: 120 ರೂ. ಹೆಚ್ಚಳ 
84 ದಿನಗಳ ವ್ಯಾಲಿಡಿಟಿ ಹೊಂದಿರುವ 599 ರೂ ಪ್ಯಾಕ್ ಹೆಚ್ಚಳದ ನಂತರ ರೂ 719 ಕ್ಕೆ ಏರಿಕೆಯಾಗಿದೆ. ಈ ಯೋಜನೆಯಲ್ಲಿ ಗ್ರಾಹಕರು 84 ದಿನಗಳವರೆಗೆ ಪ್ರತಿದಿನ 2 GB ಡೇಟಾ, ಅನಿಯಮಿತ ಧ್ವನಿ ಕರೆಗಳು ಮತ್ತು ದೈನಂದಿನ 100 SMS ಗಳನ್ನು ಪಡೆಯಲಿದ್ದಾರೆ. 

ರೂ 1299 ಪ್ಯಾಕ್, ರೂ 1559ಕ್ಕೆ ಏರಿಕೆ: 260 ರೂ. ಹೆಚ್ಚಳ 
84 ದಿನಗಳ ವ್ಯಾಲಿಡಿಟಿ ಹೊಂದಿರುವ ರೂ.1299 ಪ್ಯಾಕ್ ಹೆಚ್ಚಳದ ನಂತರ ರೂ.1559ಕ್ಕೆ ಏರಿಕೆಯಾಗಿದೆ. ಈ ಯೋಜನೆಯಲ್ಲಿ ಗ್ರಾಹಕರು ಒಟ್ಟು 24 GB ಡೇಟಾ, ಅನಿಯಮಿತ ಧ್ವನಿ ಕರೆಗಳು ಮತ್ತು ಒಟ್ಟು 3600 SMS ಗಳನ್ನು ಪಡೆಯಲಿದ್ದಾರೆ. 

ಇದನ್ನೂ ಓದಿ-iPhone 14ರ ಹೊಸ ಸೋರಿಕೆಯಿಂದ ದಿಗ್ಭ್ರಮೆಗೊಂಡ ಅಭಿಮಾನಿಗಳು! ಒಂದೇ ಫೋನ್ ನಲ್ಲಿ ಎರಡು ಸ್ಕ್ರೀನ್ ?

ರೂ.2399 ಪ್ಯಾಕ್, ರೂ.2879ಕ್ಕೆ ಏರಿಕೆ:  480 ರೂ.ಹೆಚ್ಚಳ
84 ದಿನಗಳ ವ್ಯಾಲಿಡಿಟಿ ಹೊಂದಿರುವ ರೂ.2399 ಪ್ಯಾಕ್ ಹೆಚ್ಚಳದ ನಂತರ ರೂ.2879ಕ್ಕೆ ಲಭಿಸಲಿದೆ. ಈ ಯೋಜನೆಯಲ್ಲಿ ಗ್ರಾಹಕರು ಪ್ರತಿದಿನ 2 GB ಡೇಟಾ, ಅನಿಯಮಿತ ಧ್ವನಿ ಕರೆಗಳು ಮತ್ತು ದೈನಂದಿನ 100 SMS ಗಳನ್ನು ಪಡೆಯುತ್ತಾರೆ.

ಇದನ್ನೂ ಓದಿ-Truecaller ನಲ್ಲಿ ಹೊಸ ಫೀಚರ್..ಏನಿದು ಘೋಸ್ಟ್ ಕಾಲ್.? ಬಳಕೆದಾರರು ತಪ್ಪದೇ ಓದಿ...

ಡೇಟಾ ಆಡ್-ಆನ್ ಯೋಜನೆಗಳು ಸಹ ದುಬಾರಿಯಾಗಲಿವೆ
- ರೂ 51 ಪ್ಲಾನ್, ಇದೀಗ ರೂ. 61ಕ್ಕೆ  ಏರಿಕೆಯಾಗಿದೆ. ಇದರಲ್ಲಿ 6 ಜಿಬಿ ಡೇಟಾ ಲಭ್ಯವಿರುತ್ತದೆ
- ರೂ 101 ಪ್ಲಾನ್, ಇದೀಗ ರೂ. 121 ಕ್ಕೆ ಏರಿಕೆಯಾಗಿದೆ. ಇದರಲ್ಲಿ 12 ಜಿಬಿ ಡೇಟಾ ಲಭ್ಯವಿರುತ್ತದೆ
- ರೂ 251 ರ ಯೋಜನೆಯು ರೂ 301ಕ್ಕೆ ಏರಿಕೆಯಾಗಿದೆ.  ಇದರಲ್ಲಿ 50 ಜಿಬಿ ಡೇಟಾ ಲಭ್ಯವಿರುತ್ತದೆ ಮತ್ತು ಇದು 30 ದಿನಗಳ ಮಾನ್ಯತೆ ಹೊಂದಿರುತ್ತದೆ.

ಇದನ್ನೂ ಓದಿ-ಕೇವಲ 65 ರೂ. ಗೆ ಖರೀದಿಸಿ Oppo Smartphone, ಏನಿದು ಡೀಲ್ ತಿಳಿಯಿರಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News