ರೇಷನ್ ಕಾರ್ಡ್ ಲೇಟೆಸ್ಟ್ ಅಪ್‌ಡೇಟ್: ನಿಮ್ಮ ಬಳಿಯೂ ಪಡಿತರ ಚೀಟಿ ಇದೆಯೇ? ನೀವು ಪ್ರತಿ ತಿಂಗಳು ಸರ್ಕಾರದಿಂದ ನೀಡುತ್ತಿರುವ ಪಡಿತರ ಯೋಜನೆಯ ಲಾಭವನ್ನು ಪಡೆದುಕೊಳ್ಳುತ್ತಿದ್ದರೆ ಈ ಸುದ್ದಿ ನಿಮಗೆ ಮಹತ್ವದ್ದಾಗಿದೆ. ಪಡಿತರ ವಿತರಣೆಯಲ್ಲಿ ಸರ್ಕಾರವು ಹೊಸ ವ್ಯವಸ್ಥೆಯನ್ನು ಜಾರಿಗೆ ತರಲು ಹೊರಟಿದೆ. ಇದರಿಂದ ಪಡಿತರ ಚೀಟಿದಾರರು ರೇಷನ್ ಅಂಗಡಿಗಳ ಮುಂದೆ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲುವ ಗೊಡವೆಯಿಂದ ಪರಿಹಾರ ಪಡೆಯಬಹುದಾಗಿದೆ. 


COMMERCIAL BREAK
SCROLL TO CONTINUE READING

ಫ್ರೀ ರೇಷನ್ ಪಡೆಯಲು ಪಡಿತರ ಅಂಗಡಿಗೆ ಹೋಗುವ ಅಗತ್ಯವಿಲ್ಲ:
ಹೌದು, ಈಗ ಉಚಿತ ಪಡಿತರ ಪಡೆಯಲು ಪಡಿತರ ಚೀಟಿದಾರರು ರೇಷನ್ ಅಂಗಡಿಗಳ ಮುಂದೆ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲಬೇಕಾಗಿಲ್ಲ. ಪಡಿತರ ಚೀಟಿದಾರರಿಗೆ ಈ ಸಮಸ್ಯೆಯಿಂದ ಮುಕ್ತಿ ನೀಡಲು ಸರ್ಕಾರವು ಆಹಾರ ಧಾನ್ಯ ಎಟಿಎಂ ಆರಂಭಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ. ಇದೀಗ ಉತ್ತರಾಖಂಡ ಸರ್ಕಾರವು ಶೀಘ್ರದಲ್ಲೇ ಹೊಸ ಯೋಜನೆಯನ್ನು ಪ್ರಾರಂಭಿಸಲಿದೆ. ಪಡಿತರ ಅಂಗಡಿಯಲ್ಲಿ ಸಿಗುವ ಉಚಿತ ಪಡಿತರಕ್ಕಾಗಿ ಅರ್ಹರು ಇನ್ನು ಮುಂದೆ ಅಂಗಡಿಗಳಿಗೆ ಭೇಟಿ ನೀಡಬೇಕಾಗಿಲ್ಲ ಎಂದು ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವೆ ರೇಖಾ ಆರ್ಯ ತಿಳಿಸಿದ್ದಾರೆ. 


ಇದನ್ನೂ ಓದಿ- Aadhaar Card: ಆಧಾರ್ ಕಾರ್ಡ್ ದುರ್ಬಳಕೆ ತಡೆಯಲು ಸಿಂಪಲ್ ಟಿಪ್ಸ್ 


ಅಗತ್ಯವಿದ್ದಲ್ಲಿ ಎಟಿಎಂನಿಂದ ಆಹಾರ ಧಾನ್ಯಗಳನ್ನು ಪಡೆಯಲು ಸಾಧ್ಯವಾಗುತ್ತದೆ:
ಈ ಕುರಿತಂತೆ ಮಾಹಿತಿ ನೀಡಿರುವ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರು ಪಡಿತರ ವಿತರಣೆಗಾಗಿ ಇಲಾಖೆ ಹೊಸ ಯೋಜನೆ ರೂಪಿಸುತ್ತಿದೆ ಎಂದರು. ಶೀಘ್ರದಲ್ಲೇ ಇದನ್ನು ಪ್ರಾಯೋಗಿಕ ಯೋಜನೆಯಾಗಿ ಕೆಲವು ಜಿಲ್ಲೆಗಳಲ್ಲಿ ಪ್ರಾರಂಭಿಸಲಾಗುವುದು. ಯಾವುದೇ ವ್ಯಕ್ತಿ ಅಗತ್ಯವಿದ್ದಾಗ ಎಟಿಎಂನಿಂದ ಹಣ ಹಿಂಪಡೆಯುವ ರೀತಿಯಲ್ಲಿಯೇ ಈಗ ಅರ್ಹರು ಆಹಾರ ಧಾನ್ಯಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಸಚಿವೆ ರೇಖಾ ಆರ್ಯ ಹೇಳಿದ್ದಾರೆ.


ಇದನ್ನೂ ಓದಿ- Bank Strike: ಈ ದಿನ ಸರ್ಕಾರಿ ಬ್ಯಾಂಕ್‌ಗಳ ಮುಷ್ಕರ!


ಈಗಾಗಲೇ ಒಡಿಶಾ ಮತ್ತು ಹರಿಯಾಣದಲ್ಲಿ ಈ ವ್ಯವಸ್ಥೆ ಜಾರಿಯಲ್ಲಿದೆ:
ವಿಶ್ವ ಆಹಾರ ಯೋಜನೆಯಡಿ ರಾಜ್ಯಾದ್ಯಂತ ಆಹಾರ ಧಾನ್ಯ ಎಟಿಎಂಗಳನ್ನು ಆರಂಭಿಸಲಾಗುವುದು ಎಂದು ಆಹಾರ ಸಚಿವರು ತಿಳಿಸಿದರು. ಈ ನಿಟ್ಟಿನಲ್ಲಿ ಅನುಮೋದನೆ ಸಿಕ್ಕಿದೆ. ಪ್ರಸ್ತುತ ಆಹಾರ ಧಾನ್ಯ ಎಟಿಎಂ ಯೋಜನೆಯು ಒಡಿಶಾ ಮತ್ತು ಹರಿಯಾಣ ರಾಜ್ಯಗಳಲ್ಲಿ ಈ ವ್ಯವಸ್ಥೆ ಜಾರಿಯಲ್ಲಿದೆ. ಆದರೆ ಈಗ ಉತ್ತರಾಖಂಡ ಈ ಯೋಜನೆಯನ್ನು ಜಾರಿಗೊಳಿಸಿದ ಮೂರನೇ ರಾಜ್ಯವಾಗಲಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.