ಕಾರು ಖರೀದಿ ಇನ್ನು ಬಲು ದುಬಾರಿ..! ಥರ್ಡ್ ಪಾರ್ಟಿ ವಿಮೆಯ ನಂತರ, ಬೀಳುವುದು ಜೇಬಿಗೆ ಕತ್ತರಿ

ಭಾರತೀಯ ರಿಸರ್ವ್ ಬ್ಯಾಂಕ್ ನಿನ್ನೆ ರೆಪೋ ರೇಟ್  ದರವನ್ನು 50 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿದೆ, . ಇದು  ವಾಹನ ಸಾಲದ ಮೇಲಿನ ಬಡ್ಡಿದರವನ್ನು ಹೆಚ್ಚಿಸಿದೆ. ಅಂದರೆ ಪ್ರತಿ ತಿಂಗಳು ಬರುವ EMI ಮೇಲೆ ಇದರ ನೇರ ಪರಿಣಾಮ ಬೀರುತ್ತದೆ.

Written by - Ranjitha R K | Last Updated : Jun 9, 2022, 02:41 PM IST
  • ಹೊಸ ಕಾರು ಖರೀದಿಸಬೇಕಾದರೆ ಹೆಚ್ಚಿಸಬೇಕು ಬಜೆಟ್
  • 50 ಬೇಸಿಸ್ ಪಾಯಿಂಟ್‌ಗಳಷ್ಟು ರೆಪೋ ರೇಟ್ ದರ ಹೆಚ್ಚಳ
  • ಪ್ರತಿ ತಿಂಗಳ EMI ಮೇಲೆ ಇದರ ನೇರ ಪರಿಣಾಮ ಬೀರುತ್ತದೆ.
ಕಾರು ಖರೀದಿ ಇನ್ನು ಬಲು ದುಬಾರಿ..! ಥರ್ಡ್ ಪಾರ್ಟಿ ವಿಮೆಯ ನಂತರ, ಬೀಳುವುದು ಜೇಬಿಗೆ ಕತ್ತರಿ  title=
Repo Rate Effect On Vehicle EMI (file photo)

ನವದೆಹಲಿ : Repo Rate Effect On Vehicle EMI: ಇನ್ನು ಮುಂದೆ ಹೊಸ ಕಾರು ಖರೀದಿಸಬೇಕಾದರೆ ನಮ್ಮಲ್ಲಿರುವ ಬಜೆಟನ್ನು ಹೆಚ್ಚಿಸಿಕೊಳ್ಳಬೇಕಾಗುತ್ತದೆ.  ಎಲ್ಲಾ ಕಾರುಗಳು ಮತ್ತು ಬೈಕ್‌ಗಳ EMI ಇನ್ನು ಹೆಚ್ಚಾಗಲಿದೆ. ಭಾರತೀಯ ರಿಸರ್ವ್ ಬ್ಯಾಂಕ್ ನಿನ್ನೆ ರೆಪೋ ರೇಟ್  ದರವನ್ನು 50 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿದೆ, . ಇದು  ವಾಹನ ಸಾಲದ ಮೇಲಿನ ಬಡ್ಡಿದರವನ್ನು ಹೆಚ್ಚಿಸಿದೆ. ಅಂದರೆ ಪ್ರತಿ ತಿಂಗಳು ಬರುವ EMI ಮೇಲೆ ಇದರ ನೇರ ಪರಿಣಾಮ ಬೀರುತ್ತದೆ. ಕಳೆದ 5 ವಾರಗಳಲ್ಲಿ ಎರಡನೇ ಬಾರಿಗೆ ಆರ್‌ಬಿಐ ರೆಪೊ ದರ ಹೆಚ್ಚಿಸಿದೆ.

ಈ ಬಗ್ಗೆ RBI ಗವರ್ನರ್ ಹೇಳಿದ್ದೇನು?
ಕೇಂದ್ರ ಬ್ಯಾಂಕ್‌ನ 6 ಸದಸ್ಯರ ದರ ನಿಗದಿ ಸಮಿತಿಯು ರೆಪೋ ದರವನ್ನು  50 ಬೇಸಿಸ್ ಪಾಯಿಂಟ್‌ಗಳಿಂದ ಅಂದರೆ ಶೇಕಡಾ 4.90 ಕ್ಕೆ ಏರಿಸುವ ಪರವಾಗಿ ಸರ್ವಾನುಮತದಿಂದ ಮತ ಹಾಕಿದೆ ಎಂದು ವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದರು. ಮೇ ತಿಂಗಳಿನಲ್ಲಿಯೂ ಆರ್ ಬಿಐ ರೆಪೊ ದರವನ್ನು 40 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿತ್ತು. “ಹಣದುಬ್ಬರದಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಹಣದುಬ್ಬರದ ಪರಿಣಾಮವನ್ನು ಕಳೆದ ಪಾಲಿಸಿ ಮೀಟಿಂಗ್ ನಲ್ಲಿ ಎತ್ತಿ ತೋರಿಸಲಾಯಿತು. ಮಾತ್ರವಲ್ಲ ಸ ಮಯಕ್ಕಿಂತ ಮುಂಚಿತವಾಗಿ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ. 

ಇದನ್ನೂ ಓದಿ :  Arecanut Price Today: ರಾಜ್ಯದ ಅಡಿಕೆ ಮಾರುಕಟ್ಟೆಯ ಇಂದಿನ ಧಾರಣೆ

ಈಗಾಗಲೇ ಸಂಕಷ್ಟದಲ್ಲಿರುವ  ಆಟೋ ಉದ್ಯಮ :
ರೆಪೋ ದರದಲ್ಲಿನ ಈ ಹೆಚ್ಚಳವು ಆಟೋಮೋಟಿವ್ ಉದ್ಯಮದ ಮೇಲೆ ನೇರವಾಗಿ ಪರಿಣಾಮ ಬೀರಲಿದೆ.  ಕೋವಿಡ್ 19 ನಂತರ ಪೂರೈಕೆ ಮತ್ತು ಸೆಮಿಕಂಡಕ್ಟರ್ ಚಿಪ್ ಕೊರತೆಯ ಸಮಸ್ಯೆಯನ್ನು ಎದುರಿಸುತ್ತಿದೆ. ಕೇಂದ್ರ ಸರ್ಕಾರವು ಥರ್ಡ್ ಪಾರ್ಟಿ ಮೋಟಾರು ವಿಮೆಯ ಬೆಲೆಯನ್ನು ಕೂಡಾ ಹೆಚ್ಚಿಸಿದೆ. ಈ ಕಾರಣದಿಂದಾಗಿ ವಾಹನ ಖರೀದಿ ಈಗಾಗಲೇ ದುಬಾರಿಯಾಗಿದೆ. ಇದೀಗ ರೆಪೋ ದರ ಹೆಚ್ಚಳ ಗ್ರಾಹಕರ ಮೇಲೆ ಮಾತ್ರವಲ್ಲ ವಾಹನ ತಯಾರಕರ ಮೇಲೂ ನೇರ ಪರಿಣಾಮ ಬೀರಲಿದೆ. ಕೋವಿಡ್ -19 ರ ಸಮಯದಲ್ಲಿ ಆರ್‌ಬಿಐ ರೆಪೋ ದರವನ್ನು ಹೆಚ್ಚಿಸಿಲ್ಲ . 

ಇದನ್ನೂ ಓದಿ :  Gold Price Today : ಮತ್ತೆ ದುಬಾರಿಯಾಯಿತು ಚಿನ್ನ, ಬೆಳ್ಳಿ ಬೆಲೆ ಕೂಡಾ ಏರಿಕೆ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News