Royal Enfield Meteor 350 Aurora Variant Launched: ದ್ವಿಚಕ್ರ ವಾಹನಗಳು, ಅದರಲ್ಲೂ ವಿಶೇಷವಾಗಿ ಸಾಹಸಿ ಬೈಕ್‌ಗಳ ತಯಾರಿಕೆಯಲ್ಲಿ ಪ್ರಸಿದ್ಧವಾಗಿರುವ ರಾಯಲ್ ಎನ್‌ಫೀಲ್ಡ್ ತನ್ನ ಗ್ರಾಹಕರಿಗೆ ಹಬ್ಬದ ಋತುವಿನಲ್ಲಿ ಭಾಯಿ ಉಡುಗೊರೆಯನ್ನೇ ನೀಡಿದೆ. ಕಂಪನಿಯು ತನ್ನ ಶಕ್ತಿಶಾಲಿ ಮತ್ತು ಜನಪ್ರಿಯ ಕ್ರೂಸರ್ ಬೈಕ್ ರಾಯಲ್ ಎನ್‌ಫೀಲ್ಡ್ ಮೆಟಿಯರ್ 350 ನ ಹೊಸ ರೂಪಾಂತರವನ್ನು ಬಿಡುಗಡೆ ಮಾಡಿದೆ. ಈ ರೂಪಾಂತರವನ್ನು ಮೇಟಿಯರ್ 350 ರ ಅಸ್ತಿತ್ವದಲ್ಲಿರುವ ಸ್ಟೆಲ್ಲರ್ ಮತ್ತು ಸೂಪರ್ನೋವಾ ಟ್ರಿಮ್‌ಗಳ ನಡುವೆ ಇರಿಸಿದೆ. ಕಂಪನಿಯು ಈ ಹೊಸ ರೂಪಾಂತರವನ್ನು 3 ಹೊಸ ಬಣ್ಣಗಳಲ್ಲಿ ಬಿಡುಗಡೆ ಮಾಡಿದೆ. ಕಂಪನಿಯು ಈ ಬೈಕ್ ಅನ್ನು ಅರೋರಾ ಗ್ರೀನ್, ಅರೋರಾ ಬ್ಲೂ ಮತ್ತು ಅರೋರಾ ಬ್ಲಾಕ್ ಬಣ್ಣಗಳೊಂದಿಗೆ ಬಿಡುಗಡೆ ಮಾಡಿದೆ. ಈ ಹೊಸ ರೂಪಾಂತರಗಳ  ಎಂಜಿನ್‌ನಲ್ಲಿ ಕಂಪನಿಯು ಯಾವುದೇ ಬದಲಾವಣೆಗಳನ್ನು ಮಾಡಿಲ್ಲ. ಈ ಬೈಕ್ ಕೇವಲ 350 ಸಿಸಿ ಎಂಜಿನ್ ಹೊಂದಿದೆ. ಆದರೆ ಕಂಪನಿಯು ಹೊಸ ರೂಪಾಂತರದಲ್ಲಿ ಕೆಲವು ಕಾಸ್ಮೆಟಿಕ್ ಬದಲಾವಣೆಗಳನ್ನು ಮಾಡಿದೆ.


COMMERCIAL BREAK
SCROLL TO CONTINUE READING

ರಾಯಲ್ ಎನ್‌ಫೀಲ್ಡ್ ಮೆಟಿಯರ್ 350 ಅರೋರಾ: ಹೊಸತೇನಿದೆ?
ಕಂಪನಿಯು ಬೈಕ್‌ಗೆ ಕೆಲವು ಹೊಸ ವೈಶಿಷ್ಟ್ಯಗಳನ್ನು ಸೇರಿಸಿದೆ. ಮೊದಲನೆಯದಾಗಿ, ಈ ಹೊಸ ರೂಪಾಂತರವು ಮೂರು ಹೊಸ ಬಣ್ಣಗಳೊಂದಿಗೆ ಮಾರುಕಟ್ಟೆಗೆ ಇಳಿದಿವೆ. ಇದು ಹಸಿರು, ನೀಲಿ ಮತ್ತು ಕಪ್ಪು ಬಣ್ಣಗಳನ್ನು ಒಳಗೊಂಡಿದೆ. ಇದಲ್ಲದೇ ಸ್ಪೋಕ್ ವೀಲ್ ಗಳು ಈ ಬೈಕ್ ನಲ್ಲಿ ಲಭ್ಯವಿವೆ. ನಿಯಾನ್ ಟ್ಯೂಬ್‌ಲೆಸ್ ಟೈರ್‌ಗಳು ಇದರಲ್ಲಿ ಲಭ್ಯವಿದೆ. ಎಲ್‌ಇಡಿ ಹೆಡ್‌ಲೈಟ್‌ಗಳನ್ನು ನೀಡಲಾಗಿದೆ. ಟ್ರಿಪ್ಪರ್ ನ್ಯಾವಿಗೇಶನ್ ಅನ್ನು ಪ್ರಮಾಣಿತ ವೈಶಿಷ್ಟ್ಯವಾಗಿ ಒದಗಿಸಲಾಗಿದೆ.


ಇದನ್ನೂ ಓದಿ-ಸರ್ಕಾರಿ ನೌಕರರಿಗೆ ಬಂಪರ್ ಲಾಭ, 56,900 ಬೇಸಿಕ್ ಸ್ಯಾಲರಿ ಇರುವವರ ಡಿಎ 3,14,088 ರೂ.ಗಳಿಗೆ ತಲುಪಲಿದೆ!


ಕಂಪನಿಯು ಈ ಬೈಕ್ ಅನ್ನು 2.20 ಲಕ್ಷ ರೂ.ಗಳ ಆರಂಭಿಕ ಎಕ್ಸ್ ಶೋ ರೂಂ ಬೆಲೆಯೊಂದಿಗೆ ಬಿಡುಗಡೆ ಮಾಡಿದೆ. ಈಗ ಕಂಪನಿಯ ಪೋರ್ಟ್‌ಫೋಲಿಯೊದಲ್ಲಿ Meteor 350 ನ ನಾಲ್ಕು ರೂಪಾಂತರಗಳಿವೆ. ಇದರಲ್ಲಿ ಫೈರ್‌ಬಾಲ್ ಆರಂಭಿಕ ರೂಪಾಂತರವಾಗಿದೆ ಮತ್ತು ಇದರ ಬೆಲೆ ರೂ 2.05 ಲಕ್ಷ (ಎಕ್ಸ್ ಶೋ ರೂಂ). ಇದರ ನಂತರ ಸ್ಟೆಲ್ಲರ್ ರೂಪಾಂತರವು ಬರುತ್ತದೆ, ನಂತರ ಅರೋರಾ (ಹೊಸ) ರೂಪಾಂತರ ಮತ್ತು ಅಂತಿಮವಾಗಿ ಸೂಪರ್ನೋವಾ ರೂಪಾಂತರ ಬಿಡುಗಡೆ ಮಾಡಲಾಗಿದೆ.


ಇದನ್ನೂ ಓದಿ-ಮ್ಯೂಚವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡಬೇಕೆ? ತಜ್ಞರ ಈ ಅಭಿಮತ ಖಂಡಿತ ತಿಳಿದುಕೊಳ್ಳಿ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ