SBI WhatsApp Banking: ನೀವು ಭಾರತದ ಅತಿದೊಡ್ಡ ಸರ್ಕಾರಿ ವಲಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾತೆ ಹೊಂದಿದ್ದರೆ ನಿಮಗಾಗಿ ಇಲ್ಲಿದೆ ಗುಡ್ ನ್ಯೂಸ್. ಇತ್ತೀಚಿನ ದಿನಗಳಲ್ಲಿ ಬ್ಯಾಂಕಿಂಗ್ (Banking)V ಸಂಬಂಧಿತ ಪ್ರಮುಖ ಕೆಲಸಗಳಿಗಾಗಿ ಬ್ಯಾಂಕ್‌ಗೆ ಹೋಗಲೇಬೇಕಾದ ಅನಿವಾರ್ಯತೆ ಇಲ್ಲ. ಬದಲಿಗೆ, ನೆಟ್‌ಬ್ಯಾಂಕಿಂಗ್ ಅಥವಾ ಬ್ಯಾಂಕಿಂಗ್ ಅಪ್ಲಿಕೇಶನ್‌ಗಳನ್ನು ಬಳಸಿ ನಿಮ್ಮ ಕೆಲಸಗಳನ್ನು ಸುಲಭವಾಗಿ ಪೂರ್ಣಗೊಳಿಸಬಹುದು. ಆದರೆ, ಇನ್ನೂ ಸಹ ನೆಟ್‌ಬ್ಯಾಂಕಿಂಗ್ ಅಥವಾ ಬ್ಯಾಂಕಿಂಗ್ ಅಪ್ಲಿಕೇಶನ್‌ಗಳನ್ನು ಬಳಸದೇ ಇರುವವರು ಬಹಳ ಮಂದಿ ಇದ್ದಾರೆ. ಇದೀಗ ಅಂತಹವರಿಗಾಗಿ ಎಸ್‌ಬಿ‌ಐ ವಾಟ್ಸಾಪ್  ಬ್ಯಾಂಕಿಂಗ್ ಸೇವೆಯನ್ನು ಆರಂಭಿಸಿದೆ. 


COMMERCIAL BREAK
SCROLL TO CONTINUE READING

ಎಸ್‌ಬಿ‌ಐ ವಾಟ್ಸಾಪ್  ಬ್ಯಾಂಕಿಂಗ್ ಸೇವೆ (SBI Whatsapp Banking Service) : 
ಹೌದು, ನೀವು ಎಸ್‌ಬಿ‌ಐ (SBI) ಗ್ರಾಹಕರಾಗಿದ್ದು, ನೆಟ್‌ಬ್ಯಾಂಕಿಂಗ್   (NetBanking)ಅಥವಾ ಅಪ್ಲಿಕೇಶನ್‌ ಅನ್ನು ಬಳಸುತ್ತಿಲ್ಲವೆಂದಾದರೆ ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಎಸ್‌ಬಿ‌ಐ ವಾಟ್ಸಾಪ್  ಬ್ಯಾಂಕಿಂಗ್ ಸೇವೆಯ ಸಹಾಯದಿಂದ, ನಿಮ್ಮ ಫೋನ್‌ನಲ್ಲಿಯೇ ಲೋನ್, ಡೆಬಿಟ್ ಕಾರ್ಡ್‌ನಿಂದ ಡಿಜಿಟಲ್ ಬ್ಯಾಂಕಿಂಗ್‌ವರೆಗಿನ ಎಲ್ಲಾ ಮಾಹಿತಿಯನ್ನು ಪಡೆಯಬಹುದು. ವಾಸ್ತವವಾಗಿ, ಬ್ಯಾಂಕ್ ತನ್ನ ಗ್ರಾಹಕರಿಗೆ ಬಹಳ ಹಿಂದಿನಿಂದಲೂ   ಈ ಸೇವೆಯನ್ನು ಒದಗಿಸುತ್ತಿದೆ. ಆದರೂ ಹೆಚ್ಚಿನ ಗ್ರಾಹಕರು ಮಾಹಿತಿ ಕೊರತೆಯಿಂದಾಗಿ ಈ ಸೇವೆಯನ್ನು ಬಳಸುತ್ತಿಲ್ಲ. 


ಇದನ್ನೂ ಓದಿ- ಉಳಿತಾಯ ಖಾತೆಯಲ್ಲಿ ಎಫ್‌ಡಿ ಬಡ್ಡಿ ಪಡೆಯಲು ನಿಮ್ಮ ಖಾತೆಗೆ ಇಂದೇ ಸೇರಿಸಿ ಈ ವೈಶಿಷ್ಟ್ಯ!


ಎಸ್‌ಬಿ‌ಐ ಒದಗಿಸುವ ಈ ವಾಟ್ಸಾಪ್ ಬ್ಯಾಂಕಿಂಗ್ ಸೇವೆಯಲ್ಲಿ ಯಾವ ಸೌಲಭ್ಯಗಳನ್ನು ಪಡೆಯಬಹುದು? 
ಎಸ್‌ಬಿ‌ಐ ಗ್ರಾಹಕರು ವಾಟ್ಸಾಪ್ ಬ್ಯಾಂಕಿಂಗ್ (WhatsApp Banking) ಸೇವೆಯನ್ನು ತಮ್ಮ ವಾಟ್ಸಾಪ್ನಲ್ಲಿ ಸುಲಭವಾಗಿ ಬಳಸಬಹುದು. ಇದರಲ್ಲಿ, ಖಾತೆಯ ಬ್ಯಾಲೆನ್ಸ್ ಪರಿಶೀಲಿಸುವುದರ ಜೊತೆಗೆ ಮಿನಿ ಸ್ಟೇಟ್‌ಮೆಂಟ್ (10 ವಹಿವಾಟುಗಳವರೆಗೆ), ಅಕೌಂಟ್ ಸ್ಟೇಟ್ಮೆಂಟ್ (250 ವಹಿವಾಟುಗಳವರೆಗೆ), ಗೃಹ ಸಾಲ ಮತ್ತು ಶಿಕ್ಷಣ ಸಾಲದ ಬಡ್ಡಿ ಪ್ರಮಾಣಪತ್ರ, ಪಿಂಚಣಿ ಸ್ಲಿಪ್ ಸೇವಾ, ಸಾಲದ ಮಾಹಿತಿ (ಮನೆ ಸಾಲ, ಕಾರು ಸಾಲ, ಚಿನ್ನದ ಸಾಲ ಮತ್ತು ಶಿಕ್ಷಣ ಸಾಲ) - FAQ ಮತ್ತು ಬಡ್ಡಿ ದರಗಳ ಬಗೆಗಿನ ಮಾಹಿತಿ. ಠೇವಣಿ ಯೋಜನೆಯ ಮಾಹಿತಿ (ಉಳಿತಾಯ ಖಾತೆ, ಮರುಕಳಿಸುವ ಠೇವಣಿ, ಅವಧಿ ಠೇವಣಿ - ವೈಶಿಷ್ಟ್ಯಗಳು ಮತ್ತು ಬಡ್ಡಿ ದರಗಳು), ಎನ್‌ಆರ್‌ಐ ಸೇವೆಗಳು (NRI ಖಾತೆ, NRO ಖಾತೆ) - ವೈಶಿಷ್ಟ್ಯಗಳು ಮತ್ತು ಬಡ್ಡಿ ದರಗಳು, ಇನ್ಸ್ಟಾ ಖಾತೆಯನ್ನು ತೆರೆಯುವುದು (ಶಿಕ್ಷಕರು/ಅರ್ಹತೆ, ಅವಶ್ಯಕತೆಗಳು ಮತ್ತು FAQ), ಸಂಪರ್ಕಿಸಿ/ಕುಂದುಕೊರತೆ ಪರಿಹಾರ ಸಹಾಯವಾಣಿ, ಪೂರ್ವ-ಅನುಮೋದಿತ ಸಾಲ (ವೈಯಕ್ತಿಕ ಸಾಲ, ಕಾರು ಸಾಲ, ದ್ವಿಚಕ್ರ ವಾಹನ ಸಾಲ), ಡಿಜಿಟಲ್ ಬ್ಯಾಂಕಿಂಗ್ ಮಾಹಿತಿ, ಪ್ರಚಾರದ ಕೊಡುಗೆಗಳು, ಬ್ಯಾಂಕಿಂಗ್ ಫಾರ್ಮ್, ಹಾಲಿಡೇ ಕ್ಯಾಲೆಂಡರ್, ಡೆಬಿಟ್ ಕಾರ್ಡ್ ಬಳಕೆಯ ಮಾಹಿತಿ, ಕಳೆದುಹೋದ/ಕಳುವಾದ ಕಾರ್ಡ್ ಮಾಹಿತಿ, ಹತ್ತಿರದ ಎಟಿಎಂ/ಬ್ರಾಂಚ್ ಲೊಕೇಟರ್ ಬಗೆಗಿನ ಮಾಹಿತಿಯನ್ನು ಪಡೆಯಬಹುದು. 


ಈ ಸೇವೆಯನ್ನು ಪಡೆಯುವುದು ಹೇಗೆ?  
ನೀವು ಎಸ್‌ಬಿಐನ ವಾಟ್ಸಾಪ್ ಬ್ಯಾಂಕಿಂಗ್ (SBI WhatsApp Banking) ಸೇವೆಯ ಲಾಭವನ್ನು ಪಡೆಯಲು ಬಯಸಿದರೆ, ನೀವು ನಿಮ್ಮ ಮೊಬೈಲ್‌ನಲ್ಲಿ ವಾಟ್ಸಾಪ್ ಬ್ಯಾಂಕಿಂಗ್ ಸೇವೆಯನ್ನು ಸಕ್ರಿಯಗೊಳಿಸಬೇಕಾಗುತ್ತದೆ. ಇದಕ್ಕಾಗಿ, ನಿಮ್ಮೊಂದಿಗೆ ನೋಂದಾಯಿಸಲಾದ ಫೋನ್ ಸಂಖ್ಯೆಯಿಂದ 'WAREG ಖಾತೆ ಸಂಖ್ಯೆ' ಎಂದು ಬರೆಯಿರಿ ಮತ್ತು ಅದನ್ನು +917208933148 ಗೆ ಕಳುಹಿಸಿ. ಉದಾಹರಣೆಗೆ, ನಿಮ್ಮ ಖಾತೆ ಸಂಖ್ಯೆ 123456789 ಆಗಿದ್ದರೆ, ನೀವು WAREG 123456789 ಅನ್ನು +917208933148 ಗೆ SMS  ಕಳುಹಿಸಿ. ನೋಂದಣಿಯ ನಂತರ, ನಿಮ್ಮ ಮೊಬೈಲ್‌ಗೆ ಸಂದೇಶ ಬರುತ್ತದೆ. ಸಂದೇಶದ ಮೂಲಕ ನೋಂದಣಿ ದೃಢೀಕರಿಸಿದ ನಂತರ, ನಿಮ್ಮ  ವಾಟ್ಸಾಪ್ ಸಂಖ್ಯೆಯಿಂದ 9022690226 ಗೆ 'ಹಾಯ್' ಎಂದು ಕಳುಹಿಸಿ. ಇದರ ನಂತರ, ಬ್ಯಾಂಕಿನಿಂದ ವಾಟ್ಸಾಪ್ನಲ್ಲಿ 3 ಆಯ್ಕೆಗಳನ್ನು ಕಳುಹಿಸಲಾಗುತ್ತದೆ - ಬ್ಯಾಲೆನ್ಸ್ ಪಡೆಯಿರಿ, ಮಿನಿ ಸ್ಟೇಟ್ಮೆಂಟ್ ಮತ್ತು ಇತರ ಸೇವೆಗಳನ್ನು ಪಡೆಯಿರಿ. ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ನೀವು ಆಯ್ಕೆಯನ್ನು ಆರಿಸಿಕೊಳ್ಳಬಹುದು.


ಇದನ್ನೂ ಓದಿ- ಬಂಜರು ಭೂಮಿಯಲ್ಲಿ 'ಚಿನ್ನ' ಬೆಳೆದ್ರಾ ಮುಖೇಶ್ ಅಂಬಾನಿ! ಇಲ್ಲಿದೆ ರೋಚಕ ಸ್ಟೋರಿ


ಇದರ ಹೊರತಾಗಿ, ಇನ್ನೊಂದು ಮಾರ್ಗವೆಂದರೆ ನೀವು ಈ ಲಿಂಕ್‌ಗೆ ಹೋಗಿ https://sbi.co.in/hi/web/personal-banking/digital/whatsapp-banking ಮತ್ತು ನಿಮ್ಮ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು QR ಅನ್ನು ಸ್ಕ್ಯಾನ್ ಮಾಡಿ. ಇದರ ನಂತರ, +919022690226 ಗೆ 'ಹಾಯ್' ಎಂದು ಕಳುಹಿಸಿ ಮತ್ತು ಚಾಟ್-ಬೋಟ್ ನೀಡಿದ ಸೂಚನೆಗಳನ್ನು ಅನುಸುವ ಮೂಲಕವೂ ಈ ಸೌಲಭ್ಯವನ್ನು ಪಡೆಯಬಹುದು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.