UPI One World Wallet ಪ್ರಾರಂಭ: ಇನ್ಮುಂದೆ ಭಾರತೀಯ ಬ್ಯಾಂಕ್ ಖಾತೆಗಳಿಲ್ಲದೆ ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಯುಪಿಐ ಬಳಕೆ ಸಾಧ್ಯ! ಹೇಗೆ ಗೊತ್ತಾ?

UPI One World Wallet ವಿಷಯವನ್ನು 2023 ರಲ್ಲಿ G20 ಭಾರತ ಶೃಂಗಸಭೆಯ ಸಮಯದಲ್ಲಿ ಪರಿಚಯಿಸಲಾಯಿತು. ಈಗ ಅಧಿಕೃತವಾಗಿ ಪ್ರಾರಂಭಿಸಲಾಗುತ್ತಿದೆ. ಇದರ ಸಹಾಯದಿಂದ ಪ್ರಯಾಣಿಕರು ಸುಲಭವಾಗಿ ಆನ್‌ಲೈನ್ ಪಾವತಿ ಮಾಡಲು ಸಾಧ್ಯವಾಗುತ್ತದೆ. ಈ UPI ವ್ಯಾಲೆಟ್ ಅನ್ನು ಬಳಸುವುದರ ಮೂಲಕ ವಿದೇಶಿ ವಿನಿಮಯ ವಹಿವಾಟಿನ ತೊಂದರೆ ಕಡಿಮೆಯಾಗಲಿದೆ.  

Written by - Bhavishya Shetty | Last Updated : Jul 25, 2024, 07:37 PM IST
    • ಯುಪಿಐ ಒನ್ ವರ್ಲ್ಡ್ ವಾಲೆಟ್ ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಸಹಾಯಕ
    • ʼಮೇಡ್‌ ಇನ್‌ ಇಂಡಿಯಾʼ ಅಡಿಯಲ್ಲಿ ಈ ತಂತ್ರಜ್ಞಾನ ಅಭಿವೃದ್ಧಿ
    • 2023 ರಲ್ಲಿ G20 ಭಾರತ ಶೃಂಗಸಭೆಯ ಸಮಯದಲ್ಲಿ ಪರಿಚಯಿಸಲಾಯಿತು
UPI One World Wallet ಪ್ರಾರಂಭ: ಇನ್ಮುಂದೆ ಭಾರತೀಯ ಬ್ಯಾಂಕ್ ಖಾತೆಗಳಿಲ್ಲದೆ ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಯುಪಿಐ ಬಳಕೆ ಸಾಧ್ಯ! ಹೇಗೆ ಗೊತ್ತಾ?  title=
File Photo

UPI One World Service: ಯುಪಿಐ ಒನ್ ವರ್ಲ್ಡ್ ವಾಲೆಟ್ ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಸಹಾಯವಾಗಲಿರುವ ಸೌಲಭ್ಯವಾಗಿದೆ. ವಿದೇಶದಿಂದ ಭಾರತಕ್ಕೆ ಆಗಮಿಸುವ ಜನರಿಗೆ ʼಮೇಡ್‌ ಇನ್‌ ಇಂಡಿಯಾʼ ಅಡಿಯಲ್ಲಿ ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದೆ. UPI ಯ ಈ ವೈಶಿಷ್ಟ್ಯದ ಪ್ರಯೋಜನವೆಂದರೆ, ಈಗ ವಿದೇಶದಿಂದ ಬರುವ ಬಳಕೆದಾರರು ಹಣವನ್ನು ಇಟ್ಟುಕೊಳ್ಳುವ ಅಗತ್ಯವಿಲ್ಲ. ಬದಲಾಗಿ ಎಲ್ಲಾ ಕಡೆಯೂ ಯುಪಿಐ ಬಳಸಿಯೇ ಹಣ ವರ್ಗಾವಣೆ ಅಥವಾ ಪಡೆಯಬಹುದು. 

ಇದನ್ನೂ ಓದಿ:  ಮುಖ್ಯಮಂತ್ರಿ ಒಂದು ಲಕ್ಷ ಮನೆ ಯೋಜನೆ ಫಲಾನುಭವಿಗಳಿಗೆ ಸಿಹಿ ಸುದ್ದಿ  - ಮಹತ್ವದ ನಿರ್ಧಾರ ತೆಗೆದುಕೊಂಡ ಸರ್ಕಾರ 

UPI One World Wallet ವಿಷಯವನ್ನು 2023 ರಲ್ಲಿ G20 ಭಾರತ ಶೃಂಗಸಭೆಯ ಸಮಯದಲ್ಲಿ ಪರಿಚಯಿಸಲಾಯಿತು. ಈಗ ಅಧಿಕೃತವಾಗಿ ಪ್ರಾರಂಭಿಸಲಾಗುತ್ತಿದೆ. ಇದರ ಸಹಾಯದಿಂದ ಪ್ರಯಾಣಿಕರು ಸುಲಭವಾಗಿ ಆನ್‌ಲೈನ್ ಪಾವತಿ ಮಾಡಲು ಸಾಧ್ಯವಾಗುತ್ತದೆ. ಈ UPI ವ್ಯಾಲೆಟ್ ಅನ್ನು ಬಳಸುವುದರ ಮೂಲಕ ವಿದೇಶಿ ವಿನಿಮಯ ವಹಿವಾಟಿನ ತೊಂದರೆ ಕಡಿಮೆಯಾಗಲಿದೆ.  

One World UPI ಬಳಕೆ ಮಾಡಲು KYC ಪ್ರಕ್ರಿಯೆ ಕಡ್ಡಾಯ. ಇದಕ್ಕೆ ವೀಸಾ, ಪಾಸ್‌ಪೋರ್ಟ್ ಮತ್ತು ಅಂತರರಾಷ್ಟ್ರೀಯ ಫೋನ್ ಸಂಖ್ಯೆಯಂತಹ ವಿವರಗಳ ಅಗತ್ಯವಿರುತ್ತದೆ. ಈ ವ್ಯಾಲೆಟ್ ಸೇವೆಯ ಮೂಲಕ, ವಿದೇಶಿ ಪ್ರಯಾಣಿಕರು ಈ UPI ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದು. ಇದರ ನಂತರ, ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್ ಕ್ಯಾಮೆರಾ ಮೂಲಕ QR ಕೋಡ್ ಮೂಲಕ ಪಾವತಿ ಮಾಡಲು ಸಾಧ್ಯವಾಗುತ್ತದೆ. 

ಇದನ್ನೂ ಓದಿ: "ದರ್ಶನ್‌ ಬಿಡುಗಡೆಯಾಗಿ ನಮ್ಮ ಮನೆಗೆ ಬಂದ್ರೆ...."- ಮೃತ ರೇಣುಕಾಸ್ವಾಮಿ ತಂದೆಯ ಅಚ್ಚರಿಯ ಹೇಳಿಕೆ ವೈರಲ್

One World UPI ವ್ಯಾಲೆಟ್‌ʼನಲ್ಲಿ ಹಣವನ್ನು ಠೇವಣಿ ಮಾಡುವ ಹೇಗೆಂದು ನೋಡುವುದಾದರೆ, ನೆಟ್ ಬ್ಯಾಂಕಿಂಗ್, ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಿ ಹಣವನ್ನು ಠೇವಣಿ ಮಾಡಬಹುದು. ಪ್ರಸ್ತುತ, ವ್ಯಾಲೆಟ್‌ʼನಲ್ಲಿ ಎಷ್ಟು ಹಣವನ್ನು ಇಡಬಹುದು? ಅದರ ಮಿತಿ ಎಷ್ಟು ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 

Trending News