ಎಸ್‌ಬಿಐ ವಾಟ್ಸ್‌ಆ್ಯಪ್ ಸೇವೆ:  ಇನ್ನು ಮುಂದೆ ಸಣ್ಣ ಪುಟ್ಟ ಕೆಲಸಕ್ಕೂ ಬ್ಯಾಂಕ್‌ಗೆ ಹೋಗಬೇಕಾದ ಅಗತ್ಯವಿಲ್ಲ. ಅಕೌಂಟ್ ಬ್ಯಾಲೆನ್ಸ್ ಅನ್ನು ಪರಿಶೀಲಿಸಲು, ಮಿನಿ ಸ್ಟೇಟ್ಮೆಂಟ್ ಚೆಕ್ ಮಾಡಲು ನೀವು ಎಲ್ಲಿಯೂ ಹೋಗಬೇಕಾದ ಅವಶ್ಯಕತೆ ಇಲ್ಲ. ಇದೀಗ ಎಸ್‌ಬಿಐ ಬಳಕೆದಾರರಿಗೆ ಸಿಹಿ ಸುದ್ದಿಯೊಂದು ಬಂದಿದೆ. ಈಗ ನೀವು ಸಣ್ಣ ಕೆಲಸಕ್ಕಾಗಿ ಬ್ಯಾಂಕ್ ಅನ್ನು ಸುತ್ತುವ ಅಗತ್ಯವಿಲ್ಲ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗಾಗಿ ವಾಟ್ಸ್‌ಆ್ಯಪ್ ಬ್ಯಾಂಕಿಂಗ್  ಸೇವೆಯನ್ನು ಪರಿಚಯಿಸಿದೆ.


COMMERCIAL BREAK
SCROLL TO CONTINUE READING

ವಾಟ್ಸಾಪ್‌ನಲ್ಲಿ ಲಭ್ಯವಿರುವ ಇಂತಹ ಬ್ಯಾಂಕಿಂಗ್ ಸೇವೆಗಳು ಬಳಕೆದಾರರಿಗೆ ಜೀವನವನ್ನು ಸುಲಭಗೊಳಿಸುತ್ತದೆ, ಮುಖ್ಯವಾಗಿ ಅವರು ತಮ್ಮ ಖಾತೆಯ ಬ್ಯಾಲೆನ್ಸ್ ಪರಿಶೀಲಿಸಲು ಹೊಸ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡುವ ಅಥವಾ ಎಟಿಎಂಗೆ ಭೇಟಿ ನೀಡುವ ಅಗತ್ಯವಿಲ್ಲ. ಎಲ್ಲಾ ಕೆಲಸಗಳನ್ನು ವಾಟ್ಸಾಪ್ ಮೂಲಕವೇ ಮಾಡಬಹುದು. 


ಇದನ್ನೂ ಓದಿ- Skoda Vision 7S: 7 ಸೀಟರ್ ಎಲೆಕ್ಟ್ರಿಕ್ ಕಾರ್ ಬಿಡುಗಡೆ, ಇದರ ವೈಶಿಷ್ಟ್ಯಗಳನ್ನು ತಿಳಿಯಿರಿ


ಎಸ್‌ಬಿಐ ಬಳಕೆದಾರರು ವಾಟ್ಸಾಪ್‌ನಲ್ಲಿ ಖಾತೆಯ ಮಿನಿ ಸ್ಟೇಟ್ಮೆಂಟ್ ಅನ್ನು ಪರಿಶೀಲಿಸಲು ಈ ಹಂತಗಳನ್ನು ಅನುಸರಿಸಿ:
ಹಂತ 1: ನೀವು ಮೊದಲು ಎಸ್‌ಬಿಐ ವಾಟ್ಸಾಪ್‌ ಬ್ಯಾಂಕಿಂಗ್ ಸೇವೆಗಳಿಗಾಗಿ ನಿಮ್ಮ ಖಾತೆಯನ್ನು ನೋಂದಾಯಿಸಿಕೊಳ್ಳಬೇಕು.
ಹಂತ 2: ಈ ಸೇವೆಗಳಿಗೆ ನೋಂದಾಯಿಸಲು, ನೀವು ಬ್ಯಾಂಕ್‌ನಲ್ಲಿ ನೋಂದಾಯಿಸಿರುವ ನಿಮ್ಮ 10 ಅಂಕಿಗಳ ಮೊಬೈಲ್ ಸಂಖ್ಯೆಯಿಂದ 917208933148 ಗೆ "SMS WAREG A/c No" ಅನ್ನು ಕಳುಹಿಸಬೇಕು.
ಹಂತ 3: ನೋಂದಣಿ ಪೂರ್ಣಗೊಂಡ ನಂತರ, +919022690226 ಸಂಖ್ಯೆಗೆ 'ಹಾಯ್' ಎಂದು ಕಳುಹಿಸಿ.
ಹಂತ 4: ಅದರ ನಂತರ, "ಆತ್ಮೀಯ ಗ್ರಾಹಕರೇ, ಎಸ್‌ಬಿಐ  ವಾಟ್ಸಾಪ್ ಬ್ಯಾಂಕಿಂಗ್ ಸೇವೆಗಳಿಗೆ ಸುಸ್ವಾಗತ" ಎಂಬ ಸಂದೇಶವನ್ನು ನೀವು ಸ್ವೀಕರಿಸುತ್ತೀರಿ!


ಕೆಳಗೆ ನೀಡಿರುವ ಆಯ್ಕೆಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆಮಾಡಿ-
1. ಖಾತೆ ಬ್ಯಾಲೆನ್ಸ್
2. ಮಿನಿ ಸ್ಟೇಟ್‌ಮೆಂಟ್
3. ವಾಟ್ಸಾಪ್ ಬ್ಯಾಂಕಿಂಗ್‌ನಲ್ಲಿ ಡಿ-ರಿಜಿಸ್ಟರ್ ಮಾಡಿ


ಹಂತ 5: ನಿಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ಆಯ್ಕೆಯನ್ನು ಆರಿಸಿ. ನಿಮ್ಮ ಖಾತೆಯ ಬ್ಯಾಲೆನ್ಸ್ ಅನ್ನು ಪರಿಶೀಲಿಸಲು "1" ಟೈಪ್ ಮಾಡಿ, ಆದರೆ ಮಿನಿ ಸ್ಟೇಟ್‌ಮೆಂಟ್ ಅನ್ನು ಪಡೆಯಲು "2" ಟೈಪ್ ಮಾಡಿ. ನಿಮ್ಮ ಖಾತೆಯ ಬ್ಯಾಲೆನ್ಸ್ ಅಥವಾ ಮಿನಿ ಸ್ಟೇಟ್‌ಮೆಂಟ್ ಈಗ  ವಾಟ್ಸಾಪ್‌ನಲ್ಲಿ  ಡಿಸ್‌ಪ್ಲೇ ಆಗುತ್ತದೆ.


ಇದನ್ನೂ ಓದಿ- September 1ಕ್ಕೆ ಕಾದಿದೆಯಾ ಬಿಗ್ ಶಾಕ್ ! ಹಲವು ನಿಯಮಗಳು ಬದಲಾಗಲಿವೆ


ಇದರ ಜೊತೆಗೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಎಸ್‌ಬಿಐ ಕಾರ್ಡ್ ವಾಟ್ಸಾಪ್ ಸಂಪರ್ಕದ ಹೆಸರಿನಲ್ಲಿ ವಾಟ್ಸಾಪ್  ಆಧಾರಿತ ಸೇವೆಗಳನ್ನು ಒದಗಿಸುತ್ತದೆ. ಈ ಸೇವೆಯು ಎಸ್‌ಬಿಐ ಕ್ರೆಡಿಟ್ ಕಾರ್ಡ್ ಗ್ರಾಹಕರು ತಮ್ಮ ಖಾತೆಯ ಸಾರಾಂಶ, ರಿವಾರ್ಡ್ ಪಾಯಿಂಟ್‌ಗಳು, ಬಾಕಿ ಇರುವ ಬ್ಯಾಲೆನ್ಸ್, ಕಾರ್ಡ್ ಪಾವತಿಗಳನ್ನು ಮಾಡಲು ಇತ್ಯಾದಿಗಳನ್ನು ಪರಿಶೀಲಿಸಲು ಅನುಮತಿಸುತ್ತದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.