Rules Changes From 1 September: 2 ದಿನಗಳ ನಂತರ, ಹೊಸ ತಿಂಗಳು ಅಂದರೆ ಸೆಪ್ಟೆಂಬರ್ ಪ್ರಾರಂಭವಾಗುತ್ತದೆ. ಹೊಸ ತಿಂಗಳ ಪ್ರಾರಂಭದೊಂದಿಗೆ, ಅನೇಕ ವಿಶೇಷ ಬದಲಾವಣೆಗಳು ಸಂಭವಿಸಲಿವೆ. ಬ್ಯಾಂಕಿಂಗ್, ಟೋಲ್-ಟ್ಯಾಕ್ಸ್ ಮತ್ತು ಆಸ್ತಿ ಸೇರಿದಂತೆ ಹಲವು ರೀತಿಯ ಸೇವೆಗಳ ನಿಯಮಗಳು ಬದಲಾಗುತ್ತಿವೆ, ಇವು ನಿಮ್ಮ ಜೇಬಿನ ಮೇಲೆ ನೇರ ಪರಿಣಾಮ ಬೀರಲಿವೆ. ಇದಲ್ಲದೇ ಗ್ಯಾಸ್ ಸಿಲಿಂಡರ್ ಬೆಲೆಯೂ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ 1 ನೇ ತಾರೀಖು ಬರುವ ಮೊದಲು, ಯಾವ ನಿಯಮಗಳು ಬದಲಾಗಲಿವೆ ತಿಳಿದುಕೊಳ್ಳೋಣ ಬನ್ನಿ.
1. ಟೋಲ್ ತೆರಿಗೆ ಹೆಚ್ಚಾಗುವ ಸಾಧ್ಯತೆ ಇದೆ
ಯಮುನಾ ಎಕ್ಸ್‌ಪ್ರೆಸ್‌ವೇ ಮೇಲಿನ ಟೋಲ್ ತೆರಿಗೆಯು ಹೆಚ್ಚಾಗಲಿದೆ ಅಂದರೆ ಸೆಪ್ಟೆಂಬರ್ 1 ರಿಂದ, ನೀವು ಹೆಚ್ಚಿನ ತೆರಿಗೆಯನ್ನು ಪಾವತಿಸಬೇಕಾಗಲಿದೆ. ಕಾರ್ ನಂತಹ ಸಣ್ಣ ವಾಹನ ಮಾಲೀಕರು ಇನ್ಮುಂದೆ ಈ ಎಕ್ಸ್‌ಪ್ರೆಸ್‌ವೇ ಮೂಲಕ ಪ್ರಯಾಣಿಸಲು ಪ್ರತಿ ಕಿಲೋಮೀಟರ್‌ಗೆ 10 ಪೈಸೆ ಹೆಚ್ಚುವರಿ ಶುಲ್ಕ ಪಾವತಿಸಬೇಕಾಗಲಿದೆ. ಇದೇ ವೇಳೆ ವಾಣಿಜ್ಯ ವಾಹನಗಳು 52 ಪೈಸೆ ಹೆಚ್ಚುವರಿ ಟೋಲ್ ತೆರಿಗೆಯನ್ನು ಪಾವತಿಸಬೇಕಾಗಲಿದೆ.
2. PNB ಗ್ರಾಹಕರ ಗಮನಕ್ಕೆ
ಪಂಜಾಬ್ ನ್ಯಾಷನಲ್ ಬ್ಯಾಂಕ್ ಗ್ರಾಹಕರು ತಮ್ಮ KYC ಅನ್ನು ಆಗಸ್ಟ್ 31 ರೊಳಗೆ ನವೀಕರಿಸಬೇಕು. ನೀವು ಇದನ್ನು ಮಾಡದೆ ಹೋದರೆ, ನಿಮ್ಮ ಖಾತೆಯನ್ನು ನಿರ್ಬಂಧಿಸಲಾಗುತ್ತದೆ ಅಂದರೆ ನಿಮ್ಮ ಖಾತೆಯನ್ನು ಬಳಸಲು ನೀವು ಸಮಸ್ಯೆಯನ್ನು ಎದುರಿಸಬೇಕಾಗಬಹುದು.
3. ವಿಮಾ ಪಾಲಿಸಿಯ ಪ್ರೀಮಿಯಂನಲ್ಲಿ ಕಡಿತ
ಸೆಪ್ಟೆಂಬರ್ 1 ರಿಂದ ಪಾಲಿಸಿಯ ಪ್ರೀಮಿಯಂ ಅನ್ನು ಕಡಿಮೆ ಮಾಡಲಾಗುವುದು ಎಂದು IRDAI ಈಗಾಗಲೇ ಹೇಳಿದೆ. ಸಾಮಾನ್ಯ ವಿಮೆಯ ನಿಯಮಗಳಲ್ಲಿ ಐಆರ್‌ಡಿಎ ಮಾಡಿದ ಬದಲಾವಣೆಗಳ ನಂತರ, ಗ್ರಾಹಕರು ಇದೀಗ ಏಜೆಂಟ್ ರಿಗೆ ಶೇಕಡಾ 30 ರಿಂದ 35 ರ ಬದಲಿಗೆ ಕೇವಲ ಶೇ.20ರಷ್ಟು ಕಮಿಷನ್ ಅನ್ನು ಪಾವತಿಸಬೇಕಾಗುತ್ತದೆ. ಇದರಿಂದ ಜನರ ಪ್ರೀಮಿಯಂ ಹೊರೆ ಕಡಿಮೆಯಾಗಲಿದೆ.
ಇದನ್ನೂ ಓದಿ -WhatsApp ಮೂಲಕ ಹಣ್ಣು-ತರಕಾರಿ, ದಿನಸಿ ಮಾರಾಟಕ್ಕೆ ಮುಂದಾದ Jio
4. ಮನೆ ಖರೀದಿ ದುಬಾರಿಯಾಗಲಿದೆ
ಇದಲ್ಲದೆ, ನೀವು ಮನೆ ಖರೀದಿಸಲು ಯೋಜನೆ ರೂಪಿಸುತ್ತಿದ್ದಾರೆ, ನೀವು ಹೆಚ್ಚು ಹಣವನ್ನು ಖರ್ಚು ಮಾದಬೇಕಾಗಲಿದೆ. ಗಾಜಿಯಾಬಾದ್‌ನಲ್ಲಿ ಸರ್ಕಲ್ ದರವನ್ನು ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ. ಸರ್ಕಲ್ ದರವನ್ನು ಶೇಕಡಾ 2 ರಿಂದ 4 ರಷ್ಟು ಹೆಚ್ಚಿಸಲು ನಿರ್ಧರಿಸಲಾಗಿದೆ. ಆಸ್ತಿಯ ಹೆಚ್ಚಿದ ಸರ್ಕಲ್ ದರಗಳು 1 ನೇ ಸೆಪ್ಟೆಂಬರ್ 2022 ರಿಂದ ಅನ್ವಯಿಸಲಿವೆ.
ಇದನ್ನೂ ಓದಿ-8th Pay Commission: ಸರ್ಕಾರಿ ನೌಕರರಿಗೊಂದು ಬಿಗ್ ನ್ಯೂಸ್, ಜಾರಿಯಾಗಲಿದೆ 8ನೇ ವೇತನ ಆಯೋಗ!
5. ಗ್ಯಾಸ್ ಸಿಲಿಂಡರ್ ಬೆಲೆ ಪರಿಷ್ಕರಣೆ
ಇದಲ್ಲದೇ ಸರ್ಕಾರಿ ತೈಲ ಕಂಪನಿಗಳು ಪ್ರತಿ ತಿಂಗಳ ಮೊದಲನೇ ತಾರೀಖಿನಂದು ಗ್ಯಾಸ್ ಸಿಲಿಂಡರ್ ಬೆಲೆಯನ್ನು ಪರಿಶೀಲಿಸುತ್ತವೆ, ಈ ಬಾರಿಯೂ ಸೆಪ್ಟೆಂಬರ್ 1ರಂದು ಹೊಸ ಗ್ಯಾಸ್ ಸಿಲಿಂಡರ್ ದರ ಪ್ರಕಟಗೊಳ್ಳಲಿದೆ.ಹೀಗಾಗಿ ಸಧ್ಯ ಇರುವ ಬೆಲೆಯಲ್ಲಿ ಹೆಚ್ಚಳವು ಸಂಭವಿಸಬಹದು ಅಥವಾ ಕಡಿತವೂ ಸಂಭವಿಸಬಹುದು.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.