ವೇತನ ವರ್ಗಕ್ಕೆ ಸಿಹಿ ಸುದ್ದಿ !ಸ್ಟಾಂಡರ್ಡ್ ಡಿಡಕ್ಷನ್ ಏರಿಸಲು ಸರ್ಕಾರದ ಸಿದ್ದತೆ
ಮುಂದಿನ ವರ್ಷ ಫೆಬ್ರವರಿಯಲ್ಲಿ ಮಂಡಿಸಲಿರುವ ಬಜೆಟ್‌ನಲ್ಲಿ ಮಧ್ಯಮ ವರ್ಗದವರಿಗೆ ಆದಾಯ ತೆರಿಗೆಯಲ್ಲಿ ಸರ್ಕಾರ ಮತ್ತೆ ಪರಿಹಾರ ನೀಡಬಹುದು ಎಂದು ಹೇಳಲಾಗಿದೆ.
Budget 2025 : ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಜುಲೈ 2024 ರಂದು ಮಂಡಿಸಿದ 2024-25ರ ಹಣಕಾಸು ವರ್ಷದ ಬಜೆಟ್‌ನಲ್ಲಿ ಮಧ್ಯಮ ವರ್ಗದವರಿಗೆ ದೊಡ್ಡ ಪರಿಹಾರವನ್ನು ನೀಡಿದ್ದಾರೆ. ಆಗ ಸ್ಟ್ಯಾಂಡರ್ಡ್ ಡಿಡಕ್ಷನ್ ಮಿತಿಯನ್ನು ಸರ್ಕಾರ 50,000 ರೂ.ಯಿಂದ 75,000 ರೂ.ಗೆ ಹೆಚ್ಚಿಸಿತ್ತು. ಹೊಸ ತೆರಿಗೆ ಪದ್ಧತಿಯಲ್ಲಿ ಸ್ಟ್ಯಾಂಡರ್ಡ್ ಡಿಡಕ್ಷನ್ ರೂಪದಲ್ಲಿ ಸರ್ಕಾರ ಈ ಪರಿಹಾರವನ್ನು ನೀಡಿತ್ತು. ಆದರೆ, ವೇತನ ವರ್ಗವು ಹಳೆಯ ತೆರಿಗೆ ಪದ್ಧತಿಯಲ್ಲಿ ಪರಿಹಾರ ನೀಡುವಂತೆ ಬಹಳ ಸಮಯದಿಂದ ಒತ್ತಾಯಿಸುತ್ತಿದೆ. ಹಣಕಾಸು ಸಚಿವಾಲಯದಿಂದ 2025 ರ ಹಣಕಾಸು ವರ್ಷಕ್ಕೆ ಬಜೆಟ್ ತಯಾರಿ ಪ್ರಕ್ರಿಯೆ ಪ್ರಾರಂಭವಾಗಿದೆ.
ಬಜೆಟ್‌ನಲ್ಲಿ ಮಧ್ಯಮ ವರ್ಗದವರಿಗೆ ವಿಶೇಷವೇನು? :
2025ರ ಹಣಕಾಸು ವರ್ಷದ ಬಜೆಟ್ ಅನ್ನು ಈ ಬಾರಿ ಫೆಬ್ರವರಿ 1, 2025 ರಂದು ಮಂಡಿಸಲಾಗುತ್ತದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸುತ್ತಿರುವ ಎಂಟನೇ ಬಜೆಟ್ ಇದಾಗಿದೆ. ಮಧ್ಯಮ ವರ್ಗದವರಿಗೆ ಈ ಬಾರಿಯ ಬಜೆಟ್‌ನಲ್ಲಿ ಏನೆಲ್ಲಾ ಸಿಗಲಿದೆ ಎನ್ನುವ ನಿರೀಕ್ಷೆ ಇದೆ. ಈ ಬಗ್ಗೆ ಹಣಕಾಸು ಸಚಿವಾಲಯದಲ್ಲಿ ಚರ್ಚೆ ನಡೆಯುತ್ತಿದೆ. ಮೂಲಗಳ ಪ್ರಕಾರ, ಮುಂದಿನ ವರ್ಷ ಫೆಬ್ರವರಿಯಲ್ಲಿ ಮಂಡಿಸಲಿರುವ ಬಜೆಟ್‌ನಲ್ಲಿ ಮಧ್ಯಮ ವರ್ಗದವರಿಗೆ ಆದಾಯ ತೆರಿಗೆಯಲ್ಲಿ ಸರ್ಕಾರ ಮತ್ತೆ ಪರಿಹಾರ ನೀಡಬಹುದು ಎಂದು ಹೇಳಲಾಗಿದೆ. ಮಧ್ಯಮ ವರ್ಗದಲ್ಲಿ, ಆದಾಯ ತೆರಿಗೆ ಪಾವತಿಸುವ ವೇತನ ವರ್ಗದ ಸಂಖ್ಯೆಯು ಅತ್ಯಧಿಕವಾಗಿದೆ.
ಇದನ್ನೂ ಓದಿ : ಸರ್ಕಾರಿ ಅಧಿಕಾರಿಗಳಿಗೆ-ಆದಾಯ ತೆರಿಗೆ ಕಟ್ಟುವವರಿಗೆ ಬಿಪಿಎಲ್ ಕಾರ್ಡ್ ಕೊಡಬೇಕಾ? ಸಿಎಂ
ಸ್ಟ್ಯಾಂಡರ್ಡ್ ಡಿಡಕ್ಷನ್‌ನ ಮಿತಿಯನ್ನು ಹೆಚ್ಚಿಸುವ ಚಿಂತನೆ :
ಈ ಬಾರಿ ವೇತನ ವರ್ಗಕ್ಕೆ ಪರಿಹಾರ ನೀಡಲು, ಹಣಕಾಸು ಸಚಿವಾಲಯವು ಹೊಸ ತೆರಿಗೆ ಪದ್ಧತಿಯಡಿಯಲ್ಲಿ ಸ್ಟಾಂಡರ್ಡ್ ಡಿಡಕ್ಷನ್ ಮಿತಿಯನ್ನು ಹೆಚ್ಚಿಸುವಂತೆ ಪರಿಗಣಿಸಲಾಗುತ್ತಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ, ಹೊಸ ತೆರಿಗೆ ಪದ್ಧತಿಯ ಅಡಿಯಲ್ಲಿ, ವೇತನ ವರ್ಗವು 75,000 ರೂಪಾಯಿ ಸ್ಟಾಂಡರ್ಡ್ ಡಿಡಕ್ಷನ್ ಪ್ರಯೋಜನವನ್ನು ಪಡೆಯುತ್ತದೆ.ಇದಲ್ಲದೇ ವಾರ್ಷಿಕವಾಗಿ 7 ಲಕ್ಷ ರೂ.ವರೆಗೆ ಆದಾಯ ಹೊಂದಿರುವವರು ಹೊಸ ತೆರಿಗೆ ಪದ್ಧತಿಯಡಿ ಯಾವುದೇ ತೆರಿಗೆ ಪಾವತಿಸಬೇಕಾಗಿಲ್ಲ.
ಹಳೆಯ ಪದ್ದತಿಯಲ್ಲಿ ಪರಿಹಾರ ಸಿಗುವುದಿಲ್ಲ :
ಫೆಬ್ರವರಿ 1, 2025 ರಂದು ಮಂಡಿಸಲಿರುವ ಬಜೆಟ್‌ನಲ್ಲಿ ವೇತನ ವರ್ಗಕ್ಕೆ ಸ್ಟ್ಯಾಂಡರ್ಡ್ ಡಿಡಕ್ಷನ್ ಮೊತ್ತವನ್ನು 75,000 ರೂ.ನಿಂದ 1 ಲಕ್ಷಕ್ಕೆ ಹೆಚ್ಚಿಸಬಹುದು ಎಂದು ಮೂಲಗಳು ಹೇಳುತ್ತವೆ.ಆದರೆ ಹೊಸ ತೆರಿಗೆ ಪದ್ಧತಿಯಲ್ಲಿ ಮಾತ್ರ ಆದಾಯ ತೆರಿಗೆಯಲ್ಲಿ ಪರಿಹಾರವನ್ನು ಸರ್ಕಾರ ನೀಡುತ್ತದೆ ಎಂದು ಮೂಲಗಳು ಹೇಳಿವೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
2023-24ರ ಹಣಕಾಸು ವರ್ಷದಲ್ಲಿ ಸಲ್ಲಿಸಲಾದ ಎಂಟು ಕೋಟಿ ಆದಾಯ ತೆರಿಗೆ ರಿಟರ್ನ್ಸ್‌ಗಳಲ್ಲಿ ವಾರ್ಷಿಕ 5 ರಿಂದ 10 ಲಕ್ಷ ರೂ.ಗಳ ಆದಾಯ ಹೊಂದಿರುವ ಐಟಿಆರ್‌ಗಳ ಸಂಖ್ಯೆ 2.79 ಕೋಟಿ. ಇದಲ್ಲದೇ 10-20 ಲಕ್ಷ ಆದಾಯ ಹೊಂದಿರುವವರು 89 ಲಕ್ಷ ಐಟಿಆರ್ ಸಲ್ಲಿಸಿದ್ದಾರೆ. ಅಂದರೆ ಆದಾಯ ತೆರಿಗೆಯಲ್ಲಿ ಸರ್ಕಾರ ಪರಿಹಾರ ನೀಡಲು ನಿರ್ಧರಿಸಿದರೆ, ಸುಮಾರು ಮೂರು ಕೋಟಿ ತೆರಿಗೆದಾರರನ್ನು ಗಮನದಲ್ಲಿಟ್ಟುಕೊಂಡು ಪರಿಹಾರವನ್ನು ನೀಡಲಾಗುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ